ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ

ದೇವತೆಗಳ ಉಪಾಸನೆಯನ್ನು ಮಾಡುವಾಗ ನಾವು ವಿವಿಧ ಪದ್ಧತಿಗಳನ್ನು ಅವಲಂಬಿಸುತ್ತೇವೆ. ಅವುಗಳಲ್ಲಿ ಅರ್ಚನ ಭಕ್ತಿಯೂ ಒಂದಾಗಿದೆ. ದೇವಿಯ ಉಪಾಸನೆಯನ್ನು ಮಾಡುವಾಗ ನಾವು ದೇವಿಗೆ ಕುಂಕುಮಾರ್ಚನೆಯನ್ನು ಮಾಡುತ್ತೇವೆ. ಈ ಸಂದರ್ಭದಲ್ಲಿ ಅರ್ಚನೆ ಎಂದರೇನು, ವಿವಿಧ ಪ್ರಕಾರದ ಅರ್ಚನೆಗಳು, ಅರ್ಚನೆ ವಿಧಿಯ ಹಿನ್ನೆಲೆಯ ಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ಸನಾತನದ ಓರ್ವ ಸಾಧಕಿಗೆ ಬ್ರಹ್ಮತತ್ತ್ವದಿಂದ ಪ್ರಾಪ್ತವಾದ ಜ್ಞಾನವನ್ನು ಇಲ್ಲಿ ನೀಡುತ್ತಿದ್ದೇವೆ.

ಪೂಜಾರ್ಚನೆ
ಪೂಜಾ ಮತ್ತು ಅರ್ಚಾ ಈ ಎರಡು ಶಬ್ದಗಳು ಸೇರಿ ಪೂಜಾರ್ಚನೆ ಎಂಬ ಶಬ್ದವು ತಯಾರಾಗಿದೆ.

೧. ಪೂಜೆ : ದೇವತೆಗಳ ಮೂರ್ತಿಗಳಿಗೆ ವಿವಿಧ ಉಪಚಾರಗಳಿಂದ ಪೂಜೆಯನ್ನು ಮಾಡುವುದೆಂದರೆ ಪೂಜೆ.

೨. ಅರ್ಚನೆ : ದೇವತೆಗಳ ಸಹಸ್ರ ನಾಮಗಳನ್ನು ಹೇಳುತ್ತಾ ಅಥವಾ ದೇವತೆಗಳ ಬೀಜಮಂತ್ರವನ್ನು ಹೇಳುತ್ತಾ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಮತ್ತು ಆ ವಸ್ತುಗಳಿಂದ ಮೂರ್ತಿಯನ್ನು ಸಂಪೂರ್ಣವಾಗಿ ಮುಚ್ಚುವುದು ಎಂದರೆ ಅರ್ಚನೆ. ಅರ್ಚನೆಯ ಅರ್ಥವೇ ಮುಚ್ಚುವುದು ಎಂದಾಗಿದೆ. ಅರ್ಚನೆ ಮಾಡುವುದು ಪೂಜೆಯಲ್ಲಿನ ಒಂದು ಉಪಚಾರವಾಗಿದೆ.

ಅರ್ಚನೆಯಲ್ಲಿನ ವಿವಿಧ ಘಟಕಗಳು ಮತ್ತು ದೇವತೆಗಳು
ಬಿಲ್ವಾರ್ಚನೆ : ‘ಓಂ ನಮಃ ಶಿವಾಯ |’ ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ ಶಂಕರನ ಒಂದೊಂದು ಹೆಸರನ್ನು ಹೇಳುತ್ತಾ ಒಂದೊಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಅರ್ಪಿಸುವುದಕ್ಕೆ ಬಿಲ್ವಾರ್ಚನೆ ಎಂದು ಹೇಳುತ್ತಾರೆ. ಬಿಲ್ವಾರ್ಚನೆಯನ್ನು ಮಾಡುವಾಗ ಶಿವಲಿಂಗವು ಸಂಪೂರ್ಣವಾಗಿ ಬಿಲ್ವಪತ್ರೆಗಳಿಂದ ಮುಚ್ಚುವ ವರೆಗೆ ಬಿಲ್ವಪತ್ರೆಗಳನ್ನು ಅರ್ಪಿಸುತ್ತಾರೆ. ಈ ವಿಧಿಯನ್ನು ಪ್ರಾರಂಭಿಸುವಾಗ ಶಿವಲಿಂಗದ ಕೆಳಗಿನ ಭಾಗದಿಂದ ಬಿಲ್ವಪತ್ರೆಗಳನ್ನು ಅರ್ಪಿಸುತ್ತಾ ಬರಬೇಕು. (ಬಿಲ್ವಪತ್ರೆಗಳನ್ನು ಅರ್ಪಿಸುವಾಗ ಮೂರ್ತಿಯ ಚರಣಗಳಿಂದ ಆರಂಭಿಸಿ ಮೂರ್ತಿಯ ತಲೆಯ ವರೆಗೆ ಬರುವುದಿರುತ್ತದೆ. ಅರ್ಚನೆಯನ್ನು ಚರಣಗಳಿಂದ ಪ್ರಾರಂಭಿಸುವುದರಿಂದ ನಮಗೆ ಚರಣಗಳ ಲಾಭವಾಗುತ್ತದೆ. ಅಲ್ಲದೆ ಇದರಿಂದ ಬಿಲ್ವಪತ್ರೆಗಳನ್ನು ಒಳ್ಳೆಯ ರೀತಿಯಿಂದ ಮೂರ್ತಿಯ ಮೇಲೆ ಇಟ್ಟು ಮೂರ್ತಿಯನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗುತ್ತದೆ.)

ದೂರ್ವಾರ್ಚನೆ : ದೂರ್ವಾರ್ಚನೆಯಲ್ಲಿ ಗಣಪತಿಯ ‘ಓಂ ಗಂ ಗಣಪತಯೇ ನಮಃ |’ ಈ ಬೀಜಮಂತ್ರವನ್ನು ಹೇಳುತ್ತಾ ಅಥವಾ ಗಣಪತಿಯ ಸಹಸ್ರನಾಮಗಳಲ್ಲಿನ (ಒಂದು ಸಾವಿರ ಹೆಸರುಗಳಲ್ಲಿನ) ಒಂದೊಂದು ಹೆಸರನ್ನು ಹೇಳುತ್ತಾ ಒಂದೊಂದು ದೂರ್ವೆಯನ್ನು ಅರ್ಪಿಸಬೇಕು. ಈ ರೀತಿಯಲ್ಲಿ ಮೂರ್ತಿಯು ಸಂಪೂರ್ಣವಾಗಿ ಮುಚ್ಚುವವರೆಗೆ ಅರ್ಪಿಸಬೇಕು.

ಕುಂಕುಮಾರ್ಚನೆ : ಕುಂಕುಮಾರ್ಚನೆಯಲ್ಲಿ ದೇವಿಯ ನಾಮಜಪವನ್ನು ಮಾಡುತ್ತಾ ಅಥವಾ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಒಂದು ಚಿಟಿಕೆಯಷ್ಟು ಕುಂಕುಮವನ್ನು ದೇವಿಯ ಚರಣಗಳ ಮೇಲೆ ಅರ್ಪಿಸಬೇಕು ಅಥವಾ ದೇವಿಯ ಚರಣಗಳಿಂದ ಪ್ರಾರಂಭಿಸಿ ದೇವಿಯ ಕೂದಲುಗಳ ವರೆಗೆ ಕುಂಕುಮವನ್ನು ಹಚ್ಚುವುದು ಅಥವಾ ದೇವಿಗೆ ಕುಂಕುಮದಿಂದ ಸ್ನಾನ ಮಾಡಿಸುವುದು, ಇದನ್ನೇ ಕುಂಕುಮಾರ್ಚನೆ ಎಂದು ಹೇಳುತ್ತಾರೆ. ಹಾಗೆಯೇ ಪುಷ್ಪಾರ್ಚನೆ (ಹೂವಿನ ಎಸಳುಗಳಿಂದ ಅರ್ಚನೆಯನ್ನು ಮಾಡುವುದು), ಪತ್ರಾರ್ಚನೆ (ಬೇರೆ-ಬೇರೆ ಎಲೆಗಳಿಂದ ಅರ್ಚನೆಯನ್ನು ಮಾಡುವುದು), ಅನ್ನಾರ್ಚನೆ (ಉದಕಶಾಂತಿಯನ್ನು ಮಾಡಿದ ನೀರಿನಲ್ಲಿ ತುಂಡಾಗಿರದ ಅಕ್ಕಿಯಿಂದ ಮಾಡಿದ ಅನ್ನವನ್ನು ಮೂರ್ತಿಯ ಚರಣಗಳಿಂದ ಕೂದಲುಗಳವರೆಗೆ ಅಂಟಿಸುವುದು), ಹೀಗೆ ವಿವಿಧ ರೀತಿಯಲ್ಲಿ ಅರ್ಚನೆಯನ್ನು ಮಾಡುತ್ತಾರೆ.

ಅರ್ಚನೆ
ಅರ್ಚನ ಈ ಶಬ್ದದಿಂದ ಅರ್ಚನೆ ಈ ಶಬ್ದವು ನಿರ್ಮಾಣವಾಗಿದೆ. ಅರ್ಚನೆ ಎಂದರೆ ವ್ಯಾಪಿಸಿ ಉಳಿಯುವುದು. ಯಾವಾಗ ಯಾವುದಾದರೊಂದು ವಸ್ತುವು ಇನ್ನೊಂದು ವಸ್ತುವನ್ನು ಸಂಪೂರ್ಣವಾಗಿ ವ್ಯಾಪಿಸುವುದೋ ಅಥವಾ ಮುಚ್ಚುವುದೋ ಆಗ ಆ ವಸ್ತುವಿಗೆ ಅರ್ಚನೆ ಎಂದು ಹೇಳುತ್ತಾರೆ.

ಅರ್ಚನ ವಿಧಿಯ ಹಿನ್ನೆಲೆಯ ಶಾಸ್ತ್ರ
ದೇವತೆಗಳ ಪವಿತ್ರಕಗಳು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಬೇಕೆಂದು ಅವುಗಳನ್ನು ಆಕರ್ಷಿಸುವಂತಹ ಹೂವು, ಎಲೆ ಮುಂತಾದವುಗಳನ್ನು ನಾವು ದೇವತೆಗಳಿಗೆ ಅರ್ಪಿಸುತ್ತೇವೆ; ಇದರ ಹಿನ್ನೆಲೆಯ ಶಾಸ್ತ್ರವನ್ನು ನಾವು ತಿಳಿದುಕೊಳ್ಳೋಣ.

ಯಾವಾಗ ದೇವತೆಗಳು ಪಂಚತತ್ತ್ವಗಳಲ್ಲಿ ಕಾರ್ಯ ಮಾಡುತ್ತಾರೆಯೋ ಆಗ ಅವರ ರೂಪವು ಪ್ರಕಟವಾಗಿರುತ್ತದೆ. ಸೂಕ್ಷ  ಜ್ಞಾನವಿರುವವರಿಗೆ (ಸಂತರಿಗೆ) ಪ್ರಕಟವಾಗಿರುವ ದೇವತೆಗಳು ಪ್ರಕಾಶರೂಪ ದಲ್ಲಿ ಕಾಣಿಸುತ್ತಾರೆ. ಉದಾಹರಣೆಗೆ ಗಣೇಶ ತತ್ತ್ವವು ಪ್ರಕಟವಾದರೆ ಕೆಂಪು ಪ್ರಕಾಶವು ಕಾಣಿಸುತ್ತದೆ, ದತ್ತನ ತತ್ತ್ವವು ಪ್ರಕಟವಾದರೆ ಹಳದಿ ಪ್ರಕಾಶವು ಕಾಣಿಸುತ್ತದೆ ಇತ್ಯಾದಿ. ಇದೇ ರೀತಿ ವಿವಿಧ ದೇವತೆಗಳು ಪ್ರಕಟವಾದಾಗ ವಿವಿಧ ಬಣ್ಣಗಳ ಪ್ರಕಾಶಕಿರಣಗಳು ಕಾಣಿಸುತ್ತವೆ. (ಅವರ ಪ್ರಕಟ ಶಕ್ತಿಯ ಪ್ರಮಾಣವು ಕಾರ್ಯ ಕ್ಕನುಸಾರ ಹೆಚ್ಚು-ಕಡಿಮೆಯಿರುತ್ತದೆ.)

ಪೂಜಾವಿಧಿಯಲ್ಲಿ ಮೂರ್ತಿಯನ್ನು ಅಲಂಕರಿಸುವುದು ಎಂದರೆ ಅರ್ಚನೆ
ಒಂದು ರೀತಿಯಲ್ಲಿ ಬೇರೆ-ಬೇರೆ ವಸ್ತುಗಳಿಂದ ದೇವತೆಗಳ ಅಲಂಕಾರ ಮಾಡುವುದನ್ನೇ ಅರ್ಚನೆ ಎಂದು ಹೇಳುತ್ತಾರೆ. ಅರ್ಚನೆಯ ವಿಧಿಯು ಪೂರ್ಣವಾದ ನಂತರ ಮೂರ್ತಿಯನ್ನು ಅರ್ಚನೆ ಮಾಡುವ ವಸ್ತುಗಳಿಂದ ಸಂಪೂರ್ಣವಾಗಿ ಮುಚ್ಚುತ್ತಾರೆ, ಉದಾ. ದೇವಿಗೆ ಅಲಂಕಾರ ಮಾಡುವುದೆಂದರೆ ದೇವಿಯ ಸಂಪೂರ್ಣ ಶರೀರಕ್ಕೆ ಕುಂಕುಮವನ್ನು ಹಚ್ಚುವುದು.

ದೇವತೆಗಳ ಉಪಾಸನೆಯಲ್ಲಿ ಅರ್ಚನೆಯನ್ನು ಮಾಡುವುದರ ಮಹತ್ತ್ವ
ಅರ್ಚನೆಯನ್ನು ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ವಸ್ತುಗಳಿಂದ ಮಾಡುತ್ತಾರೆ. ಇದರಿಂದ ಪೂಜೆ ಮಾಡುವ ಸ್ಥಳ ಗಳಲ್ಲಿ ದೇವತೆಗಳ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲ್ಪಟ್ಟು ಪೂಜೆ ಮಾಡುವವನಿಗೆ ಅವುಗಳ ಲಾಭವಾಗುತ್ತದೆ. ಅಲ್ಲದೇ ಪಂಚತತ್ತ್ವಗಳಲ್ಲಿ ಕಾರ್ಯನಿರತವಾಗಿರುವ ದೇವತೆಗಳಿಗೂ ಇದರಿಂದ ಶಕ್ತಿಯು ಸಿಗುತ್ತದೆ.

(ಆಧಾರ: ಸಾಪ್ತಾಹಿಕ ಪತ್ರಿಕೆ 'ಸನಾತನ ಪ್ರಭಾತ')

ಸಂಬಂಧಿತ ಲೇಖನಗಳು
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ 

No comments:

Post a Comment

Note: only a member of this blog may post a comment.