ಅ. ಸಕಾಮ (ಕಾಮ್ಯ)
ಯಾವುದಾದರೊಂದು ವಿಶಿಷ್ಟ ಇಷ್ಟಾರ್ಥ ಪೂರ್ತಿಗಾಗಿ ಮಾಡಿದ ವ್ರತವನ್ನು ‘ಸಕಾಮ ವ್ರತ’ ಎನ್ನುತ್ತಾರೆ. ಪುರಾಣದಲ್ಲಿ ಮತ್ತು ತಂತ್ರಗ್ರಂಥಗಳಲ್ಲಿ ಯಾವ ಇಷ್ಟಾರ್ಥಕ್ಕಾಗಿ ಯಾವ ಉಪಾಸನೆಯನ್ನು ಮಾಡಬೇಕೆನ್ನುವುದನ್ನು ಕೊಡಲಾಗಿದೆ. ಸಕಾಮ ಉಪಾಸನೆಯು ನೈಮಿತ್ತಿಕ ಉಪಾಸನೆಯಾಗಿದೆ. ಸಕಾಮ ಉಪಾಸನೆಯನ್ನು ಮುಹೂರ್ತ ಮತ್ತು ದಿನಶುದ್ಧಿಯನ್ನು ನೋಡಿ ನಿರ್ದಿಷ್ಟ ತಿಥಿಯಂದೇ ಮಾಡುತ್ತಾರೆ. ಸತ್ಯನಾರಾಯಣ ಮತ್ತು ಸತ್ಯದತ್ತ ವ್ರತಗಳು ಇಷ್ಟಾರ್ಥವನ್ನು ಬೇಗ ಪೂರೈಸುತ್ತವೆ ಎನ್ನುವ ನಂಬಿಕೆಯಿಂದಾಗಿ ಇವುಗಳನ್ನು ಬಹಳಷ್ಟು ಜನರು ಮಾಡುತ್ತಾರೆ. ವ್ರತದಿಂದ ಆಯಾ ವ್ರತದ ಅಧಿಷ್ಠಾನ ದೇವತೆಯು ಪ್ರಸನ್ನಳಾಗುತ್ತಾಳೆ ಮತ್ತು ಅವಳ ಕೃಪೆಯಿಂದ ವ್ರತಕ್ಕೆ ಫಲವು ಲಭಿಸುತ್ತದೆ. ಸಕಾಮ ವ್ರತದ ವಿಧಗಳು ಮುಂದಿನಂತಿವೆ.
ಅ೧. ಧರ್ಮ (ಸಾಧನೆಯೆಂದು): ರಾಮನಾಮವ್ರತ, ಭಾಗವತ ಸಪ್ತಾಹ ಇತ್ಯಾದಿ ನೈಮಿತ್ತಿಕ ವ್ರತಗಳು.
ಅ೨. ಅರ್ಥ (ಧನ): ಅನಂತ, ಕೋಜಾಗರಿ.
ಅ೩. ಕಾಮ (ಇಚ್ಛಾಪೂರ್ತಿ): ಶನಿಪ್ರದೋಷ, ಶ್ರೀಗುರುಚರಿತ್ರ ಪಾರಾಯಣ, ಹರಿವಂಶಶ್ರವಣ, ಹದಿನಾರು ಸೋಮವಾರಗಳು (ಪುತ್ರಪ್ರಾಪ್ತಿಗಾಗಿ).
ಅ೪. ಮೋಕ್ಷ: ಹದಿನಾರು ಸೋಮವಾರ
ಆ. ನಿಷ್ಕಾಮ: ನಿಷ್ಕಾಮ ಎನ್ನುವ ಶಬ್ದವು, ‘ವ್ಯಾವಹಾರಿಕ ವಿಷಯಗಳ ಬಗ್ಗೆ ಕಾಮನೆ ಇಲ್ಲದಿರುವುದು’ ಎನ್ನುವ ಅರ್ಥದಲ್ಲಿದೆ. ನಿಷ್ಕಾಮ ಉಪಾಸನೆಯಲ್ಲಿಯೂ ಈಶ್ವರಪ್ರಾಪ್ತಿಯ ಅಥವಾ ಮೋಕ್ಷದ ಇಚ್ಛೆ ಇರುತ್ತದೆ.
ಆ೧. ನಿತ್ಯ ಮತ್ತು ನೈಮಿತ್ತಿಕ
೧. ನಿತ್ಯ ವ್ರತಗಳು: ವರ್ಣಾಶ್ರಮಕ್ಕನುಸಾರ ಮಾಡಬೇಕಾದ ಕರ್ತವ್ಯಗಳು, ಉದಾ. ಬ್ರಹ್ಮಚರ್ಯ, ಪೂಜೆ, ಸಂಧ್ಯಾವಂದನೆ ಇತ್ಯಾದಿ. ಇವುಗಳನ್ನು ದಿನನಿತ್ಯ ಮಾಡಬೇಕು.
೨. ನೈಮಿತ್ತಿಕ ವ್ರತಗಳು: ಈ ವ್ರತಗಳನ್ನು ನಿರ್ದಿಷ್ಟ ತಿಥಿಗಳಂದು ಮಾಡುತ್ತಾರೆ, ಉದಾ. ವಟಪೂರ್ಣಿಮೆ, ಮಂಗಳಗೌರಿ, ಸ್ವರ್ಣಗೌರಿ ಹಬ್ಬ, ಗಣೇಶಚತುರ್ಥಿ, ಋಷಿಪಂಚಮಿ, ಕೋಜಾಗರಿ ಇತ್ಯಾದಿ.
ಇ. ಆವಶ್ಯಕತೆಗನುಸಾರ
ಇ೧. ಅತ್ಯಾವಶ್ಯಕ (ಪ್ರಾಯಶ್ಚಿತ್ತ): ಪ್ರಾಯಶ್ಚಿತ್ತವೆಂದು ಮಾಡಬೇಕಾದ ವ್ರತಗಳು, ಉದಾ. ಕೃಚ್ಛ್ರ, ಅರ್ಧಕೃಚ್ಛ್ರ, ಚಾಂದ್ರಾಯಣ ಇತ್ಯಾದಿ.
ಇ೨. ಆವಶ್ಯಕ (ಕರ್ತವ್ಯ): ವರ್ಣಾಶ್ರಮಕ್ಕನುಸಾರ ಮಾಡಬೇಕಾದ ಕಾರ್ಯಗಳು ಮತ್ತು ಆಚರಣೆಗಳು, ಉದಾ. ಬ್ರಹ್ಮಚರ್ಯ, ಸಂಧ್ಯಾವಂದನೆ, ಅತಿಥಿಸತ್ಕಾರ ಇತ್ಯಾದಿ.
ಇ೩. ಐಚ್ಛಿಕ: ವಿಶಿಷ್ಟ ಉದ್ದೇಶಕ್ಕಾಗಿ ಮಾಡಿದ ವ್ರತಗಳು, ಉದಾ.ಸಕಾಮ ವ್ರತಗಳು.
ಈ. ಇಂದ್ರಿಯಕ್ಕನುಸಾರ
ಈ೧. ಕಾಯಿಕ (ಶಾರೀರಿಕ) ವ್ರತಗಳು: ಉಪವಾಸ ಮಾಡುವುದು, ಒಪ್ಪೊತ್ತು ಊಟ ಮಾಡುವುದು, ಹಿಂಸೆಯನ್ನು ಮಾಡದಿರುವುದು ಇತ್ಯಾದಿ.
ಈ೨. ವಾಚಿಕ ವ್ರತಗಳು: ನಾಮಜಪ ಮಾಡುವುದು, ಸತ್ಯ ನುಡಿಯುವುದು, ಮೃದುವಾಗಿ ಮಾತನಾಡುವುದು ಇತ್ಯಾದಿ.
ಈ೩. ಮಾನಸಿಕ ವ್ರತಗಳು: ಬ್ರಹ್ಮಚರ್ಯಪಾಲನೆ, ಮನಸ್ಸಿನಿಂದಲೂ ಹಿಂಸೆಯನ್ನು ಮಾಡದಿರುವುದು, ಕೋಪಗೊಳ್ಳದಿರುವುದು ಇತ್ಯಾದಿ.
ಉ. ಕಾಲಾನುಸಾರ
ಉ೧. ವ್ರತವನ್ನು ಮಾಡುವ ಕಾಲಕ್ಕನುಸಾರ ಅಯನ, ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿ ವರ್ಗಗಳಾಗುತ್ತವೆ.
ಅ. ಮಾಸವ್ರತಗಳು: ವೈಶಾಖ, ಭಾದ್ರಪದ, ಕಾರ್ತಿಕ ಮತ್ತು ಮಾಘ ತಿಂಗಳುಗಳಲ್ಲಿನ ವ್ರತಗಳಿಗೆ ‘ಮಾಸವ್ರತಗಳು’ ಎನ್ನುತ್ತಾರೆ.
ಆ. ಪಕ್ಷವ್ರತಗಳು: ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿನ ವ್ರತಗಳಿಗೆ ‘ಪಕ್ಷವ್ರತಗಳು’ ಎನ್ನುತ್ತಾರೆ.
ಇ. ತಿಥಿವ್ರತಗಳು: ಚತುರ್ಥಿ, ಏಕಾದಶಿ, ಭಾನುಸಪ್ತಮಿ, ತ್ರಯೋದಶಿ ಮತ್ತು ಅಮಾವಾಸ್ಯೆ ಇವುಗಳನ್ನು ತಿಥಿವ್ರತಗಳೆಂದು ಪರಿಗಣಿಸುತ್ತಾರೆ.
ಈ. ವಾರವ್ರತಗಳು: ಸೋಮ, ಮಂಗಳ, ಶುಕ್ರ ಮತ್ತು ಶನಿ ಈ ದಿನಗಳ ವ್ರತಗಳು ವಾರವ್ರತಗಳಾಗಿವೆ.
ಉ. ನಕ್ಷತ್ರವ್ರತಗಳು: ಶ್ರವಣ, ಅನುರಾಧಾ ಮತ್ತು ರೋಹಿಣಿ ನಕ್ಷತ್ರಗಳಲ್ಲಿನ ವ್ರತಗಳಿಗೆ ನಕ್ಷತ್ರವ್ರತಗಳು ಎನ್ನುತ್ತಾರೆ.
ಊ. ಇತರ ವ್ರತಗಳು: ವ್ಯತಿಪಾತದಂತಹ ಯೋಗವ್ರತ, ಭದ್ರಾದಂತಹ ಕರಣವ್ರತ ಇಂತಹ ವ್ರತಗಳೂ ಇರುತ್ತವೆ.
ಉ೨. ಬಹುತೇಕ ವ್ರತಗಳು ಶುಕ್ಲ ಪ್ರತಿಪದೆಯಿಂದ ಸಪ್ತಮಿ ಅಥವಾ ಅಷ್ಟಮಿಯ ವರೆಗೆ ಇರುತ್ತವೆ; ಏಕೆಂದರೆ ಆಗ ವೃದ್ಧ್ಧಿಸುತ್ತಿರುವ ಚಂದ್ರನು ಕಾಣಿಸುತ್ತ್ತಾನೆ ಹಾಗೂ ವ್ರತದ ಉದ್ದೇಶವು ಸಫಲವಾಗುವ ಅವಕಾಶವೂ ಹೆಚ್ಚಾಗುತ್ತಾ ಹೋಗುತ್ತದೆ.
ಊ. ದೇವತೆಗಳಿಗನುಸಾರ: ಉಪಾಸ್ಯದೇವತೆಗನುಸಾರ ಗಣೇಶವ್ರತ, ಸೂರ್ಯವ್ರತ, ಶಿವವ್ರತ, ವಿಷ್ಣುವ್ರತ, ದೇವೀವ್ರತ ಎಂಬ ವ್ರತಗಳಿರುತ್ತವೆ.
ಎ. ವೈಯಕ್ತಿಕ ಮತ್ತು ಸಾಮೂಹಿಕ: ಬಹುತೇಕ ಎಲ್ಲ ವ್ರತಗಳು ವೈಯುಕ್ತಿಕವಾಗಿರುತ್ತವೆ. ಚೈತ್ರದಲ್ಲಿನ ಶ್ರೀರಾಮನವಮಿ, ಶ್ರಾವಣದಲ್ಲಿನ ಕೃಷ್ಣಾಷ್ಟಮಿ, ಭಾದ್ರಪದದಲ್ಲಿನ ಶ್ರೀ ಗಣೇಶಚತುರ್ಥಿ ಮುಂತಾದವುಗಳು ಸಾಮೂಹಿಕ ವ್ರತಗಳಾಗಿವೆ.
ಏ. ಸ್ತ್ರೀ-ಪುರುಷ ಭೇದಕ್ಕನುಸಾರ: ಬಹುತೇಕ ಎಲ್ಲ ವ್ರತಗಳನ್ನು ಸ್ತ್ರೀ-ಪುರುಷ ಇಬ್ಬರೂ ಮಾಡಬಹುದು; ಆದರೆ ಸ್ವರ್ಣಗೌರಿ, ವಟಸಾವಿತ್ರಿ ಇವುಗಳಂತಹ ವ್ರತಗಳು ಸ್ತ್ರೀಯರಿಗಾಗಿಯೇ ಇವೆ.
ಐ. ವರ್ಣಕ್ಕನುಸಾರ: ಕೆಲವು ನಿರ್ದಿಷ್ಟ ವ್ರತಗಳು ಕೇವಲ ರಾಜರು, ಕ್ಷತ್ರಿಯರು ಅಥವಾ ವೈಶ್ಯರು ಮಾಡುವಂತಹವುಗಳಾಗಿವೆ.
(ವಿವರವಾಗಿ ಓದಿ: ಸನಾತನ ಸಂಸ್ಥೆಯ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

bhimana amavsyeya kurithu thilisi.........
ReplyDelete