ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ
ಅ. ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ’ ಎಂದರೇನು? : ಪೃಥ್ವಿ,
ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ ವಿಶ್ವದಲ್ಲಿನ ಪ್ರತಿಯೊಂದು ವಿಷಯದ ನಿರ್ಮಿತಿಯು ಇವುಗಳಿಂದಲೇ ಆಗಿದೆ. ಮನುಷ್ಯನ ಶರೀರವೂ ಈ ೫ ತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಈ ಐದು ತತ್ತ್ವಗಳನ್ನು ಆಯಾ ಸ್ತರದಲ್ಲಿ ಆಕರ್ಷಿಸಿಕೊಳ್ಳಲು ಅಗ್ರೇಸರವಾಗಿರುವ ಘಟಕಗಳ (ಉದಾ. ಊದುಬತ್ತಿ, ಅತ್ತರು, ಕರ್ಪೂರ, ಗೋಮೂತ್ರ) ಸಹಾಯದಿಂದ ಮಾಡಲಾಗುವ ಆಧ್ಯಾತ್ಮಿಕ ಉಪಾಯಗಳಿಗೆ ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯಗಳು’ ಎನ್ನುತ್ತಾರೆ.
ಆ. ಪಂಚತತ್ತ್ವಗಳ ಸ್ತರಗಳಿನುಸಾರ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಉಪಯೋಗ : ಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ವಿವಿಧ ಲೇಖನಗಳಿಂದ ತಿಳಿದುಕೊಳ್ಳುವವರಿದ್ದೇವೆ. ‘ಸನಾತನ ಊದುಬತ್ತಿ’ಯನ್ನು ಉರಿಸದೇ ಅದರ ಸಹಾಯದಿಂದ ಶರೀರದ ಮೇಲಿನ ತ್ರಾಸದಾಯಕ ಆವರಣ ತೆಗೆಯುವುದು ಪೃಥ್ವಿತತ್ತ್ವದ ಸ್ತರದಲ್ಲಿನ ಉಪಾಯದಲ್ಲಿ ಬರುತ್ತದೆ, ಊದುಬತ್ತಿ ಉರಿಸಿ ಉಪಾಯ ಮಾಡುವುದು ತೇಜ-ವಾಯು ಸ್ತರದ ಉಪಾಯದಲ್ಲಿ ಬರುತ್ತದೆ.
‘ಸನಾತನ ಅತ್ತರು’ (ಸುಗಂಧದ್ರವ್ಯ) ಹಚ್ಚಿಕೊಂಡು ಅದರ ಸುಗಂಧ ತೆಗೆದುಕೊಳ್ಳುವುದು
(ತತ್ತ್ವ : ಪೃಥ್ವಿ-ಆಪತತ್ತ್ವ)
ಅ. ಕಾರ್ಯ/ಉಪಯುಕ್ತತೆ
೧.ಶ್ವಾಸಮಾರ್ಗದ ಶುದ್ಧಿಯಾಗುತ್ತದೆ : ಶ್ವಾಸದೊಂದಿಗೆ ‘ಸನಾತನ ಅತ್ತರ’ನಲ್ಲಿರುವ ಸುಗಂಧವು ಶರೀರದೊಳಗೆ ಹೋಗಿ ಶ್ವಾಸಮಾರ್ಗವು ಚೈತನ್ಯದ ಸ್ತರದಲ್ಲಿ ಶುದ್ಧವಾಗುತ್ತದೆ. ಇದರಿಂದ ವಾತಾವರಣದಲ್ಲಿನ ರಜ-ತಮ ಕಣಗಳು, ನಕಾರಾತ್ಮಕ ವಿಚಾರ ಮತ್ತು ತ್ರಾಸದಾಯಕ ಶಕ್ತಿಯು ಶ್ವಾಸದ ಮಾರ್ಗದಿಂದ ಒಳಗೆ ಬರುವುದು ತಡೆಗಟ್ಟಲ್ಪಡುತ್ತದೆ.
೨.ಮನಸ್ಸಿನಲ್ಲಿನ ನಕಾರಾತ್ಮಕತೆಯನ್ನು ದೂರಗೊಳಿಸಲು ಮತ್ತು ಸೇವೆಯಲ್ಲಿ ಮನಸ್ಸನ್ನು ಪ್ರಸನ್ನವಾಗಿರಿಸಲು ‘ಸನಾತನ ಅತ್ತರಿನ’ ದೈವೀ ಸುಗಂಧವು ಉಪಯುಕ್ತವಾಗಿದೆ.
೩.‘ಸನಾತನ ಅತ್ತರ’ ಇದರಲ್ಲಿನ ಸುವಾಸನೆಯ ಸಹವಾಸದಲ್ಲಿ ಮಾಡಿದ ಕರ್ಮವು ಸಾತ್ತ್ವಿಕವಾಗುತ್ತದೆ.
ಆ. ‘ಸನಾತನ ಅತ್ತರ’ನ್ನು ಹೇಗೆ ಉಪಯೋಗಿಸಬೇಕು?
೧. ಸನಾತನ ಅತ್ತರನ್ನು ಕೈಗೆ ಹಚ್ಚಿಕೊಂಡು ಅದರ ಪರಿಮಳವನ್ನು ದೀರ್ಘ ಶ್ವಾಸದೊಂದಿಗೆ ತೆಗೆದುಕೊಳ್ಳಬೇಕು.
೨. ಹತ್ತಿಯ ಚಿಕ್ಕ ಉಂಡೆಗೆ ಅತ್ತರು ಹಚ್ಚಿ ಆ ಉಂಡೆಯನ್ನು ಕಿವಿಯ ಹಾಲೆಯ ಮೇಲಿನ ಭಾಗದಲ್ಲಿ ಇಡಬೇಕು ಮತ್ತು ಆಗಾಗ ಆ ಉಂಡೆಯಿಂದ ಕೈಗೆ ಅತ್ತರು ಹಚ್ಚಿಕೊಂಡು ಅದರ ಪರಿಮಳವನ್ನು ತೆಗೆದುಕೊಳ್ಳಬೇಕು.
೩. ಕರವಸ್ತ್ರಕ್ಕೆ (ರುಮಾಲು) ಸ್ವಲ್ಪ ಅತ್ತರು ಹಚ್ಚಿ ಆಗಾಗ ಅದರ ಪರಿಮಳವನ್ನು ತೆಗೆದುಕೊಳ್ಳಬೇಕು.
೪. ಶರೀರಕ್ಕೆ ದುರ್ಗಂಧ ಬರುತ್ತಿದ್ದಲ್ಲಿ ಎಣ್ಣೆಯಲ್ಲಿ ಒಂದು ಹನಿ ಸನಾತನದ ‘ಚಮೇಲಿ’ ಅತ್ತರು ಹಾಕಿ ಅದರ ಮೂಲಕ ಮರ್ದನ (ಮಾಲಿಶ್) ಮಾಡಿದರೆ ಶರೀರದ ಆಯಾ ಭಾಗದಲ್ಲಿನ ದುರ್ಗಂಧಯುಕ್ತ ವಾಯು ನಾಶವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೨೩.೪.೨೦೦೯)
ಇ. ಲೋಲಕದ ಮೂಲಕ ದೃಢಪಟ್ಟಿರುವ ‘ಸನಾತನ ಅತ್ತರ’ನ ಸಾತ್ತ್ವಿಕತೆ :
ಅಂತರರಾಷ್ಟ್ರೀಯ ಸ್ತರದಲ್ಲಿ ಮಾನ್ಯತೆ ಪಡೆದ ‘ಲೋಲಕ ಚಿಕಿತ್ಸಾ ಪದ್ಧತಿ’ಯ ಮೂಲಕ ವಿವಿಧ ವಸ್ತುಗಳು, ವಾತಾವರಣ, ವ್ಯಕ್ತಿ ಮುಂತಾದವುಗಳಲ್ಲಿನ ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯ ಅಸ್ತಿತ್ವವನ್ನು ಗುರುತಿಸಬಹುದು. ಸಕಾರಾತ್ಮಕ ಶಕ್ತಿಯಿದ್ದಲ್ಲಿ ಲೋಲಕವು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯಿದ್ದಲ್ಲಿ ಅದು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ. ಪೇಟೆಯಲ್ಲಿ (ಮಾರುಕಟ್ಟೆ) ನ ಅತ್ತರು ಮತ್ತು ‘ಸನಾತನ ಅತ್ತರು’ ಇವುಗಳ ಬಾಟಲಿಗಳ ಮೇಲೆ ಪ್ರತ್ಯೇಕವಾಗಿ ಲೋಲಕವನ್ನು ಹಿಡಿದಾಗ ನನಗೆ ಮುಂದಿನಂತೆ ಅರಿವಾಯಿತು.
ಇ೧. ಪೇಟೆಯಲ್ಲಿನ ಅತ್ತರು : ಇದರ ಮೇಲೆ ಲೋಲಕವು ನಕಾರಾತ್ಮಕ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳ ವಿರುದ್ಧ ದಿಕ್ಕಿನಲ್ಲಿ) ತಿರುಗಿತು.
ಇ೨. ಸನಾತನ ಅತ್ತರು : ಇದರ ಮೇಲೆ ಲೋಲಕವು ಸಕಾರಾತ್ಮಕ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳ ದಿಕ್ಕಿನಲ್ಲಿ) ತಿರುಗಿತು. ಇದರಿಂದ ‘ಸನಾತನದ ಅತ್ತರಿನಲ್ಲಿ’ ಚೈತನ್ಯವಿದೆ ಎಂದು ಸ್ಪಷ್ಟವಾಗುತ್ತದೆ.
- ಶ್ರೀ.ಪ್ರಕಾಶ ಕರಂದೀಕರ, ಮಾಲಾಡ, ಮುಂಬೈ (೨೦೦೯)
ಈ. ಅನುಭೂತಿ - ಕುತ್ತಿಗೆಯ ನರ ನೋಯುವುದು ಮತ್ತು ತಲೆ ಜೋಮುಗಟ್ಟಿದಂತಾಗುವುದು, ಔಷಧಿಗಳಿಂದ ಕಡಿಮೆಯಾಗದೇ, ಸನಾತನದ ಅತ್ತರು ಹಚ್ಚಿದ ಒಂದು ಗಂಟೆಯಲ್ಲಿ ಕಡಿಮೆಯಾಗುವುದು : ಬಹಳಷ್ಟು ದಿನಗಳಿಂದ ನನ್ನ ಕುತ್ತಿಗೆಯ ಬಲಬದಿಯ ನರವು ಬಹಳ ನೋಯುತ್ತಿತ್ತು ಮತ್ತು ತಲೆಯೂ ಜೋಮುಗಟ್ಟುತ್ತಿತ್ತು. ವೈದ್ಯಕೀಯ ಔಷಧೋಪಚಾರ ಮಾಡಿಯೂ ನೋವು ಕಡಿಮೆಯಾಗುತ್ತಿರಲಿಲ್ಲ. ಅನಂತರ ಸನಾತನದ ಓರ್ವ ಸಾಧಕರು ನನಗೆ ಸನಾತನದ ‘ಚಂದನ’ ಅತ್ತರನ್ನು ಕುತ್ತಿಗೆಗೆ ಹಚ್ಚಲು ಹೇಳಿದರು. ನಾನು ಹಾಗೆ ಮಾಡಿದ ಒಂದು ಗಂಟೆಯೊಳಗೆ ಕುತ್ತಿಗೆಯ ನರದ ನೋವು ಮತ್ತು ತಲೆ ಜೋಮುಗಟ್ಟುವುದು ಸಂಪೂರ್ಣ ನಿಂತು ಹೋಯಿತು. - ಶ್ರೀ.ಅಮೋಲ ಪಾಟೀಲ, ಸಾಂಗ್ಲಿ.
ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
"ಸನಾತನ ಅತ್ತರ್"ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
No comments:
Post a Comment
Note: only a member of this blog may post a comment.