ರಾಷ್ಟ್ರದ ಸನ್ಮಾನ, ರಾಷ್ಟ್ರದ ಗೌರವ ಮತ್ತು ರಾಷ್ಟ್ರದ ಉತ್ಕರ್ಷಕ್ಕಾಗಿ ತನು, ಮನ, ಧನ ಮತ್ತು ಪ್ರಸಂಗ ಬಂದರೆ ಪ್ರಾಣವನ್ನೂ ಅರ್ಪಿಸುವ ಸಿದ್ಧತೆ ಇರುವುದೆಂದರೆ ‘ರಾಷ್ಟ್ರಾಭಿಮಾನ’. ರಾಷ್ಟ್ರದೊಂದಿಗೆ ತಮ್ಮ ಧರ್ಮ, ದೇವರು, ಚಾರಿತ್ರ್ಯ, ಶೌರ್ಯ, ವಿದ್ಯೆ, ಭಾಷೆ, ಪರಂಪರೆ ಮತ್ತು ಸಂಸ್ಕೃತಿ ಇವುಗಳ ಅಭಿಮಾನವನ್ನೂ ಇಟ್ಟುಕೊಳ್ಳುವುದು ಮತ್ತು ರಾಷ್ಟ್ರದ ಏಳಿಗೆಗಾಗಿ ಪ್ರಸಂಗ ಬಂದರೆ ಸರ್ವಸ್ವವನ್ನೂ ತ್ಯಾಗ ಮಾಡುವ ಸಿದ್ಧತೆಯಿರುವುದು ಮತ್ತು ರಾಷ್ಟ್ರದ ಹಾಗೂ ರಾಷ್ಟ್ರ ಬಾಂಧವರ ಸೇವೆಯನ್ನೇ ಸರ್ವಸ್ವವೆಂದು ತಿಳಿದುಕೊಳ್ಳುವುದಕ್ಕೆ ‘ರಾಷ್ಟ್ರಭಕ್ತಿ’ ಎಂದು ಹೇಳುತ್ತಾರೆ.
ನಿಸ್ವಾರ್ಥಿ, ನಿರ್ಲೋಭಿ, ಅನಾಸಕ್ತ, ತ್ಯಾಗಿ, ಪ್ರೀತಿಯಿರುವ ಮತ್ತು ನಿರ್ಭಯವಾಗಿರುವ ವ್ಯಕ್ತಿಯೇ ರಾಷ್ಟ್ರಕ್ಕಾಗಿ ಸರ್ವಸ್ವದ ತ್ಯಾಗವನ್ನು ಮಾಡಬಹುದು. ಈ ಮಹಾನ್ ಕಾರ್ಯವನ್ನು ಆಧ್ಯಾತ್ಮಿಕ ಕ್ಷೇತ್ರದಲ್ಲಿನ ವ್ಯಕ್ತಿಯೇ ಯಶಸ್ವಿಯಾಗಿ ಮಾಡಬಹುದು. ಭಾರತದ ಇತಿಹಾಸದಲ್ಲಿ ಅಧ್ಯಾತ್ಮದಲ್ಲಿನ ಮಹಾಪುರುಷರಾದ ಶಂಕರಾಚಾರ್ಯರು ಮತ್ತು ಸ್ವಾಮಿ ವಿವೇಕಾನಂದರು ಇಂತಹ ಕಾರ್ಯವನ್ನು ಯಶಸ್ವಿಗೊಳಿಸಿದ ವಿಷಯವು ಎಲ್ಲರಿಗೂ ತಿಳಿದಿದೆ. ಸಮಾಜದಲ್ಲಿ ಈ ಗುಣಗಳನ್ನು ಹೆಚ್ಚಿಸಲು ಆಂತರಿಕ ಐಕ್ಯವನ್ನು ನಿರ್ಮಿಸುವುದು ಆವಶ್ಯಕವಾಗಿದೆ. ಸಮಾಜದ ಸಂಘಟನೆಗೆ ಆಧ್ಯಾತ್ಮಿಕ ಮತ್ತು ಧರ್ಮದ ಅಧಿಷ್ಠಾನವಿದ್ದರೆ ಮಾತ್ರ ಆಂತರಿಕ ಐಕ್ಯತೆಯು ನಿರ್ಮಾಣವಾಗುತ್ತದೆ.
ಸಮಾಜದ ಎಲ್ಲ ಘಟಕಗಳು ಸಾಧಕತ್ವವನ್ನು ನಿರ್ಮಿಸುವುದರೊಂದಿಗೆ ರಾಷ್ಟ್ರಾಭಿಮಾನ ಮತ್ತು ರಾಷ್ಟ್ರಭಕ್ತಿಗೆ ಮಾರಕವಾಗಿರುವ ಆತ್ಮಕೇಂದ್ರಿತತನ, ಸ್ವಾರ್ಥ, ಸಂಕುಚಿತತನ, ಇತರರ ವಿಚಾರ ಮಾಡದಿರುವುದು, ನಿರೀಕ್ಷಣಕ್ಷಮತೆ ಇಲ್ಲದಿರುವುದು, ನಿರ್ಣಯಕ್ಷಮತೆಯ ಅಭಾವ, ಆಲಸ್ಯ, ಅಪ್ರಾಮಾಣಿಕತೆ, ಅವಿಶ್ವಾಸಿ, ಸೋಲನ್ನುಪ್ಪುವ ಮಾನಸಿಕತೆ ಮುಂತಾದ ಸ್ವಭಾವದೋಷಗಳ ನಿರ್ಮೂಲನೆ ಮಾಡುವುದು ಆವಶ್ಯಕವಾಗಿದೆ. ಹಾಗೆಯೇ ರಾಷ್ಟ್ರಾಭಿಮಾನ ಮತ್ತು ರಾಷ್ಟ್ರಭಕ್ತಿಯನ್ನು ವೃದ್ಧಿಸಲು ಪ್ರಾಮಾಣಿಕತೆ, ತೊಂದರೆಗಳನ್ನು ಸಹಿಸುವ ಶಕ್ತಿ, ಸಮಷ್ಟಿ ಭಾವನೆ, ಸಮಷ್ಟಿಗಾಗಿ ತಳಮಳ, ಸಂಘಟನಾ ಕೌಶಲ್ಯ, ದೂರದೃಷ್ಟಿ, ನೇತೃತ್ವ ವಹಿಸುವುದು, ನಿರೀಕ್ಷಣ ಕ್ಷಮತೆ, ಯೋಗ್ಯ ನಿರ್ಣಯಕ್ಷಮತೆ, ಜಿದ್ದು, ಜಿಗುಟುತನ, ಸಾತತ್ಯ, ನಿಸ್ವಾರ್ಥ, ತ್ಯಾಗ, ಪ್ರೀತಿ ಮುಂತಾದ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುವುದು ಆವಶ್ಯಕವಾಗಿದೆ.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ 'ಸ್ವಭಾವದೋಷ ನಿರ್ಮೂಲನೆ ಮತ್ತು ಗುಣವೃದ್ಧಿ ಪ್ರಕ್ರಿಯೆ')

No comments:
Post a Comment
Note: only a member of this blog may post a comment.