ನಾಮಜಪವನ್ನು ಮುಂದಿನಂತೆ ಹಂತಹಂತವಾಗಿ ಹೆಚ್ಚಿಸಬೇಕು.
ಪ್ರತಿಯೊಂದು ಹಂತವನ್ನು ದಾಟಲು ಸಾಧಕರ ಆಧ್ಯಾತ್ಮಿಕ ಮಟ್ಟಕ್ಕನುಸಾರವಾಗಿ ಅವರಿಗೆ ೬ ತಿಂಗಳಿಂದ ಎರಡು ವರ್ಷಗಳ ಕಾಲ ತಗಲಬಹುದು.
೧. ಪ್ರತಿದಿನ ಕನಿಷ್ಟಪಕ್ಷ ೩ ಮಾಲೆ ಅಥವಾ ೧೦ ನಿಮಿಷ ನಾಮಜಪ ಮಾಡಬೇಕು.
೨. ಯಾವುದೇ ಕೆಲಸವನ್ನು ಮಾಡದೇ ಇರುವಾಗ ನಾಮಜಪವನ್ನು ಮಾಡಬೇಕು.
೩. ಸ್ನಾನ ಮಾಡುವುದು, ಅಡುಗೆ ಮಾಡುವುದು, ನಡೆದಾಡುವುದು, ಬಸ್ಸು ಅಥವಾ ರೈಲಿನಲ್ಲಿ ಪ್ರವಾಸ ಮಾಡುವುದು ಮುಂತಾದ ಶಾರೀರಿಕ ಕೆಲಸಗಳನ್ನು ಮಾಡುವಾಗ ನಾಮಜಪವನ್ನು ಮಾಡಬೇಕು.
೪. ವರ್ತಮಾನಪತ್ರಿಕೆಗಳನ್ನು ಓದುವಾಗ, ದೂರದರ್ಶನದಲ್ಲಿನ ಕಾರ್ಯಕ್ರಮಗಳನ್ನು ನೋಡುವಾಗ ಅಂದರೆ ನಮ್ಮ ದೈನಂದಿನ ಜೀವನದಲ್ಲಿ ಮಹತ್ವವಿಲ್ಲದಂತಹ ಮಾನಸಿಕ ಕೆಲಸಗಳನ್ನು ಮಾಡುವಾಗ ಜಪವನ್ನು ಮಾಡಬೇಕು.
೫. ಕಾರ್ಯಾಲಯದ ಕಾಗದ ಪತ್ರಗಳನ್ನು ಓದುವಾಗ ಅಥವಾ ಬರೆಯುವಾಗ ಅಂದರೆ ದೈನಂದಿನ ಜೀವನದಲ್ಲಿನ ಮಹತ್ವದ ಮಾನಸಿಕ ಕೆಲಸಗಳನ್ನು ಮಾಡುವಾಗ ಜಪವನ್ನು ಮಾಡಬೇಕು.
೬. ಇತರರೊಡನೆ ಮಾತನಾಡುವಾಗ ಜಪ ಮಾಡಬೇಕು.
೫ ಮತ್ತು ೬ ನೆಯ ಹಂತದಲ್ಲಿ ಶಬ್ದಗಳಲ್ಲಿ ನಾಮಜಪವನ್ನು ಮಾಡುವುದು ಅಪೇಕ್ಷಿತವಾಗಿರದೇ ಶ್ವಾಸ ಅಥವಾ ನಾಮ ಜಪದಿಂದಾಗುವ ಆನಂದದ ಅನುಭೂತಿಯ ಕಡೆಗೆ ಗಮನವನ್ನು ಕೊಡುವುದು ಅಪೇಕ್ಷಿತವಾಗಿದೆ. ಇದು ಸಾಧ್ಯವಾದರೆ ನಿದ್ದೆಯಲ್ಲಿಯೂ ನಾಮಜಪವು ನಡೆಯುತ್ತದೆ, ಅಂದರೆ ದಿನದ ೨೪ ಗಂಟೆಗಳ ಕಾಲ ನಾಮಜಪವು ನಡೆಯುತ್ತದೆ.
(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ 'ನಾಮಸಂಕೀರ್ತನಯೋಗ')
ಸಂಬಂಧಿತ ವಿಷಯಗಳು
No comments:
Post a Comment
Note: only a member of this blog may post a comment.