ಬೆಳಕಿನ ಇಚ್ಛೆ ಅಥವಾ ವಿಶ್ವಪ್ರಜ್ಞೆ

ಕ್ವಾಂಟಮ್ ಸಿದ್ಧಾಂತ ಪ್ರಕಟಗೊಂಡ ನಂತರ ಜಗತ್ತು ಅನೇಕ ತಿರುವುಗಳನ್ನು ಕಂಡಿದೆ. ಬೆಳಕಿನ ಪುಂಜವೊಂದು ನಮ್ಮೆಡೆಗೆ ಬರುವಾಗ ಹೇಗೆ ಚಲಿಸುತ್ತೆ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ’ಅಲೆಗಳಂತೆ, ಶುದ್ಧ ಸಿಪಾಯಿಗಳಾಗಿ’ ಎಂದು ಉತ್ತರಿಸಿದ್ದರು. ಅದನ್ನು ಸಾಬೀತೂ ಪಡಿಸಿದರು. ಕ್ವಾಂಟಮ್ ಸಿದ್ಧಾಂತ ಚಾಲ್ತಿಗೆ ಬಂದ ಮೇಲೆ ಮತ್ತೊಂದಷ್ಟು ವಿಜ್ಞಾನಿಗಳು ಹೇಳಿದರು, ’ಹಾಗಿಲ್ಲ. ಬೆಳಕಿನ ಪುಂಜ ಶಾಲೆ ಬಿಟ್ಟ ಮಕ್ಕಳಂತೆ ಅಡ್ಡಾದಿಡ್ಡಿಯಾಗಿ ಬಂದು ಎರಗುತ್ತವೆ’ ಎಂದು. ಹೀಗೆ ಹೇಳಿದ್ದಷ್ಟೇ ಅಲ್ಲ, ಅವರದನ್ನು ಸಾಬೀತೂ ಪಡಿಸಿದರು. ಆದರೆ, ಒಂದೇ ಬೆಳಕಿನ ಕಿರಣ ಒಮ್ಮೆ ಶಿಸ್ತಿನಿಂದ ಅಲೆಯಾಗಿ, ಮತ್ತೊಮ್ಮೆ ಚದುರಿದ ಅಶಿಸ್ತಿನ ಕಣವಾಗಿ ನಡೆದಾಡಿದ್ದು ಹೇಗೆ? ತಲೆ ಕೆಡಿಸಿಕೊಂಡ ಬುದ್ಧಿವಂತರೆಂದರು, ’ಅದು ಬೆಳಕಿನ ಇಚ್ಛೆ’.
 
ಅರೆ ವಾಹ್! ಬೆಳಕಿಗೂ ಇಚ್ಛೆಯಾ? ಅದಕ್ಕೂ ಮನಸ್ಸಿದೆಯಾ? ಹಾಗಿದ್ದರೆ ಈ ಎಲ್ಲ ಮನಸ್ಸಿಗೂ ಕೇಂದ್ರವಿದೆಯಾ ಎಂಬ ಚರ್ಚೆಗಳು ಶುರುವಾದುವಲ್ಲ, ಆಗಲೇ ವಿಶ್ವಪ್ರಜ್ಞೆಯ ಪರಿಕಲ್ಪನೆ ಹುಟ್ಟಿಕೊಂಡಿದ್ದು. ಈ ವಿಶ್ವಪ್ರಜ್ಞೆಯನ್ನೆ ಕೆಲವರು ಶಕ್ತಿ ಎಂದರು, ಕೆಲವರು ದೇವರು ಎಂದರು. ಈ ವಿಶ್ವ ಶಕ್ತಿಯೊಂದಿಗೆ ತಮ್ಮ ಶಕ್ತಿಯನ್ನು ಟ್ಯೂನ್ ಮಾಡಿಕೊಳ್ಳುವ ಬಗೆ ಕೆಲವರಿಗೆ ಧ್ಯಾನ ಎನ್ನಿಸಿದರೆ, ಮತ್ತೆ ಕೆಲವರಿಗೆ ಅದು ಆಚರಣೆ ಎನ್ನಿಸಿತು ಅಷ್ಟೆ.
 
ಕೊಂಕಣಿ ಭಾಷೆ ತನಗೆ ಅರ್ಥವಾಗುವುದಿಲ್ಲ, ತನಗೆ ಬರುವುದಿಲ್ಲ ಅಂದ ಮಾತ್ರಕ್ಕೆ ಆ ಭಾಷೆಯೇ ಸರಿಯಿಲ್ಲ ಅನ್ನುವುದು ಎಷ್ಟು ತಪ್ಪೋ ತನಗೆ ದೇವರ ಅರಿವಾಗಲಿಲ್ಲ ಎಂದ ಮಾತ್ರಕ್ಕೆ ಆರಾಧಕರನ್ನು ಟೀಕಿಸುವುದೂ ಮಂದಿರದಿಂದ ದೂರ ತಳ್ಳುವುದೂ ಅಷ್ಟೇ ತಪ್ಪು. ಬಹುಶಃ ಮೂರ್ಖತನವೂ ಹೌದು.

3 comments:

  1. ಈ ಪುಟದಲ್ಲಿರುವ ಆಧಾರಗ್ರಂಥ ಸಹಿತ ಇರುವ ವಿಷಯಗಳನ್ನು ಇಲ್ಲಿಂದ ನಕಲು ಮಾಡಿ ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ಆಧಾರಗ್ರಂಥ ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು. ಆಧಾರ ಮತ್ತು ಸಂಪರ್ಕರಹಿತ ವಿಷಯಗಳನ್ನು ಹಾಕಿದರೆ ಕಾಪಿರೈಟ್ ಉಲ್ಲಂಘನೆಯಾಗಿರುತ್ತದೆ. ನಮ್ಮನ್ನು ಸಂಪರ್ಕಿಸಿ -

    Original Post from: http://dharmagranth.blogspot.in/2012/11/blog-post_25.html
    © Sanatan Sanstha - All Rights Reserved
    - eMdu haakiddeeri. aadare neewu idannilli prakatisalu Chakravarty Sulibele yavara oppige paDedideera? ee bhashaNa naanu kELidde. Swami ramateerthara foundation karyakramadalli...

    ReplyDelete
    Replies
    1. ಜನರಿಗೆ ಇಷ್ಟೊಂದು ಸಾಮಾನ್ಯಜ್ಞಾನದ ಅಭಾವವಿದೆ ಎಂದು ನಿಮ್ಮ ಪ್ರಶ್ನೆ ನೋಡಿದಾಗಲೇ ಗೊತ್ತಾಯಿತು :) ನಾವು ಹಾಕಿದ ಸೂಚನೆಯನ್ನೇ ಮತ್ತೊಮ್ಮೆ ಓದಿ - "ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ಆಧಾರಗ್ರಂಥ ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು" ಈ ವಾಕ್ಯದಲ್ಲೇ ಗೊತ್ತಾಗತ್ತೆ ಆಧಾರಸಹಿತ ಹಾಕಿ ಎಂದು. ಅದೇ ರೀತಿ ಚಕ್ರವರ್ತಿಯವರ ಲೇಖನಕ್ಕೆ ಕೊನೆಯಲ್ಲಿ "ಮೂಲ - ನೆಲದ ಮಾತು" ಎಂದು ಆಧಾರಸಹಿತ ಹಾಕಿದ್ದೇನೆ.
      ಇಷ್ಟೇ ಅಲ್ಲದೇ ಚಕ್ರವರ್ತಿಯವರು ನಮ್ಮ ಸನಾತನ ಸಂಸ್ಥೆಯ ಹಳೆಯ ಸ್ನೇಹಿತರು. ಇನ್ನೂ ಸಂದೇಹವಿದ್ದರೆ ಚಕ್ರವರ್ತಿಯವರಿಗೆ ಈ ಲಿಂಕ್ ಕೊಡಿ. ಅವರ ಆಕ್ಷೇಪಣೆ ಇದೆಯೇ ಎಂದು ನೀವೇ ಬೇಕಿದ್ದರೆ ಕೇಳಿಕೊಳ್ಳಿ.

      Delete
    2. ನಾವು ಆಧಾರಗ್ರಂಥ ಸಹಿತ ಹಾಕಿ ಎಂದು ಹೇಳಲು ಇನ್ನೊಂದು ಕಾರಣವನ್ನೂ ನಿಮಗೆ ಹೇಳುತ್ತೇನೆ. ಆಧಾರ ಹಾಕುವ ಉದ್ದೇಶ ನಮಗೆ ಪ್ರಸಿದ್ಧಿ ಸಿಗಬೇಕು ಎಂದಲ್ಲ, ನಮ್ಮ ಯಾವ ವಿಷಯವನ್ನು ಇನ್ನೊಬ್ಬರು ಆಧಾರ ಗ್ರಂಥದ ಹೆಸರನ್ನು ತೆಗೆದು ಇತರೆಡೆಗಳಲ್ಲಿ ಹಾಕುತ್ತಾರೆಯೋ, ಆಗ ಅದನ್ನು ಓದುವ ಜನರಿಗೆ ಆ ವಿಷಯದ ಬಗ್ಗೆ ಸನಾತನ ಸಂಸ್ಥೆಯ ಗ್ರಂಥದಲ್ಲಿ ವಿವರವಾದ ಮಾಹಿತಿ ಸಿಗುತ್ತದೆ ಎಂದು ತಿಳಿಯುವುದೂ ಇಲ್ಲ ಮತ್ತು ಹಿಂದೂಗಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಒಂದು ದಾರಿಯನ್ನು ಮುಚ್ಚಿದಂತಾಗುತ್ತದೆ. ಇದು ನಮ್ಮ ಮೂಲ ಉದ್ದೇಶ.

      Delete

Note: only a member of this blog may post a comment.