ನಾಮಜಪ ಮಾಡುವಾಗ ಮುದ್ರೆ ಮತ್ತು ನ್ಯಾಸವನ್ನೂ ಮಾಡಬೇಕು!

ಸಾಧನೆಯೆಂದು ನಾಮಜಪ ಮಾಡುವಾಗ ಅಥವಾ ತೊಂದರೆ ನಿವಾರಣೆಗಾಗಿ ನಾಮಜಪ ಮಾಡುವಾಗ ಮುದ್ರೆ ಮಾಡುವುದು ಉಪಯುಕ್ತವಾಗಿದೆ.

೧. ಮುದ್ರೆಗಳ ಉಗಮ : ಋಷಿ ಮುನಿಗಳು ಸಾವಿರಾರು ವರ್ಷಗಳ ಹಿಂದೆ ಮುದ್ರೆಗಳನ್ನು ಕಂಡುಹಿಡಿದರು. ಹಿಂದೂಗಳ ಪ್ರಾಚೀನ ಧರ್ಮಗ್ರಂಥಗಳಲ್ಲಿಯೂ ರೋಗನಿವಾರಣೆಗಾಗಿ ಹಾಗೂ ಆರೋಗ್ಯ ಚೆನ್ನಾಗಿರಬೇಕೆಂದು ವಿವಿಧ ಮುದ್ರೆಗಳನ್ನು ಹೇಳಲಾಗಿದೆ.

೨. ಮುದ್ರೆ ಮತ್ತು ನ್ಯಾಸದಿಂದ ನಾಮಜಪದ ಫಲನಿಷ್ಪತ್ತಿ ಹೆಚ್ಚಾಗುವುದು : ಅನೇಕ ಸಾಧಕರು ತೊಂದರೆ ನಿವಾರಣೆಗಾಗಿ ನಾಮಜಪ ಮಾಡುವಾಗ ಮುದ್ರೆ ಮತ್ತು ನ್ಯಾಸ ಮಾಡುವುದಿಲ್ಲ. ಮುದ್ರೆ ಮತ್ತು ನ್ಯಾಸದಿಂದ ನಾಮಜಪದ ಫಲನಿಷ್ಪತ್ತಿ ಶೇ.೧೦ ರಷ್ಟು ಹೆಚ್ಚಾಗುತ್ತದೆ ಹಾಗೂ ತೊಂದರೆಯು ಶೀಘ್ರಗತಿಯಲ್ಲಿ ಕಡಿಮೆಯಾಗಲು ಸಹಾಯವಾಗುತ್ತದೆ.

೩. ವಿವಿಧ ತೊಂದರೆಗಳ ನಿವಾರಣೆಗಾಗಿ ಮುದ್ರೆ ಮತ್ತು ನ್ಯಾಸ ಮಾಡುವುದು
೩ಅ. ಮುದ್ರೆಗಳು : ಶಾರೀರಿಕ, ಮಾನಸಿಕ ಇತ್ಯಾದಿ ವಿವಿಧ ತೊಂದರೆಗಳಿಗಾಗಿ ವಿವಿಧ ಮುದ್ರೆಗಳನ್ನು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ಸನಾತನದ ಗ್ರಂಥ ಶೀಘ್ರದಲ್ಲಿಯೇ ಮುದ್ರಣವಾಗಲಿದೆ. ಯಾವ ತೊಂದರೆಗೆ ಯಾವ ಮುದ್ರೆ ಮಾಡಬೇಕೆಂಬ ಮಾಹಿತಿಯಿದ್ದರೆ, ಸಾಧಕರು ಹಾಗೆ ಮಾಡಬೇಕು. ಮಾಹಿತಿ ಇಲ್ಲದಿದ್ದರೆ ಗ್ರಂಥ ಮುದ್ರಣವಾಗುವವರೆಗೆ ನಾಮಜಪ ಮಾಡುವಾಗ ಎಲ್ಲಕ್ಕಿಂತ ಸುಲಭವಾದ ಹಾಗೂ ಸರ್ವಪ್ರಚಲಿತ ಇರುವ ಜ್ಞಾನಮುದ್ರೆ ಮಾಡಬೇಕು.

೩ಆ. ನ್ಯಾಸ: ಇನ್ನೊಂದು ಕೈಯಿಂದಲೂ ಮುದ್ರೆ ಮಾಡಿ ಅದರಿಂದ ತನಗಾಗುವ ತೊಂದರೆಗನುಸಾರ ಶರೀರದಲ್ಲಿನ ಸಂಬಂಧಪಟ್ಟ ಚಕ್ರದ ಮೇಲೆ ನ್ಯಾಸ ಮಾಡಬೇಕು, ಉದಾ. ಒಂದು ಕೈಯಿಂದ ಜ್ಞಾನಮುದ್ರೆ ಮಾಡುತ್ತಿದ್ದರೆ ಇನ್ನೊಂದು ಕೈಯ ಹೆಬ್ಬೆರಳು ಮತ್ತು ತರ್ಜನಿಗಳ ತುದಿಯನ್ನು ಪರಸ್ಪರ ಜೋಡಿಸಿ ಅದನ್ನು ಶರೀರದ ಮೇಲಿಟ್ಟು ನ್ಯಾಸ ಮಾಡಬೇಕು. ಸಾಮಾನ್ಯವಾಗಿ ತೊಂದರೆಗನುಸಾರ ಶರೀರದ ಸಂಬಂಧಪಟ್ಟ ಚಕ್ರಗಳು ಯಾವುವು ಎಂಬುದನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.


೪. ಮುದ್ರೆ ಮಾಡುವ ವಿಷಯದಲ್ಲಿ ಕೆಲವು ಉಪಯುಕ್ತ ಸೂಚನೆಗಳು
ಅ. ಮುದ್ರೆ ಮಾಡುವಾಗ ಹೆಬ್ಬೆರಳು ಮತ್ತು ಇತರ ಬೆರಳುಗಳ ಸ್ಪರ್ಶ ಸಹಜವಾಗಿರಬೇಕು.
ಆ. ಮುದ್ರೆ ಮಾಡುವಾಗ ಹೆಬ್ಬೆರಳಿನಿಂದ ಇತರ ಬೆರಳನ್ನು ಸ್ಪರ್ಶ ಮಾಡಬೇಕು.
ಇ. ಹೆಬ್ಬೆರಳಿಗೆ ಜೋಡಿಸಿದ ಬೆರಳಿನ ಹೊರತು ಇತರ ಬೆರಳುಗಳನ್ನು ಸರಳವಾಗಿಡಬೇಕು.
ಈ. ಸಾಮಾನ್ಯವಾಗಿ ಕೈಯ ಅಂಗೈ ಆಕಾಶದ ದಿಕ್ಕಿನಲ್ಲಿರಬೇಕು.
ಉ. ಒಂದು ಕೈಯಿಂದ ಮುದ್ರೆ ಮತ್ತು ಇನ್ನೊಂದು ಕೈಯಿಂದ ನ್ಯಾಸ ಮಾಡಬೇಕು.

‘ಜ್ಞಾನಮುದ್ರೆ’ಯಿಂದ ಏಕಾಗ್ರತೆ ಹಾಗೂ ಸಾಧನೆ ಒಳ್ಳೆಯ ರೀತಿಯಲ್ಲಿ ಆಗಲು ಸಹಾಯವಾಗುತ್ತದೆ. ಶರೀರ ಮತ್ತು ಮನಸ್ಸಿಗೆ ಸಂಬಂಧಿಸಿದ ತೊಂದರೆಗಳಿಗೆ ತೇಜತತ್ತ್ವಕ್ಕೆ ಸಂಬಂಧಿಸಿದ ಮುದ್ರೆ ಹೆಚ್ಚು ಉಪಯೋಗವಾಗುವುದು. ಈ ಉದ್ದೇಶಕ್ಕಾಗಿ ಸಾಮಾನ್ಯವಾಗಿ ಈ ಮುಂದಿನ ಮುದ್ರೆ ಹಾಗೂ ನ್ಯಾಸ ಮಾಡಬೇಕು.

೧. ಮುದ್ರೆ: ಹೆಬ್ಬೆರಳಿನ ತುದಿ ಮಧ್ಯದ ಬೆರಳಿನ ತುದಿಗೆ ಜೋಡಿಸುವುದು
೨. ನ್ಯಾಸ: ಮೇಲಿನ ಮುದ್ರೆಯಿಂದ ಅವಶ್ಯಕತೆಯಿರುವ ಸ್ಥಳದಲ್ಲಿ ನ್ಯಾಸ ಮಾಡುವುದು 

- ಪೂಜ್ಯ ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಸಂಬಂಧಿತ ವಿಷಯಗಳು
ನಾಮಜಪ ಏಕಾಗ್ರತೆಯಿಂದ ಹಾಗೂ ಭಾವಪೂರ್ಣ ಮಾಡಲು ಕೆಲವು ಪ್ರಯತ್ನಗಳು

1 comment:

  1. ಮುದ್ರೆ ಹಾಗೂ ನ್ಯಾಸಗಳನ್ನು photo ಸಹಿತ ವಿವರಿಸಿದರೆ ಹೆಚ್ಚು ಅನುಕೂಲ

    ReplyDelete

Note: only a member of this blog may post a comment.