ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು

ಸದ್ಯ ಕೆಟ್ಟ ಶಕ್ತಿಗಳಿಂದ ಸ್ಥೂಲದಲ್ಲಿ ಹಲ್ಲೆಯಾಗುವ ಪ್ರಮಾಣವು ಹೆಚ್ಚಾಗಿದೆ. ಈ ಕಾಲದಲ್ಲಿ ಅನೇಕ ಸಾಧಕರಿಗೆ ಸೇವೆ ಮಾಡುವಾಗ ದಣಿವಾಗುವುದು, ಮಲಗಿ ಕೊಂಡೇ ಇರಬೇಕು ಎಂದೆನಿಸುವುದು, ಮೈನೋವು, ಶರೀರಕ್ಕೆ ಬಾವು ಬರುವುದು, ಹೊಟ್ಟೆ ನೋವು, ತಲೆ ನೋವು ಇಂತಹ ಶಾರೀರಿಕ ತೊಂದರೆಗಳೊಂದಿಗೆ ನಕಾರಾತ್ಮಕ ವಿಚಾರಗಳು ಬರುವುದು, ವಿಕಲ್ಪ ಬರುವುದು, ಆಕ್ರಮಕ ಕೃತಿ ಮಾಡಬೇಕೆನಿಸುವುದು, ಸೇವೆ (ಕೆಲಸ) ಮಾಡುವುದು ಬೇಡವೆನಿಸುವುದು, ಇಂತಹ ಮಾನಸಿಕ ತೊಂದರೆಗಳನ್ನೂ ಎದುರಿಸಬೇಕಾಗುತ್ತಿದೆ. ಈ ತೊಂದರೆಗಳನ್ನು ಕಡಿಮೆ ಮಾಡಲು ಮುಂದಿನ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬಹುದು.

೧. ಮಾಟದ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು
೧ಅ.ಮಾಟದ ಮಾಧ್ಯಮದಿಂದ ಎಸೆಯುವ ಕಪ್ಪು ಶಕ್ತಿಯು ಮನೆಯಲ್ಲಿ ಬರಬಾರದೆಂದು ಮಾಡಬೇಕಾದ ಉಪಾಯಗಳು (ಮನೆಯ ಬಾಗಿಲಿನಲ್ಲಿ ಲೋಳೆಸರ ಇಡುವುದು): ಮನೆಯ ಬಾಗಿಲಿನಲ್ಲಿ ಚುಕ್ಕೆಗಳಿರುವ ಲೋಳೆಸರದ ಕುಂಡವನ್ನು ಇಡಬೇಕು ಅಥವಾ ಲೋಳೆಸರವನ್ನು ಭೂಮಿಯಲ್ಲಿ ನೆಡಬೇಕು. ಚುಕ್ಕೆಗಳಿರುವ ಲೋಳೆಸರದಲ್ಲಿ ಮಾಟದ ಮಾಧ್ಯಮದಿಂದ ಮನೆಯ ಮೇಲೆ ಮಾಡಿದ ಕಪ್ಪು ಶಕ್ತಿಯನ್ನು ಹಿಂದಿರುಗಿಸುವ ಕ್ಷಮತೆಯಿರುತ್ತದೆ. ಲೋಳೆಸರಕ್ಕೆ ಇರುವ ಮತ್ತು ನೆಲದ ದಿಕ್ಕಿನಲ್ಲಿ ಬಾಗಿದ ಮುಳ್ಳುಗಳು ಕಪ್ಪು ಶಕ್ತಿಯನ್ನು ಶೋಷಿಸಿ ಅದನ್ನು ಭೂಮಿಗೆ ವಿಸರ್ಜಿಸಬಲ್ಲದು. ಎಲೆಗಳಿಗೆ ಚುಕ್ಕೆಗಳಿಲ್ಲ ದಿರುವ ಲೋಳೆಸರ ಮಾತ್ರ ಔಷಧಿಯಾಗಿರುತ್ತದೆ. ಅದು ರಕ್ಷಣೆಗಾಗಿ ಉಪಯೋಗವಾಗುವುದಿಲ್ಲ.

೧ಆ. ವಾಸ್ತುವಿನಲ್ಲಿನ ಮಾಟದ ತೊಂದರೆಯನ್ನು ಕಡಿಮೆ ಮಾಡಬೇಕಾದ ಉಪಾಯ (ಉಪ್ಪು-ಮೆಣಸು ಸುಡುವುದು): ಮನೆಯ ಗೋಡೆಯಲ್ಲಿ ಅಡ್ಡಗೆರೆ (ಕ್ರಾಸ್) ಆಕಾರ, ವಿಚಿತ್ರ ಮುಖಗಳು, ಆಕೃತಿಗಳು, ಅಂಗೈ-ಅಂಗಾಲು ಮುಂತಾದವುಗಳು ಮೂಡುವುದು, ನೆಲದ ಮೇಲೆ ರಕ್ತದ ಗುರುತು ಬೀಳುವುದು, ಮನೆಯಲ್ಲಿ ಬಟ್ಟೆಗಳು ಕಾಣೆಯಾಗುವುದು, ಮನೆಯ ವ್ಯಕ್ತಿಗಳಿಗೆ ಮಾಟದ ತೊಂದರೆಯಾಗುವುದು, ಇಂತಹ ತೊಂದರೆಗಳಾದಲ್ಲಿ ಕೋಣೆಯ ಗೋಡೆ ಬದಿಯ ನಾಲ್ಕು ದಿಕ್ಕುಗಳಲ್ಲಿ ನೆಲದ ಮೇಲೆ ಎರಡೆರಡು ಅಡಿ ಅಂತರದಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪು ಮತ್ತು ಅದರ ಮೇಲೆ ಮೂರು-ನಾಲ್ಕು ಕೆಂಪು ಮೆಣಸುಗಳನ್ನು ಇಡಬೇಕು. ನಾಲ್ಕೂ ಕಡೆಗಳಲ್ಲಿ ನೆಲದ ಮೇಲೆ ಈ ರೀತಿಯ ಮಂಡಲ ಮಾಡಬೇಕು. ೧೫ ನಿಮಿಷದಲ್ಲಿ ಕೆಂಪು ಮೆಣಸು ಮತ್ತು ಕಲ್ಲುಪ್ಪನ್ನು ಕಸಬರಿಕೆಯಿಂದ ಒಟ್ಟು ಮಾಡಿ ಮನೆಯ ಹೊರಗೆ ಕೊಂಡೊಯ್ದು ಬೆಂಕಿಯಲ್ಲಿ ಸುಡಬೇಕು. ಈ ಉಪಾಯವನ್ನು ಒಂದೇ ಬಾರಿ ಮಾಡಲಿಕ್ಕಿರುತ್ತದೆ.

೧ಇ. ಮನೆಯ ಬಾಗಿಲಿನಲ್ಲಿ ಮಾಟದ ವಸ್ತುಗಳು ದೊರಕಿದರೆ ಅದರ ಮೇಲೆ ಕಲ್ಲುಪ್ಪಿನ ನೀರು ಸುರಿಯಬೇಕು ಅಥವಾ ಎಣ್ಣೆ ಹಾಕಿ ಆ ವಸ್ತುಗಳನ್ನು ಸುಟ್ಟು ಬಿಡಬೇಕು.

೧ಈ. ಮಾಟ ಮಾಡುವ ವ್ಯಕ್ತಿಯ ಛಾಯಾಚಿತ್ರವು ದೊರೆತಲ್ಲಿ ಆ ವ್ಯಕ್ತಿಯ ಮಾಧ್ಯಮದಿಂದಾಗುವ ತೊಂದರೆಯ ಪ್ರಮಾಣವನ್ನು ಕಡಿಮೆ ಮಾಡಲು ಮಾಡಬೇಕಾದ ಉಪಾಯಗಳು: ಮನೆಯ ಯಾವುದಾದರೊಬ್ಬ ವ್ಯಕ್ತಿಗೆ ಮಾಟದ ತೊಂದರೆಯಾಗುತ್ತಿದ್ದಲ್ಲಿ ಮತ್ತು ಮಾಟ ಮಾಡುವ ಮನುಷ್ಯನ ಛಾಯಾಚಿತ್ರ ಉಪಲಬ್ಧವಿದ್ದರೆ ಆ ಮನುಷ್ಯನ ಛಾಯಾಚಿತ್ರದ ಹಣೆಯ ಮೇಲೆ ಲೇಖನಿಯಿಂದ ತ್ರಿಶೂಲ ಬಿಡಿಸಬೇಕು ಮತ್ತು ಅವನ ಮುಖಕ್ಕೆ ಚರ್ಮದ ತುಂಡು ತಾಗಿಸಿ, ಅಂತಹ ಛಾಯಾಚಿತ್ರವನ್ನು ಹತ್ತು ದಿನಗಳ ಕಾಲವಿಟ್ಟು ನಂತರ ನದಿಯಲ್ಲಿ ವಿಸರ್ಜಿಸಬೇಕು.

೨. ಮನೆಗೆ ದೃಷ್ಟಿ ತಗುಲಬಾರದೆಂದು ಮಾಡಬೇಕಾದ ಉಪಾಯ
೨ಅ. ಮನೆಯ ಮುಖ್ಯ ಚೌಕಟ್ಟಿಗೆ ಕಹಿಬೇವಿನ ಎಲೆಗಳ ಹೂವಿನ ತುರಾಯಿ ಕಟ್ಟುವುದು: ಕಹಿಬೇವಿನ ಕಡ್ಡಿಗಳೊಂದಿಗೆ ಎಲೆಗಳ ತುರಾಯಿಯನ್ನು ಮನೆಯ ಬಾಗಿಲಿನ ಮುಖ್ಯ ಚೌಕಟ್ಟಿಗೆ ಸಿಲುಕಿಸಬೇಕು ಮತ್ತು ಅದರ ಸುತ್ತಲೂ ಸಾಯಂಕಾಲ ಊದುಬತ್ತಿಯನ್ನು ತೋರಿಸಬೇಕು. ಇದರಿಂದ ಯಾರದ್ದೇ ಅಶುಭ ಛಾಯೆಯು ತಮ್ಮ ಮನೆಯ ಮೇಲೆ ಬೀಳುವುದಿಲ್ಲ. ಈ ತುರಾಯಿಯು ಒಣಗಿದ ನಂತರ ಅದನ್ನು ವಿಸರ್ಜಿಸಿ ಮತ್ತೊಂದು ಹಾಕಬಹುದು.

೩. ವಾಸ್ತುದೋಷ ಕಡಿಮೆ ಮಾಡಲು ಮಾಡಬೇಕಾದ ಉಪಾಯಗಳು
೩ಅ. ವಾಸ್ತುವಿನಲ್ಲಿ ಧೂಪ ಹಾಕುವುದು: ವಾಸ್ತುವಿನ ದೋಷ ಕಡಿಮೆಯಾಗಲು ಸಾಯಂಕಾಲ ಸೂರ್ಯಾಸ್ತದ ನಂತರ ಒಂದು ಗಂಟೆಯೊಳಗೆ ಮನೆಯಲ್ಲಿ ಹೆಚ್ಚು ತೊಂದರೆಯಿರುವ ಕೋಣೆಯಲ್ಲಿ ದಕ್ಷಿಣ ದಿಕ್ಕಿಗೆ ಧೂಪ ಹಾಕಿಡಬೇಕು. ಧೂಪ ಹಾಕುವ ಮೊದಲು ನೆಲವನ್ನು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಇದರಿಂದ ಉಪಾಯದ ಪರಿಣಾಮಕಾರಕತೆ ಹೆಚ್ಚುತ್ತದೆ.

೪. ಆರೋಗ್ಯ ಒಳ್ಳೆಯದಾಗಿರಲು ಮಾಡಬೇಕಾದ ಉಪಾಯಗಳು
೪ಅ. ರಾತ್ರಿ ಮಲಗುವಾಗ ನಾಭಿಗೆ (ಹೊಕ್ಕಳಿಗೆ) ಕೊಬ್ಬರಿಎಣ್ಣೆ ಅಥವಾ ಗೋವಿನ ತುಪ್ಪವನ್ನು ಹಚ್ಚಿಕೊಂಡು ಮಲಗಬೇಕು.
೪ಆ. ಸಂಪೂರ್ಣ ಬೆನ್ನಿಗೆ ಮತ್ತು ಹೊಟ್ಟೆಗೆ ವಿಭೂತಿ ಹಚ್ಚುವುದರಿಂದ ಮೈನೋವು ಕಡಿಮೆಯಾಗುವುದು:
ತೀವ್ರ ಮೈನೋವು ಹಾಗೂ ಹೊಟ್ಟೆಯ ಮತ್ತು ಬೆನ್ನಿನ ತೊಂದರೆ ಕಡಿಮೆ ಮಾಡಲು ಸ್ನಾನದ ನಂತರ ಸಂಪೂರ್ಣ ಬೆನ್ನಿಗೆ ಹಾಗೂ  ಕುತ್ತಿಗೆಯಿಂದ ಹಿಡಿದು ಹೊಟ್ಟೆಯ ವರೆಗೆ ವಿಭೂತಿಯನ್ನು ಹಚ್ಚಬೇಕು. ರಾತ್ರಿ ಮಲಗುವ ಮೊದಲೂ ಈ ಉಪಾಯವನ್ನು ಮಾಡಬೇಕು. ಇದರಿಂದ ಮೈ ನೋವಿನ ಪ್ರಮಾಣವು ಬಹಳಷ್ಟು ಅಲ್ಪವಾಗುತ್ತದೆ. ಆಗ, ‘ದೇವರೇ, ನನ್ನ ಸುತ್ತಲೂ ವಜ್ರದಂತಹ ಕಠಿಣ ಕವಚವು ನಿರ್ಮಾಣವಾಗಲಿ’ ಎಂದು ಪ್ರಾರ್ಥನೆಯನ್ನು ಮಾಡಬೇಕು. - ಸೌ.ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ (ವೈಶಾಖ ಶುಕ್ಲ ಪಕ್ಷ ೬, ಕಲಿಯುಗ ವರ್ಷ ೫೧೧೫ (೧೬.೫.೨೦೧೩))

ಇವೆಲ್ಲವುಗಳೊಂದಿಗೆ ಸತತವಾಗಿ ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ ಮೇಲಿನಂತಹ ಪರಿಹಾರೋಪಾಯಗಳನ್ನು ಸತತವಾಗಿ ಮಾಡಲು ಕಠಿಣವಾಗಿರುತ್ತದೆ. ಆದುದರಿಂದ ಕುಲದೇವರ ಅಥವಾ ಕಾಲಕ್ಕನುಸಾರ ಶ್ರೀಕೃಷ್ಣನ ನಾಮಜಪವನ್ನು ಮತ್ತು "ಶ್ರೀ ಗುರುದೇವ ದತ್ತ" ನಾಮಜಪವನ್ನು ಸತತವಾಗಿ ಮಾಡುವುದೊಂದೇ ಶಾಶ್ವತ ಪರಿಹಾರವಾಗಿದೆ.
ಆಧಾರ - ಸಾಪ್ತಾಹಿಕ ಪತ್ರಿಕೆ 'ಸನಾತನ ಪ್ರಭಾತ'

ಸಂಬಂಧಿತ ಲೇಖನಗಳು
‘ದೃಷ್ಟಿ ತಗಲುವುದು’ ಎಂದರೇನು?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು

No comments:

Post a Comment

Note: only a member of this blog may post a comment.