ಆಹಾರ ಮತ್ತು ಕಪ್ಪು ಶಕ್ತಿ ಹಾಗೂ ಅದರ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿ


ಜಠರಾಗ್ನಿ ಮಂದವಾದಾಗ (ಅಗ್ನಿಮಾಂದ್ಯ) ಜಡ ಆಹಾರವನ್ನು ಸೇವಿಸುವುದರಿಂದ ಆಮದೋಷಗಳ (ವಾಯುದೋಷಗಳ) ನಿರ್ಮಿತಿಯಾಗುವುದು: ‘ಶರೀರದಲ್ಲಿನ ಅಗ್ನಿಯು ಮಂದವಾಗಿದ್ದಾಗ ಲಘು ಆಹಾರವನ್ನು ತೆಗೆದುಕೊಳ್ಳಬೇಕು. ಜಠರಾಗ್ನಿ ಮಂದವಾದಾಗ ವಾತವನ್ನು ಹೆಚ್ಚಿಸುವ, ಜಡ, ಎಣ್ಣೆಯ ಪದಾರ್ಥಗಳನ್ನು ಸೇವಿಸಿದರೆ ಅಗ್ನಿಯು ಇನ್ನಷ್ಟು ದುರ್ಬಲವಾಗಿ ಶರೀರದಲ್ಲಿ ಆಮದೋಷ (ಅಜೀರ್ಣವಾಗಿ ವಿಷಸಮಾನವಾದ ಘಟಕಗಳ) ಉತ್ಪನ್ನವಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುತ್ತದೆ.

ಅಸಮತೋಲ ಆಹಾರದಿಂದ ಶರೀರದಲ್ಲಿ ಕಪ್ಪು ಶಕ್ತಿಯು ನಿರ್ಮಾಣವಾಗುವುದು: ಆಹಾರ ಸೇವನೆ ಮತ್ತು ಜೀರ್ಣಕ್ರಿಯೆಯಲ್ಲಿ ನಾಲ್ಕು ಘಟಕಗಳು ಕಾರ್ಯ ಮಾಡುತ್ತವೆ. ಅವು ಮನಸ್ಸು, ನಾಲಿಗೆ, ಅಗ್ನಿ ಮತ್ತು ಜಠರ. ಈ ಎಲ್ಲ ಘಟಕಗಳ ವಿಚಾರ ಮಾಡಿ ಸಮತೋಲ ಮತ್ತು ಆವಶ್ಯಕ ಆಹಾರವನ್ನು ಸೇವಿಸಬೇಕು, ಆದರೆ ಈಗ ಹೆಚ್ಚಿನ ಜನರ ಒಲವು ಆಹಾರದ ಪೌಷ್ಟಿಕತೆಗಿಂತ ರುಚಿಯ ಕಡೆಗಿರುವುದು ಕಂಡುಬರುತ್ತದೆ. ಇದರಿಂದ ಜಠರ ಮತ್ತು ಅಗ್ನಿಯ ವಿಚಾರವನ್ನು ಮಾಡದೇ ಮನಸ್ಸು ಮತ್ತು ನಾಲಿಗೆಯ ವಿಚಾರ ಮಾತ್ರ ಆಗುತ್ತದೆ. ಇಂತಹ ಆಹಾರವನ್ನು ಸೇವಿಸಿದರೆ ಅದು ಪ್ರಾಣಶಕ್ತಿಯನ್ನು ಕೊಡದೇ, ಶರೀರದಲ್ಲಿ ಆಮವನ್ನು (ಕಪ್ಪು ಶಕ್ತಿಯನ್ನು) ನಿರ್ಮಿಸುತ್ತದೆ. ಈ ಕಪ್ಪು ಶಕ್ತಿಯು ಅಪಾನ ವಾಯುವಿನ ಮೂಲಕ ಮಸ್ತಕದವರೆಗೆ (ತಲೆಯವರೆಗೆ) ಹೋಗಿ ನಮಗೆ ತೊಂದರೆಯನ್ನು ಕೊಡುತ್ತದೆ.

ಸಮತೋಲ ಆಹಾರದಿಂದ ಅನ್ನವು ಜೀರ್ಣವಾಗಿ (ಪಚನವಾಗಿ) ಪ್ರಾಣಶಕ್ತಿಯು ಹೆಚ್ಚುವುದು, ಮತ್ತು ಅಸಮತೋಲ ಆಹಾರದಿಂದ ಅಜೀರ್ಣವಾಗಿ ಅಪಾನ ವಾಯುವಿನ ವಿಕೃತಿಯಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುವುದು: ಆಹಾರಶಾಸ್ತ್ರಕ್ಕನುಸಾರ ಹೊಟ್ಟೆಯ ಅರ್ಧ ಭಾಗದಷ್ಟು ಮಾತ್ರ ಆಹಾರವನ್ನು ಸೇವಿಸಬೇಕು, ಕಾಲು ಭಾಗದಷ್ಟು ನೀರು ಕುಡಿಯಬೇಕು ಮತ್ತು ಉಳಿದ ಕಾಲು ಭಾಗವನ್ನು ಖಾಲಿ ಬಿಡಬೇಕು. ಇದರಿಂದ ಆಹಾರವು ಜೀರ್ಣವಾಗಲು ಸಾಕಷ್ಟು ಜಾಗವಿರುತ್ತದೆ. ಈ ನಿಯಮಕ್ಕೆ ವಿರುದ್ಧವಾಗಿ ಆಹಾರವನ್ನು ಸೇವಿಸಿದರೆ ಮುಂದಿನ ಪ್ರಕ್ರಿಯೆ ನಡೆಯುತ್ತದೆ.

ಅತಿಯಾದ ಆಹಾರವನ್ನು ಸೇವಿಸಿದರೆ ಹೊಟ್ಟೆಯಲ್ಲಿ ಆಮ (ವಾಯು) ಸಂಚಯವಾಗುತ್ತದೆ ಮತ್ತು ಆಹಾರದ ಜೀರ್ಣಪ್ರಕ್ರಿಯೆಯು ಕೆಡುತ್ತದೆ. ಆಮದೋಷದಿಂದ ವಿಕೃತ ವಾಯು (ಕಪ್ಪು ಶಕ್ತಿ) ನಿರ್ಮಾಣವಾಗಿ ಅಜೀರ್ಣವಾಗುತ್ತದೆ. ಇದರಿಂದ ಆಹಾರದಲ್ಲಿನ ಎಲ್ಲ ಪೋಷಕಾಂಶಗಳು ಹೀರಲ್ಪಡುವುದಿಲ್ಲ ಮತ್ತು ಬಹಳಷ್ಟು ಪೋಷಕ ಘಟಕಗಳು ಮಲದ ಮೂಲಕ ಹೊರಬೀಳುತ್ತವೆ. ಹೇಗೆ ಬೀಸುವ ಕಲ್ಲಿನಲ್ಲಿ ಸ್ವಲ್ಪ ಸ್ವಲ್ಪ ಧಾನ್ಯ ಹಾಕಿದರೆ ಹಿಟ್ಟು ಸರಿಯಾಗಿ ಬರುತ್ತದೆಯೋ ಮತ್ತು ಹೆಚ್ಚು ಧಾನ್ಯವನ್ನು ಹಾಕಿದರೆ ರವೆಯಂತಹ ಹಿಟ್ಟು ಸಿಗುತ್ತದೆಯೋ, ಹಾಗೆಯೇ ಸಮತೋಲ ಆಹಾರವನ್ನು ಸೇವಿಸಿದರೆ ಅದರಲ್ಲಿನ ಎಲ್ಲಾ ಪೋಷಕಾಂಶಗಳು ಹೀರಲ್ಪಟ್ಟು ಪ್ರಾಣಶಕ್ತಿಯು ಸಿಗುತ್ತದೆ ಮತ್ತು ಅತಿಯಾಗಿ ಆಹಾರವನ್ನು ಸೇವಿಸಿದರೆ ಅದು ಪೂರ್ಣವಾಗಿ ಜೀರ್ಣವಾಗದೇ ಮಲದ್ವಾರದಿಂದ ಹೊರಬೀಳುತ್ತದೆ. ಅದರೊಂದಿಗೆ ಅಪಾನ ವಾಯುವಿನ ಪ್ರಕೋಪವಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುತ್ತದೆ. ಕಪ್ಪು ಶಕ್ತಿಯನ್ನು ಹೋಗಲಾಡಿಸಲು ಅದರ ಮೂಲ ಕಾರಣವಾದ ಆಮದೋಷವನ್ನು ನಿವಾರಿಸಬೇಕು. ಔಷಧದಿಂದ ತಾತ್ಕಾಲಿಕ ಉಪಾಯವಾಗುತ್ತದೆ, ಅದಕ್ಕೆ ನಿತ್ಯದ ಉಪಾಯವೆಂದರೆ ಸಮತೋಲ ಆಹಾರ.
- ಪ.ಪೂ.ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು

1 comment:

Note: only a member of this blog may post a comment.