ಗ್ರಂಥ ಪರಿಚಯ - ದೇವಿಯ ಪೂಜೆಗೆ ಸಂಬಂಧಿಸಿದ ಕೃತಿಗಳ ಶಾಸ್ತ್ರ

ಕಿರುಗ್ರಂಥದ ಪರಿಚಯ

ಕಟೀಲಿನ ಶ್ರೀ ದುರ್ಗಾಪರಮೇಶ್ವರಿ, ಕೊಲ್ಲೂರಿನ ಶ್ರೀ ಮೂಕಾಂಬಿಕೆ, ಶೃಂಗೇರಿಯ ಶ್ರೀ ಶಾರದಾಂಬೆ, ಸವದತ್ತಿಯ ಶ್ರೀ ರೇಣುಕಾದೇವಿ... ಇಂತಹ ಎಲ್ಲ ದೇವತೆಗಳೆಂದರೆ ಆದಿಶಕ್ತಿ ಶ್ರೀ ದುರ್ಗಾದೇವಿಯ ಕಾರ್ಯಕ್ಕನುಸಾರ ಅವತರಿಸಿದ ರೂಪಗಳೇ ಆಗಿವೆ. ಯಾವ ರೀತಿ ಶ್ರೀರಾಮ ಮತ್ತು ಶ್ರೀಕೃಷ್ಣ ಇವರು ಶ್ರೀವಿಷ್ಣುವಿನ ರೂಪಗಳಾಗಿದ್ದಾರೆಯೋ, ಹಾಗೆಯೇ ಈ ರೂಪಗಳು ಶ್ರೀ ದುರ್ಗಾದೇವಿಯ ರೂಪಗಳಾಗಿವೆ. ಆದುದರಿಂದ ಎಲ್ಲ ದೇವಿಗಳ ರೂಪಗಳಿಗೆ ಸಂಬಂಧಿಸಿದ ಪೂಜೆಯ ಕೃತಿಗಳು ಸಾಮಾನ್ಯವಾಗಿ ಒಂದೇ ಆಗಿರುತ್ತವೆ. ಈ ಕಿರುಗ್ರಂಥದಲ್ಲಿ ಇಂತಹ ಪೂಜೆಯ ಕೃತಿಗಳ ಹಾಗೆಯೇ ಹಬ್ಬ, ಉತ್ಸವ ಮುಂತಾದ ಪ್ರಸಂಗಗಳಲ್ಲಿ ಮಾಡಲಾಗುವ ದೇವಿಯ ಪೂಜೆಗೆ ಸಂಬಂಧಿಸಿದ ವಿಶಿಷ್ಟ ಕೃತಿಗಳ ಶಾಸ್ತ್ರವನ್ನು ಕೊಡಲಾಗಿದೆ.

  • ದೇವಿಯ ಮೂರ್ತಿಗೆ ಕುಂಕುಮಾರ್ಚನೆ ಮಾಡುವ ಪದ್ಧತಿ ಮತ್ತು ಅದರ ಹಿಂದಿನ ಶಾಸ್ತ್ರ
  • ದೇವಿಯ ವಿವಿಧ ರೂಪಗಳಿಗೆ ಯಾವ ಹೂವುಗಳನ್ನು ಮತ್ತು ಏಕೆ ಅರ್ಪಿಸಬೇಕು?
  • ದೇವಿಯ ಆರತಿಯನ್ನು ಹೇಗೆ ಮಾಡಬೇಕು?
  • ಗೌರೀ ತೃತೀಯಾ ಮತ್ತು ಹರಿತಾಲಿಕಾ ಈ ದಿನಗಳಲ್ಲಿ ದೇವಿಪೂಜೆ ಮಾಡುವುದರಿಂದ ಯಾವ ಲಾಭಗಳಾಗುತ್ತವೆ? 
  • ನವರಾತ್ರಿಯಲ್ಲಿ ಘಟಸ್ಥಾಪನೆ, ಅಖಂಡ ದೀಪಪ್ರಜ್ವಲನ, ಕುಮಾರಿಕಾ-ಪೂಜೆ ಇತ್ಯಾದಿ ಕೃತಿಗಳನ್ನು ಮಾಡುವುದರ ಮಹತ್ವ
  • ಗರಬಾ ಆಡುವುದರ ಹಿಂದಿನ ಶಾಸ್ತ್ರವೇನು?
  • ನವರಾತ್ರಿಯಲ್ಲಿ ಅಖಂಡ ದೀಪಪ್ರಜ್ವಲನೆ ಮಾಡುವುದರ  ಹಿಂದಿನ ಶಾಸ್ತ್ರವೇನು?
  • ದೇವಿಯ ಗೊಂದಲವನ್ನು ಹಾಕುವುದು
  • ದೇವಿಯ ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳು
ಇಂತಹ ಕೃತಿಗಳ ಉದ್ದೇಶ ಇತ್ಯಾದಿ ವಿಷಯಗಳ ಹೊಸ ಮತ್ತು ಸೂಕ್ಷ್ಮ ಸ್ತರದಲ್ಲಿನ ಅಧ್ಯಾತ್ಮಶಾಸ್ತ್ರೀಯ ಜ್ಞಾನವನ್ನು ಈ ಕಿರುಗ್ರಂಥದಲ್ಲಿ ನೀಡಲಾಗಿದೆ.

ದೇವತೆಗಳ ಪೂಜೆ ಮಾಡುವಾಗ ಆ ಪೂಜೆಯಲ್ಲಿನ ಕೃತಿಗಳ ಶಾಸ್ತ್ರವು ತಿಳಿದರೆ, ಆ ಕೃತಿಗಳ ಮಹತ್ವವು ಗಮನಕ್ಕೆ ಬಂದು, ಪೂಜೆಯು ಹೆಚ್ಚು ಶ್ರದ್ಧೆಯಿಂದಾಗುತ್ತದೆ. ಶ್ರದ್ಧೆಯಿಂದ ಭಾವ ನಿರ್ಮಾಣವಾಗುತ್ತದೆ ಮತ್ತು ಭಾವಪೂರ್ಣ ಕೃತಿಗಳಿಂದ ದೇವತೆಯ ತತ್ತ್ವದ ಲಾಭವು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ಹಾಗೆಯೇ ದೇವರ ಪೂಜೆಯ ಕೃತಿಗಳನ್ನು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯರೀತಿಯಲ್ಲಿ ಮಾಡಿದರೆ ನಮಗೆ ಅಧಿಕ ಲಾಭವಾಗುತ್ತದೆ, ಈ ಉದ್ದೇಶವನ್ನು ಗಮನದಲ್ಲಿಟ್ಟು ಈ ಕಿರುಗ್ರಂಥದಲ್ಲಿ ದೇವಿಪೂಜೆಯ ಕೃತಿಗಳ ಬಗ್ಗೆ ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯ ಮಾಹಿತಿಯನ್ನು ನೀಡಲಾಗಿದೆ.

ಈ ಕಿರುಗ್ರಂಥದಲ್ಲಿನ ದೇವಿಪೂಜೆಯ ಶಾಸ್ತ್ರವನ್ನು ತಿಳಿದುಕೊಂಡು ಕೃತಿ ಮಾಡುವವರಿಗೆ ದೇವಿಯ ಕೃಪಾಶೀರ್ವಾದವು ಶೀಘ್ರ ಲಭಿಸಲಿ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ. - ಸಂಕಲನಕಾರರು

ಈ ಕಿರುಗ್ರಂಥವನ್ನು ಉಡುಗೊರೆಯೆಂದು ಅರಿಶಿನ-ಕುಂಕುಮಕ್ಕಾಗಿ ಬಾಗಿನದಲ್ಲಿ ಕೊಡಬಹುದು. ಇದರಿಂದ ಹಿಂದೂ ಧರ್ಮದ ಶ್ರೇಷ್ಠತೆ ಇತರರಿಗೂ ತಿಳಿಯುವುದು ಮತ್ತು ನಮ್ಮಿಂದ ಜ್ಞಾನದಾನವೂ ಆಗುವುದು.

No comments:

Post a Comment

Note: only a member of this blog may post a comment.