ರಾತ್ರಿ ಮೊಸರನ್ನು ಏಕೆ ತಿನ್ನಬಾರದು?

‘ಅಲಕ್ಷ್ಮೀದೋಷಯುಕ್ತತ್ಪಾತ್ ರಾತ್ರೌ ದಧಿ ಗರ್ಹಿತಮ್|’, ಅಂದರೆ ‘ರಾತ್ರಿ ಊಟದಲ್ಲಿ ಮೊಸರನ್ನು ಖಂಡಿತವಾಗಿ ತಿನ್ನಬಾರದು. ತಿಂದರೆ ಬುದ್ಧಿನಾಶವಾಗಿ ಅಲಕ್ಷ್ಮೀ ದೋಷ ತಗಲುತ್ತದೆ.’ - ಗುರುದೇವ ಡಾ.ಕಾಟೇಸ್ವಾಮೀಜಿ

ಅ. ಶಾಸ್ತ್ರ - ಮೊಸರು ರಜೋಗುಣಿಯಾಗಿರುವುದರಿಂದ ರಾತ್ರಿಯ ಸಮಯದಲ್ಲಿ ಮೊಸರನ್ನು ಸೇವಿಸಿದರೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ: ‘ರಾತ್ರಿಯು ತಮೋಗುಣಿಯಾಗಿದೆ. ತಮೋಗುಣಿ ಕಾಲದಲ್ಲಿ ಕೆಟ್ಟ ಶಕ್ತಿಗಳ ಪ್ರಾಬಲ್ಯವು ಹೆಚ್ಚಿರುತ್ತದೆ. ಈ ಕಾಲದಲ್ಲಿ ಮೊಸರನ್ನು ಸೇವಿಸಿದರೆ ದೇಹವು ರಜೋಗುಣದಿಂದ ತುಂಬಿ, ರಾತ್ರಿ ವಾಯುಮಂಡಲದಲ್ಲಿ ಸಂಚರಿಸುವ ಕೆಟ್ಟ ಶಕ್ತಿಗಳ ಲಹರಿಗಳ ಕಾರ್ಯಕ್ಕೆ ಸ್ಪಂದಿಸುವ ದೃಷ್ಟಿಯಿಂದ ದೇಹವು ಅತಿಸಂವೇದನಾಶೀಲವಾಗುವುದರಿಂದ, ಆ ಜೀವಕ್ಕೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದುದರಿಂದ ರಾತ್ರಿ ಮೊಸರನ್ನು ತಿನ್ನಬಾರದು.

ಆ. ರಾತ್ರಿ ಮೊಸರು ತಿನ್ನುವುದರಿಂದ ಆಯುಷ್ಯ ಕಡಿಮೆಯಾಗುತ್ತದೆ ಎಂದೂ ಹೇಳುತ್ತಾರೆ.

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?
Dharma Granth

No comments:

Post a Comment

Note: only a member of this blog may post a comment.