ಕೂದಲನ್ನು ಬಿಸಿಲಿನಲ್ಲಿ ಒಣಗಿಸುವುದರಿಂದಾಗುವ ಲಾಭ ಮತ್ತು ಯಂತ್ರದಿಂದ ಒಣಗಿಸುವುದರಿಂದಾಗುವ ಹಾನಿ

ಅ. ಬಿಸಿಲಿನಲ್ಲಿ ಕುಳಿತು ಕೂದಲನ್ನು ಒಣಗಿಸುವುದು ಮತ್ತು ಕೂದಲುಗಳ ತುದಿಗಳಿಗೆ ಗಂಟನ್ನು ಹಾಕುವುದು: ಹಿಂದಿನ ಕಾಲದಲ್ಲಿ ಸ್ತ್ರೀಯರು ಸ್ನಾನ ಮಾಡಿದ ಮೇಲೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕುಳಿತು ಕೂದಲನ್ನು ಒಣಗಿಸಿಕೊಳ್ಳುತ್ತಿದ್ದರು. ಇದರಿಂದ ಸೂರ್ಯನ ಕಿರಣಗಳಲ್ಲಿನ ತೇಜತತ್ತ್ವವು ತಾನಾಗಿಯೇ ಕೂದಲುಗಳಲ್ಲಿನ ಬುಡದಲ್ಲಿ ಘನೀಕೃತವಾಗುತ್ತಿತ್ತು ಮತ್ತು ಅಲ್ಲಿ ಅವಿತುಕೊಂಡಿದ್ದ ರಜ-ತಮ ಲಹರಿಗಳ ಉಚ್ಚಾಟನೆಯಾಗಿ ದೇಹದ ಶುದ್ಧಿಯಾಗುತ್ತಿತ್ತು. ಅದರ ನಂತರ ಕೂದಲುಗಳ ತುದಿಗಳಿಗೆ ಗಂಟು ಹಾಕಿಯೇ ಮನೆಯನ್ನು ಪ್ರವೇಶಿಸುತ್ತಿದ್ದರು. ಇದರಿಂದ ಭೂಮಿಯ ಸಂಪರ್ಕದಿಂದ ಕೂದಲಿನ ತುದಿಗಳಿಂದ ದೇಹದೊಳಗೆ ಬರುವ ರಜ-ತಮ ಲಹರಿಗಳನ್ನು ಕೂದಲಿನ ತುದಿಗಳಿಗೆ ಹಾಕಿದ ಗಂಟಿನಿಂದ ತಡೆಯಲಾಗುತ್ತಿತ್ತು. ಕೂದಲುಗಳಿಗೆ ಕಟ್ಟಿದ ಗಂಟಿನಿಂದ ಕೂದಲಿನಲ್ಲಿ ತೇಜತತ್ತ್ವದ ಲಹರಿಗಳು ಗರಿಷ್ಠ ಪ್ರಮಾಣದಲ್ಲಿ ವೃದ್ಧಿಯಾಗಿ ಅಲ್ಲೇ ಘನೀಭವಿಸುವುದರಿಂದ, ಈ ಸಾತ್ತ್ವಿಕತೆಯು ಹೆಚ್ಚುಕಡಿಮೆ ಎಂಟು ದಿನಗಳವರೆಗೆ ಉಳಿಯುತ್ತಿತ್ತು. ಆಮೇಲೆ ಮತ್ತೊಮ್ಮೆ ರಜಸ್ವಲೆಯಾದ ನಂತರ ಸ್ನಾನ ಮಾಡುವುದು ಅಥವಾ ಎಂಟು ದಿನಗಳಲ್ಲಿ ರಜಸ್ವಲೆಯಾಗದಿದ್ದರೆ ಸ್ನಾನ ಮಾಡುವುದು, ಇಂತಹ ಆಚಾರವನ್ನು ಪಾಲಿಸಿ ದೇಹ ಮತ್ತು ಕೂದಲಿನ ಯಥಾಯೋಗ್ಯ ಶುದ್ಧಿಯನ್ನು ಮಾಡಲಾಗುತ್ತಿತ್ತು.

ಆ. ಕೂದಲನ್ನು ಒಣಗಿಸಲು ಮತ್ತು ಬಾಚಲು ವಿದ್ಯುತ್ ಯಂತ್ರದ ಬಳಕೆ ಬೇಡ!:
ಕಲಿಯುಗದಲ್ಲಿ ಕೂದಲನ್ನು ಬಾಚಲು ಹಾಗೆಯೇ ಒಣಗಿಸಲು ವಿದ್ಯುತ್ ಯಂತ್ರವನ್ನು ಬಳಸುವುದರಿಂದ ಅದರ ಶಬ್ದದ ಕಡೆಗೆ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳ ಲಹರಿಗಳು ಆಕರ್ಷಿತವಾಗಿ ಈ ಯಂತ್ರದಿಂದ ಸಹಜವಾಗಿಯೇ ಕೂದಲಿನ ಬುಡದಲ್ಲಿ ಸಂಕ್ರಮಣಗೊಳ್ಳುವುದರಿಂದ ದೇಹವು ಕಡಿಮೆ ಸಮಯದಲ್ಲಿ ರಜ-ತಮಯುಕ್ತವಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನ ಸಂಸ್ಥೆಯ ಗ್ರಂಥ ‘ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ’)

3 comments:

  1. mane munde bisilu beela davarige bere enu suggest madthiraa?

    ReplyDelete
    Replies
    1. ಬಿಸಿಲು ಸಿಗುವುದೇ ಇಲ್ಲದಂತಹ ಅನಿವಾರ್ಯ ಸಂದರ್ಭಗಳಲ್ಲಿ ನಾಮಸ್ಮರಣೆ ಮಾಡುತ್ತಾ ಫ್ಯಾನ್ ಹಾಕಿ ಒಣಗಿಸಿಕೊಳ್ಳಬಹುದು. ನಾಮಸ್ಮರಣೆಯಿಂದ ತೊಂದರೆಯ ತೀವ್ರತೆ ಕಡಿಮೆಯಾಗುತ್ತದೆ.

      Delete

Note: only a member of this blog may post a comment.