ದೇವಸ್ಥಾನಗಳನ್ನು ಧರ್ಮಜಾಗೃತಿಯ ಕೇಂದ್ರಗಳನ್ನಾಗಿ ಮಾಡೋಣ!

ದೇವಸ್ಥಾನಗಳು ಭಕ್ತರ ಶ್ರದ್ಧಾಸ್ಥಾನ ಹಾಗೂ ಸಮಾಜದ ದೇವರಕೋಣೆಯಾಗಿವೆ. ಮನಃಶಾಂತಿಯನ್ನು ಬಯಸಿ ಬರುವ ಜನರಿಗೆ ದೇವಸ್ಥಾನಗಳಲ್ಲಿರುವ ಚೈತನ್ಯದಿಂದಾಗಿ ಮನಃಶಾಂತಿಯು ಸಿಗುತ್ತದೆ. ಆದರೆ ದೇವಸ್ಥಾನ ಮತ್ತು ಅದರ ಪರಿಸರದಲ್ಲಿರುವ ಅಸಾತ್ತ್ವಿಕ ವಿಷಯಗಳಿಂದಾಗಿ ದೇವಸ್ಥಾನಗಳಿಂದ ಸಿಗಬೇಕಾದ ಚೈತನ್ಯದ ಮೇಲೆ ಆವರಣವು ಬರುತ್ತದೆ. - ಸಂಕಲನಕಾರರು:ಶ್ರೀ.ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.

ದೇವಸ್ಥಾನಗಳ ನಿಜವಾದ ಉದ್ದೇಶ
ನಿಜ ಹೇಳುವುದಾದರೆ ದೇವಸ್ಥಾನಗಳು ಕೇವಲ ಮನಃಶಾಂತಿಯನ್ನು ನೀಡುವುದರೊಂದಿಗೆ ಧರ್ಮಶಿಕ್ಷಣ ಹಾಗೂ ಆಧ್ಯಾತ್ಮಿಕ ಉನ್ನತಿಯ ಮಾರ್ಗದರ್ಶಕ ಕೇಂದ್ರಗಳಾಗಬೇಕು. ಇತರ ಧರ್ಮೀಯರಿಗೆ ಇಗರ್ಜಿ ಅಥವಾ ಮಸೀದಿಗಳಿಂದ ಧರ್ಮಶಿಕ್ಷಣ ನೀಡಲಾಗುತ್ತದೆ. ದೇವಸ್ಥಾನಗಳಿಂದಲೂ ಅದೇ ರೀತಿ ಆಗಬೇಕು. ಇದುವೇ ದೇವಸ್ಥಾನಗಳ ನಿಜವಾದ ಉದ್ದೇಶವಾಗಿದೆ. ಆದರೆ ಇತ್ತೀಚೆಗೆ ದೇವಸ್ಥಾನಗಳಲ್ಲಿ ಅಸಾತ್ತ್ವಿಕತೆಯು ಹೆಚ್ಚಾಗಿರುವುದರಿಂದ ಧರ್ಮಶಿಕ್ಷಣದ ಅಪೇಕ್ಷೆಯನ್ನು ಇಡಲಾಗುವುದಿಲ್ಲ.

ದೇವಸ್ಥಾನಗಳ ಸಾತ್ತ್ವಿಕತೆಯು ಕಡಿಮೆಯಾದುದರ ಕಾರಣಗಳು
ದೇವಸ್ಥಾನದ ಸಾತ್ತ್ವಿಕತೆಯು ಅದರ ರಚನೆ, ದೇವತೆಯ ಮೂರ್ತಿ, ಅಲ್ಲಿನ ಅರ್ಚಕರು, ಅಲ್ಲಿಗೆ ಬರುವ ಭಕ್ತರ ಭಾವ ಮತ್ತು ಅಲ್ಲಿನ ಪರಿಸರದ ಮೇಲೆ ಅವಲಂಬಿಸಿರುತ್ತದೆ. ಸಾತ್ತ್ವಿಕತೆಯು ಸ್ಥಿರವಾಗಿದ್ದರೆ ಚೈತನ್ಯವೂ ಸ್ಥಿರವಾಗಿ ಉಳಿದುಕೊಳ್ಳುತ್ತದೆ. ಪ್ರಸ್ತುತ ಮೇಲಿನ ಘಟಕಗಳು ದೇವಸ್ಥಾನದ ಸಾತ್ತ್ವಿಕತೆಯನ್ನು ಕಡಿಮೆಗೊಳಿಸುವುದಕ್ಕೆ ಎಷ್ಟರ ಮಟ್ಟಿಗೆ ಜವಾಬ್ದಾರವಾಗಿವೆ ಎಂಬುದನ್ನು ನೋಡೋಣ.

೧. ದೇವಸ್ಥಾನದ ರಚನೆ ಮತ್ತು ಅಲ್ಲಿನ ಮೂರ್ತಿಗಳು : ದೇವಸ್ಥಾನದ ಕಲಶವು ಎತ್ತರದಲ್ಲಿದ್ದು ಚಿನ್ನ ಅಥವಾ ತಾಮ್ರದ್ದಾಗಿರುವುದರಿಂದ ಅವು ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿಯಲ್ಲಿ ದೇವತೆಯ ತತ್ತ್ವಗಳನ್ನು ಆಕರ್ಷಿಸುತ್ತವೆ. ಹಾಗೆಯೇ ದೇವರ ಮೂರ್ತಿಯು ಮೂರ್ತಿಶಾಸ್ತ್ರಕ್ಕನುಸಾರ ಪರಿಪೂರ್ಣವಾಗಿದ್ದಷ್ಟು ಅಂದರೆ ದೇವತೆಯ ಮೂಲ ರೂಪದೊಂದಿಗೆ ಆ ಮೂರ್ತಿಯ ಆಕಾರವು ಎಷ್ಟರ ಮಟ್ಟಿಗೆ ಹೋಲುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಮೂರ್ತಿಯಲ್ಲಿ ದೇವತೆಯ ತತ್ತ್ವವು ಬರುತ್ತದೆ. ಇಂದಿನ ಅನೇಕ ಪ್ರಸಿದ್ಧ ದೇವಸ್ಥಾನಗಳು ಅನಾದಿ ಕಾಲದ್ದಾಗಿದ್ದು ಅವುಗಳ ರಚನೆ ಮತ್ತು ಮೂರ್ತಿಗಳು ಹಿಂದಿನ ಕಾಲದ್ದಾಗಿವೆ. ಅವುಗಳಲ್ಲಿ ಬದಲಾವಣೆಯಾಗದ ಕಾರಣ ಈ ಎರಡೂ ಘಟಕಗಳಿಂದ ದೇವಸ್ಥಾನದ ಚೈತನ್ಯ ಕಡಿಮೆಯಾಗಿಲ್ಲ.

೨. ದೇವಸ್ಥಾನಗಳಲ್ಲಿನ ಅರ್ಚಕರು : ದೇವಸ್ಥಾನದಲ್ಲಿನ ಅರ್ಚಕರು ಭಕ್ತರ ಭಾವವನ್ನು ದೇವತೆಯವರೆಗೆ ತಲುಪಿಸುವ ಮಾಧ್ಯಮವಾಗಿದ್ದಾರೆ. ಅವರು ಭಕ್ತರಿಗಾಗಿ ಅಲ್ಲಿನ ದೇವತೆಯ ಪೂಜೆಯನ್ನು ವಿಧಿವತ್ತಾಗಿ ಮತ್ತು ಭಾವಪೂರ್ಣವಾಗಿ ಮಾಡಿ ಭಕ್ತರಿಗೆ ಆ ವಿಧಿಯ ಲಾಭವನ್ನು ದೊರಕಿಸಿ ಕೊಡುತ್ತಾರೆ. ಇದರಲ್ಲಿ ಅವರಿಗೂ ಮನಃಪೂರ್ವಕ ವಿಧಿ ನಡೆಸಿದುದರ ಲಾಭ ಸಿಗುತ್ತದೆ. ಭಕ್ತರಿಗಾಗಿ ಸೇವೆಯನ್ನು ಮಾಡಿದುದರಿಂದ ಭಕ್ತರಿಗೆ ಸಿಗುವ ಚೈತನ್ಯದ ಪಾಲು ಅವರಿಗೂ ಸಿಗುತ್ತದೆ. ಅದೇ ರೀತಿ ಭಕ್ತರು ನೀಡಿದ ಅರ್ಪಣೆಯಿಂದ ಅವರ ಸಂಪಾದನೆಯೂ ಆಗಿ ಅರ್ಚಕರಿಗೆ ಲೌಕಿಕ ಹಾಗೂ ಪಾರಮಾರ್ಥಿಕ ಹೀಗೆ ಎರಡೂ ರೀತಿಯ ಲಾಭವಾಗುತ್ತದೆ. ಅರ್ಚಕರ ಈ ಕಾರ್ಯವು ಸಮಷ್ಟಿ ಸೇವೆಯೇ ಆಗಿದೆ. ಆದರೆ ಈ ದೃಷ್ಟಿ ಕೋನವನ್ನು ಇಟ್ಟುಕೊಂಡಿರುವ ಮತ್ತು ಸೇವಾಭಾವವಿರುವ ಅರ್ಚಕರು ಬಹಳ ವಿರಳವಾಗಿ ಕಂಡುಬರುತ್ತಾರೆ. ಇಂತಹ ಅರ್ಚಕರ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

ರಾಜಸಿಕ ವರ್ತನೆಯ ಅರ್ಚಕರು: ಅರ್ಚಕರು ದೇವಭಾಷೆಯಾದ ಸಂಸ್ಕೃತದಲ್ಲಿ ಹಿಂದೂಧರ್ಮದ ಚೈತನ್ಯಮಯ ಗ್ರಂಥಗಳ ಅಧ್ಯಯನ ಮತ್ತು ಪಾಠವನ್ನು ವೇದಪಾಠಶಾಲೆಯಲ್ಲಿ ಕಲಿತಿರುವುದರಿಂದ ಅವರು ವಾಸ್ತವದಲ್ಲಿ ಸಾಧಕರಾಗಬೇಕಾಗಿತ್ತು. ಅವರ ವೃತ್ತಿಯು ಸಾತ್ತ್ವಿಕ ಮತ್ತು ವಾಣಿಯು ಚೈತನ್ಯಮಯವಾಗಿರಬೇಕಿತ್ತು. ಆದರೆ ಈಶ್ವರಪ್ರಾಪ್ತಿಯ ಮೂಲ ಉದ್ದೇಶ ಹಾಗೂ ತ್ಯಾಗದ ವೃತ್ತಿಯನ್ನು ಅವರು ಮರೆತಿರುವುದರಿಂದ ಅಹಂ ಹೆಚ್ಚಾಗಿ ವೃತ್ತಿಯಲ್ಲಿ ಸಾತ್ತ್ವಿಕತೆ ಮತ್ತು ನಮ್ರತೆಯು ಕಾಣಿಸುತ್ತಿಲ್ಲ. ಇದರ ಕೆಲವು ಉದಾಹರಣೆಗಳು ಮುಂದಿನಂತಿವೆ.

ಕೆಲವು ದೇವಸ್ಥಾನಗಳಲ್ಲಿ ದೇವರ ಹೂಗಳನ್ನು ಭಕ್ತರ ಮೈಮೇಲೆ ಎಸೆಯುವುದು, ತುಂಬಾ ದಕ್ಷಿಣೆ ಕೊಟ್ಟವರಿಗೆ ದೇವರಿಗೆ ಅರ್ಪಿಸಿದ ಒಳ್ಳೆಯ ವಸ್ತುಗಳನ್ನು ನೀಡುವುದು, ಗುಟ್ಕಾ ತಿಂದು ಪೂಜೆ ಮಾಡುವುದು ಮತ್ತು ಅದಕ್ಕೆ ಕಾರಣ ಕೇಳಿದಾಗ ಭಕ್ತರು ಮೀನು ತಿಂದು ದೇವಸ್ಥಾನಕ್ಕೆ ಬರುವುದಾದರೆ ನಾನು ಗುಟ್ಕಾ ತಿಂದರೆ ತಪ್ಪೇನು ಎಂದು ಎದುರುತ್ತರ ನೀಡುವುದು, ಪೂಜೆಯ ಸಮಯದಲ್ಲಿ ಹಾಸ್ಯ ಮಾಡುವುದು, ಚಿಕ್ಕಪುಟ್ಟ ಕೆಲಸ ಮಾಡುವ ಕೆಳಸ್ತರದ ಅರ್ಚಕರೊಂದಿಗೆ ತುಚ್ಛವಾಗಿ ವರ್ತಿಸುವುದೂ ಕಂಡುಬರುತ್ತದೆ.

ಹಣಲಾಲಸೆಯ ಅರ್ಚಕರು : ಪೂಜಾಪಾಠದ ಉದ್ದೇಶವೇ  ಹಣ ಸಂಪಾದನೆ ಎಂದು ಇಂದಿನ ಅರ್ಚಕರು ತಪ್ಪಾಗಿ ಗ್ರಹಿಸಿರುವುದರಿಂದ ಅವರಲ್ಲಿ ಲೋಭಿವೃತ್ತಿಯು ಕಂಡುಬರುತ್ತಿದೆ. ನಾವು ದೇವರ ಸೇವೆಯನ್ನು ಮಾಡಿದರೆ ದೇವರು ನಮಗೆ ಏನೂ ಕಡಿಮೆಯಾಗಲು ಬಿಡಲಾರ ಎಂಬ ಶ್ರದ್ಧೆಯೇ ಅವರಲ್ಲಿಲ್ಲ. ಇದರಿಂದ ಅರ್ಚಕರ ಗಮನವು ಭಕ್ತರ ಸೌಲಭ್ಯದೆಡೆಗೆ ಹೋಗದೇ ಅವರ ಹಣದ ಕಡೆಗೇ ಹೋಗುತ್ತದೆ. ಹಾಗಾಗಿ ಅರ್ಚಕರು ದೇವರ ದರ್ಶನವನ್ನು ಪಡೆಯಲು, ಆರತಿ ನೀಡಿದರೆ, ತಿಲಕ ಹಚ್ಚಿದರೆ ಭಕ್ತರಿಂದ ಹಣ ಕೇಳುವ ಪರಿಸ್ಥಿತಿಯು ಬಂದೊದಗಿದೆ.

ಅವರು ಹೇಳಿದಂತೆ ಕೇಳದಿದ್ದರೆ ಭಕ್ತರ ಮೇಲೆ ಕೋಪಗೊಂಡು ದೇವಸ್ಥಾನದಲ್ಲಿ ದೇವರೆದುರೇ ಮನಬಂದಂತೆ ಬೈಯಲು ಪ್ರಾರಂಭಿಸುತ್ತಾರೆ. ತಾವು ಬ್ರಾಹ್ಮಣರೆಂದು ಹೇಳಿಕೊಂಡು ಬ್ರಾಹ್ಮಣರಿಗೆ ನೀಡುವ ದಾನವು ಸರ್ವಶ್ರೇಷ್ಠ ಎಂದೆಲ್ಲ ಹೇಳಿ ಭಕ್ತರನ್ನು ಲೂಟಿಗೈಯ್ಯುವುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ.

೩. ಭಕ್ತರ ಭಾವ : ‘ಭಾವವಿದ್ದಲ್ಲಿ ದೇವ’ ಎಂಬ ಹೇಳಿಕೆಯಿದೆ. ಭಕ್ತರು ದೇವರಲ್ಲಿ ಭಾವವಿಟ್ಟು ದೇವರ ದರ್ಶನ ಪಡೆದರೆ ಅವರಿಗೆ ದೇವರು ಅನುಭೂತಿಯನ್ನು ಖಂಡಿತವಾಗಿಯೂ ನೀಡುತ್ತಾನೆ. ದರ್ಶನಾರ್ಥಿಗಳು ನಿರಪೇಕ್ಷವಾಗಿ ದರ್ಶನವನ್ನು ಪಡೆಯಬೇಕು, ಏಕೆಂದರೆ ವ್ಯಾವಹಾರಿಕ ಲಾಭಕ್ಕಾಗಿ ದೇವರ ಭಕ್ತಿ ಮಾಡಿದರೆ ಸಿಗುವ ಲಾಭವೂ ವ್ಯವಹಾರಕ್ಕಷ್ಟೇ ಸೀಮಿತವಾಗಿರುತ್ತದೆ. ಚಿರಕಾಲ ಉಳಿಯುವಂತಹ ದೇವರ ಚೈತನ್ಯದ ಲಾಭ ಸಿಗಬೇಕು ಎಂದು ಅನಿಸುತ್ತಿದ್ದಲ್ಲಿ ನಿರಪೇಕ್ಷವಾಗಿ ದೇವರ ಭಕ್ತಿ ಮಾಡಬೇಕು. ಹಾಗೆ ಮಾಡಿದರೆ ದೇವರು ನಮ್ಮ ಲೌಕಿಕ ಮತ್ತು ಪಾರಮಾರ್ಥಿಕ ಹಿತಗಳೆರಡನ್ನೂ ಕಾಪಾಡುತ್ತಾನೆ. ಆದರೆ ಇಂದು ಜನರು ಭಕ್ತಿಯನ್ನು ಮಾಡಲು ದೇವಸ್ಥಾನಕ್ಕೆ ಹೋಗುವುದಿಲ್ಲ, ಒಂದು ಪ್ರವಾಸೀ ತಾಣಕ್ಕೆ ವಿಹಾರಕ್ಕೆ ಹೋದಂತೆ ಹೋಗಿ ಬರುತ್ತಾರೆ. ದೇವಸ್ಥಾನವನ್ನು ಈ ದೃಷ್ಟಿಕೋನದಿಂದ ನೋಡಿದರೆ ದೇವರ ಭೇಟಿಯಾಗಲು ಸಾಧ್ಯವಿದೆಯೇನು? ಇದರಿಂದ ದೇವಸ್ಥಾನಗಳ ಪಾವಿತ್ರ್ಯವು ಭಂಗವಾಗುತ್ತದೆ. ದೇವಸ್ಥಾನದ ಪರಿಸರವನ್ನು ಅಸ್ವಚ್ಛಗೊಳಿಸುವುದು ಮತ್ತು ಆವರಣದಲ್ಲಿ ಅಯೋಗ್ಯವಾಗಿ ವರ್ತಿಸುವ ಘಟನೆಗಳು ಎಲ್ಲೆಡೆ ಕಾಣಲು ಸಿಗುತ್ತದೆ. ಮಸೀದಿ, ಇಗರ್ಜಿ ಅಥವಾ ಗುರುದ್ವಾರಗಳಲ್ಲಿ ಈ ರೀತಿ ಯಾವತ್ತಾದರೂ ಕಾಣಿಸುತ್ತದೆಯೇನು? ಹಿಂದೂಗಳಿಗೆ ಧರ್ಮಶಿಕ್ಷಣವಿದ್ದರೆ ಹೀಗೆ ಆಗುತ್ತಿತ್ತೇನು? ಇಂತಹವುಗಳಿಂದಾಗಿ ದೇವಸ್ಥಾನಗಳ ಚೈತನ್ಯವು ಕಡಿಮೆಯಾಗುತ್ತದೆ.

೪. ದೇವಸ್ಥಾನದ ಪರಿಸರ: ದೇವಸ್ಥಾನ ಮತ್ತು ದೇವಸ್ಥಾನದ ಪರಿಸರವು ಸ್ವಚ್ಛವಾಗಿದ್ದರೆ ಅಲ್ಲಿ ದೇವತ್ವವು ಬಂದು ಚೈತನ್ಯವು ಸ್ಥಿರವಾಗಿ ಉಳಿಯುತ್ತದೆ. ಹಾಗಾಗಿ ಅದನ್ನು ಸ್ವಚ್ಛವಾಗಿರಿಸುವ ಜವಾಬ್ದಾರಿಯು ಅರ್ಚಕರು, ಭಕ್ತರು ಮತ್ತು ಸಮಾಜ ಈ ಮೂರು ಘಟಕಗಳ ಮೇಲಿರುತ್ತದೆ. ಅನೇಕ ದೇವಸ್ಥಾನಗಳಲ್ಲಿ ಪರಿಸರ, ಪೂಜಾಸಾಮಗ್ರಿಗಳು ಎಲ್ಲವೂ ಅಸ್ವಚ್ಛವಾಗಿರುತ್ತವೆ, ದೇವಸ್ಥಾನದೊಳಗೆ ಜೇಡರಬಲೆಗಳು ಜೊತೆಗೆ ಜಿರಲೆ, ಇಲಿಗಳ ಓಡಾಟವೂ ಇರುತ್ತದೆ. ದೇವಸ್ಥಾನಗಳ ಪರಿಸರದಲ್ಲಿರುವ ಅಂಗಡಿಗಳಿಂದಾದ ಅಸ್ವಚ್ಛತೆಯಿಂದಾಗಿ ಅಲ್ಲಿನ ಸಾತ್ತ್ವಿಕತೆ ಕಡಿಮೆಯಾಗುತ್ತದೆ. ಅಂಗಡಿಗಳ ಮಾಲೀಕರಿಗೆ ದೇವಸ್ಥಾನದ ಮಹತ್ವ ಗೊತ್ತಿಲ್ಲದ ಕಾರಣ ಅವರು ಕೇವಲ ವ್ಯಾಪಾರವೆಂದು ಪೂಜಾ ಸಾಮಾಗ್ರಿಗಳ ಮಾರಾಟ ಮಾಡಿ ಭಕ್ತರನ್ನು ಲೂಟಿಗೈಯ್ಯುತ್ತಾರೆ. ಜಾತ್ರೆಯ ಸಂದರ್ಭಗಳಲ್ಲಿ ದೇವಸ್ಥಾನದ ಹೊರಗೆ ಜನರನ್ನು ಸೇರಿಸುವ ಉದ್ದೇಶದಿಂದ ‘ಆರ್ಕೆಸ್ಟ್ರಾ’ಗಳನ್ನು ನಡೆಸಿ ಅಲ್ಲಿ ಭಜನೆಗಳನ್ನು ಆಂಗ್ಲ ಅಥವಾ ಪಾಶ್ಚಾತ್ಯ ವಾದ್ಯದೊಂದಿಗೆ ದೊಡ್ಡ ಸ್ವರದಲ್ಲಿ ನುಡಿಸಲಾಗುತ್ತದೆ. ಧ್ವನಿಪ್ರದೂಷಣೆಯೊಂದಿಗೆ ಸಾತ್ತ್ವಿಕತೆಯೂ ನಾಶವಾಗಿ ಹೋಗುತ್ತದೆ.

ದೇವಸ್ಥಾನಗಳ ಸಮಿತಿಗಳು : ದೇವಸ್ಥಾನಗಳ ಸಮಿತಿಗಳು ವಾಸ್ತವದಲ್ಲಿ ಮೇಲೆ ಉಲ್ಲೇಖಿಸಿದಂತಹ ಘಟನೆಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ಸುಧಾರಿಸಬೇಕು. ಆದರೆ ಹೆಸರಿಗಷ್ಟೇ ಇರುವ ಸಮಿತಿಗಳಿಗೂ ಸಾತ್ತ್ವಿಕ -ಅಸಾತ್ತ್ವಿಕಗಳ ಬಗ್ಗೆ ಯೋಗ್ಯ ದೃಷ್ಟಿಕೋನ ಇಲ್ಲದ ಕಾರಣ ಅವರು ದೇವ ಸ್ಥಾನಗಳ ಉತ್ಸವದ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನಿರಿಸದೇ ವಾದ್ಯವೃಂದ, ಮನೋರಂಜನಾತ್ಮಕ ನಾಟಕಗಳಂತಹ ರಜ-ತಮಪ್ರಧಾನ ಕಾರ್ಯಕ್ರಮಗಳನ್ನೇ ಆಯೋಜಿಸುತ್ತಾರೆ. ಇದರಿಂದಲೂ ದೇವಸ್ಥಾನಗಳ ಚೈತನ್ಯ ಕಡಿಮೆಯಾಗುತ್ತದೆ.

ಸರಕಾರ : ಜಾತ್ಯತೀತ ಧೋರಣೆಯ ಇಂದಿನ ಸರಕಾರ ಮತ್ತು ಪಕ್ಷಗಳಿಗೂ ಹಿಂದೂಗಳ ಬಗ್ಗೆ ನಿರ್ಲಕ್ಷ್ಯವೇ ಇರುವುದರಿಂದ ಅವರಿಂದ ಹಿಂದೂಧರ್ಮ ಮತ್ತು ಸಂಸ್ಕೃತಿಯ ಅರಿವಿನ ಅಪೇಕ್ಷೆಯನ್ನಿಡುವುದು ತಪ್ಪಾಗಿದೆ. ದೇವಸ್ಥಾನ ಸರಕಾರೀಕರಣದಂತಹ ಕಾನೂನುಗಳ ಮೂಲಕ ಹಿಂದೂ ದೇವಸ್ಥಾನಗಳ ಸಮಿತಿಗಳಲ್ಲಿ ಹಿಂದೂದ್ವೇಷೀ ಜನರನ್ನು ಸೇರಿಸಿ ಹಿಂದೂಗಳ ಹಣವನ್ನು ಇತರ ಧರ್ಮೀಯರಿಗಾಗಿ ಖರ್ಚು ಮಾಡಲಾಗುತ್ತದೆ. ಇವುಗಳನ್ನು ಎಲ್ಲರೂ ಸೇರಿ ವಿರೋಧಿಸಬೇಕಾಗಿದೆ.

ಈ ಎಲ್ಲ ಅಯೋಗ್ಯ ವಿಷಯಗಳನ್ನು ದೂರಗೊಳಿಸಬೇಕಾದರೆ ಅದಕ್ಕಿರುವ ಒಂದೇ ಒಂದು ಮಾರ್ಗವೆಂದರೆ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು. ತಮ್ಮನ್ನು ಜಾತ್ಯತೀತ ಎಂದು ಹೇಳುವ (ಹಿಂದೂದ್ವೇಷೀ) ಸರಕಾರವು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಏನೂ ಮಾಡುವುದಿಲ್ಲ ಎಂಬುದು ಇಂದಿನವರೆಗಿನ ಅನುಭವಗಳಿಂದ ಸ್ಪಷ್ಟವಾಗಿದೆ.

ಧರ್ಮಶಿಕ್ಷಣದ ಅಭಾವದಿಂದ ಬಹುಸಂಖ್ಯಾತ ಹಿಂದೂಗಳು ಧರ್ಮಾಚರಣೆಯಿಂದ ದೂರವಾಗಿದ್ದಾರೆ. ಅಲ್ಪಸ್ವಲ್ಪ ಶ್ರದ್ಧೆಯಿರುವ ಹಿಂದೂಗಳು ಮತ್ತು ಧರ್ಮಾಚರಣೆ ಮಾಡಲು ಇಚ್ಛಿಸುವವರ ಶ್ರದ್ಧೆಯು ಅರ್ಚಕರ ಅಯೋಗ್ಯ ವರ್ತನೆಯಿಂದಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ಹಾಗಾಗಿ ಅರ್ಚಕರೇ, ಸ್ವತಃ ಧರ್ಮಾಚರಣೆ ಮಾಡಿರಿ ಮತ್ತು ಸಮಾಜದಿಂದ ಮಾಡಿಸಿ ಕೊಳ್ಳಿರಿ. ಸಮಾಜಕ್ಕೆ ಧರ್ಮಶಿಕ್ಷಣ ನೀಡುವ ದೊಡ್ಡ ಜವಾಬ್ದಾರಿಯು ನಿಮ್ಮ ಮೇಲಿದೆ. ಆದುದರಿಂದ ಹಣಗಳಿಕೆಯ ಹಿಂದೆ ಬಿದ್ದು ಧರ್ಮಕರ್ತವ್ಯವನ್ನು ತ್ಯಜಿಸಬೇಡಿರಿ. ಶಾಸ್ತ್ರೋಕ್ತ ಪದ್ಧತಿಯಿಂದ ವಿಧಿಗಳನ್ನು ಆಚರಿಸಿ ಹಿಂದೂಗಳಿಗೆ ಶಾಸ್ತ್ರಗಳನ್ನು ತಿಳಿಸಿಕೊಟ್ಟು ಅವರ ಶ್ರದ್ಧೆಯನ್ನು ದೃಢಗೊಳಿಸುವಂತಹ ದೊಡ್ಡ ಧರ್ಮಕರ್ತವ್ಯವನ್ನು ಪಾಲಿಸಿರಿ. 
- ಶ್ರೀ.ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.

5 comments:

  1. NITYA DEVATA POOJA MANTRA SAHITAVAGI TILISUVIRA

    ReplyDelete
    Replies
    1. ನಮಸ್ಕಾರ, ಶ್ರೀ ಗಣೇಶ ಪೂಜಾವಿಧಿ ಎಂಬ ಈ ಕೊಂಡಿ ನೋಡಿ. ಅದರಲ್ಲಿರುವ ಮಂತ್ರಗಳನ್ನು ಸಾಮಾನ್ಯವಾಗಿ ಎಲ್ಲದಕ್ಕೂ ಹೇಳುತ್ತಾರೆ. http://dharmagranth.blogspot.in/2012/12/blog-post_4686.html

      Delete
  2. we have to make national wide Hindu community trust, in which each and every Hindu must be a member.

    Trustee should be elected by Hindu members and he must by recall-able if he is not utilizing donation money of the temples.

    This money will be utilized for free education of VEDAS, UPANISHADS, WEAPON TRAINING etc.,

    This method will stop illegal christian missionaries of taking over temple money illegally.

    Today one by one temples are taking over by illegal missionaries, devotees money has been shared among political parties and dist officers about 30% , remaining 70% is looting by missionaries.

    what a shame on Hindu so called leaders, not informing this to citizens. we volunteers, citizens must make one trust to look over national wide and state wide temples

    ReplyDelete
  3. ತುಂಬಾ ಧನ್ಯವಾದಗಳು, ಬಹಳ ಒಳ್ಳೆಯ ವಿಚಾರವನ್ನು ಮುಂದೆ ಇಟ್ಟಿದ್ದೀರಿ.

    ಇಂದಿನ ದಿನಗಳಲ್ಲಿ ಅರ್ಚಕರು ತಮ್ಮ ಗೌರವವನ್ನೇ ಕಳೆದುಕೊಳ್ಳುತ್ತಿದ್ದಾರೆ. ದೇವಸ್ಥಾನವನ್ನು ಹಿಡಿಯುವುದು, ಪೂಜೆ ಮಾಡುವುದು ಎಲ್ಲವೂ ವ್ಯವಹಾರವಾಗಿದೆ. ಪೂಜಾ ವಿಧಿ ವಿಧಾನಗಳನ್ನೇ ತಿಳಿದುಕೊಳ್ಳದ, ಸಂಸ್ಕೃತ ಜ್ಞಾನವೇ ಇಲ್ಲದ, ಬ್ರಾಹ್ಮಣ್ಯವನ್ನೇ ಪಾಲಿಸದವರು ಈ ವೃತ್ತಿಗೆ ಇಳಿಯುತ್ತಿರುವುದೂ ಕೂಡ ಇದಕ್ಕೆ ಕಾರಣವಾಗಿದೆ. ದೇವರ ಬಗ್ಗೆ ಶ್ರದ್ದೆಯ ಕೊರತೆ ಇವರಿಗೆ ಬಹಳವಾಗಿ ಕಂಡುಬರುತ್ತಿದೆ. ತಮ್ಮ ಶುದ್ಧತೆಗೆ ಗಮನಕೊಡದೆ ಕೊಳಕು ವಸ್ತ್ರಗಳನ್ನು ಧರಿಸಿ ಪೂಜಾದಿಗಳನ್ನು ಮಾಡುವುದೂ ಕೂಡ ಇದಕ್ಕೆ ಉದಾಹರಣೆಯಾಗಿದೆ.
    ಇನ್ನೂ ಸಮಿತಿಗಳ ಬಗ್ಗೆ ಹೇಳಬೇಕೆಂದರೆ, ದೇವಸ್ಥಾನ ನಿರ್ಮಿಸಿರುವುದೇ ಹಣ ಗಳಿಕೆಗಾಗಿ ಎಂದು ಭಾವಿಸಿದಂತಿರುತ್ತದೆ. ಸಮಯ ನಿಬಂಧನೆಗಳನ್ನು ಹಾಕುವ ಇವರು 5-10 ನಿಮಿಷ ತಡವಾದರೂ ಅರ್ಚಕರಿಗೆ ಶಿಕ್ಷಿಸಲು ಮುಂದಾಗುತ್ತಾರೆ. ನಿತ್ಯದ ಪೂಜೆ ಹೇಗೆ ನಡೆಯಬೇಕೆಂಬ ಬಗ್ಗೆ ಅರಿವಿಲ್ಲದ ಇವರು ಮಂಗಳಾರತಿ ಮಾಡಿ ಭಕ್ತಾದಿಗಳ ಮುಂದೆ ಹಿಡಿಯುವುದೇ ಪೂಜೆಯೆಂದು ತಿಳಿದಂತಿದೆ. ಷೋಡಶೋಪಚಾರ ಪೂಜೆಯನ್ನೂ ಮಾಡಲು ಅವಕಾಶ ನೀಡದೆ ಮಂಗಳಾರತಿ,ಅರ್ಚನೆಗೆ ಸೀಮಿತಗೊಳಿಸುತ್ತಿರುವುದನ್ನೂ ಹಲವೆಡೆ ಕಾಣಬಹುದಾಗಿದೆ.

    ಇನ್ನೊ, ದೇವಾಲಯಕ್ಕೆ ಬರುವ ಭಕ್ತಾದಿಗಳೂ ಸಹಾ, ತಾವು ಬಂದಿರುವುದು ದೇವರ ದರ್ಶನಕ್ಕೆ ಎಂಬುದನ್ನೇ ಮರೆತಂತೆ, ಬರುತ್ತಿದ್ದಂತೆ ದರ್ಪದಿಂದ 'ಮಂಗಳಾರತಿ ಮಾಡಿ' ಎನ್ನುವುದೂ, ತಾವು ಹಾಕಿದ ದುಡ್ಡಿಗೆ ಸರಿಯಾಗಿ ಪ್ರಸಾದ ಬಯಸುವುದೂ, ಸಣ್ಣ ವಿಚಾರಗಳಿಗೆ ಆರ್ಚಕರೊಂದಿಗೆ ಜಗಳಕ್ಕಿಳಿಯುವುದೂ, ಕೇಳುತ್ತಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ಸಮಿತಿಗೆ ದೂರು ನೀಡುವುದೂ ಸಾಮಾನ್ಯವಾದಂತಿದೆ. ಹೋಟೆಲ್‌ಗಳಲ್ಲಿ ಆರ್ಡರ್ ಮಾಡಿ ಗಂಟೆಗಟ್ಟಲೆ ಕಾಧು ತಿನ್ನಲು ಇರುವ ಸಮಯ ಇವರಿಗೆ ದೇವಸ್ಥಾನಕ್ಕೆ ಬಂದಾಗ ಇಲ್ಲದೆ, ಜಗಳ ಕಾಯುವವರೂ ಕಾಣಸಿಗುತ್ತಾರೆ. ಈ ಭಾವನೆಯಿಂದ ಬಂದ ಇವರಿಗೆ ಯಾವ ಫಲ ಸಿಗುವುದೋ ಗೊತ್ತಿಲ್ಲ್ಲ.

    ಪ್ರಾಯಶಃ, ಇವೆಲ್ಲದಕ್ಕೂ ಮೇಲೆ ಹೇಳಿದಂತೆ ಸರಿಯಾದ ಧಾರ್ಮಿಕ ಶಿಕ್ಷಣದ ಕೊರತೆ ಎದ್ದು ತೋರುತ್ತಿದೆ. ಎಲ್ಲೋ ಅಪರೂಪಕ್ಕೆ ಒಬ್ಬಿಬ್ಬರು ಸರಿಯಿದ್ದರೂ ಎಲ್ಲರ ನಡುವೆ ಇವರೇ ಅಸಾಮಾನ್ಯರೇನೋ ಎಂಬ ಭಾವನೆಯಿಂದ ಕಡೆಗಣಿಸುವುದು ಘೋರ ದುರಂತ. ಒಟ್ಟಿನಲ್ಲಿ ಹೇಳುವುದಾದರೆ ಹಿಂದೂಗಳಿಗೆ ಸ್ವಾಭಿಮಾನ, ರೀತಿ ನೀತಿ,ಧರ್ಮಶ್ರದ್ದೆ ಎಲ್ಲವೂ ಎದ್ದು ಕಾಣುತ್ತಿದೆ. ಇದಕ್ಕೆ ಪರಿಹಾರ ದೇವಸ್ಥಾನಗಳಲ್ಲಿ ಶಿಕ್ಷಣ ಕೊಡುವುದರಿಂದ ಮಾತ್ರ ಸಾಧ್ಯವಿಲ್ಲ ಬದಲಾಗಿ, ಮನೆಯಲ್ಲಿಯೇ ಮಕ್ಕಳಿಗೆ ಧಾರ್ಮಿಕತೆ, ಶಿಸ್ತು, ಶ್ರದ್ಧೆ ಇತ್ಯಾದಿಗಳನ್ನು ಕಲಿಸುತ್ತಾ ಬಂದರೆ ಮುಂದಾದರೂ ಸಮಾಜ ಪರಿವರ್ತನೆಯಾದೀತು.

    ReplyDelete
    Replies
    1. ನಮ್ಮ ಸಮಾಜದ ಸ್ಥಿತಿಯನ್ನು ಯಥಾವತ್ತಾಗಿ ಬರೆದಿದ್ದೀರಿ. ನಮ್ಮ ಹಿಂದೂಗಳಲ್ಲಿರುವ ಧಾರ್ಮಿಕ ಶ್ರದ್ಧೆಯ ಅಭಾವ, ಶಿಕ್ಷಣದ ಅಭಾವ ಮುಂತಾದ ಅನೇಕ ಕಾರಣಗಳೂ ಇವೆ.

      Delete

Note: only a member of this blog may post a comment.