ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ

ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು

ಅ. ದೇವರ ಪೂಜೆಯಾದ ನಂತರ ಶಂಖನಾದವನ್ನು ಮಾಡಿ ಭಾವಪೂರ್ಣವಾಗಿ ಆರತಿಯನ್ನು ಮಾಡಬೇಕು.
ಆ. ಆರತಿ ಸ್ವೀಕರಿಸಿದ ನಂತರ ಮೂಗಿನ ಪ್ರಾರಂಭದಲ್ಲಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು.
ಇ. ಮೂರು ಬಾರಿ ತೀರ್ಥ ಸೇವನೆ ಮಾಡಬೇಕು. ಬಲಗೈ ಅಂಗೈಯ ಮಧ್ಯಭಾಗದಲ್ಲಿ ತೀರ್ಥವನ್ನು ತೆಗೆದುಕೊಂಡು ಸೇವಿಸಿದ ನಂತರ, ಮಧ್ಯದ ಬೆರಳು ಮತ್ತು ಅನಾಮಿಕಾಗಳ ತುದಿಗಳನ್ನು ಅಂಗೈಗೆ ತಗಲಿಸಿ ಆ ಬೆರಳುಗಳನ್ನು ಎರಡೂ ಕಣ್ಣುಗಳಿಗೆ ತಾಗಿಸಬೇಕು, ಅನಂತರ ಆ ಬೆರಳುಗಳನ್ನು ಹಣೆಯ ಮೇಲಿನಿಂದ ನೇರವಾಗಿ ತಲೆಯ ಮೇಲೆ ಸವರಬೇಕು.
ಈ. ಕೊನೆಗೆ ಪ್ರಸಾದವನ್ನು ಸ್ವೀಕರಿಸಬೇಕು ಮತ್ತು ಕೈಗಳನ್ನು ತೊಳೆದುಕೊಳ್ಳಬೇಕು.

ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳ ಹಿಂದಿನ ಶಾಸ್ತ್ರ

ಅ. ದೇವತೆಗೆ ಆರತಿಯನ್ನು ಮಾಡಬೇಕು: ಆರತಿಯನ್ನು ಯೋಗ್ಯ ಉಚ್ಚಾರಸಹಿತ ಹೇಳುವುದರ ಮಹತ್ವ, ಆರತಿಯ ಸಮಯದಲ್ಲಿ ಚಪ್ಪಾಳೆ ಮತ್ತು ವಾದ್ಯಗಳನ್ನು ನಿಧಾನವಾಗಿ ಬಾರಿಸುವುದು, ದೇವರಿಗೆ ಬೆಳಗುವ ಯೋಗ್ಯ ಪದ್ಧತಿ, ಆರತಿಯ ನಂತರ ಪ್ರದಕ್ಷಿಣೆ ಹಾಕುವುದು ಮುಂತಾದ ವಿಷಯಗಳ ಮಾಹಿತಿಯನ್ನು ಸನಾತನವು ಪ್ರಕಾಶಿಸಿದ ‘ಆರತಿಯನ್ನು ಹೇಗೆ ಮಾಡಬೇಕು?’ ಎಂಬ ಕಿರುಗ್ರಂಥದಲ್ಲಿ ನೀಡಲಾಗಿದೆ.

ಆ. ತೀರ್ಥವನ್ನು ಸೇವಿಸುವುದು

ಆ೧. ನೀರು ತೀರ್ಥದಲ್ಲಿ ರೂಪಾಂತರವಾಗುವ ಪ್ರಕ್ರಿಯೆ
ಅ. ತೀರ್ಥವೆಂದರೆ ಪವಿತ್ರ. ಯಾವಾಗ ನಾವು ಕಲಶದ ಪೂಜೆಯನ್ನು ಮಾಡುತ್ತೇವೆಯೋ ಆಗ ಕಲಶದಲ್ಲಿನ ನೀರು ಪವಿತ್ರವಾಗುತ್ತದೆ. ಅದು ಗಂಗಾಜಲವಾಗುತ್ತದೆ. ಅನಂತರ ನಾವು ಆ ನೀರಿನಿಂದ ಭಗವಂತನಿಗೆ ಮಂತ್ರಸ್ನಾನವನ್ನು ಮಾಡಿಸುತ್ತೇವೆ. ಇಷ್ಟೇ ಅಲ್ಲದೇ ಪಂಚಾಮೃತದ ನೈವೇದ್ಯವನ್ನು ತೋರಿಸಿದ ನಂತರ ಅದರಲ್ಲಿ ಆ ಸ್ನಾನದ ಪವಿತ್ರ ನೀರನ್ನು ಸೇರಿಸಿ ಎಲ್ಲರಿಗೂ ತೀರ್ಥವೆಂದು ನೀಡುತ್ತೇವೆ. ಭಾವಪೂರ್ಣ ಮಂತ್ರದಿಂದಾಗಿ ನೀರಿನ ಶುದ್ಧೀಕರಣವಾಗುತ್ತದೆ. ಅದು ಪವಿತ್ರವಾಗುತ್ತದೆ. ಆದುದರಿಂದ ಅದು ತೀರ್ಥವಾಗುತ್ತದೆ. - ಪ.ಪೂ.ಪರಶರಾಮ ಮಾಧವ ಪಾಂಡೆ ಮಹಾರಾಜರು, ಸನಾತನ ಆಶ್ರಮ, ಪನವೇಲ.

ಆ. ದೇವತೆಗೆ ಅರ್ಪಿಸಿದ ಜಲ (ನೀರು) ತೀರ್ಥವಾಗುತ್ತದೆ.

೧. ಕಾಲದ ಪರಿಣಾಮ: ದೇವತೆಯ ಎದುರು ಕೆಲವು ಗಂಟೆಗಳ ಕಾಲ ಜಲವನ್ನಿಟ್ಟರೆ ಅದು ದೇವತೆಗಳ ಸೂಕ್ಷ್ಮ ಅಸ್ತಿತ್ವದಿಂದ ತಾನಾಗಿಯೇ ತೀರ್ಥದಲ್ಲಿ ರೂಪಾಂತರವಾಗುತ್ತದೆ.
೨. ಆರತಿಯ ಪರಿಣಾಮ: ಪೂಜೆಯಲ್ಲಿ ದೇವತೆಗೆ ನೈವೇದ್ಯ ಮತ್ತು ಜಲವನ್ನು ಅರ್ಪಿಸಿ ಆರತಿಯನ್ನು ಮಾಡುತ್ತಾರೆ. ಆರತಿಯ ನಂತರ ನೈವೇದ್ಯ ಮತ್ತು ಜಲದಲ್ಲಿನ ಸಾತ್ತ್ವಿಕತೆಯು ಶೇ.೧೦ರಷ್ಟು ಹೆಚ್ಚಾಗುತ್ತದೆ.
ಪಾತ್ರೆಯನ್ನು ತಯಾರಿಸಲು ಉಪಯೋಗಿಸಿದ ಲೋಹದ ಮೇಲೆ ತೀರ್ಥದ ಸಾತ್ತ್ವಿಕತೆಯು ಅವಲಂಬಿಸಿರುತ್ತದೆ. ತಾಮ್ರ ಮತ್ತು ಚಿನ್ನದ ಪಾತ್ರೆಗಳಲ್ಲಿ ತೀರ್ಥವನ್ನಿಟ್ಟರೆ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.

ಆ೨. ತೀರ್ಥವನ್ನು ಸೇವಿಸುವಾಗ ಮಾಡಬೇಕಾದ ಮುದ್ರೆ

ಅ. ಮುದ್ರೆ: ‘ಮುದ್ರೆಯೆಂದರೆ ಆನಂದವನ್ನು ನೀಡುವ ಮತ್ತು ಕೆಟ್ಟ ಶಕ್ತಿಗಳನ್ನು ದೂರ ಓಡಿಸುವ ಶರೀರದ ಅವಯವಗಳ ಒಂದು ಸ್ಥಿತಿ.
ಆ. ಗೋಕರ್ಣ ಮುದ್ರೆ: ಕೈಯನ್ನು ಹಸುವಿನ ಕಿವಿಯ ಆಕಾರದಂತೆ ಮಾಡುವುದು (ಚಿತ್ರ ನೋಡಿ)
ಇ. ಕೈಗಳ ಅಂಗೈಗಳಲ್ಲಿರುವ ತೀರ್ಥಸ್ಥಾನಗಳು: ಶಾಸ್ತ್ರಕ್ಕನುಸಾರ ಮಾನವನ ಕೈಗಳ ಅಂಗೈಗಳಲ್ಲಿ ಮೂರು ತೀರ್ಥಸ್ಥಾನಗಳಿರುತ್ತವೆ. ಅಂಗೈಯ ಮಧ್ಯ ಭಾಗದಲ್ಲಿ ಬ್ರಹ್ಮತೀರ್ಥ, ಕಿರುಬೆರಳಿನ ಕೆಳಗೆ ಮತ್ತು ಬ್ರಹ್ಮತೀರ್ಥದ ಎಡಬದಿಗೆ ಋಷಿತೀರ್ಥ ಮತ್ತು ಬ್ರಹ್ಮತೀರ್ಥದ ಬಲಬದಿಗೆ ಮತ್ತು ತರ್ಜನಿ ಮತ್ತು ಹೆಬ್ಬೆರಳುಗಳ ನಡುವೆ ಪಿತೃತೀರ್ಥವಿರುತ್ತದೆ. ಅಂಗೈಯ ಮಧ್ಯಭಾಗದಲ್ಲಿ ಬ್ರಹ್ಮತೀರ್ಥ ವಿರುವುದರಿಂದ ತೀರ್ಥವನ್ನು ಮಧ್ಯಭಾಗದಲ್ಲ್ಲಿಟ್ಟು ಸೇವಿಸಬೇಕು. (ಕಿರುಬೆರಳಿನ ಕೆಳಗೆ ಮತ್ತು ಬ್ರಹ್ಮತೀರ್ಥದ ಎಡಬದಿಗೆ ಋಷಿತೀರ್ಥವಿರುವುದರಿಂದ ಋಷಿತರ್ಪಣವನ್ನು ಇಲ್ಲಿಂದ ಮಾಡಬೇಕು. ಬ್ರಹ್ಮತೀರ್ಥದ ಬಲಬದಿಗೆ ಮತ್ತು ತರ್ಜನಿ ಮತ್ತು ಹೆಬ್ಬೆರಳಿನ ನಡುವೆ ಪಿತೃತೀರ್ಥವಿರುವುದರಿಂದ ಶ್ರಾದ್ಧದ ಸಮಯದಲ್ಲಿ ಪಿತೃತರ್ಪಣವನ್ನು ಇಲ್ಲಿಂದ ಮಾಡಬೇಕು.)’

ಆ೩. ತೀರ್ಥದ ಸಂದರ್ಭದಲ್ಲಿನ ಒಂದು ಅನುಭೂತಿ - ತೀರ್ಥವನ್ನು ಸ್ವೀಕರಿಸಿದ ಬಳಿಕ ಆಲಸ್ಯ ಮತ್ತು ನಿದ್ರೆಯು ಕಡಿಮೆಯಾಗಿ ಹಗುರವೆನಿಸುವುದು: ೧೩.೫.೨೦೦೨ರಂದು ಅಧ್ಯಾತ್ಮಪ್ರಚಾರಕ್ಕಾಗಿ ಅಪಶಿಂಗೆಯಿಂದ ಸಮೀಪದಲ್ಲಿರುವ ಗಣೇಶವಾಡಿಗೆ ಹೋಗಿದ್ದೆ. ಅಲ್ಲಿ ಓರ್ವ ವ್ಯಕ್ತಿಯೊಂದಿಗೆ ಸಾಧನೆಯ ಬಗ್ಗೆ ಚರ್ಚೆಯು ನಡೆಯಿತು. ಆ ಚರ್ಚೆಯ ನಂತರ ಆ ವ್ಯಕ್ತಿಯು ನನ್ನನ್ನು ಚಹಾ ಕುಡಿಯಲು ಒತ್ತಾಯ ಮಾಡಿ ತಮ್ಮ ಮನೆಗೆ ಕರೆದುಕೊಂಡು ಹೋದನು. ಅಲ್ಲಿಯೂ ಆ ವ್ಯಕ್ತಿಯೊಂದಿಗೆ ಸಾಧನೆಯ ಬಗ್ಗೆ ಚರ್ಚೆಯು ನಡೆಯಿತು. ಚಹಾ ಕುಡಿದ ನಂತರ ನಾನು ಮನೆಗೆ ಬಂದೆ. ಮನೆಗೆ ಬಂದ ನಂತರ ನನಗೆ ಬಹಳ ಆಲಸ್ಯವಾಗತೊಡಗಿತು ಮತ್ತು ನಿದ್ರೆ ಬರತೊಡಗಿತು. ನಾನು ಮಾಡುತ್ತಿದ್ದ ನಾಮಜಪವನ್ನು ನಿಲ್ಲಿಸಬೇಕೆಂದು ಅನಿಸುತ್ತಿತ್ತು. ಆಗ ನಾನು ನನ್ನ ಬಳಿಯಿದ್ದ ವಿಭೂತಿಯಿಂದ ತೀರ್ಥವನ್ನು ತಯಾರಿಸಿ ಸ್ವೀಕರಿಸಿದೆ. ತೀರ್ಥವನ್ನು ಸ್ವೀಕರಿಸಿದ ನಂತರ ನನಗೆ ಹಗುರವೆನಿಸಿ ಒಳ್ಳೆಯದೆನಿಸತೊಡಗಿತು. - ಶ್ರೀ.ಬಾಲಕೃಷ್ಣ ನಾರಾಯಣ ನಿಕಮ, ಆಪಶಿಂಗೆ (ಮಿಲ್ಟ್ರಿ), ಸಾತಾರಾ ಜಿಲ್ಲೆ.
(ಕೆಟ್ಟ ಶಕ್ತಿಯ ತೊಂದರೆಯಿರುವ ವ್ಯಕ್ತಿಯ ಸಂಪರ್ಕವು ಹೆಚ್ಚು ಸಮಯ ಬಂದಿದ್ದರಿಂದ ಮತ್ತು ಅವರ ಮನೆಯಲ್ಲಿ ಚಹಾ ಕುಡಿದಿದ್ದರಿಂದ ಅವನಿಂದ ಪ್ರಕ್ಷೇಪಿತವಾಗುವ ಕಪ್ಪು ಶಕ್ತಿಯ ಪರಿಣಾಮದಿಂದ ಸಾಧಕನಿಗೆ ನಿದ್ರೆ ಬಂದಿತು ಮತ್ತು ನಾಮಜಪವನ್ನು ನಿಲ್ಲಿಸಬೇಕೆಂದು ಅನಿಸಿತು. ತೀರ್ಥದಲ್ಲಿನ ಸಾತ್ತ್ವಿಕತೆಯಿಂದ ಕಪ್ಪು ಶಕ್ತಿಯ ಪರಿಣಾಮವು ಕಡಿಮೆಯಾಗಿ ಸಾಧಕನಿಗೆ ಒಳ್ಳೆಯದೆನಿಸಿತು. - ಸಂಕಲನಕಾರರು)

(ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)

ಸಂಬಂಧಿತ ಲೇಖನಗಳು
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?

5 comments:

  1. i need how to daily pooja at home and i need all deepa, arathi, doopa, and pradakshina manthra

    ReplyDelete
    Replies
    1. ನಮಸ್ಕಾರ, ಓದಿ, ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
      http://dharmagranth.blogspot.in/2012/12/blog-post_2859.html

      ಈ ಕೆಳಗಿನ 'ಶ್ರೀ ಗಣೇಶ ಪೂಜಾವಿಧಿ'ಯ ಕೊಂಡಿಯಲ್ಲಿ ದೀಪ, ಧೂಪ ಇತ್ಯಾದಿ ಮಂತ್ರಗಳಿವೆ. ಗಣೇಶಪೂಜಾವಿಧಿಯಾಗಿದ್ದರೂ, ಈ ಮಂತ್ರಗಳೆಲ್ಲ ಸಮಾನವಾಗಿರುತ್ತವೆ.
      http://dharmagranth.blogspot.in/2012/12/blog-post_4686.html

      Delete
    2. sir.

      pl do send em the details
      bsshivashankar@gmail.com

      Delete
  2. PLEASE TELL ME THE RIGHT WAY TO DO POOJA FOR GOD KRISHNA ...(way of doing pooja,manthras OR SEND ME SOME LINK ON THAT MY ID IS banuprakaash@yahoo.in and my mbl no. is 07696562640

    ReplyDelete
    Replies
    1. ನಮಸ್ಕಾರ, ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು? ಎಂಬ ಈ ಪೋಸ್ಟ್ ಓದಿ. ಎಲ್ಲ ದೇವರಿಗೂ ಷೊಡಶೋಪಚಾರ ಪೂಜೆಯ ಕೃತಿ ಒಂದೇ ಆಗಿರುತ್ತದೆ. http://dharmagranth.blogspot.in/2012/12/blog-post_2859.html

      Delete

Note: only a member of this blog may post a comment.