ಭಗವಂತನ ವಿಚಾರವಿಲ್ಲದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!

ಅಮಾವಾಸ್ಯೆಯ ದಿನ ವ್ಯಾಪಾರಿಗಳು, ವೈಶ್ಯರು ತಮ್ಮ ವ್ಯವಹಾರದ ಲೆಕ್ಕಪುಸ್ತಕ ಹಾಗೂ ಅಂಗಡಿಯ ಪೂಜೆಯನ್ನು ಮಾಡುತ್ತಾರೆ. ವ್ಯಾಪಾರಿಗಳು ವ್ಯಾಪಾರಕ್ಕಾಗಿ ದೇಶವಿದೇಶಗಳಿಗೆ ಹೋಗಿ ಸಮಾಜಕ್ಕೆ ಉಪಯುಕ್ತವಾಗಿರುವಂತಹ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಿ ಸಮಾಜದ ಅವಶ್ಯಕತೆಗಳನ್ನು ಪೂರ್ಣಗೊಳಿಸುತ್ತಾರೆ. ಇದರಲ್ಲಿ ಅವರು ತಮಗೆ ಬರುವಷ್ಟು ಖರ್ಚಿನ ಹಣವನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ವ್ಯಾಪಾರ ಮಾಡುತ್ತಾರೆ. ಆದುದರಿಂದಲೇ ಸಮಾಜದಲ್ಲಿ ಅವರಿಗೆ ಗೌರವಸ್ಥಾನ ಮಾನವಿರುತ್ತದೆ. ವ್ಯಾಪಾರಕ್ಕಾಗಿ ದೇಶವಿದೇಶಕ್ಕೆ ಪ್ರಯಾಣ ಮಾಡುವಾಗ ಅವರು ಭಾರತೀಯ ಸಂಸ್ಕೃತಿ ಹಾಗೂ ಭಗವಂತನ ವಿಚಾರದ ಪ್ರಚಾರವನ್ನು ಮಾಡುತ್ತಾರೆ. ಬಡವರಿಗೆ ಹಾಗೂ ಅವಶ್ಯಕತೆ ಇರುವವರಿಗೆ ದಾನವನ್ನು ಮಾಡುತ್ತಾರೆ. ಕೊನೆಯಲ್ಲಿ ಜಮಾಖರ್ಚು ವರದಿಯನ್ನು ಲಕ್ಷ್ಮೀಯ ಮುಂದೆ ಇಟ್ಟು ಲಕ್ಷ್ಮೀಯನ್ನು ಪೂಜಿಸುತ್ತಾರೆ.

ಇಂದಿನ ವ್ಯಾಪಾರಿಗಳು ಈಶ್ವರನ ಚಿಂತನೆಯಿಲ್ಲದೇ ವ್ಯಾಪಾರವನ್ನು ಮಾಡುವುದರಿಂದ ಗಳಿಸುವ ಧನವು ಅಲಕ್ಷ್ಮೀಯ ರೂಪದಲ್ಲಿ ಇರುತ್ತದೆ.

ನಾವು ಪ್ರತಿಯೊಬ್ಬರು ನಮ್ಮ ಜೀವನದಲ್ಲಿಯೂ ವ್ಯಾಪಾರವನ್ನು ಮಾಡುತ್ತಿರುತ್ತೇವೆ. ವ್ಯಾಪಾರವೆಂದರೆ ಲಾಭ ಅಥವಾ ನಷ್ಟ, ಆದರೆ ಈ ಲಾಭ-ನಷ್ಟಗಳನ್ನು ನಾವು ಕೇವಲ ಭೌತಿಕವ್ಯವಹಾರದ ದೃಷ್ಟಿಯಿಂದಲೇ ನೋಡುವುದರಿಂದ ಅದು ನಿಜವಾದ ಲಕ್ಷ್ಮೀಯ ಪೂಜೆಯಾಗುವುದಿಲ್ಲ. ಈ ವ್ಯಾಪಾರವು ನಮ್ಮ ಸುಖ ಹಾಗೂ ಸಮೃದ್ಧಿಗಾಗಿ ಇರುತ್ತದೆ. ‘ನಿಜವಾದ ಸುಖವು ಯಾವುದರಲ್ಲಿದೆ’, ಎಂಬುದು ತಿಳಿಯದ ಕಾರಣ ಜೀವನದಲ್ಲಿ ಅದರ ಬಗ್ಗೆ ವಿಚಾರ ಮಾಡದೆಯೇ ವ್ಯಾಪಾರವನ್ನು ಮಾಡುತ್ತಿರುತ್ತೇವೆ. ಜೀವನದಲ್ಲಿ ನಾವು ಏನನ್ನು ಗಳಿಸಿದೆವು ಹಾಗೂ ಏನನ್ನು ಕಳೆದುಕೊಂಡೆವು ಎಂಬುದನ್ನು ನೋಡುವುದೇ ವ್ಯಾಪಾರವಾಗಿದೆ. ಯಾವಾಗ ನಾವು ನಮ್ಮ ಜೀವನವನ್ನು ಭಗವಂತನ ಕಾರ್ಯಕ್ಕಾಗಿ ಸಮರ್ಪಿಸುತ್ತೇವೆಯೋ ಆಗ ನಾವು ಲಾಭದಲ್ಲಿರುತ್ತೇವೆ. ನಮ್ಮೊಳಗಿರುವ ಭಗವಂತನೇ ನಮ್ಮ ಜೀವನವನ್ನು ನಡೆಸುವುದರಿಂದ ನಾವು ಸದಾ ಸಂತುಷ್ಟರಾಗಿರುತ್ತೇವೆ. ಭಗವಂತನಿಲ್ಲದೆ ನಮಗೆ ಯಾವುದೇ ಕರ್ಮ ಅಥವಾ ಅದರಿಂದ ಸಿಗುವ ಲಕ್ಷ್ಮೀಯನ್ನು ಪ್ರಾಪ್ತ ಮಾಡಿಕೊಳ್ಳಲಾಗುವುದಿಲ್ಲ. ಆದುದರಿಂದ ಭಗವಂತನ ವಿಚಾರವನ್ನು ಮಾಡದೇ ವ್ಯಾಪಾರವನ್ನು ಮಾಡಿದರೆ ಅದು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ ಹಾಗೂ ಅದರಿಂದ ಸಿಗುವ ಧನವು ‘ಅಲಕ್ಷ್ಮೀ’ಯ ರೂಪದಲ್ಲಿ ಇರುತ್ತದೆ. - ಪ.ಪೂ.ಪರಶುರಾಮ ಮಾಧವ ಪಾಂಡೆ ಮಹಾರಾಜರು, ಅಕೋಲಾ, ಮಹಾರಾಷ್ಟ್ರ.

(ಆಧಾರ: ಸಾಪ್ತಾಹಿಕ ‘ಸನಾತನ ಪ್ರಭಾತ’ ಪತ್ರಿಕೆ)

No comments:

Post a Comment

Note: only a member of this blog may post a comment.