ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’

ದೇವತೆಗಳ ವಿಡಂಬನೆಯನ್ನು (ಅವಮಾನ) ಏಕೆ ತಡೆಗಟ್ಟಬೇಕು?

ವ್ಯಾಪಕವಾಗಿ ಹೇಳುವುದಾದರೆ, ವಿಡಂಬನೆಯೆಂದರೆ ನಿಜವಾದ ರೂಪ/ಆಕಾರದ ಬದಲು ವಿಕೃತ ಅಥವಾ ಅಶಾಸ್ತ್ರೀಯ ರೂಪ/ಆಕಾರವನ್ನು ತೋರಿಸುವುದು. ಸಾತ್ತ್ವಿಕ ಸ್ಪಂದನಗಳನ್ನು ಪ್ರಕ್ಷೇಪಿಸುವ ಯಾವುದೇ ಕೃತಿ ಅಥವಾ ವಸ್ತುಗಳಿಗೆ ಅಡಚಣೆಯನ್ನುಂಟು ಮಾಡುವುದನ್ನೂ ವಿಡಂಬನೆಯೆಂದು ಪರಿಗಣಿಸಲಾಗುತ್ತದೆ.

ದೇವತೆಗಳ ಉಪಾಸನೆಯ ಮೂಲದಲ್ಲಿ ಶ್ರದ್ಧೆಯಿರುತ್ತದೆ. ದೇವತೆಗಳನ್ನು ಅವಮಾನಿಸುವುದರಿಂದ ಶ್ರದ್ಧೆಯ ಮೇಲೆ ಪರಿಣಾಮವಾಗುತ್ತದೆ, ಆದುದರಿಂದ ಇದು ಧರ್ಮಹಾನಿಯಾಗುತ್ತದೆ. ಧರ್ಮಹಾನಿಯನ್ನು ತಡೆಗಟ್ಟುವುದು ಕಾಲಾನುಸಾರ ಆವಶ್ಯಕ ಧರ್ಮಪಾಲನೆಯೇ ಆಗಿದೆ, ಅದು ದೇವತೆಗಳ ಸಮಷ್ಟಿ ಸ್ತರದಲ್ಲಿನ ಉಪಾಸನೆಯೇ ಆಗಿದೆ. ನಾವು ಮಾಡುತ್ತಿರುವ ದೇವತೆಯ ಉಪಾಸನೆಗೆ ಪೂರ್ಣತ್ವವು ಪ್ರಾಪ್ತವಾಗಲು ವ್ಯಷ್ಟಿ ಹಾಗೂ ಸಮಷ್ಟಿ ಇವೆರಡೂ ಸಾಧನೆಗಳನ್ನು ಮಾಡುವುದು ಆವಶ್ಯಕವಾಗಿದೆ. ಕಾಲಾನುಸಾರ ವ್ಯಷ್ಟಿ ಸಾಧನೆಗೆ ಶೇ. ೩೦ ರಷ್ಟು ಮಹತ್ವವಿದೆ ಮತ್ತು ಸಮಷ್ಟಿ ಸಾಧನೆಗೆ ಶೇ.೭೦ರಷ್ಟು ಮಹತ್ವವಿದೆ.

ಸಮಷ್ಟಿ ಸಾಧನೆ ಎಂದರೇನು?

ಆಧ್ಯಾತ್ಮಿಕ ಉನ್ನತಿಗಾಗಿ ಸ್ವತಃ ಉಪಾಸನೆ ಮಾಡುವುದು ಮತ್ತು ಧರ್ಮಾಚರಣೆಯನ್ನು ಮಾಡುವುದಕ್ಕೆ ‘ವ್ಯಷ್ಟಿ ಸಾಧನೆ’ ಅಥವಾ ವೈಯಕ್ತಿಕ ಸಾಧನೆ ಎನ್ನುತ್ತಾರೆ. ಸದ್ಯದ ಕಲಿಯುಗದಲ್ಲಿ ಸಮಾಜದಲ್ಲಿ ರಜ-ತಮ ಗುಣಗಳ ಪ್ರಾಬಲ್ಯವು ಹೆಚ್ಚಿದೆ. ಆದುದರಿಂದ ಸಮಾಜದ ಸಾತ್ತ್ವಿಕತೆಯನ್ನು ಹೆಚ್ಚಿಸಲು ಸ್ವತಃ ಸಾಧನೆಯನ್ನು ಮತ್ತು ಧರ್ಮಾಚರಣೆಯನ್ನು ಮಾಡುವುದರೊಂದಿಗೆ ಸಮಾಜವನ್ನೂ ಸಾಧನೆಗೆ ಮತ್ತು ಧರ್ಮಾಚರಣೆಗೆ ಪ್ರವೃತ್ತಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕೆ ‘ಸಮಷ್ಟಿ ಸಾಧನೆ’ ಎನ್ನುತ್ತಾರೆ.

ಪ್ರಸ್ತುತ ಹಿಂದೂಗಳಿಗೆ ಧರ್ಮಾಚರಣೆಯನ್ನು ಕಲಿಸುವುದರೊಂದಿಗೆ ಧರ್ಮದ ರಕ್ಷಣೆ ಮಾಡುವುದನ್ನೂ ಕಲಿಸಬೇಕಾಗಿದೆ. ಏಕೆಂದರೆ ಹಿಂದೂಗಳಿಗೇ ತಮ್ಮ ಧರ್ಮದ ಶಿಕ್ಷಣವಿಲ್ಲ, ತಮ್ಮ ಧರ್ಮದ ಬಗ್ಗೆ ಸರಿಯಾದ ಜ್ಞಾನವಿಲ್ಲ ಮತ್ತು ಇದರಿಂದ ಧರ್ಮದ ಮೇಲೆ ಅಭಿಮಾನವಿಲ್ಲ. ಹಾಗಾಗಿ ಹಿಂದೂಗಳೂ ಧರ್ಮದ ಆಧಾರದಲ್ಲಿ ಸಂಘಟಿತರಾಗುವುದಿಲ್ಲ. ಹಿಂದೂಗಳು ಮತ್ತು ಇತರ ಪಂಥದವರು ಹಿಂದೂ ದೇವತೆಗಳನ್ನು, ಶ್ರದ್ಧಾಸ್ಥಾನಗಳನ್ನು ಸಾರಾಸಗಟಾಗಿ ಅವಮಾನ ಮಾಡುತ್ತಾರೆ. ಈ ವಿಡಂಬನೆ ತಡೆಗಟ್ಟುವುದೂ 'ಸಮಷ್ಟಿ ಸಾಧನೆ'ಯೇ ಆಗಿದೆ.
(ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಸವಿಸ್ತಾರವಾದ ವಿವೇಚನೆಯನ್ನು ‘ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ’ ಎಂಬ ಗ್ರಂಥದಲ್ಲಿ ನೀಡಲಾಗಿದೆ.)

ವಿವಿಧ ರೀತಿಯಲ್ಲಾಗುವ ದೇವತೆಗಳ ವಿಡಂಬನೆ !

ಪ್ರಸ್ತುತ ವಿವಿಧ ರೀತಿಯಲ್ಲಿ ದೇವತೆಗಳ ವಿಡಂಬನೆಗಳಾಗುತ್ತಿವೆ, ಉದಾ.ಹಿಂದೂದ್ವೇಷಿ ಚಿತ್ರಕಾರ ಮ.ಫಿ.ಹುಸೇನನು ಹಿಂದೂಗಳ ದೇವತೆಗಳ ನಗ್ನಚಿತ್ರಗಳನ್ನು ಬಿಡಿಸಿ ಅವುಗಳನ್ನು ಬಹಿರಂಗವಾಗಿ ಮಾರಾಟ ಮಾಡಲು ಇಟ್ಟಿದ್ದನು; ವ್ಯಾಖ್ಯಾನಗಳು, ಪುಸ್ತಕಗಳು ಇತ್ಯಾದಿಗಳ ಮೂಲಕ ದೇವತೆಗಳ ಮೇಲೆ ಟೀಕೆಯನ್ನು ಮಾಡಲಾಗುತ್ತದೆ; ದೇವತೆಗಳ ವೇಷವನ್ನು ಧರಿಸಿ ಭಿಕ್ಷೆ ಬೇಡಲಾಗುತ್ತದೆ, ವ್ಯಾಪಾರದ ದೃಷ್ಟಿಯಿಂದ ಜಾಹಿರಾತುಗಳಲ್ಲಿ ದೇವತೆಗಳನ್ನು ‘ಮಾಡೆಲ್’ ಎಂದು ಉಪಯೋಗಿಸಲಾಗುತ್ತದೆ. ನಾಟಕ, ಚಲನಚಿತ್ರಗಳಿಂದಲೂ ಸರಾಗವಾಗಿ ವಿಡಂಬನೆ ಮಾಡಲಾಗುತ್ತದೆ. ಮತಾಂಧರು ದೇವತೆಗಳ ಮೂರ್ತಿಭಂಜನ ಮಾಡುತ್ತಾರೆ. (ಕೆಳಗಿನ ಚಿತ್ರಗಳನ್ನು ನೋಡಿದರೆ ತಮಗೆ ಹಿಂದೂ ದೇವತೆಗಳನ್ನು ಎಂತಹ ಹೀನಮಟ್ಟದಲ್ಲಿ ಅವಮಾನ ಮಾಡುತ್ತಾರೆಂದು ತಿಳಿಯಬಹುದು. ಇದನ್ನು ಕೇವಲ ಪ್ರಬೋಧನೆಗಾಗಿ ಹಾಕಲಾಗಿದೆ.)


ದೇವತೆಗಳ ವಿಡಂಬನೆಯನ್ನು ತಡೆಗಟ್ಟಲು ಇವುಗಳನ್ನು ಮಾಡಿರಿ!

೧. ದೇವತೆಗಳ ನಗ್ನ/ಅಶ್ಲೀಲ ಚಿತ್ರಗಳನ್ನು ಬಿಡಿಸಿ ಅವುಗಳನ್ನು ಬಹಿರಂಗವಾಗಿ ಮಾರಾಟ ಮಾಡುವ ಹಿಂದೂದ್ವೇಷಿಗಳನ್ನು ಮತ್ತು ಇಂತಹ ಚಿತ್ರಗಳ ಪ್ರದರ್ಶನಗಳನ್ನು ನಿಷೇಧಿಸಿರಿ!
೨. ದೇವತೆಗಳ ವಿಡಂಬನೆ ಮಾಡುವ ಜಾಹೀರಾತುಗಳಿರುವ ಉತ್ಪಾದನೆಗಳು, ವಾರ್ತಾಪತ್ರಿಕೆ ಮತ್ತು ಕಾರ್ಯಕ್ರಮ, ಉದಾ.ನಾಟಕ ಇವುಗಳನ್ನು ಬಹಿಷ್ಕರಿಸಿರಿ!
೩. ದೇವತೆಗಳ ವೇಷಭೂಷಣವನ್ನು ಧರಿಸಿ ಭಿಕ್ಷೆ ಬೇಡುವವರನ್ನು ತಡೆಯಿರಿ!
೪. ದೇವತೆಗಳ ವಿಡಂಬನೆಯಿಂದ ಧಾರ್ಮಿಕ ಭಾವನೆಗಳಿಗೆ ನೋವಾಗಿರುವುದರ ಬಗ್ಗೆ ಪೊಲೀಸರಲ್ಲಿ ದೂರು ಕೊಡಿರಿ!
೫. ಮೂರ್ತಿಭಂಜನೆಯ ವಿರುದ್ಧ ಕಾನೂನುರೀತ್ಯಾ ಪ್ರತಿಭಟನೆ, ಆಂದೋಲನ, ಸಹಿ ಅಭಿಯಾನ, ಆರಕ್ಷಕರಲ್ಲಿ, ಶಾಸಕ-ಸಚಿವರಲ್ಲಿ ನಿವೇದನೆ ಕೊಡಿರಿ.

ದೇವಸ್ಥಾನಗಳಲ್ಲಿ ಆಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿರಿ!

ಅ. ದರ್ಶನಕ್ಕಾಗಿ ಜನಸಂದಣಿ ಮಾಡಬೇಡಿರಿ. ಸಾಲಿನಲ್ಲಿ ನಿಂತು ಶಾಂತಿಯಿಂದ ದರ್ಶನ ಪಡೆಯಿರಿ. ಶಾಂತಿಯಿಂದ ಭಾವಪೂರ್ಣ ದರ್ಶನವನ್ನು ಪಡೆಯುವುದರಿಂದ ದರ್ಶನದ ನಿಜವಾದ ಲಾಭವಾಗುತ್ತದೆ.
ಆ. ದೇವಸ್ಥಾನದಲ್ಲಿ ಅಥವಾ ಗರ್ಭಗುಡಿಯಲ್ಲಿ ಗದ್ದಲ ಮಾಡಬೇಡಿರಿ. ಇದರಿಂದ ದೇವಸ್ಥಾನದ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ, ಹಾಗೆಯೇ ಅಲ್ಲಿ ದರ್ಶನ ಪಡೆಯುವ, ನಾಮಜಪ ಮಾಡುವ ಅಥವಾ ಧ್ಯಾನಕ್ಕೆ ಕುಳಿತ ಭಕ್ತರಿಗೂ ತೊಂದರೆಯಾಗುತ್ತದೆ.
ಇ. ಕೆಲವೊಮ್ಮೆ ದೇವರ ಎದುರಿಗೆ ಹಣವನ್ನಿಡಲು ಬಹಳ ಒತ್ತಾಯಿಸಲಾಗುತ್ತದೆ. ಅದಕ್ಕೆ ಮಣಿಯದೇ ನಮ್ರವಾಗಿ ನಿರಾಕರಿಸಿ.
ಈ. ದೇವಸ್ಥಾನದ ಪರಿಸರವನ್ನು ಸ್ವಚ್ಛವಾಗಿಡಿ. ಪ್ರಸಾದದ ಪೊಟ್ಟಣದ ಖಾಲಿ ಹೊದಿಕೆ, ತೆಂಗಿನಕಾಯಿಯ ಗೆರಟೆ ಇತ್ಯಾದಿಗಳು ಆವರಣದಲ್ಲಿ ಕಂಡು ಬಂದರೆ ಅವುಗಳನ್ನು ಕೂಡಲೇ ತೆಗೆದು ಕಸದ ಬುಟ್ಟಿಗೆ ಹಾಕಿರಿ.
ದೇವಸ್ಥಾನದ ಸಾತ್ತ್ವಿಕತೆಯನ್ನು ಉಳಿಸುವುದು, ಪ್ರತಿಯೊಬ್ಬ ಭಕ್ತನ ಕರ್ತವ್ಯವೇ ಆಗಿದೆ; ಆದುದರಿಂದ ಮೇಲಿನ ತಪ್ಪು ಆಚರಣೆಗಳ ಬಗ್ಗೆ, ದೇವಸ್ಥಾನಕ್ಕೆ ಬರುವ ಭಕ್ತರು, ಹಾಗೆಯೇ ದೇವಸ್ಥಾನದ ಅರ್ಚಕರು, ವಿಶ್ವಸ್ಥರು ಮುಂತಾದವರಿಗೆ ನಮ್ರವಾಗಿ ಪ್ರಬೋಧನೆ ಮಾಡಿರಿ.

ಉಪಾಸನೆಯ ಬಗ್ಗೆ ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದು

ಅ. ಹೆಚ್ಚಿನ ಹಿಂದೂಗಳಿಗೆ ತಮ್ಮ ದೇವತೆ, ಆಚಾರ, ಸಂಸ್ಕಾರ, ಹಬ್ಬಗಳ ಬಗ್ಗೆ ಗೌರವಾದರ ಮತ್ತು ಶ್ರದ್ಧೆ ಇರುತ್ತದೆ; ಆದರೆ ಹೆಚ್ಚಿನವರಿಗೆ ಅವುಗಳ ಉಪಾಸನೆಯ ಹಿಂದಿನ ಧರ್ಮಶಾಸ್ತ್ರವು ಗೊತ್ತಿರುವುದಿಲ್ಲ. ಶಾಸ್ತ್ರವನ್ನು ಅರಿತುಕೊಂಡು ಯೋಗ್ಯರೀತಿಯಲ್ಲಿ ಧರ್ಮಾಚರಣೆಯನ್ನು ಮಾಡಿದರೆ ಹೆಚ್ಚು ಫಲಪ್ರಾಪ್ತಿಯಾಗುತ್ತದೆ. ಆದುದರಿಂದ ದೇವತೆಗಳ ಉಪಾಸನೆಯಲ್ಲಿನ ವಿವಿಧ ಕೃತಿಗಳ ಯೋಗ್ಯ ಪದ್ಧತಿ ಮತ್ತು ಅವುಗಳ ಶಾಸ್ತ್ರದ ಬಗ್ಗೆ ಸಮಾಜಕ್ಕೆ ಧರ್ಮಶಿಕ್ಷಣ ನೀಡಲು ಯಥಾಶಕ್ತಿ ಪ್ರಯತ್ನಿಸುವುದು ಭಕ್ತರ ಕಾಲಾನುಸಾರ ಆವಶ್ಯಕ ಶ್ರೇಷ್ಠ ಸಮಷ್ಟಿ ಸಾಧನೆಯಾಗಿದೆ.
ಆ. ಧರ್ಮರಕ್ಷಣೆಯನ್ನು ಮಾಡಿ ಇತರರಲ್ಲಿಯೂ ಅದರ ಬಗ್ಗೆ ಜಾಗೃತಿ ಮೂಡಿಸಿರಿ !

ಧರ್ಮದ್ರೋಹಿ ವಿಚಾರಗಳನ್ನು ಖಂಡಿಸಿರಿ!

ಇತ್ತೀಚೆಗೆ ವ್ಯಾಖ್ಯಾನ, ಪುಸ್ತಕ ಮುಂತಾದವುಗಳ ಮಾಧ್ಯಮದಿಂದ ದೇವತೆಗಳು, ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಆರ್ಯ ಇತ್ಯಾದಿಗಳನ್ನು ಟೀಕಿಸಲಾಗುತ್ತದೆ.
ಇಂತಹ ಟೀಕೆ ಅಥವಾ ಧರ್ಮದ್ರೋಹಿ ವಿಚಾರಗಳಿಗೆ ಕಾನೂನು ಮಾರ್ಗದಿಂದ ಕೂಡಲೇ ಪ್ರತಿವಾದಿಸಬೇಕು; ಇಲ್ಲದಿದ್ದರೆ ಆ ವಿಚಾರಗಳಿಂದಾಗಿ ಹಿಂದೂಗಳ ಶ್ರದ್ಧೆಯು ಡೋಲಾಯಮಾನ ಆಗುತ್ತದೆ. ಈ ಪ್ರತಿವಾದವನ್ನು ನಿರ್ದಿಷ್ಟವಾಗಿ ಹೇಗೆ ಮಾಡಬೇಕು, ಎಂಬುದು ತಿಳಿಯಲು ಸನಾತನದ ಆಯಾ ವಿಷಯಗಳ ಗ್ರಂಥಗಳಲ್ಲಿ ಅದನ್ನು ಪ್ರಕಟಿಸಲಾಗಿದೆ. ಹಿಂದುತ್ವವಾದಿ ನಿಯತಕಾಲಿಕೆ ‘ಸನಾತನ ಪ್ರಭಾತ’ದಲ್ಲಿಯೂ ಅದನ್ನು ಆಗಾಗ ಪ್ರಕಟಿಸಲಾಗುತ್ತದೆ.

ತಾವು ಹೀಗೂ ಧರ್ಮಪ್ರಸಾರ (ಸಮಷ್ಟಿ ಸಾಧನೆ) ಮಾಡಬಹುದು!

ಸನಾತನ ಸಂಸ್ಥೆಯು ದೇವತೆಗಳ ಉಪಾಸನೆಯ ಕೃತಿಗಳ ಯೋಗ್ಯ ಪದ್ಧತಿ ಮತ್ತು ಅವುಗಳ ಶಾಸ್ತ್ರದ ಬಗ್ಗೆ ಮಾರ್ಗದರ್ಶಕವಾಗಿರುವ ಗ್ರಂಥ, ಕಿರುಗ್ರಂಥ, ಧ್ವನಿಮುದ್ರಿಕೆ, ಧ್ವನಿಚಿತ್ರಮುದ್ರಿಕೆ ಮತ್ತು ಧರ್ಮಶಿಕ್ಷಣ ಫಲಕಗಳನ್ನು ತಯಾರಿಸಿದೆ. ತಾವು ತಮ್ಮ ಪರಿಚಯದ ಭಕ್ತರಿಗೆ ಹಾಗೂ ದೇವಸ್ಥಾನಗಳ ಸಮಿತಿಯ ಸದಸ್ಯರು ಮುಂತಾದವರಿಗೆ ಸನಾತನದ ಗ್ರಂಥ, ಕಿರುಗ್ರಂಥ, ಧ್ವನಿಮುದ್ರಿಕೆ, ಧ್ವನಿಚಿತ್ರಮುದ್ರಿಕೆ ಮತ್ತು ‘ಧರ್ಮಶಿಕ್ಷಣ ಫಲಕ’ಗಳ ಮೂಲಕ ದೇವತೆಗಳ ಉಪಾಸನೆಯ ಬಗ್ಗೆ ಮಾರ್ಗದರ್ಶನ ಮಾಡಬಹುದು. ಕೇಬಲ್‌ಗಳ ಮೂಲಕವೂ ಧ್ವನಿಚಿತ್ರಮುದ್ರಿಕೆಗಳ ಪ್ರಸಾರ ಮಾಡಿ ಸಮಾಜಕ್ಕೆ ವ್ಯಾಪಕಸ್ತರದಲ್ಲಿ ಧರ್ಮಶಿಕ್ಷಣವನ್ನು ನೀಡಬಹುದು. ಧರ್ಮಾಭಿಮಾನಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು, ದೇವಸ್ಥಾನಗಳು ತಮ್ಮ ಪರಿಸರದಲ್ಲಿ, ಹಾಗೆಯೇ ಇತರ ಪ್ರದರ್ಶನ ಸ್ಥಳಗಳಲ್ಲಿ ‘ಧರ್ಮಶಿಕ್ಷಣ ಫಲಕ’ಗಳನ್ನು ಪ್ರದರ್ಶಿಸಲು ಸ್ವತಃ ಪ್ರಾಯೋಜಕರಾಗಬೇಕು. ಅದೇರೀತಿ ದೇವಸ್ಥಾನ, ಮಂಗಲ ಕಾರ್ಯಾಲಯ, ಸಭಾಗೃಹ, ವಿವಿಧ ಪ್ರದರ್ಶನ, ಶಾಲೆ-ಮಹಾವಿದ್ಯಾಲಯಗಳಂತಹ ಸ್ಥಳಗಳಲ್ಲಿ ಫಲಕಗಳನ್ನು ಹಾಕಲು ಸ್ಥಳಗಳನ್ನು ಉಪಲಬ್ಧ ಮಾಡಿಸಿಕೊಟ್ಟು ಅಥವಾ ಇಂತಹ ಸ್ಥಳಗಳಲ್ಲಿ ಫಲಕಗಳನ್ನು ಹಾಕುವ ಬಗ್ಗೆ ಪ್ರಬೋಧನೆ ಮಾಡಿ ಸಮಷ್ಟಿ ಸಾಧನೆಯ ಸುಸಂಧಿಯ ಲಾಭವನ್ನು ಪಡೆದುಕೊಳ್ಳಬೇಕು. ಸನಾತನದ ಧರ್ಮಶಿಕ್ಷಣ ಫಲಕಗಳ ಬಗೆಗಿನ ಸವಿಸ್ತಾರ ವಿವರಣೆಯನ್ನು ಅದರ ಕುರಿತಾದ ಗ್ರಂಥದಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಸನಾತನದ ಸತ್ಸಂಗಗಳನ್ನು ಸಂಪರ್ಕಿಸಿರಿ.

ಧರ್ಮರಕ್ಷಣೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ’ ಮತ್ತು ‘ಸನಾತನ ಸಂಸ್ಥೆ’ಯ ಕಾರ್ಯದಲ್ಲಿ ಪಾಲ್ಗೊಳ್ಳಿರಿ! 

‘ಹಿಂದೂ ಜನಜಾಗೃತಿ ಸಮಿತಿ’ ಮತ್ತು ‘ಸನಾತನ ಸಂಸ್ಥೆ’ಯು ಕಳೆದ ಕೆಲವು ವರ್ಷಗಳಿಂದ ದೇವತೆಗಳು ಮತ್ತು ಸಂತರ ವಿಡಂಬನೆ, ಉತ್ಸವಗಳಲ್ಲಿನ ಅನುಚಿತ ವಿಷಯಗಳು, ದೇವಸ್ಥಾನಗಳ ಸರಕಾರೀಕರಣ ಇತ್ಯಾದಿಗಳ ವಿರೋಧದಲ್ಲಿ ಕಾನೂನು ಮಾರ್ಗದಿಂದ ವ್ಯಾಪಕ ಜನಜಾಗೃತಿ ಚಳುವಳಿಯನ್ನು ನಡೆಸುತ್ತಿವೆ. ಭಕ್ತರೇ, ತಾವೂ ಇವುಗಳಲ್ಲಿ ಪಾಲ್ಗೊಂಡು ಧರ್ಮದ ಬಗೆಗಿನ ತಮ್ಮ ಕರ್ತವ್ಯವನ್ನು ನಿಭಾಯಿಸಿರಿ ಮತ್ತು ದೇವತೆಗಳ ಹೆಚ್ಚೆಚ್ಚು ಕೃಪೆಯನ್ನು ಸಂಪಾದಿಸಿರಿ! ತಾವು ಧರ್ಮವನ್ನು ರಕ್ಷಿಸಿದರೆ ಮಾತ್ರ, ಧರ್ಮವು (ಈಶ್ವರನು) ತಮ್ಮನ್ನು ರಕ್ಷಿಸುವುದು!!

No comments:

Post a Comment

Note: only a member of this blog may post a comment.