ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ

ದಹನಸಂಸ್ಕಾರವನ್ನು ಮಾಡಿದ ದಿನ ಅಥವಾ ಮೃತ್ಯುವಿನ ಮೂರನೇ, ಏಳನೇ ಅಥವಾ ಒಂಭತ್ತನೇ ದಿನ ಅಸ್ಥಿಯನ್ನು ಒಟ್ಟು ಮಾಡಿ ಹತ್ತು ದಿನಗಳೊಳಗೆ ಅವುಗಳನ್ನು ವಿಸರ್ಜಿಸಬೇಕು.
 
ಅಂತ್ಯಸಂಸ್ಕಾರವಾದ ನಂತರ ಮೂರನೇ ದಿನ ಅಸ್ಥಿಯನ್ನು ಒಟ್ಟು ಮಾಡುವುದು ಹೆಚ್ಚು ಉತ್ತಮವಾಗಿದೆ. ಹತ್ತು ದಿನಗಳ ನಂತರ ಅಸ್ಥಿವಿಸರ್ಜನೆಯನ್ನು ಮಾಡುವುದಿದ್ದರೆ ತೀರ್ಥಶ್ರಾದ್ಧವನ್ನು ಮಾಡಿ ವಿಸರ್ಜನೆ ಮಾಡಬೇಕು.
 
ಅಂತ್ಯಸಂಸ್ಕಾರವಾದ ಬಳಿಕ ಮೂರನೆಯ ದಿನವೇ ಮೂಳೆಗಳನ್ನು (ಅಸ್ಥಿಯನ್ನು) ಏಕೆ ಒಟ್ಟು ಮಾಡುತ್ತಾರೆ?: ಮಂತ್ರೋಚ್ಚಾರದ ಸಹಾಯದಿಂದ ಮೃತದೇಹಕ್ಕೆ ನೀಡಿದ ಅಗ್ನಿಯ ಉಷ್ಣತೆಯು (ಶಾಖವು) ಅಂದರೆ, ಆಕಾಶ ಮತ್ತು ತೇಜ ಈ ತತ್ತ್ವಗಳ ಸಂಯುಕ್ತ ಲಹರಿಗಳ ಮೂಳೆಗಳಲ್ಲಿ ನಡೆಯುವ ಸಂಕ್ರಮಣವು ೩ ದಿನಗಳ ನಂತರ ಕಡಿಮೆಯಾಗತೊಡಗುತ್ತದೆ. ಇದರಿಂದಾಗಿ ಮೂಳೆಗಳ ಸುತ್ತಲೂ ನಿರ್ಮಾಣವಾಗಿರುವ ಸಂರಕ್ಷಣಾಕವಚದ ಕ್ಷಮತೆಯೂ ಕಡಿಮೆಯಾಗುತ್ತದೆ. ಹೀಗಿರುವಾಗ ಕೆಟ್ಟ ಶಕ್ತಿಗಳು ಮೂಳೆಗಳ ಮೇಲೆ ವಿಧಿ ಮಾಡಿ ಆ ಜೀವದ ಲಿಂಗದೇಹಕ್ಕೆ ತೊಂದರೆಗಳನ್ನು ಕೊಡಬಲ್ಲವು. ಹಾಗೆಯೇ ಕೆಟ್ಟ ಶಕ್ತಿಗಳು ಲಿಂಗದೇಹದ ಮಾಧ್ಯಮದಿಂದ ಆ ಜೀವದ ಕುಟುಂಬದವರಿಗೂ ತೊಂದರೆಗಳನ್ನು ಕೊಡಬಲ್ಲವು. ಆದುದರಿಂದ ಮೂರನೆಯ ದಿನವೇ ಸ್ಮಶಾನದಂತಹ ರಜ-ತಮಾತ್ಮಕ ವಾತಾವರಣದಿಂದ ಮೂಳೆಗಳನ್ನು ಒಟ್ಟು ಮಾಡುತ್ತಾರೆ. - ಶ್ರೀಗುರುತತ್ತ್ವ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೫.೬.೨೦೦೫)
 
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಮೃತ್ಯು ಮತ್ತು ಮೃತ್ಯುವಿನ ನಂತರದ ಕ್ರಿಯಾಕರ್ಮಗಳು’)

2 comments:

  1. Namaskara
    Asthi visarjane theertha kshetradalli
    i.e.,Prayaga(Alahabad) eshtu dinadolage madabeku?

    ReplyDelete
    Replies
    1. ಅಸ್ಥಿಸಂಚಯ ಮಾಡಿದ ಕೂಡಲೇ ಅಸ್ಥಿವಿಸರ್ಜನೆ ಮಾಡುವುದು ಒಳ್ಳೆಯದು.

      Delete

Note: only a member of this blog may post a comment.