ಗಣೇಶ ಜಯಂತಿ


ಇತಿಹಾಸ: ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನವು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಗಣಪತಿ ಮತ್ತು ಚತುರ್ಥಿಯ ಸಂಬಂಧವನ್ನು ಜೋಡಿಸಲಾಯಿತು.

ಗಣೇಶ ಜಯಂತಿ: ಮಾಘ ಶುಕ್ಲ ಚತುರ್ಥಿಯನ್ನು ‘ಗಣೇಶ ಜಯಂತಿ’ ಎಂದು ಆಚರಿಸುತ್ತಾರೆ. ಈ ತಿಥಿಯ ವೈಶಿಷ್ಟ್ಯವೆಂದರೆ, ಈ ತಿಥಿಗೆ ಶ್ರೀ ಗಣೇಶನ ತತ್ತ್ವವು ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.

ಮಹತ್ವ
ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.

ಶ್ರೀ ಗಣೇಶ ಚತುರ್ಥಿ

ಮಹತ್ವ: ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುರ್ಣಿಮೆಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ಈ ಕಾಲದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ತೀವ್ರತೆಯ ಕಾಲದಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ. (ಈ ಲಹರಿಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಸನಾತನದ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’ ಈ ಗ್ರಂಥದಲ್ಲಿ ಕೊಡಲಾಗಿದೆ.)

ಶ್ರೀ ಗಣೇಶ ಚತುರ್ಥಿಯ ದಿನ ಹಾಗೆಯೇ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ದಿನನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತ ವಾಗಿರುತ್ತದೆ. ಈ ಸಮಯದಲ್ಲಿ ಮಾಡಿದ ಗಣೇಶನ ಉಪಾಸನೆಯಿಂದ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ.

ಗಣೇಶನಿಗೆ ಸಂಬಂಧಿಸಿದ ಹಬ್ಬಗಳಂದು ಬಿಡಿಸಬೇಕಾದ ರಂಗೋಲಿ


(ಹೆಚ್ಚಿನ ಮಾಹಿತಿಗೆ ಓದಿ : ಸನಾತನ ಸಂಸ್ಥೆಯ ಗ್ರಂಥ 'ಶ್ರೀ ಗಣಪತಿ')

ಶ್ರೀ ಗಣೇಶನ ಕುರಿತು ಲಭ್ಯವಿರುವ ಸನಾತನ ಸಂಸ್ಥೆಯ ಇತರ ಗ್ರಂಥಗಳು
೧. ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಷ್ಟನಾಶನಸ್ತೋತ್ರ (ಅರ್ಥಸಹಿತ)
೨. ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು!
೩. ಶ್ರೀ ಗಣಪತಿ (ಕಿರುಗ್ರಂಥ)
೪. ಶ್ರೀ ಗಣೇಶ ಪೂಜಾವಿಧಿ (ಕೆಲವು ಮಂತ್ರಗಳ ಅರ್ಥಸಹಿತ)

ಸಂಬಂಧಿತ ವಿಷಯಗಳು
Dharma Granth

No comments:

Post a Comment

Note: only a member of this blog may post a comment.