‘ಹಿಂದೂ’ ಎಂಬ ಶಬ್ದದ ಅರ್ಥವು ವಿಶಿಷ್ಟ ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಅಥವಾ ಹಿಂದೂ ಧರ್ಮದ ಅನುಯಾಯಿಯಾಗಿರುವ ಅಥವಾ ಜನ್ಮದಿಂದ ಹಿಂದೂ ಆಗಿರುವ ವ್ಯಕ್ತಿ ಎಂದಾಗಿರದೆ ‘ಹಿನಾನಿ ಗುಣಾನಿ ದೂಷಯತಿ ಇತಿ ಹಿಂದುಃ|’ ಅಂದರೆ ‘ಹೀನ ರಜತಮ ಗುಣಗಳನ್ನು ‘ದೂಷಯತಿ’ ಅಂದರೆ ನಾಶ ಮಾಡುವವನು’, ಎಂಬಂತೆ ವ್ಯಾಪಕವಾಗಿದೆ. ರಜತಮಾತ್ಮಕ ಹೀನಗುಣಗಳನ್ನು ಮತ್ತು ಅದರಿಂದಾಗುವ ಕಾಯಿಕ, ವಾಚಿಕ ಮತ್ತು ಮಾನಸಿಕ ಮುಂತಾದ ಹೀನಕರ್ಮಗಳನ್ನು ಯಾವನು ತಿರಸ್ಕರಿಸುತ್ತಾನೆಯೋ, ಅಖಂಡವಾಗಿ ಸತ್ತ್ವಪ್ರಧಾನ ವೃತ್ತಿಯಲ್ಲಿ ರಮಿಸಿ ಯಾವನು ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುತ್ತಾನೆಯೋ, ಅವನೇ ಹಿಂದೂ. ಸ್ವಲ್ಪದರಲ್ಲಿ ಹೇಳುವುದಾದರೆ ಹಿಂದೂ ಎನ್ನುವುದು ಒಂದು ಸತ್ತ್ವಪ್ರಧಾನ ವೃತ್ತಿಯಾಗಿದೆ ಮತ್ತು ಹಿಂದುತ್ವವೆಂದರೆ ಸಾಧಕತ್ವವಾಗಿದೆ.
ವ್ಯಕ್ತಿಯಲ್ಲಿನ ಅಹಂ, ಷಡ್ರಿಪು ಮತ್ತು ಸ್ವಭಾವದೋಷಗಳು, ಅವನಲ್ಲಿನ ರಜತಮಾತ್ಮಕ ಗುಣಗಳ ದ್ಯೋತಕವಾಗಿವೆ. ಇದರಿಂದ ಸಾಧಕತ್ವವನ್ನು ನಿರ್ಮಿಸಲು ಸಮಾಜದಲ್ಲಿರುವ ಎಲ್ಲ ಘಟಕಗಳು ರಜತಮಾತ್ಮಕ ಪ್ರವೃತ್ತಿಯನ್ನು, ಅಂದರೆ ಅಹಂ ಮತ್ತು ಸ್ವಭಾವದೋಷಗಳನ್ನು ನಿರ್ಮೂಲನಗೊಳಿಸಿ ಪ್ರಾಮಾಣಿಕತೆ, ಮುಮುಕ್ಷುತ್ವ, ಶ್ರದ್ಧೆ, ಭಾವ, ಭಕ್ತಿ, ಸಾತತ್ಯ, ಜಿಗುಟುತನ, ಉನ್ನತರ ಆಜ್ಞಾಪಾಲನೆ, ತ್ಯಾಗ, ಪ್ರೀತಿ, ಸೇವೆಯಲ್ಲಿ ತತ್ಪರತೆ, ವ್ಯಾಪಕತೆ, ನಮ್ರತೆ, ಲೀನತೆ, ಶರಣಾಗತಿ, ಚಿಂತನಶೀಲತೆ, ಅಂತರ್ಮುಖತೆ ಮುಂತಾದ ಆದರ್ಶಗುಣಗಳನ್ನು ಬೆಳೆಸಿದರೆ ಸಾಧನೆಯಿಂದ ಸತ್ತ್ವಗುಣವು ವೃದ್ಧಿಯಾಗಿ ಸಮಾಜದಲ್ಲಿರುವ ಎಲ್ಲ ಘಟಕಗಳಲ್ಲಿ ಸಾಧಕತ್ವವನ್ನು ನಿರ್ಮಿಸುವುದು ಮತ್ತು ಧರ್ಮಾಚರಣೆಯಿಂದ ಸಮಾಜದ ಆತ್ಮಬಲವನ್ನು ವೃದ್ಧಿಸುವುದು ಸಾಧ್ಯವಾಗುತ್ತದೆ.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ 'ಸ್ವಭಾವದೋಷ ನಿರ್ಮೂಲನೆ ಮತ್ತು ಗುಣವೃದ್ಧಿ ಪ್ರಕ್ರಿಯೆ')

ಭಾಷೆ ಬಹಳ ಗ್ರಾಂಥಿಕವಾಗಿದೆ, ಮತ್ತು ಮಾಹಿತಿ ಬಹಳ ಕ್ಲುಪ್ತವಾಗಿದೆ. ಸರಳ ಮಾಡಿದರೆ ಹೆಚ್ಚು ಜನರಿಗೆ ತಲುಪೀತು. ಮತ್ತು ''ಹಿಂದೂ'' ಶಬ್ದಕ್ಕೆ ಈ ‘ಹಿನಾನಿ ಗುಣಾನಿ ದೂಷಯತಿ ಇತಿ ಹಿಂದುಃ’ ಎಂಭ ಶಾಬ್ದಿಕ ವ್ಯುತ್ಪತ್ತಿಯು ಒಂದೇ ಕಾರಣವಲ್ಲದೆ ಇನ್ನೂ ಕೆಲ ಐತಿಹಾಸಿಕ ಮತ್ತು ಭಾಷಾಸಂಬಂಧಿ ಕಾರಣಗಳಿವೆ ಎಂಬುದು ನನ್ನ ಭಾವನೆ
ReplyDelete