ಆಧ್ಯಾತ್ಮಿಕ ಸಾಧನೆ ಮಾಡಿ ಸಂತಪದವಿ ತಲುಪಿದ ವಿದೇಶಿ ಸಾಧಕಿ

ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರ ‘ಸನಾತನ ಸಂಸ್ಥೆ’ಯಲ್ಲಿ ಬರುವ ಮೊದಲು ಮತ್ತು ಬಂದ ನಂತರದ ಸಾಧನೆಯ ಪ್ರಯಾಣಇಂದು ಅನೇಕ ಭಾರತೀಯರ ಮನಸ್ಸಿನಲ್ಲಿರುವ ಪಾಶ್ಚಾತ್ಯ ಜಗತ್ತಿನ ವಿಷಯದಲ್ಲಿ ಆಕರ್ಷಣೆ ನೋಡುತ್ತಾ ಸೌ. ಯೋಯಾ ವಾಲೆ ಈ ಸಾಧಕಿಯ ಜೀವನಪಟವು ಭೋಗವಾದದ ಅಂಧಾನುಕರಣೆ ಮಾಡುತ್ತಿರುವ ಕೋಟಿಗಟ್ಟಲೆ ಭಾರತೀಯರ ಕಣ್ಣುಗಳಲ್ಲಿ ಅಂಜನ ಹಾಕುವಂತಿದೆ.


ಬೆಲಗ್ರೆಡ್ ಪಟ್ಟಣದಲ್ಲಿ ಜನಿಸಿದ ಯೋಯಾ ಕೆಲವು ಸಮಯ ‘ಮಾಡೆಲಿಂಗ್’ ಮಾಡಿದರು. ವಯಸ್ಸಿನ ೧೭ನೆಯ ವಯಸ್ಸಿನಲ್ಲಿ ಅವಳು ಜನಪ್ರಿಯತೆ ಪಡೆದಳು ಮತ್ತು ‘ಸನಾತನ ಸಂಸ್ಥೆ’ಯ ಸಂಪರ್ಕದಲ್ಲಿ ಬಂದಾಗ ಕೆಲವು ಸಮಯದಲ್ಲಿಯೇ ಪಾಶ್ಚಾತ್ಯ ಮೋಹನಗರಿಯಿಂದ ದೂರ ಹೋಗಿ ಸಾಧನೆ ಮಾಡುವ ನಿರ್ಣಯ ಪಡೆದಳು. ಪ.ಪೂ. ಡಾಕ್ಟರವರ (ಸನಾತನ ಸಂಸ್ಥೆಯ ಸಂಸ್ಥಾಪಕರ) ಭೇಟಿಯ ನಂತರ ಅವಳ ಆಯುಷ್ಯದಲ್ಲಿ ಸಂಪೂರ್ಣವಾಗಿ ಬದಲಾವಣೆ ಹೊಂದಿತು ಮತ್ತು ಅವಳು ಭಾರತದಲ್ಲಿನ ಆಧ್ಯಾತ್ಮಿಕ ಜೀವನವನ್ನು ಅನುಭವಿಸುವುದನ್ನು ನಿರ್ಧರಿಸಿದಳು. ಒಳ್ಳೊಳ್ಳರಿಗೆ ಮೋಹಿಸುವ ಮತ್ತು ಅನೇಕರ ಕನಸಾಗಿರುವ ‘ಮಾಡೆಲಿಂಗ್’ ವ್ಯವಸಾಯದೆಡೆಗೆ ಕ್ಷಣಾರ್ಧದಲ್ಲಿ ಬೆನ್ನು ತೋರಿಸಿ ತರುಣ ವಯಸ್ಸಿನಲ್ಲಿ ಅಧ್ಯಾತ್ಮಕ್ಕೆ ಹರಿಸಿಕೊಳ್ಳುವ ಅವಳ ನಿರ್ಣಯ ಅತ್ಯಂತ ಪ್ರಶಂಸನೀಯವಾಗಿದೆ.

ತನ್ನ ಪತಿಯೊಂದಿಗೆ ಯೋಯಾ ಇವರು ಹಿಂದೂಗಳಂತೆ ಧರ್ಮಾಚರಣೆ ಮಾಡಿ ಕೋಟಿಗಟ್ಟಲೆ ಜನ್ಮಹಿಂದೂಗಳ ಮುಂದೆ ದೊಡ್ಡ ಆದರ್ಶವನ್ನು ನಿಲ್ಲಿಸಿದ್ದಾಳೆ. ಭಾರತದಲ್ಲಿನ ಆಧ್ಯಾತ್ಮಿಕ ವೈಭವ ಧಿಕ್ಕರಿಸಿ ಕ್ಷಣಿಕ ಮೋಹದಿಂದಾಗಿ ಪಾಶ್ಚಾತ್ಯ ಸ್ವೈರಾಚಾರದ ಅಂಧಾನುಕರಣೆ ಮಾಡುವ ಜನ್ಮಹಿಂದೂ ಎಲ್ಲಿ ಮತ್ತು ಅಧ್ಯಾತ್ಮದ ಗಂಧವೂ ಇಲ್ಲದ, ಭಾರತೀಯ ಸಂಸ್ಕ ತಿ ಸಂಪೂರ್ಣವಾಗಿ ಗೊತ್ತಿಲ್ಲದ ಮತ್ತು ಅಧ್ಯಾತ್ಮದ ಆಕರ್ಷಣೆಗಾಗಿ ಸಾಧನೆ ಮಾಡುವ ಯೋಯಾ ಎಲ್ಲಿ ?

ಸದ್ಗುರುಗಳ ಬಗ್ಗೆ ಭಾವ, ಸಮಷ್ಟಿ ತಳಮಳ, ಪ್ರೀತಿ, ತ್ಯಾಗ ಮತ್ತು ಪ.ಪೂ.ಡಾಕ್ಟರವರ ಮನಸ್ಸು ಗೆಲ್ಲುವ ಯೋಯಾ ವಯಸ್ಸಿನ ಕೇವಲ ೩೨ನೆಯ ವರ್ಷಗಳಲ್ಲಿ ಶೇ. ೭೧ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ಅಂದರೆ ಸಂತಪದವಿಯನ್ನು ಪ್ರಾಪ್ತ ಮಾಡಿ ತನ್ನ ಜೀವನದ ಸಾರ್ಥಕ ಮಾಡಿಕೊಂಡಳು. ಕೆಸರಿನಲ್ಲಿ ಅರಳಿದ ಕಮಲವು ವಿಷ್ಣುಪದದಲ್ಲಿ ವಿರಾಜಮಾನವಾಗುವಂತೆ ಯೋಯಾರೂಪಿ ಸುಂದರ ಕಮಲವು ಸದ್ಗರುಚರಣಗಳಲ್ಲಿ ಅರ್ಪಿತವಾಗಿದೆ. ಸರ್ವಾರ್ಥದಿಂದ ಆದರ್ಶವೆನಿಸಿದ ಯೋಯಾರವರ ಸಾಧನೆಯ ಪ್ರಯಾಣವನ್ನು ನಾವು ನೋಡುವೆವು.

೧. ಬಾಲ್ಯಾವಸ್ಥೆ
೧ಅ. ಹತ್ತು ತಿಂಗಳ ಮಗುವಾಗಿರುವಾಗ ಕಿವಿಗಳ ನಡುವಿನ ಪರದೆಗೆ ಜಂತುಸಂಸರ್ಗವಾಗಿ ಕಿವುಡತೆ ಬರುವುದು : ‘೧೫.೪.೧೯೮೦ರಂದು ಯೂರೋಪಿನ ಯುಗೊಸ್ಲೆವ್ಹಿಯಾ ದೇಶದ ಬೆಲಗ್ರೆಡ್‌ನಲ್ಲಿ ನಾನು ಜನಿಸಿದೆ. ನಾನು ೧೦ ತಿಂಗಳ ಮಗುವಾಗಿರುವಾಗ ನನಗೆ ‘ಬೈಲೆಟರಲ್ ಆಂಟಾಯಟಿಸ್ ಮೆಡಿಯಾ’ ಅಂದರೆ ಎರಡೂ ಕಿವಿಗಳ ನಡುವಿನ ಪರದೆಗೆ ಜಂತುಸಂಸರ್ಗ (ಇನ್ಫೆಕ್ಶನ್) ಆಯಿತು. ಕೆಲವು ಕಾಲಾವಧಿಯ ನಂತರ ಈ ಜಂತುಸಂಸರ್ಗವು ಬೆಳೆಯುತ್ತಾ ಹೋಗಿ ಅದರ ರೂಪಾಂತರ ‘ಬೈಲೆಟರಲ್ ಮೆಸ್ಟೊಡಾಯಟಿಸ್’ ಇದರಲ್ಲಿ ಆಯಿತು. ಅದರಿಂದಾಗಿ ಒಂದು ಚಿಕ್ಕದಾದ ಶಸ್ತ್ರಕ್ರಿಯೆಯನ್ನು ಮಾಡಬೇಕಾಯಿತು, ಆದರೂ ಕಿವಿ ಕೇಳಸದಿರುವ ಪ್ರಮಾಣವು ಶೇ.೭೦ರಷ್ಟಿತ್ತು.

೧ ಆ. ಕಿವಿ ಕೇಳಿಸದಿರುವುದರಿಂದ ಮಾತನಾಡಲು ವಿಳಂಬವಾಗುವುದು; ಆದರೆ ತುಟಿಗಳ ಚಲನವಲನವು ತಿಳಿಯುವುದರಿಂದ (‘ಲಿಪ್ ರಿಡಿಂಗ್’ನಿಂದಾಗಿ) ಇತರ ವ್ಯಕ್ತಿಗಳು ಮಾತನಾಡುವುದು ಅರಿವಾಗುವುದು : ನಾನು ೧-೨ ವರ್ಷಗಳದ್ದಿರುವಾಗ ಕೆಲವು ಶಬ್ದಗಳು ನುಡಿಯಲು ಪ್ರಯತ್ನಗಳನ್ನು ಮಾಡುತ್ತಿದ್ದೆ, ಆಗ ಸ್ವರವಿರಹಿತ ಕೇವಲ ತುಟಿಗಳ ಚಲನವಲನವಾಗುತ್ತಿತ್ತು. ನನ್ನ ತಾಯಿಯು ಅತ್ಯಂತ ಕಷ್ಟಪಟ್ಟು ನನಗೆ ‘ಮಮಾ’ (ತಾಯಿ) ಎಂದು ಹೇಳಲು ಕಲಿಸಿದಳು. ನನಗೆ ಸ್ವಲ್ಪ ಕಡಿಮೆ (ಅಲ್ಪ) ಕೇಳಿಸುತ್ತಿದ್ದರೂ ನನಗೆ ‘ಲಿಪ್ ರಿಡಿಂಗ್’ ಒಳ್ಳೆಯ ಪದ್ಧತಿಯಿಂದಾಗುತ್ತಿದ್ದರಿಂದ ನನ್ನಿಂದ ಕೆಲವು ಅಂತರದಲ್ಲಿರುವ ವ್ಯಕ್ತಿಯ ಮಾತನ್ನೂ ನಾನು ಅರಿತುಕೊಳ್ಳುತ್ತಿದ್ದೆ.

೧ ಇ. ಬೇರೆಬೇರೆ ರೀತಿಯಲ್ಲಿ ಚಿತ್ರಿಸಿದ ಚಿತ್ರಗಳಿಂದ ಚಿತ್ರಕಲೆಯಲ್ಲಿನ ಪ್ರತಿಭೆಯು ಸ್ಪಷ್ಟವಾಗಿ ಕಂಡಿದ್ದರಿಂದ ಪಾಲಕರು ಚಿತ್ರಕಲೆಗಾಗಿ ಉದ್ಯುಕ್ತ ಮಾಡುವುದು : ೨ ವರ್ಷಗಳದ್ದಿರುವಾಗ ನಾನು ಪೆನ್ಸಿಲ್ ಒಳ್ಳೆಯ ಪದ್ಧತಿಯಿಂದ ಕೈಯಲ್ಲಿ ಹಿಡಿಯುತ್ತಿದ್ದೆ. ಆಗ ನಾನು ಚಿಟ್ಟೆಯ ಚಿತ್ರವನ್ನು ಬಿಡಿಸುತ್ತಿದ್ದೆ. ಅನಂತರ ಕೆಲವು ಕಾಲಾವಧಿಯಲ್ಲಿಯೇ ನಾನು ನಿಯಮಿತವಾಗಿ ಚಿತ್ರಗಳನ್ನು ತೆಗೆಯಲಾರಂಭಿಸಿದೆ. ನಾನು ನಿಸರ್ಗದ ಹಾಗೂ ನನ್ನ ತಾಯಿ ಮತ್ತು ಅಣ್ಣನ ಬೇರೆಬೇರೆ ಮನಃಸ್ಥಿತಿಯಲ್ಲಿನ (ಭಾವಗಳಿರುವ) ಚಿತ್ರಗಳನ್ನು ತೆಗೆಯುತ್ತಿದ್ದೆ. ನನ್ನ ಪಾಲಕರು ನನ್ನ ಚಿತ್ರಕಲೆಯಲ್ಲಿನ ಪ್ರತಿಭೆ ಸ್ಪಷ್ಟವಾಗಿ ಕಾಣುತ್ತಿರುವುದರಿಂದ ಅವರು ಆರಂಭದಿಂದಲೇ ನನಗೆ ಅದಕ್ಕಾಗಿ ಪ್ರೇರೇಪಿಸಿದರು. ನನಗೆ ಮಾತನಾಡಲು ಬರಬೇಕೆಂದು ನನ್ನ ತಾಯಿ ನನ್ನಷ್ಟೇ ವಯಸ್ಸಿನವಳಾಗುತ್ತಿದ್ದಳು ಮತ್ತು ಅಖಂಡವಾಗಿ ಉತ್ಸಾಹದಿಂದ ಪ್ರಯತ್ನ ಮಾಡುತ್ತಿದ್ದಳು.

೨. ಕಿಶೋರಾವಸ್ಥೆ
೨ ಅ. ವಯಸ್ಸಿನ ೧೧ನೆಯ ವರ್ಷದಲ್ಲಿ ಚರ್ಚಿನ ಸಂಕುಚಿತ ಕಲಿಸುವಿಕೆ ಸರಿಯೆನಿಸದಿರುವುದರಿಂದ ಚರ್ಚ್‌ಗೆ ಹೋಗುವ ಆಸಕ್ತಿ ಕಡಿಮೆಯಾಯಿತು : ಕ್ರಿ.ಶ. ೧೯೯೧ರಲ್ಲಿ ನನ್ನ ತಾಯಿ ಮತ್ತು ಅಣ್ಣ ಇವರಿಗೆ ಅಧ್ಯಾತ್ಮದ ಆಕರ್ಷಣೆ ನಿರ್ಮಾಣವಾಯಿತು. ಆಗ ನಾವು ಆಗಾಗ ಅಧ್ಯಾತ್ಮದ ಬಗ್ಗೆ ಮಾತನಾಡುತ್ತಿದ್ದೇವು. ವಯಸ್ಸಿನ ೧೧ನೆಯ ವರ್ಷದಿಂದಲೇ ನನಗೆ ಚರ್ಚಿಗೆ ಹೋಗಲು ಉತ್ಸುಕತೆಯಿರಲಿಲ್ಲ; ಏಕೆಂದರೆ ಅಲ್ಲಿನ ಜನರು ‘ಈಶ್ವರ ಕೇವಲ ಚರ್ಚ್‌ನಲ್ಲಿಯೇ ಇದ್ದಾನೆ, ಎಲ್ಲೆಡೆಯಿಲ್ಲ’ ಎಂದು ಕಲಿಸುತ್ತಿದ್ದರು ಮತ್ತು ಇದು ನನ್ನ ಶ್ರದ್ಧೆಯ ತೀರ ವಿರುದ್ಧವಾಗಿತ್ತು; ಏಕೆಂದರೆ ‘ಈಶ್ವರ ಸರ್ವವ್ಯಾಪಿಯಾಗಿದ್ದಾನೆ’ ಎಂಬುದು ನನ್ನ ಶ್ರದ್ಧೆಯಿತ್ತು.

೨ ಆ. ವಾಶಿಂಗ್ಟನ್‌ನಲ್ಲಿನ ಪ್ರಖ್ಯಾತ ವಿದ್ಯಾಲಯದಲ್ಲಿ ಚಿತ್ರಕಲೆ ಕಲಿಯಲು ಪ್ರವೇಶ ದೊರೆಯುವುದು : ನನಗೆ ಸಾಧ್ಯವಾಗುವಷ್ಟು ನಾನು ಚಿತ್ರಗಳನ್ನು ತೆಗೆಯುತ್ತಿದ್ದೆ. ನಾನು ವಾಶಿಂಗ್ಟನ್‌ನಲ್ಲಿನ ಅಲಕ್ಝಾಂಡ್ರಿಯಾದಲ್ಲಿನ ‘ಟೆರ್ಪೆಡೊ ಫ್ಯಾಕ್ಟರಿ ಆರ್ಟ ಸ್ಕೂಲ’ನಲ್ಲಿ ಪ್ರವೇಶ ಪಡೆದುಕೊಂಡೆ. ನಂತರ ಕೆಲವು ತಿಂಗಳಲ್ಲಿ ನನಗೆ ವಾಶಿಂಗ್ಟನದಲ್ಲಿನ ‘ಕಾರಕೊರನ್ ಆರ್ಟ ಸ್ಕೂಲ’ ಈ ಪ್ರತಿಷ್ಠಿತ ಕಲಾ ವಿದ್ಯಾಲಯದಲ್ಲಿ ಕಲಿಯಲು ಕರೆಯಲಾಯಿತು. ಒಂದು ‘ಯುಥ್ ಪ್ರೊಗ್ರಾಮ್’ದಲ್ಲಿ ‘ಕಾರಕೊರನ್ ಗೆಲರಿ’ಯಲ್ಲಿನ ಒಂದು ಸಭಾಗೃಹದಲ್ಲಿ ನನ್ನ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಯಿತು.

೨ ಇ. ‘ಮಾಡೆಲಿಂಗ್’ ಆಕರ್ಷಣೆ ನಿರ್ಮಾಣವಾಗುವುದು : ವಯಸ್ಸಿನ ೧೩ನೆಯ ವರ್ಷದಲ್ಲಿ ‘ಮಾಡೆಲಿಂಗ್’ನ್ನು ವ್ಯವಸಾಯವೆಂದು ಆರಿಸುವ ನನ್ನ ಇಚ್ಛೆಯನ್ನು ನಾನು ವ್ಯಕ್ತ ಪಡಿಸಿದೆ. ‘ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ವ್ಯವಸಾಯ ಬೇಡ’ ಈ ಉದ್ದೇಶದಿಂದ ನನ್ನ ತಾಯಿಯು ಆರಂಭದಲ್ಲಿ ನನಗೆ ನಿರಾಕರಿಸಿದರು; ಆದರೆ ನಂತರ ಅವರು ನನಗೆ ‘ಮಾಡೆಲಿಂಗ್’ ವಿದ್ಯಾಲಯದಲ್ಲಿ ಹಾಕಿದರು.

೩. ಮಾಡೆಲಿಂಗ್ ವ್ಯವಸಾಯಕ್ಕೆ ದಿಮಾಖಿನಿಂದ ಪ್ರಾರಂಭ
೩ ಅ. ‘ಫ್ಯಾಶನ್ ಶೋ’ದಲ್ಲಿನ ಸಂಗೀತ ಕೇಳಿಸದಿರುವುದರಿಂದ ಮಾಡೆಲಿಂಗ್ ತರಬೇತಿ ಸ್ಫರ್ಧಾತ್ಮಕವೆನಿಸುವುದು ಮತ್ತು ಮಾಡೆಲಿಂಗ್ ಸ್ಪರ್ಧೆಯಲ್ಲಿ ಸಾವಿರಾರು ಪ್ರತಿಸ್ಪರ್ಧಿಗಳಲ್ಲಿ ಮೊದಲನೇ ಬಹುಮಾನ ದೊರಕುವುದು : ‘ಫ್ಯಾಶನ್ ಶೋ’ ಸಂಗೀತದೊಂದಿಗೆ ಇರುತ್ತಿತ್ತು ಮತ್ತು ಆ ಸಂಗೀತ ನನಗೆ ಕೇಳುತ್ತಿರಲಿಲ್ಲ, ಅದರಿಂದಾಗಿ ಮಾಡೆಲಿಂಗ್ ಪೂರ್ವಸಿದ್ಧತೆ ಮತ್ತು ಅದರ ತರಬೇತಿಯು ನನಗಾಗಿ ಅತ್ಯಂತ ಸ್ಫರ್ಧಾತ್ಮಕವಾಗಿರುತ್ತಿತ್ತು. ನಾನೊಬ್ಬಳು ಜಾಣ ವಿದ್ಯಾರ್ಥಿನಿಯಾಗಿದ್ದೆ. ಅದರಿಂದಾಗಿ ಇತರ ತರುಣರು ನನ್ನಿಂದ ಪ್ರೋತ್ಸಾಹ ತೆಗೆದುಕೊಳ್ಳಬೇಕು’ ಎಂದು ಕೆಲವರು ಹೇಳುತ್ತಿದ್ದರು. ಜನವರಿ ೧೯೯೭ರಲ್ಲಿ ಅಟ್ಲಾಂಟದಲ್ಲಿನ ‘ಮಾಡೆಲ್ ಕಾಂಪಿಟೇಶನ್’ ಈ ಮಾಡೆಲಿಂಗ್ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದೆ. ಸಾವಿರಾರು ಪ್ರತಿಸ್ಪರ್ಧಿಗಳಲ್ಲಿ ನನ್ನೊಂದಿಗೆ ಮತ್ತೊಬ್ಬಳು ಹುಡುಗಿಯು ಪ್ರಥಮ ಬಹುಮಾನ ಗೆದ್ದಳು.

೩ ಆ. ‘ಮಾಡೆಲಿಂಗ್’ಗಾಗಿ ಟೊಕಿಯೊದ ಒಂದು ಚಿಕ್ಕದಾದಂತಹ ಊರಿನಲ್ಲಿ ವಾಸಿಸಲು ಹೋಗುವುದು ಮತ್ತು ಮೊದಲನೇ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಚಪ್ಪಾಳೆಯ ಧ್ವನಿಯಲ್ಲಿ ತಲೆದೂಗಿಸಿ ಪ್ರಶಂಸೆ ಮಾಡುವುದು : ಮಾಡೆಲಿಂಗ್ ಕಂಪನಿಗಳು ಒಂದು ಹೊಸ ಮುಖಚರ್ಯೆಯ ಶೋಧದಲ್ಲಿದ್ದರು. ಅವರು ನನ್ನ ಮುಂದೆ ನ್ಯೂಯಾರ್ಕ, ಮಿಯಾಮಿ, ಮಿಲಾನ್, ಪ್ಯಾರಿಸ್, ಟೊಕಿಯೊ ಈ ಸ್ಥಳಗಳಲ್ಲಿ ಹೋಗುವ ಪ್ರಸ್ತಾವವಿಟ್ಟರು. ನನ್ನ ಹಣೆಬರಹದಲ್ಲಿ ಟೊಕಿಯೊದಲ್ಲಿ ಹೋಗುವುದು ಬರೆದಿತ್ತು, ಅದರಿಂದಾಗಿ ಮೇ ೧೯೯೭ರಲ್ಲಿ ನಾನು ನನ್ನ ಅಮ್ಮನೊಂದಿಗೆ ಟೊಕಿಯೊಗೆ ಹೋದೆ. ಅಲ್ಲಿನ ಒಂದು ಚಿಕ್ಕದಾದಂತಹ ಊರಿನಲ್ಲಿ ಇರುವುದು ನಮ್ಮಿಬ್ಬರಿಗಾಗಿ ಒಂದು ಸಾಹಸವೇ ಇತ್ತು. ನನಗೆ ಕಡಿಮೆ ಕೇಳಿಸುವುದಾದರೂ ನಾನು ‘ಮಾಡೆಲಿಂಗ್’ ಮಾಡುತ್ತೇನೆ ಎಂದು ಜಪಾನ ಜನರಿಗೆ ಆಶ್ಚರ್ಯವೆನಿಸುತ್ತಿತ್ತು. ಆದರೆ ಅವರು ನನಗೆ ‘ಮಾಡೆಲಿಂಗ್’ ಮಾಡುವ ಅವಕಾಶ ನೀಡಿದರು. ಟೊಕಿಯೊದಲ್ಲಿನ ಮೊದಲನೇ ಕಾರ್ಯಕ್ರಮದ ವೇಳೆಯಲ್ಲಿ ವೀಕ್ಷಕರು ಚಪ್ಪಾಳೆಯ ಧ್ವನಿಯಲ್ಲಿ ನನಗೆ ತಲೆದೂಗಿಸಿ ನನ್ನನ್ನು ಪ್ರಶಂಸಿದರು. ಅಲ್ಲಿಂದ ನಿಜವಾದ ಅರ್ಥದಿಂದ ನನ್ನ ‘ಮಾಡೆಲಿಂಗ್’ ವ್ಯವಸಾಯ ಆರಂಭವಾಯಿತು.

೪. ‘ಸನಾತನ ಸಂಸ್ಥೆ’ಯೊಂದಿಗೆ ಪರಿಚಯ
೪ ಅ. ಆರಂಭದಲ್ಲಿ ಅಧ್ಯಾತ್ಮದ ಬಗ್ಗೆ ಆಸಕ್ತಿಯಿಲ್ಲದಿರುವುದು; ಆದರೆ ಶೆರನ್ ಸಿಕ್ವೆರಾ ಇವರೊಂದಿಗೆ ತಾಯಿ ಅಧ್ಯಾತ್ಮದ ಬಗ್ಗೆ ಮಾತನಾಡುವಾಗ ಆ ಪ್ರಸಂಗದ ಸೂಕ್ಷ್ಮಚಿತ್ರ ತೆಗೆಯುವುದು : ಕ್ರಿ.ಶ. ೧೯೯೭ರಲ್ಲಿ ಅಂದರೆ ವಯಸ್ಸಿನ ೧೭ನೇ ವಯಸ್ಸಿಲ್ಲಿ ನಾನು ಅಮೇರಿಕಾದಲ್ಲಿ ‘ಸನಾತನ ಸಂಸ್ಥೆ’ಯ ಮಾರ್ಗದರ್ಶನದಡಿಯಲ್ಲಿ ಅಧ್ಯಾತ್ಮಪ್ರಸಾರದ ಕಾರ್ಯ ಮಾಡುವ ಸೌ.ಶೆರನ್ ಸಿಕ್ವೆರಾ ಇವರ ಸಂಪರ್ಕದಲ್ಲಿ ಬಂದೆ. ಶೆರನ್ ಇವರಿಂದಾಗಿ ನನ್ನ ತಾಯಿ ಅಧ್ಯಾತ್ಮದಲ್ಲಿ ಅತ್ಯಂತ ಕೃತಿಶೀಲರಾಗಿದ್ದಳು. ನಿಯಮಿತವಾಗಿ ಅವಳು ಅವರಿಗೆ ಭೇಟಿಯಾಗುತ್ತಿದ್ದಳು ಮತ್ತು ಸತ್ಸೇವೆ ಮಾಡುತ್ತಿದ್ದಳು. ಶೆರನಅಕ್ಕ ಹೇಳುತ್ತಿರುವ ಸಂಗತಿಗಳ ಬಗ್ಗೆ ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ; ಆದರೆ ನನ್ನ ತಾಯಿ ಶೆರನ್ ಇವರೊಂದಿಗೆ ಅಧ್ಯಾತ್ಮದ ಮೇಲೆ ಮಾತನಾಡುತ್ತಿರುವಾಗ ನಾನು ಆ ಪ್ರಸಂಗದ ಸೂಕ್ಷ್ಮ-ಚಿತ್ರ ತೆಗೆಯುತ್ತಿದ್ದೆ.

೪ ಆ. ಅಧ್ಯಾತ್ಮದ ಬಗ್ಗೆ ಉತ್ಸುಕತೆ ಬೆಳೆದು ‘ಸನಾತನ ಸಂಸ್ಥೆ’ಯ ಅದ್ವೀಯತೆಯ ಬಗ್ಗೆ ಅನುಭವ ಬರುವುದು :
ಕೆಲವು ಕಾಲಾವಧಿಯ ನಂತರ ಅಧ್ಯಾತ್ಮದ ಬಗ್ಗೆ ನನ್ನ ಉತ್ಸುಕತೆ ಬೆಳೆಯಿತು. ಆಗ ನನ್ನ ತಾಯಿಯು ನನಗೆ ಅಧ್ಯಾತ್ಮದ ಮಾಹಿತಿ ನೀಡಿದಳು ಮತ್ತು ನನಗೆ ದೇವರ ನಾಮಜಪ ಮಾಡಲು ಹೇಳಿದಳು. ಆಗ ನಾನು ೧೮ ವರ್ಷದವಳಿದ್ದೆ. ನನಗೆ ‘ಸನಾತನ ಸಂಸ್ಥೆಯ’ ಅದ್ವೀಯತೆಯ ಅನುಭವವು ಬಂದಿತು ಮತ್ತು ನನ್ನಲ್ಲಿ ಅಧ್ಯಾತ್ಮದ ಬಗ್ಗೆ ಇಚ್ಛೆಯು ನಿರ್ಮಾಣವಾಗುತ್ತಾ ಹೋಯಿತು.

೫. ಭಾವಿ ಪತಿ ಸಿರಿಯಾಕರೊಂದಿಗೆ ಭೇಟಿ ಮತ್ತು ವಿವಾಹ
೫ ಅ. ಟೋಕಿಯೊದಲ್ಲಿನ ಒಂದು ‘ಡಿಸ್ಕೊಥೆಕ್’ದಲ್ಲಿ ತರುಣನೋರ್ವನ ಪೂರ್ವ ಪರಿಚಯವೆನಿಸಿ ಅವನೊಂದಿಗೆ ಮಾತುಕತೆ ಮಾಡುವುದು ಮತ್ತು ಸಾಧಕಿಯ ಚಿತ್ರಗಳನ್ನು ನೋಡುವಾಗ ಆ ತರುಣನಿಗೆ ಏನೋ ವಿಲಕ್ಷಣ ಅರಿವಾಗುವುದು : ಕ್ರಿ.ಶ. ೧೯೯೮ರಲ್ಲಿ ನನ್ನ ೧೮ನೇ ಹುಟ್ಟುಹಬ್ಬಕ್ಕೆ ಒಂದು ವಾರ ಇರುವಾಗ ಒಮ್ಮೆ ನಾನು ನನ್ನ ಕೆಲವು ಸ್ನೇಹಿತರೊಂದಿಗೆ ಟೊಕಿಯೊದಲ್ಲಿನ ಒಂದು ‘ಡಿಸ್ಕೊಥೆಕದಲ್ಲಿ’ ಹೋಗಿದ್ದೆ. ಆಗ ಅಲ್ಲಿ ನೃತ್ಯ ಮಾಡುವಾಗ ನಾನು ಓರ್ವ ತರುಣ ಪುರುಷನೆಡೆಗೆ ಗಮನಹರಿಸಿದೆ ಮತ್ತು ನನ್ನದು ಅವನೊಂದಿಗೆ ಮೊದಲಿಂದಲೂ ಪರಿಚಯವಿರುವುದೆಂದು ಅನಿಸಿತು. ನಂತರ ನಾವು ಕಲೆಯ ಬಗ್ಗೆ ಮತ್ತು ಈಶ್ವರನ ಬಗ್ಗೆ ಚರ್ಚೆ ಮಾಡಿದೆವು. ನಾನು ಅವರಿಗೆ ನನ್ನ ಕೆಲವು ಚಿತ್ರಗಳನ್ನು ತೋರಿಸಿದೆ. ಇದೇ ನಮ್ಮ ಪ್ರೇಮಕಥೆಯ ಪ್ರಾರಂಭವಿತ್ತು. ಮುಂದೆ ಅದರದ್ದು ಅಧ್ಯಾತ್ಮಿಕ ವಿವಾಹದಲ್ಲಿ ರೂಪಾಂತರವಾಯಿತು.
೫ ಆ. ಉದ್ಯಾನವನದಲ್ಲಿ ನೃತ್ಯ ಮಾಡುವಾಗ ಈಶ್ವರನ ಅಸ್ತಿತ್ವ ಅರಿವಾಗುವುದು ಮತ್ತು ಸಿರಿಯಾಕ ಇವರಿಗೆ ದೈವೀ ಅನುಭೂತಿ ಬರುವುದು : ಒಮ್ಮೆ ನಾವು ಉದ್ಯಾನದಲ್ಲಿ ಹೋಗಿದ್ದೇವು. ಅಲ್ಲಿ ನಾವು ಶಾಂತವಾಗಿ ಮಾತನಾಡಿದೆವು ಮತ್ತು ನೃತ್ಯ ಮಾಡಿದೆವು. ನನಗೆ ಅಲ್ಲಿ ಈಶ್ವರನ ಅಸಿತ್ವದ ಅರಿವಾಯಿತು. ಒಂದು ಕ್ಷಣ ಸಿರಿಯಾಕನಿಗೆ ನನ್ನ ಸುತ್ತಲೂ ಪ್ರಕಾಶ ಕಂಡಿತು ಮತ್ತು ‘ಈ ತರುಣಿ ಮುಂದೆ ನನ್ನ ಪತ್ನಿಯಾಗುವಳು’ ಎಂಬ ವಿಚಾರ ಅವರ ಮನಸ್ಸಿನಲ್ಲಿ ಬಂದಿತು. ಅವರಿಗೆ ನನ್ನ ಬಗ್ಗೆ ದೈವೀ ಅನುಭೂತಿಯು ಬಂದಿತು; ಆದರೆ ಅವರು ಸುಮ್ಮನಿದ್ದರು ಮತ್ತು ಅವರು ನನಗೆ ಅದರ ಬಗ್ಗೆ ಏನನ್ನೂ ಹೇಳಲಿಲ್ಲ.

೫ ಇ. ತಾಯಿಯ ಬಳಿ ಸಿರಿಯಾಕನೊಂದಿಗೆ ವಿವಾಹವಾಗುವ ಇಚ್ಛೆ ವ್ಯಕ್ತಪಡಿಸುವುದು: ನಾನು ಅವರಿಗೆ ನನ್ನ ಮನೆಗೆ ಕರೆದುಕೊಂಡು ಹೋದೆ ಮತ್ತು ತಾಯಿಯೊಂದಿಗೆ ಅವರ ಪರಿಚಯ ಮಾಡಿಕೊಟ್ಟೆ. ಸಿರಿಯಾಕ ನಮ್ಮ ಮನೆಯಲ್ಲಿ ೩ ಗಂಟೆ ಇದ್ದರು. ಅವರು ನನ್ನ ತಾಯಿಯೊಂದಿಗೆ ಅಧ್ಯಾತ್ಮದ ಬಗ್ಗೆ ಆಳವಾಗಿ ಚರ್ಚೆ ಮಾಡಿದರು. ಅವರು ಹೋದಾಗ ‘ನನಗೆ ಇವರನ್ನು ಮದುವೆ ಮಾಡಿಕೊಳ್ಳಬೇಕು’ ಎಂದು ನಾನು ತಾಯಿಯ ಬಳಿ ಹೇಳಿದೆ. ಅದನ್ನು ಕೇಳಿ ನನ್ನ ತಾಯಿಗೆ ಸಂತೋಷವಾಯಿತು. ನಾನು ಸತ್ಯ ಹೇಳಿದ್ದರ ಬಗ್ಗೆ ಮತ್ತು ಸಿರಿಯಾಕನಲ್ಲಿ ಒಳ್ಳೆಯ ವ್ಯಕ್ತಿ ನೋಡಿದ್ದರ ಬಗ್ಗೆ ತಾಯಿಗೆ ಗಮನಕ್ಕೆ ಬಂದಿತು.

೫ ಈ. ಮಾಡೆಲಿಂಗ್ ಬೇಡಿಕೆಯಿಂದಾಗಿ ಬೇರೆ ಬೇರೆ ಸ್ಥಳಗಳಲ್ಲಿ ಹೋಗಬೇಕಾಗುವುದು : ಜೀವನದ ಮಾರ್ಗಕ್ರಮಣೆ ನಡೆದಿತ್ತು. ಜಗತ್ತಿನಾದ್ಯಂತದ ವಿವಿಧ ಪಟ್ಟಣಗಳಲ್ಲಿ ಮಾಡೆಲಿಂಗ್ ಬೇಡಿಕೆಯಿಂದಾಗಿ ನಮಗೆ ಬೇರ್ಪಡೆಯಾಗಬೇಕಾಯಿತು. ನಾನು ಮಿಲಾನ ಪಟ್ಟಣದಲ್ಲಿ ಹೋದೆ ಮತ್ತು ಸಿರಿಯಾಕ ಫ್ರಾನ್ಸನಲ್ಲಿ ಮರಳಿದರು; ಆದರೆ ನಾವು ಹೆಚ್ಚು ಕಾಲ ಪರಸ್ಪರರಿಂದ ದೂರ ವಿರಲು ಸಾಧ್ಯವಾಗಲಿಲ್ಲ.

೫ ಉ. ಪ.ಪೂ. ಡಾಕ್ಟರರು ಹೇಳಿದಂತೆ ‘ಶ್ರೀ ಗುರುದೇವ ದತ್ತ |’ ಈ ನಾಮಜಪ ಮಾಡುವಾಗ ಸಿರಿಯಾಕ ಸುತ್ತಲೂ ತೊದರೆದಾಯಕ ಶಕ್ತಿ ಕಾಣುವುದು ಮತ್ತು ಸಾಧಕಿಯು ಶಕ್ತಿಗಳ ಪರಿಣಾಮ ತೋರಿಸುವ ಚಿತ್ರ ಚಿತ್ರಿಸುವುದು : ಫೆಬ್ರುವರಿ ೧೯೯೯ರಲ್ಲಿ ಅಂದರೆ ಎಂಟು ತಿಂಗಳುಗಳ ನಂತರ ನಾನು ಮಾಡೆಲಿಂಗ್ ನಿಮಿತ್ತವಾಗಿ ಮಿಲಾನ್‌ನಲ್ಲಿ ಹೋದೆ ಆಗ ಸಿರಿಯಾಕ ನನ್ನೊಂದಿಗೆ ಬಂದರು. ಆಗ ನಾವು ಒಟ್ಟಿಗಿದ್ದೇವು. ಅವರಿಗೆ ಪೂರ್ವಜರ ತೊಂದರೆಯಿತ್ತು. ಪ.ಪೂ. ಡಾಕ್ಟರರು ಅವರಿಗೆ ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಮಾಡಲು ಹೇಳಿದರು. ಅವರು ಯಾವಾಗ ಜಪವನ್ನು ಮಾಡುತ್ತಿದ್ದರು ಆಗ ನನಗೆ ಅವರಸುತ್ತಲೂ ತೊಂದರೆದಾಯಕ ಶಕ್ತಿಗಳು ಕಾಣುತ್ತಿದ್ದವು; ಆದರೆ ನನಗೆ ಭಯವೆನಿಸುತ್ತಿರಲಿಲ್ಲ. ಅವರ ಮೇಲೆಯಾಗುವ ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ಪರಿಣಾಮಗಳ ಬಗ್ಗೆ ನಾನು ಚಿತ್ರ ಚಿತ್ರಿಸಿದೆ.

೫ ಊ. ಪ.ಪೂ. ಡಾಕ್ಟರರ ಉಪಸ್ಥಿತಿಯಲ್ಲಿ ವಿವಾಹ ಮಾಡುವ ಇಚ್ಛೆ ಪ್ರದರ್ಶಿತ ಮಾಡುವುದು ಮತ್ತು ಪ.ಪೂ. ಡಾಕ್ಟರರು ಭಾರತದಲ್ಲಿ ನಿಮಂತ್ರಿತ ಮಾಡಿದ್ದರಿಂದ ಜೀವನದಲ್ಲಿ ಹೊಸ ಪ್ರಕಾಶ ಪ್ರಕಟಿಸಿದ್ದರ ಬಗ್ಗೆ ಅನುಭವ ಬರುವುದು : ನಾವಿಬ್ಬರು ಬಹಳ ಪ್ರಯಾಣ ಮಾಡಿದೆವು ಮತ್ತು ಸಾವಕಾಶವಾಗಿ ಪರಸ್ಪರರ ಪ್ರೇಮದಲ್ಲಿ ಆಳವಾಗಿ ಮುಳುಗಿದೆವು. ನವೆಂಬರ ೧೯೯೯ರಲ್ಲಿ ಟೊಕಿಯೊದಲ್ಲಿರುವಾಗ ಸಿರಿಯಾಕ ವಿವಾಹದ ಪ್ರಸ್ತಾವ ಮಂಡಿಸಿದರು. ಆಗ ‘ಹೆಲ್ ಜಿಝಸ್’ ಎಂಬ ಜಪವನ್ನು ಮಾಡುತ್ತಿರುವಾಗ ಸಿರಿಯಾಕನೊಂದಿಗೆ ನನ್ನ ವಿವಾಹವಾಗಿದ್ದರ ದೃಶ್ಯವನ್ನು ನಾನು ನೋಡಿದೆ. ನಾನು ಪ.ಪೂ. ಡಾಕ್ಟರವರ ಉಪಸ್ಥಿತಿಯಲ್ಲಿ ವಿವಾಹ ಮಾಡುವ ಇಚ್ಛೆ ವ್ಯಕ್ತ ಪಡಿಸಿದೆ; ಏಕೆಂದರೆ ನನಗೆ ಅವರಿಗೆ ಪ್ರತ್ಯಕ್ಷ ಭೇಟಿಯಾಗುವ ತೀವ್ರ ಇಚ್ಛೆಯಿತ್ತು.

ನಾನು ಮತ್ತು ಸಿರಿಯಾಕ ಆಧ್ಯಾತ್ಮಿಕ ಪದ್ಧತಿಯಿಂದ ವಿವಾಹ ಮಾಡುವ ವಿಚಾರ ಮಾಡುತ್ತಿದ್ದೆವು. ಆಗ ಸೌ. ಶೆರನ್ ಸಿಕ್ವೆರಾ ನಮಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರದ್ದು ಪ.ಪೂ. ಡಾಕ್ಟರರೊಂದಿಗೆ ಸಂಪರ್ಕವಿತ್ತು. ‘ನಾವು ವೈದಿಕ ಪದ್ಧತಿಯಂದ ವಿವಾಹ ಮಾಡಬಹುದೇ ?’ ಎಂದು ನಾನು ಶೆರನ್ ಇವರನ್ನು ಕೇಳಿದೆ. ಆಗ ದೊರಕಿದ ಉತ್ತರದಿಂದ ನಮ್ಮ ಜೀವನದಲ್ಲಿ ಹೊಸ ಪ್ರಕಾಶ ಪ್ರಕಟವಾಯಿತು. ಪ.ಪೂ. ಡಾಕ್ಟರರು ನಮ್ಮನ್ನು ಭಾರತದಲ್ಲಿ ನಿಮಂತ್ರಣೆ ಮಾಡಿದರು ಮತ್ತು ವಿವಾಹ ಆಯೋಜಿಸಿ ಆಶೀರ್ವಾದ ನೀಡುವುದರ ಬಗ್ಗೆ ತಿಳಿಸಿದರು.

೬. ಸಾಧನೆ, ಸಾತ್ವಿಕ ವಾತಾವರಣ ಮತ್ತು ಕೇಳುವ-ಮಾತನಾಡುವ ಕ್ಷಮತೆ

೬ ಅ. ‘ಸಾಧನೆಯಿಂದಾಗಿ ಕೇಳುವ ಕ್ಷಮತೆಯಲ್ಲಿ ಬೆಳವಣಿಗೆಯಾಗುವುದು’ ಎಂದು ಪ.ಪೂ. ಡಾಕ್ಟರರು ಹೇಳುವುದು : ಆಗಸ್ಟ ೧೯೯೯ರಲ್ಲಿ ಅಟಲಾಂಟಾದಲ್ಲಿರುವಾಗ ನಾನು ಸಾಧನೆ ಮಾಡಿದ್ದಲ್ಲಿ ನನ್ನ ಕೇಳುವ ಕ್ಷಮತೆಯಲ್ಲಿ ಶೇ. ೩೦ರಷ್ಟು ಬೆಳವಣಿಗೆಯಾಗುವುದೆಂದು ನನಗೆ ಪ.ಪೂ. ಡಾಕ್ಟರರು ಹೇಳಿದರು. ಆಗ ನನಗೆ ಕೇವಲ ಶೇ.೩೦ರಷ್ಟು ಕೇಳಲು ಬರುತ್ತಿತ್ತು. ಸಾಧನೆ ಮಾಡಿದ್ದಲ್ಲಿ ನನ್ನ ಕೇಳುವ ಕ್ಷಮತೆಯು ಶೇ. ೬೦ರಷ್ಟು ವೃದ್ಧಿಸಲಿತ್ತು. ಅಷ್ಟು ಸಂವಾದ ಸಾಧಿಸಲು ಸಾಕಿಷ್ಟಿತ್ತು.

೬ ಆ. ಯಾವುದೇ ಆಧುನಿಕ ವೈದ್ಯರು ಉಪಚಾರ ತೆಗೆದುಕೊಳ್ಳದೆ ನಾಮಜಪ ಮಾಡಿದ್ದರಿಂದ ಮತ್ತು ಭಾರತದಲ್ಲಿ ಬಂದಾಗ ಒಳ್ಳೆಯ ರೀತಿಯಲ್ಲಿ ಮಾತನಾಡಲು ಬರುವುದು : ಆಕ್ಟೊಬರ ೧೯೯೮ರಲ್ಲಿ ಭಾರತದಲ್ಲಿ ಬರುವ ಮೊದಲು ನಾನು ‘ಹೆಲ್ ಜಿಝಸ್’ ಮತ್ತು ‘ಶ್ರೀ ಗುರುದೇವ ದತ್ತ |’ ಇವುಗಳ ಪ್ರತಿಯೊಂದು ೬ ಮಾಲೆ ಜಪ ಮಾಡಲಾರಂಭಿಸಿದೆ. ಅದರನಂತರ ನನಗೆ ಸ್ವಲ್ಪ ಮಾತನಾಡಲು ಬರಲಾರಂಭಿಸಿತು. ನಾನು ಡಿಸೆಂಬರ ೧೯೯೯ರಲ್ಲಿ ಭಾರತದಲ್ಲಿ ಬಂದೆ. ಆಗ ನನಗೆ ಒಳ್ಳೆಯ ರೀತಿಯಲ್ಲಿ ಮಾತನಾಡಲು ಬರಲಾರಂಭಿಸಿತು ಮತ್ತು ಕ್ರಿ.ಶ. ೨೦೦೦-೨೦೦೧ರಲ್ಲಿ ನನಗೆ ಹೆಚ್ಚು ಒಳ್ಳೆಯ ರೀತಿಯಲ್ಲಿ ಮಾತನಾಡಲು ಬರಲಾರಂಭಿಸಿತು. ಯಾವುದೇ ಆಧುನಿಕ ವೈದ್ಯರ (ಡಾಕ್ಟರರ) ಉಪಚಾರ ಪಡೆಯದೆ ನನ್ನಲ್ಲಿ ಈ ಪ್ರಗತಿಯು ಆಯಿತು.

೬ ಇ. ಪ.ಪೂ. ಭಾವು ಮಸೂರಕರ ಇವರ ಮಾತಾನಾಡುವಿಕೆ ಕೆಲವು ಕ್ಷಣಗಳಿಗಾಗಿ ಸ್ಪಷ್ಟವಾಗಿ ಕೇಳಲು ಬಂದಿದ್ದರಿಂದ ಆಶ್ಚರ್ಯದ ಧಕ್ಕೆಯೆನಿಸಿ ಭಾವಾಶ್ರೂ ಬರುವುದು : ಸಿಂಧುದುರ್ಗ, ಮಹಾರಾಷ್ಟ್ರದಲ್ಲಿನ ಸಂತರು ಪ.ಪೂ. ಭಾವು ಮಸೂರಕರ ಇವರ ೨.೧.೨೦೦೦ ಈ ದಿನದಂದು ನಾನು ದರ್ಶನ ತೆಗೆದುಕೊಂಡೆ. ಸಂಖ್ಯಾಶಾಸ್ತ್ರದಲ್ಲಿ ಅವರ ಪ್ರಭುತ್ವವಿತ್ತು. ಪ.ಪೂ. ಭಾವುರವರ ಮಾತನಾಡುವಿಕೆ ನನಗೆ ಕೆಲವು ಕ್ಷಣ ಸ್ಪಷ್ಟವಾಗಿ ಕೇಳಿಬಂದಿತು. ಆಗ ನನಗೆ ಆಶ್ಚರ್ಯದ ಧಕ್ಕೆಯೆನಿಸಿತು ಮತ್ತು ಭಾವಾಶ್ರೂಗಳು ಬಂದವು. ಇಷ್ಟು ಸ್ಪಷ್ಟವಾಗಿ ನಾನು ಮೊದಲನೆ ಬಾರಿ ಕೇಳುತ್ತಿದ್ದೆ. ಅದರನಂತರ ಕೆಲವು ಬಾರಿ ಅದರ ಪುನರಾವೃತ್ತಿಯಾಯಿತು. - ಯೋಯಾ ವಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ.
(ಕ್ರಮಶ:)

No comments:

Post a Comment

Note: only a member of this blog may post a comment.