ಭಾರತದ ಒಂದು ಪ್ರಾಂತ್ಯದಲ್ಲಿ ಹೀಗೆ ಹೇಳುತ್ತಾರೆ, ಚಹಾ ಹಾಳಾದರೆ, ಅವನ ಮುಂಜಾವು ಹಾಳಾಯಿತು| ಬೇಳೆ ಹಾಳಾದರೆ, ಅವನ ದಿನ ಹಾಳಾಯಿತು| ಉಪ್ಪಿನಕಾಯಿ ಹಾಳಾದರೆ, ಅವನ ಇಡೀ ವರ್ಷವೇ ಹಾಳಾಯಿತು| ಈ ಸರಳ ವ್ಯವಹಾರಜ್ಞಾನದ ಮಾಹಿತಿಯಿರುವ ಹಿಂದೂಗಳಿಗೆ ಹೀಗೆ ಹೇಳಬೇಕೆಂದೆನಿಸುತ್ತದೆ, ಒಂದು ವೇಳೆ ಚಹಾ ಹಾಳಾದರೂ ನಡೆದೀತು, ಸಾರು ಹಾಳಾದರೂ ನಡೆದೀತು, ಉಪ್ಪಿನಕಾಯಿ ಇಲ್ಲದಿದ್ದರೆ ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬಹುದು ಆದರೆ ಯಾವ ದೇಶದ ಸ್ವಾತಂತ್ರ್ಯದ ಸವಿ ಮುಂಜಾವೇ ಹಾಳಾಯಿತೋ ಅದರ ಒಂದೆರಡಲ್ಲ ೬೬ ವರ್ಷಗಳೇ ಹಾಳಾಗಿ ಹೋಗಿವೆ. ೧೪ಆಗಸ್ಟರಂದು ಜನಿಸಿದ ಪಾಕಿಸ್ತಾನದಿಂದ ಹಾಳಾದ ಈ ವರ್ಷಗಳು ಈಗ ಮತ್ತೆ ಹಿಂದಿರುಗಲಾರವು ಮತ್ತು ಮುಂದಿನ ಎಷ್ಟು ವರ್ಷಗಳು ಹೀಗೇ ಹಾಳಾಗಲಿವೆ ಎಂಬುದೂ ನಮಗೆ ತಿಳಿದಿಲ್ಲ. ಈ ಬಗ್ಗೆ ದಡ್ಡ ಹಿಂದೂಗಳ ತಲೆಯಲ್ಲಿ ಸ್ವಲ್ಪ ಪ್ರಕಾಶ ಬೀರಬೇಕೆಂದು ಈ ಲೇಖನ ಪ್ರಪಂಚ.
ಕಾಂಗ್ರೆಸ್‌ನ ನಿರ್ಲಜ್ಜತನ!
ಭಾರತದ ಸ್ವಾತಂತ್ರ್ಯದ ಮುಂಜಾವು ಹಾಳಾಗಿ ಹೋಗಿದೆ ಎಂದು ಯಾರು ಹೇಳುತ್ತಾರೆ! ಕ್ರಿಕೆಟ್‌ನಲ್ಲಿ ಮಗ್ನರಾಗಿರುವ ಇಂದಿನ ಪೀಳಿಗೆಗೆ, ಫುಟ್‌ಬಾಲ್‌ನಂತಹ ಆಟಕ್ಕಾಗಿ ತಮ್ಮ ಮೊದಲನೆಯ ಪುಟವನ್ನೇ ಖರ್ಚು ಮಾಡುವ ವರ್ತಮಾನಪತ್ರಿಕೆಗಳಿಗೆ, ಭ್ರಷ್ಟಾಚಾರವನ್ನು ಮಾಡಿ ತಮ್ಮ ಏಳು ಪೀಳಿಗೆಗಳ ಕಲ್ಯಾಣ (ಅಥವಾ ಹಾನಿ) ಮಾಡುವ ಇಂದಿನ ರಾಜ್ಯಕರ್ತರಿಗೆ ಆಗಸ್ಟ ೧೪ ರಂದು ಜನಿಸಿದ ಪಾಕಿಸ್ತಾನವು ನಮ್ಮ ೧೯೪೭ರ ಆಗಸ್ಟ ೧೫ ಅಷ್ಟೇ ಅಲ್ಲ, ಪ್ರತಿ ವರ್ಷದ ಆಗಸ್ಟ ೧೫ ಅನ್ನು ಕೆಡಿಸಿಬಿಟ್ಟಿದೆ ಎಂಬುದರ ನೆನಪೂ ಇರಲಾರದು. ವೃದ್ಧರಾಗಿದ್ದ ಮತ್ತು ಅಧಿಕಾರಕ್ಕೆ ಹಪಹಪಿಸುತ್ತಿದ್ದ ಕಾಂಗ್ರೆಸ್ಸಿನ ನೇತಾರರು ನಿರ್ಲಜ್ಜರಾಗಿ ಭಾರತವು ಸ್ವತಂತ್ರವಾಗುವ ಒಂದು ದಿನ ಮೊದಲೇ ಪಾಕಿಸ್ತಾನದ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಿದರು!
ಈ ಕರಾಳ ದಿನದಿಂದ ಆದುದ್ದಾದರೂ ಏನು?
ಹುಕುಂಶಾಹಿಗಳ ಕೈಯಿಂದ ಹತ್ಯೆಗೀಡಾಗದಷ್ಟು ಜನರು ಕಾಂಗ್ರೆಸ್ ನಡೆಸಿದ ವಿಭಜನೆಯ ನಿರ್ಣಯದಿಂದಾಗಿ ಹತ್ಯೆಗೀಡಾದರು. ಸುಮಾರು ೧೦ ಲಕ್ಷ ಹಿಂದೂಗಳು ಮೃತಹೊಂದಿದರು ಮತ್ತು ಒಂದೂವರೆ ಕೋಟಿ ಹಿಂದೂಗಳು ನಿರಾಶ್ರಿತರಾದರು. ಕೆಲವರಿಗೆ ಆ ಸಮಯದಲ್ಲಿ ಹಿಂದೂಗಳ ಪಾಲಿಗೆ ಬಂದ ಮರಣವೇ ಒಳ್ಳೆಯದಿತ್ತು ಎಂದು ಅನಿಸಿರಬಹುದು ಆದರೆ ಅದೂ ಕೂಡಾ ಕಲ್ಪನೆಯೇ ಆಗಿದೆ ಎಂಬುದು ಮುಂದಿನ ಅಂಶಗಳಿಂದ ತಿಳಿದು ಬರಬಹುದು.
ಹಿಂದೂ ನಿರಾಶ್ರಿತರಿಂದ ಮಿತಿಮೀರಿ ತುಂಬಿದ ಒಂದು ರೈಲುಗಾಡಿಯು ದಿಲ್ಲಿಗೆ ಬರಲು ರಾವಲ್ಪಿಂಡಿ ನಿಲ್ದಾಣದಿಂದ ಹೊರಟಿತ್ತು. ನಿಲ್ದಾಣದಿಂದ ಸ್ವಲ್ಪ ದೂರದಲ್ಲಿಯೇ ಮುಸಲ್ಮಾನ ದಂಗೆಕೋರರು ಅದರ ದಾರಿಯನ್ನೇ ಕಾಯುತ್ತಿದ್ದರು. ಅವರು ಗಾಡಿಯನ್ನು ನಿಲ್ಲಿಸಿದರು ಮತ್ತು ಪ್ರತಿಯೊಂದು ಡಬ್ಬಿಯನ್ನು ತೆರೆದು ಹಿಂದೂಗಳನ್ನು ಹಿಡಿದು ಕೊಲ್ಲಲು ಪ್ರಾರಂಭಿಸಿದರು. ತಾಯಿಯ ಮಡಿಲಿನಲ್ಲಿದ್ದ ಮಗುವನ್ನು ಎಳೆಯುವಾಗ ಅಥವಾ ಸಹೋದರನಿಗೆ ಜೋತುಬಿದ್ದ ಸಹೋದರಿಯನ್ನು ಎಳೆದೊಯ್ಯುವಾಗಲೂ ಅವರಿಗೆ ಏನೂ ಅನಿಸಲಿಲ್ಲ. ಚಿಕ್ಕಮಕ್ಕಳ ಕಾಲುಗಳನ್ನು ಹಿಡಿದು ಅವರನ್ನು ನೆಲಕ್ಕಪ್ಪಳಿಸುವಾಗ ಅವರು ಕ್ರೌರ್ಯದ ಪರಮಾವಧಿಯನ್ನೇ ತಲುಪಿದರು. ತರುಣ ಯುವತಿಯರನ್ನು ಅವರು ದರದರ ಎಳೆಯುತ್ತಾ ಹೊರತೆಗೆದರು. ಅವರು ಪಲಾಯನ ಮಾಡಬಾರದೆಂದು ಒಬ್ಬಳ ಬಲಗಾಲನ್ನು ಇನ್ನೊಬ್ಬಳ ಎಡಗಾಲಿಗೆ ಕಟ್ಟಿದರು. ಆಗಸ್ಟ ೧೫ರವರೆಗೆ ಬಲವಂತದಿಂದ ಎಳೆದೊಯ್ಯದ ಹಿಂದೂ ಸ್ತ್ರೀಯರೆಲ್ಲರನ್ನೂ ನಗ್ನವಾಗಿ ಮೆರವಣಿಗೆ ಮಾಡಿದರು. ಲಾಹೋರ ನಗರವೊಂದರಲ್ಲಿಯೇ ೯೦೦ ಸ್ತ್ರೀಯರನ್ನು ನಗ್ನಗೊಳಿಸಿ ತುಂಬಿದ ರಸ್ತೆಗಳಲ್ಲಿ ಆ ನರಾಧಮರು ಮೆರೆಸಿದರು. ಪಾಕಿಸ್ತಾನದ ಮುಲ್ತಾನ, ರಾವಲ್ಪಿಂಡಿ, ಡೆರಾ ಇಸ್ಮಾಯಿಲ್ ಖಾನ ಮುಂತಾದ ನಗರಗಳಲ್ಲಿ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಇದೇ ನಡೆಯಿತು.
ಈಗಲೂ ಅಲ್ಲಿನ ಹಿಂದೂಗಳ ಜೀವನವು ಸುರಕ್ಷಿತವಾಗಿಲ್ಲ. ಚುನಾವಣೆಯಲ್ಲಿ ಅವರ ಮತಗಳಿಗೆ ಬೆಲೆಯಿಲ್ಲ. ಅವರಿಗೆ ಉಪನಯನ, ಮದುವೆ ಮುಂತಾದ ವಿಧಿಗಳನ್ನು ಸಾರ್ವಜನಿಕವಾಗಿ ಆಚರಿಸಲು ನಿರ್ಬಂಧವಿದೆ. ಹಿಂದೂಗಳ ಮೃತದೇಹಗಳನ್ನು ದಹನ ಮಾಡಲು ಅವರಿಗೆ ಸ್ವತಂತ್ರವಾದ ಸ್ಮಶಾನ ಭೂಮಿಯೂ ಇಲ್ಲ. ಲಾಹೋರ್‌ನಂತಹ ದೊಡ್ಡ ನಗರದಲ್ಲಿಯೂ ಅವರಿಗೆ ದಹನ ಮಾಡಲು ಮೃತದೇಹಗಳನ್ನು ತೆಗೆದುಕೊಂಡು ದೂರದವರೆಗೆ ಹೋಗಬೇಕಾಗುತ್ತದೆ. ಇಲ್ಲದಿದ್ದರೆ ಹಿಂದೂಗಳ ಮೃತದೇಹಗಳನ್ನು ಮುಸಲ್ಮಾನರಂತೆ ಹೂಳಬೇಕಾಗುತ್ತದೆ. ಹೀಗೆ ಮಾಡಿ ಅಲ್ಲಿನ ಸರಕಾರವು ಸತ್ತ ನಂತರವೂ ಹಿಂದೂಗಳಿಗೆ ತೊಂದರೆ ನೀಡುವ ತನ್ನ ಇಚ್ಛೆಯನ್ನು ಪೂರೈಸಿಕೊಳ್ಳುತ್ತಿದೆ!
ಸಿಂಧ ಪ್ರಾಂತ್ಯದಲ್ಲಿಯಂತೂ ಹಿಂದೂ ಯುವತಿಯರನ್ನು ಬಲವಂತದಿಂದ ಅಪಹರಿಸಿಕೊಂಡು ಹೋಗಿ ಮುಸಲ್ಮಾನ ಯುವಕರೊಂದಿಗೆ ವಿವಾಹ ಮಾಡಿಸುತ್ತಾರೆ. ಅಲ್ಲಿನ ಮದರಸಾಗಳಿಗೆ ಕರೆದುಕೊಂಡು ಹೋಗಿ ಅವರ ಮೇಲೆ ಅತ್ಯಾಚಾರ ಮಾಡಿ ‘ನಾನು ಈ ಮದುವೆಯನ್ನು ನನ್ನ ಸ್ವಇಚ್ಛೆಯಿಂದ ಮಾಡಿಕೊಂಡಿದ್ದೇನೆ’ ಎಂದು ಪ್ರತಿಜ್ಞಾಪತ್ರವನ್ನು ಬರೆಸಿಕೊಳ್ಳುತ್ತಾರೆ. ಅನಂತರ ಅವರ ಹೆಸರು ಬದಲಾಯಿಸಿ ಬುರಖಾ ಹಾಕಿಸಿ ಒಂದು ಸಲ ತಂದೆ-ತಾಯಂದಿರಿಗೆ ಅವರನ್ನು ತೋರಿಸುತ್ತಾರೆ.
ವಿಭಜನೆಯ ಕರಾರಿನ ನಂತರದ ಏಳು ವರ್ಷಗಳವರೆಗೆ ಅಲಕ್ಷ್ಯ ಮಾಡಿದ ಹೆಚ್ಚಿನ ಹಿಂದೂಗಳು!
ಮಾರ್ಚ್ ೨೫, ೧೯೪೦ ರಂದು ಲಾಹೋರ್‌ನಲ್ಲಿ ಜಿನ್ನಾರವರ ಮುಸ್ಲಿಮ್ ಲೀಗ್ ವಿಭಜನೆಯ ಪ್ರಸ್ತಾವವನ್ನು ಮಾಡಿತು ಮತ್ತು ಕೇವಲ ಏಳು ವರ್ಷಗಳಲ್ಲಿ ಅಸಂಖ್ಯಾತ ಕ್ರಾಂತಿಕಾರಿಗಳ ಬಲಿದಾನವನ್ನು ತುಚ್ಛವೆಂದು ಬದಿಗೊತ್ತಿ ಕಾಂಗ್ರೆಸ್ ವಿಭಜನೆಗೆ ಒಪ್ಪಿಗೆಯನ್ನು ನೀಡಿತು. ಅದರ ಮೊದಲಿನ ಸಾವಿರ ವರ್ಷಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಿಂದೂಸ್ಥಾನದ ಮೇಲೆ ಪರಕೀಯರ ಆಕ್ರಮಣಗಳಾಗಿದ್ದವು. ಈ ಸುದೀರ್ಘ ಕಾಲಾವಧಿಯಲ್ಲಿಯೂ ಹಿಂದೂಗಳು ಪರಕೀಯರ ಅಧಿಕಾರಕ್ಕೆ ಒಪ್ಪಿಗೆಯನ್ನು ನೀಡಿರಲಿಲ್ಲ; ಆದರೆ ೧೯೪೭ರಲ್ಲಿ ಒಂದು ದೊಡ್ಡ ವಿಪರೀತವೇ ನಡೆಯಿತು. ಹಿಂದೂಗಳು ತಾವಾಗಿ ದೇಶದ ಒಂದು ತೃತೀಯಾಂಶ ಭಾಗವನ್ನು ಮುಸಲ್ಮಾನರಿಗೆ ಕಾನೂನುರೀತ್ಯಾ ನೀಡಿದರು. ಹಿಂದೂಗಳ ಸ್ವಸಂರಕ್ಷಣೆಯ ವಿಚಾರವನ್ನೂ ಅವರು ಮಾಡಲಿಲ್ಲ. ಲಕ್ಷಗಟ್ಟಲೆ ಹಿಂದೂ ಪುರುಷರನ್ನು, ಸ್ತ್ರೀಯರನ್ನು ಮತ್ತು ಮಕ್ಕಳನ್ನು ಕೊಂದು ಹಾಕಿ ಧರ್ಮಾಂಧ ಮುಸಲ್ಮಾನರು ಭಾರತದ ಒಂದು ದೊಡ್ಡ ಭೂಭಾಗವನ್ನೇ ಕಬಳಿಸಿಬಿಟ್ಟರು. ಈ ಭೂಭಾಗವನ್ನು ಕಬಳಿಸುವಾಗ ಅವರು ಚೂರಿ, ತಲವಾರುಗಳು, ಬೆಂಕಿ ಮತ್ತು ಬಲಾತ್ಕಾರಗಳ ಉಪಯೋಗ ಮಾಡಿದರು. ವಿಭಜನೆಯಿಂದ ಪಾಕಿಸ್ತಾನವನ್ನು ಪಡೆದ ಗೂಂಡಾಗಳ ವಾರಸುದಾರರ ಕೈಗೆ ಇಂದು ಭಾರತದ ಮೇಲೆ ಹಾರಿಸಲು ಅಣ್ವಸ್ತ್ರಗಳು ದೊರಕಿವೆ!
ಸಾಂಸ್ಕೃತಿಕ ಮತ್ತು ಧಾರ್ಮಿಕ ಹಾನಿ!
ಭಾರತವು ಆಗಸ್ಟ ೧೪ ರಂದು ಕಳೆದುಕೊಂಡ ಭೂಭಾಗದೊಂದಿಗೆ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧವಿದೆ. ಯಾರ ಮಡಿಲಿನಲ್ಲಿ ನಮ್ಮ ಸಂಸ್ಕೃತಿಯು ಅರಳಿತೋ, ಯಾರ ಮಡಿಲಿನಲ್ಲಿ ನಮ್ಮ ಋಷಿಮುನಿಗಳು ವೇದಋಚೆಗಳನ್ನು ಪಠಿಸಿದರೋ, ಆ ಸಿಂಧೂ ನದಿಯು ನಮಗೆ ಪರಕೀಯವಾಯಿತು. ಯಾವ ನದಿಯ ಉದ್ಘೋಷವನ್ನು ನಮ್ಮ ಧಾರ್ಮಿಕ ವಿಧಿಗಳಲ್ಲಿ ಮಾಡಲಾಗುತ್ತದೆಯೋ ಆ ಗಂಗೆಯ ಐದನೆಯ ಒಂದು ಭಾಗವು ಪಾಕಿಸ್ತಾನಕ್ಕೆ ಸೇರಿತು. ಅವಳನ್ನು ಬಂದು ಸೇರುವ ಬ್ರಹ್ಮಪುತ್ರಾ ನದಿಯೂ ಬಾಂಗ್ಲಾದೇಶದಿಂದ ಹರಿಯಬೇಕಾಗಿರುವುದರಿಂದ ದುಃಖಿಯಾಗಿದೆ. ದೇವವಾಣಿ ಸಂಸ್ಕೃತದ ವ್ಯಾಕರಣವನ್ನು ಬರೆದ ಪಾಣಿನಿಯ ಜನ್ಮಸ್ಥಾನ, ಸಿಖ್ಖ್ ಪಂಥದ ಸಂಸ್ಥಾಪಕ ಗುರುನಾನಕರ ಜನ್ಮಸ್ಥಾನ ನಾನಕಾನಾ ಸಾಹೇಬ ಪಾಕಿಸ್ತಾನಕ್ಕೆ ಸೇರಿತು. ಪ್ರಭು ಶ್ರೀರಾಮಚಂದ್ರನ ಪುತ್ರ ಲವನು ವಾಸ್ತವ್ಯವಿದ್ದ ಲಾಹೋರ, ಢಾಕೇಶ್ವರಿ ದೇವಿಯ ಹೆಸರಿನಿಂದ ಕರೆಯಲ್ಪಡುವ ಢಾಕಾ ಇಂದು ಪೂರ್ವ ಪಾಕಿಸ್ತಾನಕ್ಕೆ (ಇಂದಿನ ಬಾಂಗ್ಲಾದೇಶ) ಸೇರಿತು. ಇಷ್ಟೆಲ್ಲ ಸಿಕ್ಕರೂ ಪಾಕಿಸ್ತಾನದ ಕುತಂತ್ರಗಳು ಶಾಂತವಾಗಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿರುವ ಹೆಚ್ಚು ಕಡಿಮೆ ಎಲ್ಲ ದೇವಸ್ಥಾನಗಳನ್ನು ಮತ್ತು ಗುರುದ್ವಾರಗಳನ್ನು ಅವರು ಕಳೆದ ೫೯ ವರ್ಷಗಳಲ್ಲಿ ಕೆಡವಿ ಹಾಕಿದ್ದಾರೆ. ಕೆಲವು ದೇವಸ್ಥಾನಗಳಲ್ಲಿನ ಮೂರ್ತಿಗಳನ್ನು ತುಂಡು ಮಾಡಿದರು, ಕೆಲವು ಕಡೆಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರು, ದೇವಸ್ಥಾನಗಳಲ್ಲಿ ಮಲವನ್ನು ಎರೆಚಿದರು, ಅಲ್ಲಿ ದನಗಳನ್ನು ಕತ್ತರಿಸಿದರು ಮತ್ತು ಇನ್ನೂ ಕೆಲವೆಡೆಗಳಲ್ಲಿ ಗೋಮಾಂಸ ಮಾರಾಟದ ಅಂಗಡಿಗಳನ್ನು ತೆರೆದರು. ತಥಾಕಥಿತ ಬಾಬರಿ ಮಸೀದಿಯ ಪತನದ ನಂತರವಂತೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕ್ರೇನ್‌ಗಳನ್ನು ತರಿಸಿ ಸರಕಾರವೇ ದೇವಸ್ಥಾನಗಳನ್ನು ಕೆಡಹುವಲ್ಲಿ ಸಹಕಾರ ನೀಡಿತು. ಲಾಹೋರನಲ್ಲಿದ್ದ ಏಕೈಕ ಶ್ರೀಕೃಷ್ಣನ ದೇವಸ್ಥಾನವನ್ನು ಜೂನ್ ೨೦೦೬ರಲ್ಲಿ ನೆಲ ಸಮಗೊಳಿಸಲಾಯಿತು ಮತ್ತು ಢಾಕೇಶ್ವರೀ ದೇವಸ್ಥಾನಕ್ಕೂ ಅದೇ ಗತಿ ತೋರಿಸಲು ಬಾಂಗ್ಲಾದೇಶದ ಪ್ರಧಾನಮಂತ್ರಿ ಬೇಗಮ್ ಖಲೀದಾ ಜಿಯಾರವರ ವಿಚಾರವು ಅಚಲವಾಗಿದೆ!
ಹಿಂದೂ ಸಮಾಜಕ್ಕಾದ ವ್ಯಾವಹಾರಿಕ ನಷ್ಟ
ಪಾಕಿಸ್ತಾನದಲ್ಲಿರುವ ಶೇ. ೯೦ ರಷ್ಟು ಭೂಮಿಯು ಹಿಂದೂಗಳ ಒಡೆತನದ್ದಾಗಿತ್ತು. ಕರಾಚಿ, ಲಾಹೋರ, ಮುಲ್ತಾನ, ಪೇಶಾವರ, ರಾವಲ್ಪಿಂಡಿ, ಕ್ವೆಟ್ಟಾ, ಲಾಯಲಪುರ ಮುಂತಾದ ಎಲ್ಲ ನಗರಗಳಲ್ಲಿ ಹಿಂದೂ ಧನಿಕರ ದೊಡ್ಡ ದೊಡ್ಡ ಬಂಗಲೆಗಳು, ಅಂಗಡಿಗಳು, ವ್ಯವಹಾರ ಮುಗ್ಗಟ್ಟುಗಳು, ಗಿರಣಿಗಳು, ಧರ್ಮಾರ್ಥ ಸಂಸ್ಥೆಗಳು, ಆಸ್ಪತ್ರೆಗಳು, ಶಾಲೆಗಳು, ಮಹಾವಿದ್ಯಾಲಯಗಳು ಸಹಸ್ರಾರು ಸಂಖ್ಯೆಗಳಲ್ಲಿದ್ದವು. ಇಂದು ಲಾಹೋರಿನ ಪಂಜಾಬ್ ವಿದ್ಯಾಪೀಠವಿರುವ ೫ ಸಾವಿರ ಏಕರೆ ಜಮೀನು ಗಂಗಾರಾಮ ಎಂಬ ಓರ್ವ ಹಿಂದೂ ಧನಿಕರದ್ದಾಗಿತ್ತು. ಅಲ್ಲಿ ಅವರ ಸರ್ ಗಂಗಾರಾಮ ಎಂಬ ಹೆಸರಿನ ಆಸ್ಪತ್ರೆ ಇತ್ತು. ಈ ಮನೆತನದ ಲಾಹೋರನಲ್ಲಿದ್ದ ಆಸ್ತಿಪಾಸ್ತಿಯ ಮೌಲ್ಯವು ಅಂದಿನ ೫ ಸಾವಿರ ಕೋಟಿ ರೂಪಾಯಿಗಳಾಗಿತ್ತು. ಪೇಶಾವರದ ರಾಜಾ ಬಝಾರ, ಲಾಹೋರನ ಅನಾರಕಲಿ, ಕರಾಚಿಯ ಸದ್ದರ, ಹೈದರಾಬಾದ್‌ನ ಸಿಂಧ ಬಝಾರ, ಮುಲ್ತಾನಿನ ಪಂಜಾಬ ಬಝಾರ, ಕ್ವೆಟ್ಟಾದ ಹಿಂದೂಮಲ್ ಬಝಾರ ಮುಂತಾದ ದೊಡ್ಡ ಪೇಟೆಗಳಲ್ಲಿ ಶೇ.೯೫ರಷ್ಟು ಅಂಗಡಿಗಳು ಹಿಂದೂಗಳದ್ದಾಗಿದ್ದವು. ಇಂದು ಅಲ್ಲಿ ಒಬ್ಬನೇ ಒಬ್ಬ ಹಿಂದೂವಿನ ಅಂಗಡಿಯಿಲ್ಲ. ಇಂದಿನ ಬಾಂಗ್ಲಾದೇಶದಲ್ಲಿರುವ ಎಲ್ಲ ಸೆಣಬಿನ (Jute) ಮತ್ತು ಭತ್ತದ ಗಿರಣಿಗಳು ಹಿಂದೂಗಳದ್ದಾಗಿದ್ದವು. ಇಂದು ಅಲ್ಲಿ ಹಿಂದೂಗಳದ್ದೆಂದು ಹೇಳುವಂತಹದ್ದು ಏನೂ ಇಲ್ಲ.
ವಿಭಜನೆಯ ದಿನಗಳಲ್ಲಿ ಈ ಭಾಗದಲ್ಲಿನ ಸಾವಿರಾರು ಹಿಂದೂಗಳು ಕದ್ದು-ಮುಚ್ಚಿ ಉಟ್ಟ ವಸ್ತ್ರಗಳಲ್ಲಿಯೇ ದಿಲ್ಲಿಗೆ ಬಂದಿದ್ದರು. ನಿರಾಶ್ರಿತರಾದ ಈ ಹಿಂದೂಗಳು ದಿಲ್ಲಿ ಮತ್ತು ಸುತ್ತಮುತ್ತಲಿನ ಪಾಳು ಬಿದ್ದ ಮತ್ತು ಉಪಯೋಗವಿಲ್ಲದ ಮಸೀದಿಗಳಲ್ಲಿ ಆಶ್ರಯ ಪಡೆದಿದ್ದರು. ಆದರೆ ಗಾಂಧಿ-ನೆಹರೂರವರಿಗೆ ಅದೂ ಇಷ್ಟವಾಗಲಿಲ್ಲ. ಜಡಿಮಳೆಯಲ್ಲಿ ಅವರು ಹಿಂದೂಗಳನ್ನು ಈ ತತ್ಕಾಲೀನ ಆಶ್ರಯಸ್ಥಾನಗಳನ್ನು ಒತ್ತಾಯದಿಂದ ಖಾಲಿ ಮಾಡುವಂತೆ ಮಾಡಿದರು. ಕಾಂಗ್ರೆಸ್ ಪಾಕಿಸ್ತಾನದಿಂದ ಬೃಹತ್ ಪ್ರಮಾಣದಲ್ಲಿ ನಷ್ಟ ಪರಿಹಾರವನ್ನು ಪಡೆದುಕೊಂಡು ಇವರೆಲ್ಲರಿಗೂ ನೀಡಬೇಕಾಗಿತ್ತು. ಆದರೆ ಅದೂ ಆಗಲಿಲ್ಲ. ವಿಭಜನೆಯನ್ನು ತಡೆಗಟ್ಟಲು ಒಂದು ಗಂಟೆಯೂ ಉಪವಾಸ ಮಾಡದ ಗಾಂಧಿಯವರು ಆ ಸಮಯದಲ್ಲಿನ ಭಾರತದ ಕಡೆಯಲ್ಲಿದ್ದ ಆಪತ್ಕಾಲಕ್ಕಾಗಿ ಕಾದಿರಿಸಿದ ಸಾಮೂಹಿಕ ಮೊತ್ತದಲ್ಲಿನ ಪಾಕಿಸ್ತಾನದ ಪಾಲಿನ ೫೫ ಕೋಟಿ ರೂಪಾಯಿಗಳನ್ನು ನೀಡದಿದ್ದರೆ ಉಪವಾಸ ಮಾಡುವುದಾಗಿ ಬೆದರಿಕೆ ಹಾಕಿದರು!
ಹಿಂದೂ ನಿರಾಶ್ರಿತರಿಗೆ ಪಾಕಿಸ್ತಾನದಿಂದ ಬರಬೇಕಾಗಿದ್ದ ಕೆಲವು ಕೋಟಿ ರೂಪಾಯಿಗಳು ಕೊನೆಯವರೆಗೂ ಬರಲೇ ಇಲ್ಲ. ಇಂಗ್ಲೆಂಡ್‌ಗೆ ಪಾಕಿಸ್ತಾನವು ಆ ಸಮಯದಲ್ಲಿ ನೀಡಬೇಕಾಗಿದ್ದ ೩೦೦ ಕೋಟಿ ರೂಪಾಯಿಗಳನ್ನು ಭಾರತವೇ ಇಂಗ್ಲೆಂಡ್‌ಗೆ ಕೊಟ್ಟು ಬಿಟ್ಟಿತು. ಪಾಕಿಸ್ತಾನವು ಇಂದಿಗೂ ಈ ಹಣವನ್ನು ಭಾರತಕ್ಕೆ ಹಿಂತಿರುಗಿಸಿಲ್ಲ. ನಾವು ಮಾತ್ರ ಈ ಬಾಕಿಯನ್ನು ನಾಚಿಕೆ ಇಲ್ಲದವರಂತೆ ಪ್ರತಿವರ್ಷದ ಆರ್ಥಿಕ ಬಜೆಟ್ ನಲ್ಲಿ ತೋರಿಸುತ್ತಿದ್ದೇವೆ!
ಹಿಂದೂ ನಿರಾಶ್ರಿತರ ಆಸ್ತಿಪಾಸ್ತಿಗಳನ್ನು ಕಸಿಯಲು ಪಾಕಿಸ್ತಾನಕ್ಕೆ ಹೋದ ಭಾರತದಲ್ಲಿನ ಮುಸಲ್ಮಾನರು
ಪಾಕಿಸ್ತಾನಕ್ಕೆ ಬಂದಿದ್ದ (ಮುಸಲ್ಮಾನರು) ನಿರಾಶ್ರಿತರಿಂದಾಗಿ ಏನಾಯಿತು ನೋಡಿರಿ. ಇವರು ಹಿಂದೂಸ್ಥಾನದಲ್ಲಿ ವಾಸಿಸಲು ಆಗುವುದಿಲ್ಲ ಎಂದು ಪಾಕಿಸ್ತಾನಕ್ಕೆ ಬಂದವರಂತೂ ಅಲ್ಲ.... ಉತ್ತರಪ್ರದೇಶದಲ್ಲಿ (ವಿಭಜನೆಯ ಸಮಯದಲ್ಲಿ) ಮುಸಲ್ಮಾನರ ಜನ ಸಂಖ್ಯೆಯು ಶೇ.೧೩ರಷ್ಟಿತ್ತು. ಆದರೆ ನೌಕರಿಗಳಲ್ಲಿ ಶೇ.೪೫ರಷ್ಟು ಮುಸಲ್ಮಾನರೇ ಇದ್ದರು. ಹೀಗಿದ್ದರೂ ಸಹ ದೊಡ್ಡ ಸಂಖ್ಯೆಯಲ್ಲಿ ಅವರು ಪಾಕಿಸ್ತಾನಕ್ಕೆ ಹೊರಟುಹೋದರು. ಭಾರತದಲ್ಲಿ ಅವರಿಗೆ ಸಿಗುವುದಕ್ಕಿಂತಲೂ ಹೆಚ್ಚು ಪಾಕಿಸ್ತಾನದಲ್ಲಿ ಪಡೆದುಕೊಳ್ಳುವ ಆಸೆಯಿಂದ ಅವರು ಪಾಕಿಸ್ತಾನಕ್ಕೆ ಹೋಗಿದ್ದರು. ಸಿಂಧ ಪ್ರಾಂತ್ಯದಿಂದ ಹೊರಟು ಹೋದ ಹಿಂದೂಗಳ ಪ್ರಚಂಡ ಪ್ರಮಾಣದ ಆಸ್ತಿಪಾಸ್ತಿಯು ಅಲ್ಲಿಯೇ ಉಳಿದಿತ್ತು. ಅದೆಲ್ಲವನ್ನೂ ತಥಾಕಥಿತ ನಿರಾಶ್ರಿತರು ಕಬಳಿಸಿದರು... ಈ ನಿರಾಶ್ರಿತರು ತಮಗೆ ಭಾರತದಲ್ಲಿದ್ದ ಆಸ್ತಿಪಾಸ್ತಿಯ ಬಗ್ಗೆ ನಕಲೀ ದಾವೆಗಳನ್ನು ಮಾಡಿ ಅದರ ಬದಲು ಹೊಸ ಆಸ್ತಿಪಾಸ್ತಿಯ ಬೇಡಿಕೆಯನ್ನು ಮಾಡಿದರು. ಅವರ ಈ ದಾವೆಗೆ ಇತರ ನಿರಾಶ್ರಿತರೂ ಸಹ ಬೆಂಬಲ ನೀಡಿದರು.
ಅನಂತರ ಪಾಕಿಸ್ತಾನದ ಪುನರ್ವಸತಿ ಖಾತೆಯಿಂದ ಅವರಿಗೆ ಹಿಂದೂಗಳು ಬಿಟ್ಟುಹೋದ ಆಸ್ತಿಪಾಸ್ತಿಯು ದೊರಕಿತು. (ಆಧಾರ: ‘ಸಿಂಧದ ದುಃಖಭರಿತ ಕತೆ’, ಲೇಖಕರು - ಕೇವಲರಾಮ (ಕೆ.ಆರ್) ಮಲಕಾನಿ)
ಹಿಂದೂಗಳ ಸಂಪತ್ತು ಮತ್ತು ಭೂಮಿಯನ್ನು ಕಬಳಿಸುವ ಪಾಕಿಸ್ತಾನದ ಯೋಜನೆಯು ಇಂದಿಗೂ ಮುಗಿದಿಲ್ಲ. ಪಾಕ್ ಪ್ರಚೋದಿತ ಭಯೋತ್ಪಾದನೆಯಿಂದಾಗಿ ಕಾಶ್ಮೀರದಿಂದ ನಿರಾಶ್ರಿತರಾದ ೬ ಲಕ್ಷ ಹಿಂದೂಗಳು, ಜಮ್ಮು, ದಿಲ್ಲಿ ಮತ್ತು ಇತರೆಡೆಗಳಲ್ಲಿ ಡೇರೆಗಳಲ್ಲಿ ಹತಾಶೆಯ ಬಡತನದ ಜೀವನವನ್ನು ಸಾಗಿಸುತ್ತಿದ್ದಾರೆ. ಅವರ ಸೇಬಿನ ತೋಟಗಳು, ಬಾಸ್ಮತಿ ಅಕ್ಕಿಯ ಗದ್ದೆಗಳು, ಮನೆ, ಅಂಗಡಿಗಳೆಲ್ಲವನ್ನೂ ಮುಸಲ್ಮಾನರು ಕಬಳಿಸಿದ್ದಾರೆ. ಒಂದು ಕಡೆಗೆ ಸರಕಾರವು ಅವರಿಗೆ ಯಾವುದೇ ನಷ್ಟಪರಿಹಾರವನ್ನು ನೀಡಿಲ್ಲ ಇನ್ನೊಂದು ಕಡೆಗೆ ದೇಶವಾಸಿಗಳೂ ಸಹ ಅದರ ಬಗ್ಗೆ ವಿಚಾರವನ್ನು ಮಾಡಿಲ್ಲ.
ಪಾಕಿಸ್ತಾನವು ನಿರ್ಮಾಣವಾಯಿತು ಎಂದರೆ ನಿಜವಾಗಿ ಏನಾಯಿತು?
ಅಸ್ತಿತ್ವಕ್ಕೆ ಬಂದ ಕೇವಲ ಹತ್ತೇ ವಾರದೊಳಗೆ ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಣವನ್ನು ಮಾಡಿತು. ವಿಭಜನೆಯ ಮೊದಲೇ ವರ್ಷವಿಡೀ ಆದ ನಷ್ಟ, ಸ್ತ್ರೀಯರ ವಿಡಂಬನೆ ಇವೆಲ್ಲವುಗಳ ಲೆಕ್ಕಾಚಾರವನ್ನು ತೀರಿಸಿಕೊಳ್ಳುವ ಉತ್ತಮ ಅವಕಾಶವು ಪಂಡಿತ ನೆಹರೂರವರ ಬಳಿ ತಾನಾಗಿ ಬಂದಿತ್ತು. ಸೈನ್ಯದ ಕೈಯು ಸಹ ಚುರುಗುಟ್ಟುತ್ತಿತ್ತು; ಆದರೆ ನೆಹರೂರವರಿಗೆ ಪಾಕಿಸ್ತಾನದ ಬಗ್ಗೆ ದಯೆಯುಂಟಾಯಿತು. ಕಾಶ್ಮೀರದ ಮೂರನೆಯ ಒಂದು ಭಾಗವನ್ನು ಪಾಕಿಸ್ತಾನದ ಮತ್ತು ಉಳಿದ ಭಾಗವನ್ನು ಶೇಖ ಅಬ್ದುಲ್ಲಾರ ವಶಕ್ಕೆ ನೀಡಿದರು. ಅನಂತರದ ಎಲ್ಲ ರಾಜ್ಯಕರ್ತರು ಇದರ ಪಾಲನೆ-ಪೋಷಣೆ ಮಾಡಿದರು!
ಪಾಕಿಸ್ತಾನದ ನಿರ್ಮಾಣದಿಂದಾಗಿ ನಿಜವಾಗಿಯೂ ಏನಾಯಿತು ಎನ್ನುವುದು ಸಾವರಕರ-ಗೋಳವಲಕರ ಮುಂತಾದ ಕೈಬೆರಳೆಣಿಕೆಯಷ್ಟು ನೇತಾರರನ್ನು ಬಿಟ್ಟರೆ ದೊಡ್ಡ-ದೊಡ್ಡ ನೇತಾರರಿಗೂ ತಿಳಿಯಲೇ ಇಲ್ಲ. ಅಖಂಡ ಹಿಂದೂಸ್ಥಾನದಲ್ಲಿ ಧಾರ್ಮಿಕ ದಂಗೆಗಳನ್ನು ನಡೆಸುವ ಮುಸಲ್ಮಾನ ಗೂಂಡಾಗಳು ವಿಭಜನೆಯಿಂದಾಗಿ ಹೊಸದಾಗಿ ನಿರ್ಮಾಣಗೊಂಡ ಸಾರ್ವಭೌಮತ್ವವಿರುವ ದೇಶದ ರಾಜ್ಯಕರ್ತರಾದರು. ಬ್ರಿಟಿಷರ ರಾಜ್ಯದಲ್ಲಿ ಕದ್ದು ಮುಚ್ಚಿ ಮಾಡಿದಂತಹ ನೀಚ ಕೃತ್ಯಗಳನ್ನು ಈಗ ಎಕೆ-೪೭ ನಂತಹ ಆಧುನಿಕ ಶಸ್ತ್ರಗಳು ಮತ್ತು ಅಸ್ತ್ರಗಳನ್ನು ಉಪಯೋಗಿಸಿ ಮಾಡಲು ಅವರಿಗೆ ಮುಕ್ತ ಪರವಾನಿಗೆಯು ದೊರಕಿತು. ಈ ಕಾರ್ಯದಲ್ಲಿ ಅವರಿಗೆ ಈಗ ಚೀನಾ ಮತ್ತು ಅಮೇರಿಕಾಗಳ ಸಹಾಯಹಸ್ತವನ್ನು ಪಡೆಯಲು ಸಾಧ್ಯವಾಯಿತು. ಮಧ್ಯ ಪೂರ್ವದಲ್ಲಿನ ಮುಸಲ್ಮಾನರ ರಾಷ್ಟ್ರಗಳು ಈಗ ಅವರಿಗೆ ರಾಜನೈತಿಕ ಬೆಂಬಲವನ್ನು ಹಾಗೂ ‘ಇಸ್ಲಾಮೀ ಅಣುಬಾಂಬುಗಳಿಗೆ’ ನೀರಿನಂತೆ ಹಣವನ್ನು ನೀಡತೊಡಗಿದವು. ಪಾಕಿಸ್ತಾನವು ಹುಟ್ಟಿದುದರಿಂದ ಭಾರತದಲ್ಲಿ ಆರ್.ಡಿ.ಎಕ್ಸ್. ಕಳುಹಿಸಲು ಸಾಧ್ಯವಾಯಿತು, ಭಾರತದ ವಿಮಾನಗಳನ್ನು ಅಪಹರಿಸಲು ಸಾಧ್ಯವಾಯಿತು, ದಾವೂದನಂತಹ ಅಂತಾರಾಷ್ಟ್ರೀಯ ಭಯೋತ್ಪಾದಕನನ್ನು ಅಡಗಿಸಿಡಲು ಸಾಧ್ಯವಾಯಿತು! ನಾಸಿಕ, ಔರಂಗಾಬಾದ್, ಮುಂಬೈ ಮುಂತಾದ ಕಡೆಗಳಲ್ಲಿ ಕಾನೂನುಬಾಹಿರ ಶಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಂಗ್ರಹಿಸುವವರಿಗೆ ಬಾಂಗ್ಲಾದೇಶದ ಮೂಲಕ ಪಾಕಿಸ್ತಾನಕ್ಕೆ ಪಲಾಯನ ಮಾಡಲು ಸಾಧ್ಯವಾಯಿತು.
ಆಗಸ್ಟ ೧೪ರ ಸ್ಮರಣೆಯಿಂದಾಗುವ ಲಾಭ!
ಅಮೇರಿಕನ್ ಜನತೆಯು ಸೆಪ್ಟೆಂಬರ ೧೧ ರ ಘಟನೆಯನ್ನು ಇನ್ನೂ ಮರೆತಿಲ್ಲ. ತಮಗೆ ದೊರಕಿದ ಪ್ರತಿಯೊಂದು ನಿಮಿತ್ತಗಳನ್ನು ಮುಂದೆ ಮಾಡಿ ಅವರು ಕೆಲವೊಮ್ಮೆ ಅಪಘಾನಿಸ್ತಾನ, ಕೆಲವೊಮ್ಮೆ ಇರಾಕ್‌ನ ಮೇಲೆ ದಾಳಿ ಮಾಡಿ ಆ ದೇಶಗಳಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಈಗಂತೂ ಇಲ್ಲದ ಕಾರಣವನ್ನು ಹುಡುಕಿ ಅವರು ಇರಾನ್‌ನ ಕುತ್ತಿಗೆಯನ್ನು ಹಿಸುಕಲು ನೋಡುತ್ತಿದ್ದಾರೆ. ಅಮೇರಿಕಾವು ಸೆಪ್ಟೆಂಬರ ೧೧ರ ಸೇಡನ್ನು ಅನೇಕ ಪಟ್ಟು ಹೆಚ್ಚು ತೀರಿಸಿಕೊಂಡಿದೆ. ಹಿಂದೂಸ್ಥಾನಕ್ಕೆ ಮಾತ್ರ ತನ್ನ ಮೇಲಿನ ಇಂತಹ ಅಸಂಖ್ಯಾತ ಹಲ್ಲೆಗಳನ್ನು ಮರೆತುಬಿಡುವ ಅಭ್ಯಾಸವಾಗಿ ಬಿಟ್ಟಿದೆ. ಅಯೋಧ್ಯೆ, ದಿಲ್ಲಿ, ಬೆಂಗಳೂರು, ವಾರಾಣಸಿಗಳಲ್ಲಿ ಬಾಂಬ್ ಸ್ಫೋಟವಾದ ದಿನಾಂಕಗಳು ಎಷ್ಟು ಹಿಂದೂಗಳಿಗೆ ನೆನಪಿದೆ?
ಭಾರತೀಯ ನಗರಗಳಲ್ಲಿನ ಬಾಂಬ್‌ಸ್ಫೋಟದ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳುವ ಕಿರಿಕಿರಿಯನ್ನು ಶಾಶ್ವತವಾಗಿ ನಿರ್ಮೂಲನಗೊಳಿಸಬೇಕಾಗಿದ್ದರೆ ಮತ್ತು ಇತರ ನಗರಗಳ ಹೆಸರು ಈ ಪಟ್ಟಿಯಲ್ಲಿ ಸೇರಿಕೊಳ್ಳಬಾರದು ಎಂದಾದರೆ ನಮ್ಮ ಕೈಗಳಿಂದ ಆಗಸ್ಟ ೧೪, ೧೯೪೭ ರಂದು ಪಾಕಿಸ್ತಾನವನ್ನು ಹುಟ್ಟಿಸಿ ಮಾಡಿದ ತಪ್ಪನ್ನು ಹಿಂದೂಗಳು ಬೇಗನೇ ತಿದ್ದುಪಡಿ ಮಾಡಿಕೊಳ್ಳಬೇಕು! ಈ ವರ್ಷದ ಆಗಸ್ಟ ೧೫ ರಂದೂ ಸಹ ಇದೇ ನಮ್ಮ ಬೇಡಿಕೆಯಾಗಿದೆ!!
- ಶ್ರೀ.ಸಂಜಯ ಮುಳ್ಯೆ, ರತ್ನಾಗಿರಿ.
(ಆಧಾರ : ಸಾಪ್ತಾಹಿಕ ‘ಸನಾತನ ಪ್ರಭಾತ’)
No comments:
Post a Comment
Note: only a member of this blog may post a comment.