ಗ್ರಂಥ ಪರಿಚಯ - ದೇವಸ್ಥಾನದಲ್ಲಿ ದರ್ಶನ ಹೇಗೆ ಪಡೆಯಬೇಕು?

ಗ್ರಂಥದ ಮನೋಗತ

‘ದೇವಾಲಯ’ ಎಂದರೆ ದೇವರ ಆಲಯ, ಅಂದರೆ ಸಾಕ್ಷಾತ್ ಭಗವಂತನ ವಾಸವಿರುವ ಸ್ಥಾನ. ದೇವಸ್ಥಾನಗಳಿಗೆ ಹೋದರೆ ನಮ್ಮ ಬೇಡಿಕೆಗಳು ಭಗವಂತನ ಚರಣಗಳಲ್ಲಿ ಅರ್ಪಣೆಯಾಗುತ್ತವೆ ಮತ್ತು ನಮಗೆ ಮನಃಶಾಂತಿಯು ಸಿಗುತ್ತದೆ.’ ಈ ಶ್ರದ್ಧೆಯಿಂದ ಭಕ್ತ ಜನರು ದೇವಾಲಯಗಳಿಗೆ ಹೋಗುತ್ತಾರೆ. ‘ದೇವರಿಗೆ ಕೇವಲ ಭಕ್ತಿಭಾವವೇ ಬೇಕಾಗಿರುತ್ತದೆ’, ಭಕ್ತಿಭಾವ ಇರುವ ಭಕ್ತರು ದೇವಸ್ಥಾನದಲ್ಲಿ ದೇವರ ದರ್ಶನವನ್ನು ಯಾವುದೇ ಪದ್ಧತಿಯಿಂದ ಪಡೆದುಕೊಂಡರೂ ಅವರಿಗೆ ಭಗವಂತನ ಕೃಪೆಯು ಆಗಿಯೇ ಆಗುತ್ತದೆ. ಆದರೆ ಸಾಮಾನ್ಯ ಭಕ್ತರಲ್ಲಿ ಇಷ್ಟೊಂದು ಭಾವವಿರುವುದಿಲ್ಲ, ಆದುದರಿಂದ ಅವರು ದೇವರ ದರ್ಶನವನ್ನು ಅಧ್ಯಾತ್ಮಶಾಸ್ತ್ರಕ್ಕನುಸಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ.

ದೀಪದ ಸುತ್ತಲೂ ಇರುವ ಗಾಜಿನ ಬುರುಡೆಗೆ ಮಸಿಯು ತಗಲಿದ್ದರೆ ಅದನ್ನು ಸ್ವಚ್ಛಮಾಡಬೇಕಾಗುತ್ತದೆ, ಆಗ ಮಾತ್ರ ದೀಪದ ನಿಖರವಾದ ಪ್ರಕಾಶವು ಹೊರಗೆ ಬರಲು ಸಾಧ್ಯವಾಗುತ್ತದೆ. ಅದೇ ರೀತಿ ದೇವರ ಪ್ರತ್ಯಕ್ಷ ದರ್ಶನವನ್ನು ಪಡೆಯುವುದಕ್ಕಿಂತ ಮೊದಲು ನಮ್ಮ ಸುತ್ತಲೂ ಇರುವ ರಜ-ತಮದ ಮಸಿಯನ್ನು ದೂರಗೊಳಿಸಿ ಭಾವದ ಜ್ಯೋತಿಯನ್ನು ಅಂತರಂಗದಲ್ಲಿ ಜಾಗೃತಗೊಳಿಸಬೇಕಾಗುತ್ತದೆ, ಹೀಗೆ ಮಾಡಿದರೆ ಮಾತ್ರ ಈಶ್ವರನಿಂದ ಪ್ರಕ್ಷೇಪಿತವಾಗುವ ಚೈತನ್ಯದ ಮತ್ತು ಕೃಪೆಯ ಪರಿಪೂರ್ಣ ಲಾಭವು ನಮಗೆ ಸಿಗುತ್ತದೆ. ದೇವರ ದರ್ಶನವನ್ನು ಪಡೆಯುವ ಯೋಗ್ಯ ಪದ್ಧತಿಯಿಂದ ಇದು ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಈ ಗ್ರಂಥದಲ್ಲಿ ಕೇವಲ ಯೋಗ್ಯ ಪದ್ಧತಿಗಳನ್ನು ಮಾತ್ರ ಕೊಡದೇ ಅವುಗಳ ಹಿಂದಿರುವ ಸೂಕ್ಷ್ಮದಲ್ಲಿನ ಅಧ್ಯಾತ್ಮಶಾಸ್ತ್ರವನ್ನೂ ಸಹ ಕೊಡಲಾಗಿದೆ. ಇದರಿಂದ ಆ ಪದ್ಧತಿಗಳ ಬಗ್ಗೆ ಮತ್ತು ಧರ್ಮಶಾಸ್ತ್ರದ ಬಗ್ಗೆ ಶ್ರದ್ಧೆಯು ನಿರ್ಮಾಣವಾಗಲು ಸಹಾಯವಾಗುತ್ತದೆ.

ದೇವಸ್ಥಾನದ ಮಹತ್ವವೇನು?
ದೇವರ ಎದುರಿಗೆ ಆಮೆಯ ಪ್ರತಿಕೃತಿ ಏಕೆ ಇರುತ್ತದೆ?
ದೇವಸ್ಥಾನದಲ್ಲಿ ದರ್ಶನ ಪಡೆದುಕೊಳ್ಳುವುದರ ಮಹತ್ವವೇನು?
ದೇವಸ್ಥಾನದಲ್ಲಿ ಕಾಲುಗಳನ್ನು ತೊಳೆದುಕೊಂಡು ಏಕೆ ಪ್ರವೇಶಿಸಬೇಕು?
ದೇವಸ್ಥಾನದಲ್ಲಿ ದರ್ಶನವನ್ನು ಪಡೆಯುವ ಯೋಗ್ಯ ಪದ್ಧತಿ ಯಾವುದು?
ದರ್ಶನ ಪಡೆಯುವಾಗ ದೇವತೆಯ ರೂಪವನ್ನು ಕಣ್ಣುಗಳಲ್ಲಿ ಏಕೆ ತುಂಬಿಕೊಳ್ಳಬೇಕು?
ದೇವಸ್ಥಾನಗಳ ಗರ್ಭಗುಡಿಗಳಲ್ಲಿ ಜನರಿಗೆ ಪ್ರವೇಶಿಸಲು ನಿರ್ಬಂಧವಿರುವುದರ ಕಾರಣಗಳೇನು?
ದೇವತೆಯ ದರ್ಶನವಾದ ಬಳಿಕ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರವೇನು?
ದರ್ಶನ ಪಡೆದ ನಂತರ ದೇವರ ಸುತ್ತಲೂ ಪ್ರದಕ್ಷಿಣೆಯನ್ನು ಏಕೆ, ಹೇಗೆ ಮತ್ತು ಎಷ್ಟು ಹಾಕಬೇಕು?
ದೇವಸ್ಥಾನದಲ್ಲಿ ಪ್ರವೇಶ ಮಾಡುವುದಕ್ಕಿಂತ ಮೊದಲು ಮಾಡಬೇಕಾದ ಕೃತಿಗಳು ಮತ್ತು ಅವುಗಳ ಹಿನ್ನೆಲೆಯ ಶಾಸ್ತ್ರವೇನು?

ಇಂತಹ ವಿವಿಧ ಪ್ರಶ್ನೆಗಳ ಅಧ್ಯಾತ್ಮಶಾಸ್ತ್ರೀಯ ಉತ್ತರಗಳನ್ನು ಈ ಗ್ರಂಥದಲ್ಲಿ ಕೊಡಲಾಗಿದೆ. ‘ಈಶ್ವರಪ್ರಾಪ್ತಿ’ಯೇ ಮನುಷ್ಯನ ಅಂತಿಮ ಧ್ಯೇಯವಾಗಿರುವುದರಿಂದ ಅದನ್ನು ಸಾಧ್ಯಗೊಳಿಸಲು ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಧಾರ್ಮಿಕ ಕೃತಿಯ ಹಿಂದೆ ಎಷ್ಟು ಸವಿಸ್ತಾರ ಹಾಗೂ ಸೂಕ್ಷ್ಮವಿಚಾರವನ್ನು ಮಾಡಲಾಗಿದೆ ಎನ್ನುವುದರ ಅನುಭವವು ಈ ಗ್ರಂಥವನ್ನು ಓದುವಾಗ ಪ್ರತಿಕ್ಷಣ ಬರುತ್ತದೆ.

ಈ ಗ್ರಂಥದಲ್ಲಿ ಹೇಳಿರುವ ಯೋಗ್ಯ ಪದ್ಧತಿಗಳಿಗನುಸಾರ ದೇವರ ದರ್ಶನವನ್ನು ಪಡೆದುಕೊಂಡರೆ, ಅದೇರೀತಿ ಈ ಬಗ್ಗೆ ಸಮಾಜದಲ್ಲಿನ ಜನರಿಗೂ ಪ್ರಬೋಧನೆ ಮಾಡಿದರೆ ಈ ಗ್ರಂಥವನ್ನು ಬರೆದದ್ದು ನಿಜವಾಗಿಯೂ ಸಾರ್ಥಕವಾಯಿತು ಎಂದು ನಾವು ತಿಳಿದುಕೊಳ್ಳುತ್ತೇವೆ. ಹಾಗೇ ಆಗಲಿ ಎಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ. - ಸಂಕಲನಕಾರರು

No comments:

Post a Comment

Note: only a member of this blog may post a comment.