ಗ್ರಂಥ ಪರಿಚಯ - ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ

‘ಬೇಗನೆ ಮಲಗಿ, ಬೇಗನೆ ಏಳುವವನಿಗೆ ಆಯುರಾರೋಗ್ಯವು ಲಭಿಸುವುದು’ ಇಂತಹ ಬೋಧನೆಯನ್ನು ಮೊದಲು ಹಿರಿಯರು ಮಕ್ಕಳಿಗೆ ಕೊಡುತ್ತಿದ್ದರು. ಇಂದು ಮಕ್ಕಳು ತಡವಾಗಿ ಮಲಗುತ್ತಾರೆ ಮತ್ತು ಬೆಳಗ್ಗೆ ತಡವಾಗಿ ಏಳುತ್ತಾರೆ. ಮೊದಲು ಋಷಿಮುನಿಗಳ ದಿನವು ಬ್ರಾಹ್ಮೀಮುಹೂರ್ತದಲ್ಲಿ ಪ್ರಾರಂಭವಾಗುತ್ತಿತ್ತು, ಇಂದು ಯಂತ್ರಯುಗದಿಂದಾಗಿ ‘ರಾತ್ರಿ ಹೊತ್ತಿನಲ್ಲಿ ಕೆಲಸ ಮತ್ತು ಹಗಲು ಹೊತ್ತಿನಲ್ಲಿ ನಿದ್ರೆ’ ಹೀಗೆ ಮಾಡಬೇಕಾಗುತ್ತದೆ. ಮೊದಲಿನ ಕಾಲದ ದಿನಚರಿಯು ನಿಸರ್ಗದ ಮೇಲೆ ಆಧರಿಸಿತ್ತು, ಆದರೆ ಇಂದು ಅದು ಹಾಗಿಲ್ಲ. ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಈಗ ಅದು ಹಾಗೆ ಇಲ್ಲದಿರುವುದರಿಂದಲೇ ಮನುಷ್ಯನು ಹೊಟ್ಟೆ, ಗಂಟಲು, ಹೃದಯ ಮುಂತಾದ ನಾನಾ ವ್ಯಾಧಿಗಳಿಂದ ಪೀಡಿತನಾಗಿದ್ದಾನೆ.

ಹಿಂದಿನ ಕಾಲದಲ್ಲಿ ಸ್ನಾನವಾದ ನಂತರ ತುಳಸಿಗೆ ನೀರು ಹಾಕಿ, ವಂದನೆ ಮಾಡುತ್ತಿದ್ದರು. ಆದರೆ ಇಂದು ಎಷ್ಟೋ ಮನೆಗಳಲ್ಲಿ ತುಳಸಿ ವೃಂದಾವನವೇ ಇಲ್ಲವಾಗಿದೆ. ಹಿಂದೆ ದೀಪವನ್ನು ಹಚ್ಚುವ ಸಮಯದಲ್ಲಿ ‘ಶುಭಂ ಕರೋತಿ...’ ಶ್ಲೋಕವನ್ನು ಹೇಳಲಾಗುತ್ತಿತ್ತು. ಇಂದು ದೀಪ ಹಚ್ಚುವ ಸಮಯದಲ್ಲಿ ಮಕ್ಕಳು ದೂರದರ್ಶನದ ಕಾರ್ಯಕ್ರಮಗಳನ್ನು ನೋಡುವುದರಲ್ಲಿ ಮಗ್ನರಾಗಿರುತ್ತಾರೆ. ಹಿಂದೂಧರ್ಮದಲ್ಲಿ ಹೇಳಿರುವ ಆಚಾರಗಳ ಪಾಲನೆಯಿಂದ ಹಿಂದೂಗಳು ಬಹುದೂರ ಹೋಗುತ್ತಿದ್ದಾರೆ. ಆಚಾರಗಳ ಪಾಲನೆಯನ್ನು ಮಾಡುವುದು ಅಧ್ಯಾತ್ಮದ ಅಡಿಪಾಯವಾಗಿದೆ. ‘ವಿಜ್ಞಾನವು ನಿರ್ಮಿಸಿದ ಸುಖದ ಸಾಧನಗಳಿಂದ ಮನುಷ್ಯನಿಗೆ ನಿಜವಾದ ಸುಖವು ಸಿಗಲಾರದು, ಅದು ಕೇವಲ ಅಧ್ಯಾತ್ಮದ ಮೇಲೆ ಆಧರಿಸಿದ ಜೀವನದಿಂದಲೇ ಸಿಗುವುದು ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಪ್ರತಿಯೊಂದು ಕೃತಿಯಿಂದ ನಮ್ಮಲ್ಲಿನ ರಜ-ತಮಗಳು ಕಡಿಮೆಯಾಗಿ ಸತ್ತ್ವಗುಣವು ಹೆಚ್ಚಾಗಬೇಕು ಮತ್ತು ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಬೇಕು ಎಂಬುದಕ್ಕಾಗಿಯೇ ಎಲ್ಲ ಆಚಾರಗಳ ಆಯೋಜನೆಯನ್ನು ಮಾಡಲಾಗಿದೆ. ಇದು ಹಿಂದೂ ಧರ್ಮದ ಅದ್ವಿತೀಯ ವೈಶಿಷ್ಟ್ಯವಾಗಿದೆ. ಜ್ಞಾನಯೋಗ, ಕರ್ಮಯೋಗ ಮುಂತಾದ ಸಾಧನೆಯ ಮಾರ್ಗಗಳಂತೆಯೇ ಆಚಾರಧರ್ಮವೂ ಈಶ್ವರಪ್ರಾಪ್ತಿಯ ಕಡೆಗೆ ಒಯ್ಯುವುದಾಗಿದೆ.

ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳ ಪಾಲನೆಯನ್ನು ಮಾಡುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಬೆಳಗ್ಗೆ ಎದ್ದಕೂಡಲೆ ಮುಖ ತೊಳೆದುಕೊಳ್ಳುವ ಬದಲು ‘ಬೆಡ್-ಟೀ’ ಕುಡಿಯುವುದು, ಶೌಚಸ್ವಚ್ಛತೆಗಾಗಿ ನೀರನ್ನು ಉಪಯೋಗಿಸದೇ ‘ಟಿಶ್ಯೂಪೇಪರ್’ ಉಪಯೋಗಿಸುವ ಪಾಶ್ಚಾತ್ಯರ ಅನುಕರಣೆಗಳು ಎಷ್ಟೊಂದು ಅಯೋಗ್ಯವಾಗಿವೆ ಮತ್ತು ಹಿಂದೂಗಳ ಪಾರಂಪರಿಕ ಕೃತಿಗಳು ಅಧ್ಯಾತ್ಮದ ದೃಷ್ಟಿಯಿಂದ ಎಷ್ಟು ಯೋಗ್ಯವಾಗಿವೆ ಎಂಬುದು ಈ ಗ್ರಂಥವನ್ನು ಓದಿದ ಮೇಲೆ ತಿಳಿಯುವುದು.

ಬ್ರಾಹ್ಮೀಮುಹೂರ್ತದಲ್ಲಿ ಏಳುವುದರ ಮಹತ್ವವೇನು?
ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ಮಾಡಬೇಕಾದ ಕೃತಿಗಳು ಯಾವುವು?
ಬಟ್ಟೆಗಳನ್ನು ಬಗ್ಗಿನಿಂತು ಏಕೆ ಒಗೆಯಬೇಕು?
ಬ್ರಶ್‌ನ ಬದಲು ಬೆರಳಿನಿಂದ ಏಕೆ ಹಲ್ಲನ್ನು ಉಜ್ಜಬೇಕು?
ಶ್ಲೋಕ ಅಥವಾ ಮಂತ್ರವನ್ನು ಪಠಿಸುತ್ತಾ ಸ್ನಾನವನ್ನು ಏಕೆ ಮಾಡಬೇಕು?
ಒಗೆಯುವ ಯಂತ್ರದಿಂದ ಬಟ್ಟೆಗಳನ್ನು ಒಗೆಯುವುದರಿಂದಾಗುವ ದುಷ್ಪರಿಣಾಮವನ್ನು ದೂರಗೊಳಿಸಲು ಮಾಡಬೇಕಾದ ಉಪಾಯಗಳಾವುವು?
ಮೂತ್ರ ಮತ್ತು ಶೌಚವಿಧಿಗೆ ಹೋಗುವುದಕ್ಕಿಂತ ಮೊದಲು ಜನಿವಾರವನ್ನು ಬಲಕಿವಿಯ ಮೇಲೆ ಏಕೆ ಹಾಕಿಕೊಳ್ಳಬೇಕು?
ಕಸ ತೆಗೆಯುವ ಸಂದರ್ಭದಲ್ಲಿನ ಆಚಾರಗಳು ಯಾವುವು?
ಸ್ನಾನದ ನೀರಿನಲ್ಲಿ ಒಂದು ಚಮಚದಷ್ಟು ಕಲ್ಲುಪ್ಪನ್ನು ಏಕೆ ಹಾಕಬೇಕು?
ಊಟದ ಸಂದರ್ಭದಲ್ಲಿನ ಆಚಾರಗಳು ಯಾವುವು?
ರಾತ್ರಿಯ ಸಮಯದಲ್ಲಿ ಪಾಲಿಸಬೇಕಾದ ಆಚಾರಗಳು ಯಾವುವು?
ಸಾಯಂಕಾಲದ ಸಮಯದಲ್ಲಿ ಪಾಲಿಸಬೇಕಾದ ಆಚಾರಗಳು ಯಾವುವು? 
ಈ ಎಲ್ಲ ಪ್ರಶ್ನೆ ಮತ್ತು ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಗ್ರಂಥದಲ್ಲಿ ಓದಿರಿ.

1 comment:

  1. gurugale ಬ್ರಾಹ್ಮೀಮುಹೂರ್ತದಲ್ಲಿ ಏಳುವುದರ ಮಹತ್ವವೇನು? ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ಮಾಡಬೇಕಾದ ಕೃತಿಗಳು ಯಾವುವು? ಬಟ್ಟೆಗಳನ್ನು ಬಗ್ಗಿನಿಂತು ಏಕೆ ಒಗೆಯಬೇಕು? ಬ್ರಶ್‌ನ ಬದಲು ಬೆರಳಿನಿಂದ ಏಕೆ ಹಲ್ಲನ್ನು ಉಜ್ಜಬೇಕು? ಶ್ಲೋಕ ಅಥವಾ ಮಂತ್ರವನ್ನು ಪಠಿಸುತ್ತಾ ಸ್ನಾನವನ್ನು ಏಕೆ ಮಾಡಬೇಕು? ಒಗೆಯುವ ಯಂತ್ರದಿಂದ ಬಟ್ಟೆಗಳನ್ನು ಒಗೆಯುವುದರಿಂದಾಗುವ ದುಷ್ಪರಿಣಾಮವನ್ನು ದೂರಗೊಳಿಸಲು ಮಾಡಬೇಕಾದ ಉಪಾಯಗಳಾವುವು? ಮೂತ್ರ ಮತ್ತು ಶೌಚವಿಧಿಗೆ ಹೋಗುವುದಕ್ಕಿಂತ ಮೊದಲು ಜನಿವಾರವನ್ನು ಬಲಕಿವಿಯ ಮೇಲೆ ಏಕೆ ಹಾಕಿಕೊಳ್ಳಬೇಕು? ಕಸ ತೆಗೆಯುವ ಸಂದರ್ಭದಲ್ಲಿನ ಆಚಾರಗಳು ಯಾವುವು? ಸ್ನಾನದ ನೀರಿನಲ್ಲಿ ಒಂದು ಚಮಚದಷ್ಟು ಕಲ್ಲುಪ್ಪನ್ನು ಏಕೆ ಹಾಕಬೇಕು? ಊಟದ ಸಂದರ್ಭದಲ್ಲಿನ ಆಚಾರಗಳು ಯಾವುವು? ರಾತ್ರಿಯ ಸಮಯದಲ್ಲಿ ಪಾಲಿಸಬೇಕಾದ ಆಚಾರಗಳು ಯಾವುವು? ಸಾಯಂಕಾಲದ ಸಮಯದಲ್ಲಿ ಪಾಲಿಸಬೇಕಾದ ಆಚಾರಗಳು ಯಾವುವು? e ella bagge tilidukollalu yaava granthvannu odabeeku mathu elli sigutade

    ReplyDelete

Note: only a member of this blog may post a comment.