ಹಿಂದೂ ಧರ್ಮವು ಅನಂತ ಮತ್ತು ಅನಾದಿಯಾಗಿರುವುದರಿಂದ ಭಾರತ ದೇಶದಲ್ಲಿನ ವಿಶೇಷದಿನಗಳು ಈಶ್ವರನ ಬೇರೆ ಬೇರೆ ರೂಪಗಳಿಗೆ ಸಂಬಂಧಿಸಿವೆ. ಉದಾ.ಶ್ರೀ ಗಣೇಶ ಚತುರ್ಥಿಯು ವಿಶ್ವದಲ್ಲಿ ಶ್ರೀ ಗಣೇಶ ತತ್ತ್ವವು ಹೆಚ್ಚು ಪ್ರಮಾಣದಲ್ಲಿರುವಾಗ ಬರುತ್ತದೆ, ಅದೇ ರೀತಿ ಶಕ್ತಿತತ್ತ್ವವು ಹೆಚ್ಚು ಪ್ರಮಾಣದಲ್ಲಿರುವಾಗ ನವರಾತ್ರಿಯು ಬರುತ್ತದೆ, ಜ್ಞಾನ, ಭಕ್ತಿ ಮತ್ತು ವೈರಾಗ್ಯದಾಯಕ ಶಿವತತ್ತ್ವವು ಹೆಚ್ಚು ಪ್ರಮಾಣದಲ್ಲಿರುವಾಗ ಶಿವರಾತ್ರಿಯು ಬರುತ್ತದೆ. ತದ್ವಿರುದ್ಧವಾಗಿ ಇತರ ಪಂಥಗಳಲ್ಲಿನ ಮಹತ್ವದ ದಿನಗಳು ಪೃಥ್ವಿಯಲ್ಲಿ ಆಗಿಹೋದ ಘಟನೆಗಳಿಗೆ ಸಂಬಂಧಿಸಿರುತ್ತವೆ. ಮುಂದಿನ ಕೆಲವು ಉದಾಹರಣೆಗಳಿಂದ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಭಾರತೀಯರಲ್ಲಿರುವ ಆಂಗ್ಲರ ಮಾನಸಿಕ ಗುಲಾಮಗಿರಿಯ ಮತ್ತು ವಿಚಾರಗಳ ಕ್ಷುದ್ರತನವು ನಮ್ಮ ಗಮನಕ್ಕೆ ಬರುತ್ತದೆ.
ಅ. ಭಾರತೀಯ ಸಂಸ್ಕೃತಿಯ ಮೇಲೆ ಆಧಾರಿತವಾಗಿರುವ ‘ಶಾಲಿವಾಹನ ಶಕೆ’ ಇತ್ಯಾದಿ ಶಕೆಗಳನ್ನು ವರ್ಷಗಣನೆಗೆ ತೆಗೆದುಕೊಳ್ಳದೇ ಕಾಲಕ್ಕೆ ಯಾವುದೇ ಸಂಬಂಧವಿಲ್ಲದ ‘ಕ್ರಿ.ಶ.’ ಪದ್ಧತಿಯನ್ನು ಅನುಕರಿಸುವುದು.
ಆ. ಯುಗಾದಿಪಾಡ್ಯದಂದು ನಿರ್ಮಿತಿಗೆ ಸಂಬಂಧಿತ ಪ್ರಜಾಪತಿ ಲಹರಿಗಳು ಪೃಥ್ವಿಯ ಮೇಲೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ, ಆದರೆ ಈ ದಿನವನ್ನು ವರ್ಷಾರಂಭದ ದಿನವೆಂದು ಆಚರಿಸದೇ ಯಾವುದೇ ತತ್ತ್ವದ ಆಧಾರ ಇಲ್ಲದ ಜನವರಿ೧ಅನ್ನು ವರ್ಷಾರಂಭದ ದಿನವೆಂದು ಆಚರಿಸುವುದು.
ಇ. ಗುರುಪೂರ್ಣಿಮೆಯ ದಿನ ಗುರುತತ್ತ್ವವು ಪೃಥ್ವಿಯ ಮೇಲೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಆದುದರಿಂದ ಶಿಕ್ಷಕರ ದಿನಾಚರಣೆಯನ್ನು ಗುರುಪೂರ್ಣಿಮೆಯ ದಿನ ಆಚರಿಸಬೇಕು. ಆದರೆ ಯಾವುದಕ್ಕೂ ಸಂಬಂಧ ಇಲ್ಲದಿರುವ ಮಾಜಿ ರಾಷ್ಟ್ರಪತಿ ಡಾ.ರಾಧಾಕೃಷ್ಣನ್‌ರವರ ಜನ್ಮದಿನವನ್ನು ‘ಶಿಕ್ಷಕರ ದಿನಾಚರಣೆ’ ಎಂದು ಆಚರಿಸುತ್ತಾರೆ.
ಈ. ಸೈನಿಕರ ದಿನಾಚರಣೆಯನ್ನು ವಿಜಯದಶಮಿಯ ದಿನ ಆಚರಿಸಿದರೆ ಅದು ಹೆಚ್ಚು ಯೋಗ್ಯವಾಗಿರುತ್ತದೆ.
ಉ. ಧನತ್ರಯೋದಶಿಯ ದಿನವನ್ನು ಆರೋಗ್ಯದೇವ ಧನ್ವಂತರಿಯ ದಿನವೆಂದು ಆಚರಿಸದೇ ಪಾಶ್ಚಾತ್ಯರ ‘ಜಾಗತಿಕ ಆರೋಗ್ಯ ದಿನ’ವನ್ನು ಆಂಗ್ಲ ಮಾನಸಿಕ ಗುಲಾಮಗಿರಿಯಿಂದಾಗಿ ಆಚರಿಸುವುದು.
ಊ. ಶ್ರೀಲಕ್ಷ್ಮೀಪೂಜೆಯ ದಿನ ಶ್ರೀಲಕ್ಷ್ಮೀದೇವಿಯ ಲಹರಿಗಳು ಪೃಥ್ವಿಯ ಮೇಲೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಆ ದಿನವನ್ನು ಆರ್ಥಿಕ ವರ್ಷದ ಆರಂಭದ ದಿನವೆಂದು ಪಾಲಿಸಬೇಕು. ಆದರೆ ಯಾವುದೇ ತತ್ತ್ವದ ಮೇಲಾಧಾರಿತವಾಗಿಲ್ಲದ ಎಪ್ರಿಲ್ ೧ ಅನ್ನು ಆರ್ಥಿಕ ವರ್ಷದ ಆರಂಭದ ದಿನ ಎಂದು ಆಚರಿಸಲಾಗುತ್ತಿದೆ.
ಎ. ಗುರುತತ್ತ್ವದ ಉಪಾಸನೆಯನ್ನು ಮಾಡಲು ಗುರುವಾರವನ್ನು ವಾರದ ರಜಾದಿನವೆಂದು ಆಚರಿಸದೇ ಯಾವುದೇ ತತ್ತ್ವಕ್ಕೆ ಸಂಬಂಧವಿಲ್ಲದಿರುವ ರವಿವಾರವನ್ನು ರಜಾದಿನವೆಂದು ಆಚರಿಸುವುದು.
ಏ. ಮಕ್ಕಳೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲದ ಪಂಡಿತ ನೆಹರೂರವರ ಜನ್ಮದಿನವನ್ನು ‘ಮಕ್ಕಳ ದಿನ’ವೆಂದು ಆಚರಿಸಲು ಪ್ರಾರಂಭಿಸಲಾಯಿತು. ಅದರ ಬದಲು ಮಕ್ಕಳ ಆರೋಗ್ಯಕ್ಕಾಗಿ ಆಯುರ್ವೇದ ಗ್ರಂಥಗಳನ್ನು ರಚಿಸಿದ ಮಹರ್ಷಿ ಕಾಶ್ಯಪರ ಹೆಸರಿನಲ್ಲಿ ಮಕ್ಕಳ ದಿನವನ್ನು ಆಚರಿಸಿದರೆ ಅದು ಹೆಚ್ಚು ಯೋಗ್ಯವಾಗಿರುತ್ತದೆ.
ತದ್ವಿರುದ್ಧವಾಗಿ ಪಾಕಿಸ್ತಾನವು ಇಸ್ಲಾಂನ ಮೇಲಾಧಾರಿತ ಕಾಲಗಣನೆ ಮತ್ತು ಇತರ ವಿಷಯಗಳನ್ನು ಸ್ವೀಕರಿಸಿತು. ಉದಾ.ಹಿಜರಿ ಶಕೆಯನ್ನು ಪ್ರಾರಂಭಿಸಿತು, ಸಾಧನೆಗಾಗಿ ರವಿವಾರದ ಬದಲು ಶುಕ್ರವಾರವನ್ನು ರಜಾದಿನವೆಂದು ನಿರ್ಧರಿಸಿತು. ಇಸ್ಲಾಂ ಮೇಲಾಧಾರಿತ ರಾಜ್ಯಾಡಳಿತದಿಂದಾಗಿ ಚಿಕ್ಕದಾದ ಪಾಕಿಸ್ತಾನವು ದೊಡ್ಡ ಭಾರತವನ್ನು ಕ್ರಿಕೆಟ್ ಆಟದಿಂದ ಹಿಡಿದು ರಾಜಕಾರಣದವರೆಗೆ ಎಲ್ಲ ವಿಷಯದಲ್ಲಿ ಭಾರತವನ್ನು ಸೋಲಿಸುತ್ತದೆ.
ಈಶ್ವರೀ ರಾಜ್ಯದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧವಿಲ್ಲದ ಇಂತಹ ಎಲ್ಲ ದಿನಗಳನ್ನು ನಾವು ಬದಲಾಯಿಸುವವರಿದ್ದೇವೆ.
- ಪ.ಪೂ.ಡಾ.ಜಯಂತ ಆಠವಲೆ, ಸನಾತನ ಸಂಸ್ಥೆಯ ಸ್ಥಾಪಕರು
Thanks for sharing this clarity
ReplyDeleteLakkana
9900445796
please involve us in this
ReplyDeleteThanks,
Lakkana
9900445796