ಗ್ರಂಥ ಪರಿಚಯ - ‘ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ’ !

ಹಿಂದೂಗಳನ್ನು ಜಾಗೃತಗೊಳಿಸುವ ಗ್ರಂಥ
‘ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ’ !

ಸತ್ಯಯುಗದಲ್ಲಿ ವಿಶ್ವದೆಲ್ಲೆಡೆಯೂ ಸನಾತನ ಧರ್ಮವಿತ್ತು. ಆಂಗ್ಲ ಕಾಲಗಣನೆಯನುಸಾರ ಮೊದಲ ಮತ್ತು ಏಳನೇ ಶತಕಗಳಲ್ಲಿ ಅನುಕ್ರಮವಾಗಿ ಕೆಸ್ತ ಮತ್ತು ಇಸ್ಲಾಂ ಪಂಥಗಳ ಉದಯವಾಯಿತು ಮತ್ತು ಆ ಪಂಥೀಯರಿಂದ ಆರಂಭಗೊಂಡ ಹಿಂದೂಗಳ ಮತಾಂತರದ ದುರ್ದೈವಿ ಸರಣಿಯು ಇಂದಿಗೂ ನಡೆದಿದೆ ! ಈ ಕಾಲಾವಧಿಯಲ್ಲಿ ಹಿಂದೂಗಳ ಬಲಪೂರ್ವಕ, ಪ್ರಲೋಭನೆ ತೋರಿಸಿ ಮತ್ತು ಭಯಾನಕ ಅತ್ಯಾಚಾರ ಮಾಡಿ ಮತಾಂತರ ಮಾಡಲಾಯಿತು. ಈಗ ಪ್ರತೀ ವರ್ಷ ೮ ಲಕ್ಷ ಹಿಂದೂಗಳ ಮತಾಂತರವಾಗುತ್ತಿದೆ, ಇದು ಇಂದಿನ ವಸ್ತುಸ್ಥಿತಿಯಾಗಿದೆ. ಆದ್ದರಿಂದ ಈ ಭೂಮಿಯ ಎಲ್ಲಾ ಹಿಂದೂ ವಂಶೀಯರಿಗೆ ತಮ್ಮ ಧರ್ಮಬಾಂಧವರ ಮತಾಂತರದ ಇತಿಹಾಸದ ಬಗ್ಗೆ ಮಾಹಿತಿಯಿರಬೇಕು, ಐತಿಹಾಸಿಕ ಸಮಯದಿಂದ ಇಲ್ಲಿಯವರೆಗೆ ನಡೆದ ಮತ್ತು ಈಗ ನಡೆಯುತ್ತಿರುವ ಮತಾಂತರದ ವಿಷಯವನ್ನು ಅರಿತುಕೊಳ್ಳಬೇಕು, ನಮ್ಮ ಅಸ್ತಿತ್ವದ ಮೇಲೆ ಆಘಾತ ಮಾಡುವವರ ಮತ್ತು ನಮ್ಮ ಬುಡಕ್ಕೆ ಮೇಲೆ ಬಂದಿರುವ ಸಂಕಟದ ಅರಿವಾಗಬೇಕು, ಹಾಗಾಗಿ ಸನಾತನದ ಧರ್ಮರಕ್ಷಣೆಮಾಲಿಕೆಯ ಮೊದಲ ಹೂವನ್ನು ಕಟ್ಟುವಾಗ ‘ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ’ ಈ ವಿಷಯವು ಆರಿಸಲ್ಪಟ್ಟಿತು.

ಹಿಂದೂಗಳ ಮತಾಂತರದ ಇತಿಹಾಸವನ್ನು ಪರಿಚಯಿಸಿ ಅವರಲ್ಲಿನ ಧಾರ್ಮಿಕ ಅಸ್ಮಿತೆಯನ್ನು ಜಾಗೃತಗೊಳಿಸುವ ಗ್ರಂಥ!

ಅರಬ್ಬರಿಂದ ಹಿಡಿದು ಆಂಗ್ಲರವರೆಗೆ ಎಲ್ಲ ಆಕ್ರಮಣಕಾರರು ಭಾರತದ ಮೇಲೆ ಅತಿಕ್ರಮಣ ಮಾಡಿದರು ಮತ್ತು ನಂತರದ ಕಾಲದಲ್ಲಿ ಹಿಂದೂಗಳ ಮೇಲೆ ರಾಜ್ಯ ನಡೆಸುವಾಗ ಅವರನ್ನು ಮತಾಂತರಿಸುವಾಗ ಹಿಂದೂಗಳ ಮೇಲೆ ಅತಿಭಯಂಕರವಾದ ಕ್ರೂರ ಮತ್ತು ಪಾಶವಿ ಅತ್ಯಾಚಾರವನ್ನು ಮಾಡಿದರು, ಅವರನ್ನು ಕ್ರೂರವಾಗಿ ಹಿಂಸಿಸಿದರು, ಅದರ ಇತಿಹಾಸವನ್ನು ಇಂದು ಪ್ರತಿಯೊಬ್ಬ ಹಿಂದೂವು ಅರಿತುಕೊಳ್ಳಬೇಕು. ಮತಾಂತರದ ಇತಿಹಾಸದ ಸ್ಮರಣೆಯಿಂದ ಹಿಂದೂಗಳಿಗೆ ತಮ್ಮ ಮೇಲಾದ ಘೋರ ಅನ್ಯಾಯದ ಅರಿವಾಗುವುದು ಮತ್ತು ಸ್ವಧರ್ಮ ಸಂವೇದನೆಯು ಜಾಗೃತವಾಗಿ ಅವರ ಧರ್ಮಅಸ್ಮಿತೆಯು ವೃದ್ಧಿಯಾಗಲು ಸಹಾಯವಾಗುವುದು. ಇದಕ್ಕಾಗಿ ಈ ಗ್ರಂಥವನ್ನು ಪ್ರತಿಯೊಬ್ಬ ಹಿಂದೂವು ಒಂದು ಸಲವಾದರೂ ಒದಲೇ ಬೇಕು!

ಮತಾಂತರದ ಭಯಾನಕ ವಾಸ್ತವಿಕತೆಯನ್ನು ತೆರೆದಿಡುವ ಗ್ರಂಥ

ಇಸ್ಲಾಮಿನ ಬಾದಶಹಗಳು ರಾಕ್ಷಸರೂ ನಾಚಿಕೆಯಿಂದ ತಲೆತಗ್ಗಿಸುವಂತಹ ಹಿಂಸೆಯನ್ನು ಹಿಂದೂಗಳ ಮತಾಂತರಕ್ಕಾಗಿ ಮಾಡಿದ್ದಾರೆ. ಹಿಂದೂಗಳ ಮೇಲೆ ಅತಿಯಾದ ಕರ ವಿಧಿಸುವುದು, ಅವರನ್ನು ಉಪವಾಸವಿಡುವುದು, ಅವರನ್ನು ಹತ್ತಿಕ್ಕುವುದು, ಮನೋರಂಜನೆಗಾಗಿ ಅವರನ್ನು ಆನೆಗಳೊಂದಿಗೆ ಕಾದಾಡಿಸುವುದು, ತಲೆಯನ್ನು ಕತ್ತರಿಸಿ ಅದನ್ನು ಮೆರವಣಿಗೆ ಮಾಡುವುದು. ಊರೂರುಗಳಲ್ಲಿ ಹಿಂದೂಗಳ ಶಿರಚ್ಛೇದ ಮಾಡಿ ರಕ್ತದ ಹೊಳೆ ಹರಿಸುವುದು, ಹಿಂದೂ ಸ್ತ್ರೀಯರ ಬಲಾತ್ಕಾರ ಮಾಡುವುದು, ಅವರನ್ನು ಜನಾನಖಾನೆಯಲ್ಲಿ ತಳ್ಳುವುದು, ಅವರಿಂದ ಮುಸಲ್ಮಾನ ಪ್ರಜೆಯನ್ನು ಹೆಚ್ಚಿಸುವುದು, ಹೀಗೆ ಅನೇಕ ವಿಧದ ಕೃತಿಗಳನ್ನು ಮಾಡಿ ಇನ್ನು ಮಾಡಲು ಬಾಕಿಯೇನು ಉಳಿದಿಲ್ಲ. ಮುಸ್ಲಿಮ್ ಲೀಗ್‌ನ ೧೯೪೬ ರಲ್ಲಿನ ಒಂದು ಪತ್ರಿಕೆಯಲ್ಲಿ ಒಂದು ಆದೇಶವಿತ್ತು, ‘ಹಿಂದೂ ಸ್ತ್ರೀ ಮತ್ತು ಹೆಣ್ಣುಮಕ್ಕಳ ಮೇಲೆ ಬಲಾತ್ಕಾರ ಮಾಡಿರಿ ಮತ್ತು ಅವರನ್ನು ಓಡಿಸಿಕೊಂಡು ಹೋಗಿ ಅವರ ಮತಾಂತರ ಮಾಡಿರಿ’. ಎಷ್ಟು ಜನ ಸರ್ವಧರ್ಮಸಮಭಾವದವರಿಗೆ ಇದರ ಮಾಹಿತಿಯಿದೆ? ೧೯೮೯ರಲ್ಲಿ ಉಗ್ರಗಾಮಿಗಳು ‘ಇಸ್ಲಾಮಿಗಳಾಗಿರಿ, ಇಲ್ಲವಾದರೆ ಕಾಶ್ಮೀರವನ್ನು ಬಿಡಿ’ ಎಂದು ಕೊಟ್ಟ ಬಾಂಗ್ ಪ್ರತಿಯೊಂದು ನಿಜವಾದ ಹಿಂದೂವಿನ ಕಾಲಿನಡಿಯ ಬೆಂಕಿಯು ನೆತ್ತಿಗೇರಿಸುವಂತಿದೆ. ಈಗಂತೂ ‘ಲವ್ ಜಿಹಾದ್’ನ ಸಂಕಟವು ಹಿಂದೂಗಳ ಕುಟುಂಬಗಳನ್ನು ಧ್ವಂಸಗೊಳಿಸುವುದಕ್ಕಾಗಿ ಅವರ ಮನೆಗೆ ಬಂದಿದೆ.

ನೆಹರೂರವರ ರಾಜ್ಯಭಾರದಲ್ಲಿ ಕ್ರೈಸ್ತ ಧರ್ಮಕ್ಕೆ ರಾಜಾಶ್ರಯ ದೊರೆಯಿತು. ಗೋಧಿ ನೀಡುವ ಬದಲಿಗೆ ಕ್ರೈಸ್ತರಿಗೆ ಮತಾಂತರ ಮಾಡಲು ಅವಕಾಶ ನೀಡಬೇಕೆಂಬ ಅಮೇರಿಕಾದ ಬೇಡಿಕೆಯನ್ನು ನೆಹರೂರವರು ಒಪ್ಪಿದರು. ಇಂದಿರಾ ಗಾಂಧಿಯವರ ಸಮಯದಲ್ಲಿ ಕ್ರೈಸ್ತರ ಮತಾಂತರದ ಕಾರ್ಯದ ವೇಗ ಹೆಚ್ಚಿತು. ಈಗಂತೂ ಪೂರ್ಣ ಹಿಂದೂ ದೇಶವೇ ಒಂದು ಇಟಲಿಯ ಸೋನಿಯಾ ಗಾಂಧಿಯ ಬಂಧನದಲ್ಲಿದೆ. ಕ್ರೈಸ್ತ ಮಿಷನರಿಗಳಿಗೆ ಹೊರದೇಶದಿಂದ ಹಣ ಬರುತ್ತದೆ, ಇದು ಬಹಿರಂಗ ವಾಸ್ತವವಾಗಿದೆ. ಭಾರತದ ಸಂಪೂರ್ಣ ಪೂರ್ವಾಂಚಲವು ಕ್ರೈಸ್ತಮಯವಾಗುತ್ತಿರುವುದನ್ನು ನಾವು ತೆರೆದ ಕಣ್ಣಿನಿಂದ ನಿಸ್ಸಹಾಯಕರಾಗಿ ನೋಡುತ್ತಿದ್ದೇವೆ.

ಮತಾಂತರದ ಸಮಸ್ಯೆಯ ಗಂಭೀರತೆ!

೧೯ನೆಯ ಶತಮಾನದಿಂದ ಭಾರತದಲ್ಲಿ ಬುದ್ಧಿಜೀವಿ, ಸುಧಾರಣವಾದಿಗಳಿಂದಾಗಿ ಆಂಗ್ಲ ಶಿಕ್ಷಣದ ಮತ್ತು ಪಾಶ್ಚಾತ್ಯ ವಿಚಾರಸರಣಿಯ ಪ್ರಭಾವದಿಂದ ‘ಧರ್ಮವು ಅಫೀಮಿನ ಗುಳಿಗೆ’ ಎಂಬಂತಾಗಿ ಹೋಯಿತು. ಅದರಂತೆಯೇ ಆ ಸಮಯದಿಂದ ಹಿಂದೂಗಳ ಧರ್ಮದ ವಿಷಯದಲ್ಲಿನ ಸಂವೇದನೆಯು ಅತಿ ಕಡಿಮೆಯಾಯಿತು. ಸ್ವಾತಂತ್ರ್ಯದ ನಂತರದ ಕಾಂಗ್ರೆಸ್ಸಿನ ಆಡಳಿತದಲ್ಲಿ ತಥಾಕಥಿತ ನಿಧರ್ಮಿವಾದಿ ಮತ್ತು ಸರ್ವಧರ್ಮಸಮಭಾವ ಎಂದರೆ ಹಿಂದೂವಿರೋಧಿ ವಾತಾವರಣವು ಎಲ್ಲೆಡೆ ಪಸರಿಸಿದುದರಿಂದ ದುರ್ದೈವದಿಂದಾಗಿ ಹಿಂದೂ ಬುದ್ಧಿವಾದಿಗಳ ದೃಷ್ಟಿಯಲ್ಲಿ ಮತಾಂತರವು ಸಮಸ್ಯೆಯೇ ಅಲ್ಲವೆಂಬತಾಗಿ ಹೋಯಿತು. ಕೆಲವು ಬೆರಳೆಣಿಕೆಯ ಧರ್ಮಾಭಿಮಾನಿಗಳನ್ನು ಹೊರತುಪಡಿಸಿದರೆ ಮತಾಂತರದ ಭಯಾನಕ ಸ್ಥಿತಿ ಮತ್ತು ಪರಿಣಾಮಗಳ ಕುರಿತು ಕಿಂಚಿತ್ತು ತಿಳುವಳಿಕೆಯೂ ಬಹುತಾಂಶ ಹಿಂದೂಗಳಿಗಿಲ್ಲ. ಆದ್ದರಿಂದ ಇದನ್ನು ತಡೆಯಲು ಏನು ಮಾಡಬೇಕು ಎಂಬ ವಿಚಾರವೇ ಬರುತ್ತಿಲ್ಲ. ಹಾಗಾಗಿ ಈ ಸಮಸ್ಯೆಯು ಕಾಲಕಳೆದಂತೆಲ್ಲ ಇನ್ನೂ ಗಂಭೀರವಾಗುತ್ತಾ ಹೋಗುತ್ತಿದೆ.

ಮತಾಂತರದ ಭಯನಕ ವಾಸ್ತವಿಕತೆಯ ಕುರಿತಾಗಿ ಹಿಂದೂಗಳಲ್ಲಿ ಜಾಗೃತಿಯ ಆವಶ್ಯಕತೆ!

ಹಿಂದೂಗಳ ಅಸ್ತಿತ್ವದ ಮೇಲೆ ಪ್ರಶ್ನೆಚಿಹ್ನೆಯುಂಟು ಮಾಡುವ ಮತಾಂತರದ ಭಯಾನಕ ವಾಸ್ತವಿಕತೆಯು ಈ ಗ್ರಂಥದ ಮೂಲಕ ಹಿಂದೂಗಳಿಗೆ ತಲುಪಲಿದೆ. ಭೂತ ಮತ್ತು ವರ್ತಮಾನದ ವಾಸ್ತವಿಕತೆಯು ಹಿಂದೂಗಳಿಗೆ ತಿಳಿಯುವುದು, ಇದು ಅವರ ಅಸ್ತಿತ್ವಕ್ಕಾಗಿ ಕಾಲದ ಆವಶ್ಯಕತೆಯಾಗಿದೆ. ಅದು ಅವರಿಗೆ ಅರಿವಾದರೆ ಅವರು ಸ್ವಂತದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಂಘಟಿತರಾಗುವ ಸಾಧ್ಯತೆ ನಿರ್ಮಾಣವಾಗಬಹುದು. ಹಿಂದೂಗಳ ಅಸ್ತಿತ್ವದ ಸಂಘರ್ಷವು ಕಠಿಣವಾಗಿದೆ. ಶೇ.೮೦ರಷ್ಟು ನಿದ್ರಿಸ್ತ ಹಿಂದೂಗಳಿಗೆ ಸಮಸ್ಯೆಯ ಕುರಿತು ಗಂಭೀರತೆಯಿಲ್ಲ. ಸಾಂಪ್ರದಾಯಿಕ ಧರ್ಮನಿಷ್ಠರು ಹಿಂದೂಧರ್ಮವು ಮಹಾನ್ ಆಗಿದೆ ‘ಇಲ್ಲಿಯವರೆಗೂ ಅಳಿಯದೆ ಉಳಿದಿದೆ, ಮುಂದೆಯೂ ಹಾಗೆಯೆ ಉಳಿಯುವುದು’ ಎಂಬ ಸಮಾಧಾನದ ಭ್ರಮೆಗೆ ತುತ್ತಾಗಿದ್ದಾರೆ. ‘ನಾನು ಮತ್ತು ನನ್ನ ಸಂತೋಷ’ ಈ ಗುಂಪಿಗೆ ಸೇರಿದ ಹಿಂದೂಗಳ ಧರ್ಮದ ಕುರಿತಾದ ನಿಷ್ಕ್ರಿಯತೆ ಮತ್ತು ಉದಾಸೀನತೆ ಯಾವಾಗ ಭಂಗವಾಗುತ್ತದೆಯೋ ಅದು ದೇವರಿಗೇ ಗೊತ್ತು! ಆದರೆ ಜಾಗರೂಕ ಧರ್ಮನಿಷ್ಠರು ಮಾತ್ರ ತಮ್ಮದೇ ರೀತಿಯಲ್ಲಿ ಎಲ್ಲಾ ಹಿಂದೂ ಜನಮಾನಸವನ್ನು ಜಾಗೃತಗೊಳಿಸಲು ತತ್ಪರತೆಯಿಂದ ಪ್ರಯತ್ನಮಾಡುತ್ತಿದ್ದಾರೆ. ‘ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ’ ಎಂಬ ಗ್ರಂಥವು ಇದಕ್ಕೆ ಉಪಯುಕ್ತವಾಗಲಿದೆ.

ಪುಸ್ತಕದ ಸಂಕಲನವನ್ನು ಆಧ್ಯಾತ್ಮದಲ್ಲಿನ ಒರ್ವ ಅಧಿಕಾರಿ ವ್ಯಕ್ತಿಯಾಗಿರುವ ಪ.ಪೂ. ಡಾ. ಜಯಂತ ಬಾಳಾಜಿ ಅಠವಲೆಯವರು ಹಾಗೂ ಕಳೆದ ೧೫ ವರ್ಷಗಳಿಂದ ಹಿಂದೂ ಧರ್ಮದ ಪ್ರಸಾರದ ಕಾರ್ಯ ಮಾಡುತ್ತಿರುವ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯದ ವಕ್ತಾರರಾದ ಶ್ರೀ.ರಮೇಶ ಹನುಮಂತ ಶಿಂದೆಯವರು ಮಾಡಿದ್ದಾರೆ. ಮತಾಂತರದ ಭಯಾನಕ ದುಷ್ಪರಿಣಾಮಗಳ ಜೊತೆಯಲ್ಲಿಯೇ ಮತಾಂತರಕ್ಕೆ ಕಡಿವಾಣ ಹಾಕಲು ಉಪಾಯಗಳು ಮತ್ತು ಶುದ್ಧೀಕರಣದ ವಿಷಯದ ವಿಸ್ತ ತ ವಿವರಣೆಯನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಹಿಂದುತ್ವವಾದಿ ಸಂಘಟನೆಗಳಿಗೆ ಈ ಸಂದರ್ಭದಲ್ಲಿ ಆವಾಹನೆಯನ್ನು ನೀಡಲಾಗಿದೆ. ಹಿಂದೂಗಳ ಅಂತರಮನಸ್ಸಿನಲ್ಲಿ ತಣ್ಣಗಾಗಿರುವ ಧರ್ಮಸಂವೇದನೆಯ ಮೇಲೆ ಸನಾತನ ನಿರ್ಮಿತ ‘ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ’ ಎಂಬ ಗ್ರಂಥದ ಹನಿಯು ಬಿದ್ದು ಅಲೆಗಳು ಏಳಬೇಕು ಮತ್ತು ಆ ಅಲೆಗಳ ವಲಯಗಳು ಬೃಹದಾಕಾರವಾಗುತ್ತಾ ನಿದ್ರಿಸ್ತರಾದ ಬಹುಸಂಖ್ಯೆಯ ಹಿಂದೂಗಳು ಜಾಗೃತರಾಗಬೇಕೆಂಬುದು ಈ ಗ್ರಂಥಕರ್ತರ ಆಪೇಕ್ಷೆಯಾಗಿದೆ.

ಗ್ರಂಥದ ಹೆಸರು: ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ
ಸಂಕಲನಕಾರರು: ಪ.ಪೂ. ಡಾ. ಜಯಂತ ಬಾಳಾಜಿ ಅಠವಲೆ ಮತ್ತು ಶ್ರೀ.ರಮೇಶ ಹನುಮಂತ ಶಿಂದೆ

No comments:

Post a Comment

Note: only a member of this blog may post a comment.