ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ


ಅ. ಸನಾತನದ ಉತ್ಪಾದನೆಗಳಲ್ಲಿ ದೈವೀ ತತ್ತ್ವವಿರುವುದರ ಕಾರಣಗಳು
೧. ಪರಾತ್ಪರಗುರುಗಳಾದ ಪ.ಪೂ.ಡಾ.ಜಯಂತ ಆಠವಲೆಯವರು ಸಾತ್ತ್ವಿಕ ಉತ್ಪಾದನೆಗಳ ನಿರ್ಮಿತಿಯ ಸಂಕಲ್ಪವನ್ನು ಮಾಡಿದ್ದಾರೆ. ಅವರ ಸಂಕಲ್ಪಶಕ್ತಿಯಿಂದ ಈ ಉತ್ಪಾದನೆಗಳಲ್ಲಿನ ದೈವೀ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿದೆ.
೨. ಬಹಳಷ್ಟು ಉತ್ಪಾದನೆಗಳಲ್ಲಿ ಗೋಮೂತ್ರ ಮತ್ತು ಯಜ್ಞದ ವಿಭೂತಿಯಂತಹ ಸಾತ್ತ್ವಿಕ ಘಟಕಗಳನ್ನು ಉಪಯೋಗಿಸಲಾಗಿದೆ.
೩. ಸನಾತನ ಊದುಬತ್ತಿ, ಅತ್ತರು ಮುಂತಾದ ಉತ್ಪಾದನೆಗಳಲ್ಲಿನ ಸುಗಂಧವು ಯಾವುದಾದರೊಂದು ದೇವತೆಯ ತತ್ತ್ವವನ್ನು ಆಕರ್ಷಿಸುವಂತಹದ್ದಾಗಿದೆ.
೪. ಹೆಚ್ಚಿನ ಉತ್ಪಾದನೆಗಳನ್ನು ನೈಸರ್ಗಿಕ ವಸ್ತುಗಳಿಂದಲೇ ತಯಾರಿಸಲಾಗಿದೆ ಮತ್ತು ಕೆಲವು ವಸ್ತುಗಳಲ್ಲಿ ಆವಶ್ಯಕತೆಗನುಸಾರ ರಾಸಾಯನಿಕಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗಿದೆ. ನೈಸರ್ಗಿಕ ವಸ್ತುಗಳಲ್ಲಿ ದೈವೀ ತತ್ತ್ವಗಳ ಪ್ರಮಾಣವು ಹೆಚ್ಚಿರುತ್ತದೆ.

ಆ. ಓರ್ವ ತಜ್ಞರು ಸನಾತನದ ಸಾತ್ತ್ವಿಕ ಉತ್ಪಾದನೆಗಳು ಪರಿಣಾಮಕಾರಿಯಾಗಿವೆ ಎಂದು ಹೇಳಿದ್ದಾರೆ: ಬೆಂಗಳೂರಿನಲ್ಲಿ ಶ್ರೀ.ಸುಬ್ರಹ್ಮಣ್ಯಮ್ ಅಯ್ಯರ್ ಎಂಬ ಹೆಸರಿನ ಓರ್ವ ‘ಹೀಲಿಂಗ್ ಮಾಸ್ಟರ್’ ಇದ್ದಾರೆ. ಸನಾತನದ ಸಾಧಕಿ ಸೌ.ಶೈಲಜಾ ಫಡ್ಕೆಯವರು ಅವರಿಗೆ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಮಹತ್ವ ಮತ್ತು ‘ಅವುಗಳನ್ನು ಹೇಗೆ ಉಪಯೋಗಿಸಬೇಕು’ ಎಂಬುದನ್ನು ಹೇಳಿದರು. ಶ್ರೀ.ಅಯ್ಯರ್‌ರವರು ‘ಸನಾತನ ಕರ್ಪೂರ’ ಮತ್ತು ‘ಸನಾತನ ಉದುಬತ್ತಿ’ಗಳನ್ನು ಕೂಡಲೇ ಉಪಯೋಗಿಸಲು ಪ್ರಾರಂಭಿಸಿದರು. ಅನಂತರ ಅವರು ಸೌ.ಫಡ್ಕೆಯವರಿಗೆ, ‘ಈ ವಸ್ತುಗಳಿಂದ ಬಹಳ ಆಧ್ಯಾತ್ಮಿಕ ಉಪಾಯಗಳಾಗುತ್ತವೆ. ನಾನು ಇತರರಿಗೆ ಆಧ್ಯಾತ್ಮಿಕ ಉಪಾಯ ಮಾಡಿದ ನಂತರ ನನ್ನ ಮೇಲೆ ಬಂದಿರುವ ತ್ರಾಸದಾಯಕ ಶಕ್ತಿಯ ಆವರಣವನ್ನು ಸನಾತನದ ಊದುಬತ್ತಿಯಿಂದ ತೆಗೆಯುತ್ತೇನೆ, ಹಾಗೆಯೇ ಸನಾತನದ ಕರ್ಪೂರದ ಸುಗಂಧವನ್ನು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು. ಈಗ ಅವರು ಪ್ರತಿವಾರ ಸನಾತನ ನಿರ್ಮಿತ ಊದುಬತ್ತಿ, ಕರ್ಪೂರ ಮತ್ತು ಸನಾತನದ ಇತರ ಉತ್ಪಾದನೆಗಳನ್ನು ಖರೀದಿಸುತ್ತಾರೆ ಮತ್ತು ಅವರಲ್ಲಿಗೆ ಬರುವ ರೋಗಿಗಳಿಗೂ ವಿತರಿಸುತ್ತಾರೆ. - ಶ್ರೀ.ಪ್ರಣವ ಮಣೇರಿಕರ, ಬೆಂಗಳೂರು. (೪.೧೧.೨೦೧೧)

ಆಧ್ಯಾತ್ಮಿಕ ಉಪಾಯಗಳ ಬಗ್ಗೆ ಗಮನದಲ್ಲಿಡಬೇಕಾದ ಸಾಮಾನ್ಯ ಸೂಚನೆಗಳು

ಅ. ಆಧ್ಯಾತ್ಮಿಕ ಉಪಾಯದ ಆರಂಭದಲ್ಲಿ ಪ್ರಾರ್ಥನೆ, ಉಪಾಯವನ್ನು ಮಾಡುವಾಗ ನಾಮಜಪ ಮತ್ತು ಉಪಾಯ ಮುಗಿದ ನಂತರ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು

ಅ೧. ಪ್ರಾರ್ಥನೆ ಮಾಡುವುದು
ಅ೧ಅ. ಪ್ರಾರ್ಥನೆ : ಆಧ್ಯಾತ್ಮಿಕ ಉಪಾಯವನ್ನು ಆರಂಭಿಸುವ ಮೊದಲು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು, ‘ಹೇ ದೇವತೆಯೇ, ನಿನ್ನ ಕೃಪೆಯಿಂದ ಈ ವಸ್ತುವಿನ ಮೂಲಕ (ವಸ್ತು ಇದ್ದಲ್ಲಿ ಅದನ್ನು ಉಲ್ಲೇಖಿಸಬೇಕು) ನನ್ನ ಮೇಲೆ (ತಮ್ಮ ಹೆಸರು ಹೇಳಬೇಕು) ಹೆಚ್ಚೆಚ್ಚು ಆಧ್ಯಾತ್ಮಿಕ ಉಪಾಯವಾಗಿ ನನ್ನ ಆಧ್ಯಾತ್ಮಿಕ ತೊಂದರೆಗಳು ಬೇಗನೇ ನಾಶವಾಗಲಿ.’
ಆಧ್ಯಾತ್ಮಿಕ ಉಪಾಯ ನಡೆಯುತ್ತಿರುವಾಗ ಆಗಾಗ ಪ್ರಾರ್ಥನೆ ಮಾಡಬೇಕು.

ಅ೧ಆ. ವಾಸ್ತುಶುದ್ಧಿ ಮತ್ತು ವಾಹನಶುದ್ಧಿಗಾಗಿ ಮಾಡಬೇಕಾದ ಪ್ರಾರ್ಥನೆ : ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯನ್ನು ಆರಂಭಿಸುವ ಮೊದಲು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು. ‘ಹೇ ದೇವತೆ, ನಿನ್ನ ಕೃಪೆಯಿಂದ ನನ್ನ ಸುತ್ತಲೂ (ತಮ್ಮ ಹೆಸರನ್ನು ಹೇಳಬೇಕು) ರಕ್ಷಾ ಕವಚ ನಿರ್ಮಾಣವಾಗಲಿ, ಹಾಗೆಯೇ ಈ ವಾಸ್ತುವಿನಲ್ಲಿರುವ / ವಾಹನದಲ್ಲಿರುವ ಕೆಟ್ಟ ಶಕ್ತಿಗಳ ಅಸ್ತಿತ್ವ ಮತ್ತು ಕೆಟ್ಟ ಸ್ಪಂದನಗಳು ನಾಶವಾಗಲಿ’.
ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯನ್ನು ಮಾಡುವಾಗಲೂ ಮಧ್ಯಮಧ್ಯದಲ್ಲಿ ಪ್ರಾರ್ಥನೆ ಮಾಡಬೇಕು.
ಅ೨. ನಾಮಜಪ ಮಾಡುವುದು: ಉಪಾಯವನ್ನು ಮಾಡುವಾಗ ಮನಸ್ಸಿನಲ್ಲಿ ಅಥವಾ ದೊಡ್ಡ ಧ್ವನಿಯಲ್ಲಿ ಉಪಾಸ್ಯದೇವತೆಯ ನಾಮಜಪ ಮಾಡಬೇಕು.
ಅ೨ಅ. ವಾಸ್ತುಶುದ್ಧಿಯನ್ನು ಮಾಡುವುದರ ಮೊದಲು ೧೫ ನಿಮಿಷ ಶ್ರೀ ಗಣೇಶನ ಅಥವಾ ಉಪಾಸ್ಯದೇವತೆಯ ನಾಮಜಪ ಮಾಡುವುದು ವಿಶೇಷ ಲಾಭದಾಯಕವಾಗಿದೆ.

ಅ೩. ಕೃತಜ್ಞತೆಯನ್ನು ವ್ಯಕ್ತ ಪಡಿಸುವುದು : ಉಪಾಯ ಪೂರ್ಣವಾದ ನಂತರ ಉಪಾಸ್ಯದೇವತೆ ಮತ್ತು ಉಪಾಯಕ್ಕೆ ಸಹಾಯಕವಾದಂತಹ ವಸ್ತುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಬೇಕು.

ಆ.ಉಪಾಯಗಳ ಬಗ್ಗೆ ಮನಸ್ಸಿನಲ್ಲಿ ಭಾವವಿರಬೇಕು!
೧. ದೇವರ ಕೃಪೆಯಿಂದ ನನಗೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವ ಅವಕಾಶ ಲಭಿಸಿ ನನ್ನ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗುತ್ತಿವೆ ಎಂಬ ಭಾವವಿರಬೇಕು.
೨. ಉಪಾಯಗಳ ವಸ್ತುಗಳ ಬಗ್ಗೆಯೂ ಭಾವವಿರಬೇಕು, ಉದಾ. ‘ಸನಾತನ ಊದುಬತ್ತಿ’ ಎಂದರೆ ‘ದೇವರು ಕಳುಹಿಸಿದ ರಕ್ಷಕ’ವಾಗಿದೆ ಅಥವಾ ‘ಸನಾತನದ ಅತ್ತರಿನ’ ಸುಗಂಧ ತೆಗೆದುಕೊಳ್ಳುವಾಗ ‘ಶ್ರೀ ದುರ್ಗಾದೇವಿಯ ಚರಣಗಳಿಗೆ ಅರ್ಪಿಸಿದ ಹೂವುಗಳ ಸುವಾಸನೆಯನ್ನು ಆಘ್ರಾಣಿಸುತ್ತಿದ್ದೇನೆ’ ಎಂಬ ಭಾವವಿರಬೇಕು.

ಇ.ಆಧ್ಯಾತ್ಮಿಕ ತೊಂದರೆಗಳ ತೀವ್ರತೆಗನುಸಾರ ಉಪಾಯಗಳನ್ನು ಮಾಡಬೇಕು! : ‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?' ಎಂಬುದರಲ್ಲಿ ಆಧ್ಯಾತ್ಮಿಕ ತೊಂದರೆಗಳ ಕೆಲವು ಲಕ್ಷಣಗಳನ್ನು ನೀಡಲಾಗಿದೆ. ಅವುಗಳಿಂದ ಸಾಧಾರಣ ನಮಗಿರುವ ತೊಂದರೆಗಳ ಅಂದಾಜು ಮಾಡಬಹುದು. ತೊಂದರೆಗಳ ತೀವ್ರತೆಗನುಸಾರ ಆಧ್ಯಾತ್ಮಿಕ ಉಪಾಯಗಳ ವಿಧ ಮತ್ತು ಉಪಾಯಗಳ ಪುನರಾವರ್ತನೆಯನ್ನು ಹೆಚ್ಚಿಸಬೇಕು.

ಈ. ಹುಣ್ಣಿಮೆ ಮತ್ತು ಅಮಾವಾಸ್ಯೆ ಈ ತಿಥಿಗಳಿಗೆ, ಹಾಗೆಯೇ ಈ ತಿಥಿಗಳ ಎರಡು ದಿನ ಮೊದಲು ಹಾಗೂ ಎರಡು ದಿನಗಳ ನಂತರ ಉಪಾಯಗಳನ್ನು ಹೆಚ್ಚಿಸುವುದರೊಂದಿಗೆ ಪ್ರಾರ್ಥನೆ, ನಾಮಜಪ ಮುಂತಾದ ಸಾಧನೆಗಳನ್ನೂ ಹೆಚ್ಚೆಚ್ಚು ಮಾಡಬೇಕು!

ಉ. ಆಧ್ಯಾತ್ಮಿಕ ತೊಂದರೆಗಳ ಲಕ್ಷಣಗಳು ಕಾಣಿಸದಿದ್ದರೂ, ಕಡಿಮೆ ಪ್ರಮಾಣದಲ್ಲಾದರೂ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲೇಬೇಕು!

ಊ. ಆಧ್ಯಾತ್ಮಿಕ ಉಪಾಯ ಮಾಡುವಾಗ ‘ಕೆಲವೊಮ್ಮೆ ಏನಾದರೊಂದು ತೊಂದರೆಯಾಗುವುದು’ ಸಹ ಉಪಾಯದ ಪರಿಣಾಮವಾಗಿದೆ ಎಂಬುದನ್ನು ಗಮನದಲ್ಲಿಡಬೇಕು!
ಊ೧. ಆಧ್ಯಾತ್ಮಿಕ ಉಪಾಯವೆಂದರೆ ಒಂದು ರೀತಿಯಲ್ಲಿ ಕೆಟ್ಟ ಶಕ್ತಿಗಳ ವಿರುದ್ಧದ ಸೂಕ್ಷ್ಮದಲ್ಲಿನ ಯುದ್ಧವೇ ಆಗಿದೆ!
ಊ೨. ಕೆಟ್ಟ ಶಕ್ತಿಗಳ ವಿರುದ್ಧದ ಯುದ್ಧದಿಂದ ವ್ಯಕ್ತಿಯ ಶರೀರ ಮತ್ತು ಮನಸ್ಸಿನ ಮೇಲಾಗುವ ಪರಿಣಾಮಗಳ ಕೆಲವು ಉದಾಹರಣೆಗಳು : ವ್ಯಕ್ತಿಗೆ ಆರಂಭದಲ್ಲಿ ಕೆಲವು ಸಮಯ / ಕೆಲವು ದಿನ ಅಸ್ವಸ್ಥವೆನಿಸುವುದು, ತಲೆ ಭಾರವಾಗುವುದು, ಆಯಾಸಗೊಂಡಂತಾಗುವುದು, ಉಪಾಯ ಮಾಡುವಾಗ ಸತತವಾಗಿ ತೇಗು / ಆಕಳಿಕೆಗಳು ಬರುವುದು ಮುಂತಾದ ತೊಂದರೆಗಳಾಗಬಹುದು. ಇಂತಹ ಸಮಯದಲ್ಲಿ ಹೆದರಬಾರದು. ಏಕೆಂದರೆ ಇವು ವ್ಯಕ್ತಿಗಾಗುವ ಆಧ್ಯಾತ್ಮಿಕ ತೊಂದರೆಗಳ ಮೇಲೆ ಉಪಾಯವಾಗುತ್ತಿರುವುದರ ಲಕ್ಷಣವಾಗಿವೆ.

ಊ೩. ಉಪಾಯಗಳನ್ನು ಮಾಡುವಾಗ ತೊಂದರೆಯಾದರೆ ಅಥವಾ ಅಡಚಣೆಗಳು ಬಂದರೆ ಏನು ಮಾಡಬೇಕು?
ಅ. ಹೇಗೆ ಶರೀರದಲ್ಲಿನ ರೋಗಜಂತುಗಳನ್ನು ನಾಶಗೊಳಿಸಲು ‘ಇಂಜೆಕ್ಷನ್’ ಚುಚ್ಚಿಕೊಳ್ಳುವಾಗ ನಾವು ವೇದನೆಯನ್ನು ಸಹಿಸುತ್ತೇವೆಯೋ, ಹಾಗೆಯೇ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಾಗ ಉಪಾಯಗಳ ಪರಿಣಾಮವೆಂದು ಸ್ವಲ್ಪ ತೊಂದರೆಯಾದರೆ ಅದನ್ನೂ ಸಹಿಸಬೇಕು. ಹೀಗೆ ತೊಂದರೆಗಳಾಗುತ್ತಿದ್ದಲ್ಲಿ ಅಥವಾ ಅಡಚಣೆಗಳು ಉಂಟಾದಲ್ಲಿ ಉಪಾಯಗಳನ್ನು ಜಿಗುಟುತನದಿಂದ ಮಾಡಬೇಕು. ದೃಢನಿಶ್ಚಯದಿಂದ ಉಪಾಯಗಳನ್ನು ಮಾಡುತ್ತಾ ಹೋದರೆ ನಿಧಾನವಾಗಿ ನಮಗಾಗುವ ಸೂಕ್ಷ್ಮದಲ್ಲಿನ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗತೊಡಗುತ್ತವೆ ಮತ್ತು ಜೀವನದಲ್ಲಿನ ಸಮಸ್ಯೆಗಳ ಮೇಲೆ ವಿಜಯ ಸಾಧಿಸುವುದು ಸುಲಭವಾಗುತ್ತದೆ.
ಆ. ಯಾವುದಾದರೊಂದು ಉಪಾಯವನ್ನು ಮಾಡುವಾಗ ಉಪಾಯದ ಪರಿಣಾಮವೆಂದು ಅಸಹನೀಯ ತೊಂದರೆಯಾಗುತ್ತಿದ್ದಲ್ಲಿ (ಉದಾ. ತಲೆ ತುಂಬಾ ನೋಯುತ್ತಿದ್ದಲ್ಲಿ) ಸ್ವಲ್ಪ ಹೊತ್ತು ಆ ಉಪಾಯವನ್ನು ಮಾಡಬಾರದು. ತೊಂದರೆ ಕಡಿಮೆಯಾದ ನಂತರ ಮತ್ತೊಮ್ಮೆ ಉಪಾಯ ಮಾಡಿ ನೋಡಬೇಕು. ಆ ಉಪಾಯದಿಂದ ತೊಂದರೆಯು ಹಾಗೆಯೇ ಆಗುತ್ತಿದ್ದರೆ, ಇತರ ಯಾವುದಾದರೊಂದು ಉಪಾಯ ಮಾಡಿ ನೋಡಬೇಕು. ಪ್ರತಿಯೊಂದು ಉಪಾಯದ ಸಮಯದಲ್ಲಿ ತೀವ್ರ ತೊಂದರೆಯಾಗುತ್ತಿದ್ದಲ್ಲಿ ಅದರ ಬಗ್ಗೆ ತಿಳಿದವರಿಗೆ ಅಥವಾ ಸಂತರನ್ನು ಕೇಳಬೇಕು.

ಸೂಚನೆ : ಸನಾತನದ ಸಾತ್ತ್ವಿಕ ಉತ್ಪಾದನೆಗಳಿಂದ ಆಧ್ಯಾತ್ಮಿಕ ಉಪಾಯವನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ತಮ್ಮ ಸಮೀಪದ ಸನಾತನದ ಸತ್ಸಂಗವನ್ನು ಅಥವಾ ಸನಾತನದ ಸಾಧಕರನ್ನು ಸಂಪರ್ಕಿಸಿರಿ.

(ವಿವರವಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ "ಜೀವನದಲ್ಲಿ ಅಸುರೀ ಶಕ್ತಿಗಳಿಂದಾಗುತ್ತಿರುವ ತೊಂದರೆಗಳಿಂದ ರಕ್ಷಣೆ ಪಡೆಯುವ ಉಪಾಯಗಳು! (ವಾಸ್ತು ಮತ್ತು ವಾಹನಶುದ್ಧಿಸಹಿತ) - ಭಾಗ ೨")

ಸಂಬಂಧಿತ ಲೇಖನಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು
‘ದೃಷ್ಟಿ ತಗಲುವುದು’ ಎಂದರೇನು?ದೃಷ್ಟಿ ಹೇಗೆ ತಗಲುತ್ತದೆ?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
Dharma Granth

No comments:

Post a Comment

Note: only a member of this blog may post a comment.