ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಏಕೆ ಮಾಡಬಾರದು?


ಶಾಸ್ತ್ರ - ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ರಜ-ತಮಾತ್ಮಕ ಲಹರಿಗಳು ಮತ್ತು ವಾಯುಗಳು ಹರಡಿ ಪವಿತ್ರ ವಾಯುಮಂಡಲವು ಅಪವಿತ್ರವಾಗುತ್ತದೆ: ‘ಜೀರ್ಣ’ ಎಂದರೆ ಅತ್ಯಂತ ಹಳೆಯ. ಕಾಲಕಳೆದಂತೆ ಇಂತಹ ದೇವಾಲಯಗಳ ಸ್ಥಳಗಳಲ್ಲಿ ಅಲ್ಲಿನ ದೇವತೆಗಳ ಶಕ್ತಿರೂಪೀ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿರುತ್ತದೆ. ಜೀರ್ಣ ದೇವಸ್ಥಾನಗಳ ಭಗ್ನ ಅವಶೇಷಗಳಿಂದ ವಾಯುಮಂಡಲದಲ್ಲಿ ಹೊರಬೀಳುವ ದೇವತೆಯ ಚೇತನವು ಕಡಿಮೆಯಾಗಿದ್ದರೂ ಆ ದೇವತೆಯ ಪೃಥ್ವಿ ಮತ್ತು ಆಪತತ್ತ್ವಗಳೊಂದಿಗೆ ಸಂಬಂಧಿಸಿದ ಶಕ್ತಿಸ್ವರೂಪ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿ ಸುಪ್ತ ರೂಪದಲ್ಲಿ ಇರುವುದರಿಂದ ಅದು ಒಂದು ಪವಿತ್ರ ವಾಯುಮಂಡಲವೇ ಆಗಿರುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ರಜ-ತಮಾತ್ಮಕ ಲಹರಿಗಳ ಮತ್ತು ವಾಯುಗಳ ಹರಡುವಿಕೆಗೆ ಕಾರಣವಾಗುವ ಮಲಮೂತ್ರ ವಿಸರ್ಜನೆಯಂತಹ ಕೃತಿಗಳನ್ನು ಮಾಡುವುದರಿಂದ ಆ ಸ್ಥಳದಲ್ಲಿರುವ ಪವಿತ್ರ ವಾಯುಮಂಡಲವು ಅಪವಿತ್ರವಾಗುತ್ತದೆ ಮತ್ತು ಇದು ಒಂದು ಪಾಪಭರಿತ ಕರ್ಮವಾಗುತ್ತದೆ.
ಟಿಪ್ಪಣಿ : ಜೀರ್ಣ ದೇವಸ್ಥಾನಗಳ ಬಳಿ ಅಷ್ಟೇ ಅಲ್ಲದೇ, ದೇವಸ್ಥಾನದ ಸುತ್ತಮುತ್ತಲಿನ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಪಾಪಕರ್ಮವೇ ಆಗಿದೆ.

(ಹೆಚ್ಚಿನ ಮಾಹಿತಿಗಾಗಿ ಓದಿರಿ ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ)

ಇತರ ವಿಷಯಗಳು
Dharma Granth

No comments:

Post a Comment

Note: only a member of this blog may post a comment.