ಹಿಂದೂಗಳೇ, ಒಂದು ದಿನದ ಮತಾಂತರವು ನಿಮಗೆ ಒಪ್ಪಿಗೆಯಿದೆಯೇ?

ಜನವರಿ ೧ ಅಲ್ಲ, ಯುಗಾದಿಯೇ ಹಿಂದೂಗಳಿಗೆ ಹೊಸವರ್ಷ!

ಹಿಂದೂಗಳಿಗೆ ಡಿಸೆಂಬರ್ ೩೧ರ ರಾತ್ರಿ ಎಂದರೆ ಪಾಶ್ಚಾತ್ಯ ಸಂಸ್ಕೃತಿಯ ಅತಿರೇಕದ ಮತ್ತು ಭೋಗವಾದದ ಪರಾಕಾಷ್ಠೆಯ ದಿನವಾಗಿದೆ. ಹಾಗಾಗಿ ಈ ರಾತ್ರಿಯಂದು ಮದ್ಯಪಾನ, ಮಾಂಸಾಹಾರ ಮತ್ತು ನೃತ್ಯ ಗಾಯನಗಳಂತಹ ನೈತಿಕತೆಗೆ ಮಸಿಬಳಿಯುವಂತಹ ಭೋಗವಾದಿ ಘಟನೆಗಳು ಸಾರಾಸಗಟಾಗಿ ನಡೆಯುತ್ತವೆ.

ಯಾರಾದರೊಬ್ಬ ವ್ಯಕ್ತಿಯು ಮತಾಂತರಗೊಂಡ ನಂತರ ಹೊಸ ಧರ್ಮದಲ್ಲಿನ ರೂಢಿ-ಪರಂಪರೆಗಳನ್ನು ಮತ್ತು ಉತ್ಸವಗಳನ್ನು ಆಚರಿಸುತ್ತಾನೆ. ಅದೇ ರೀತಿ ವಿಶ್ವದಲ್ಲಿನ ಶಕ್ತಿಗಳಿಗೆ (ಗ್ರಹ ಹಾಗೂ ನಿಸರ್ಗ) ಹಾಗೂ ಈ ಮಣ್ಣಿನೊಂದಿಗೆ ಯಾವುದೇ ಸಂಬಂಧವಿಲ್ಲದ ಜನವರಿ ೧ನ್ನು ಹಿಂದೂ ಧರ್ಮೀಯರಾದ ನಾವು ಪಾಶ್ಚಾತ್ಯರಂತೆ ಆಚರಿಸುತ್ತೇವೆ ಎಂದರೆ ಇದು ಒಂದು ದಿನದ ಮತಾಂತರವೇ ಆಗಿದೆ.

ಡಿಸೆಂಬರ್ ೩೧ರಂದು ರಾತ್ರಿ ಎಲ್ಲೆಡೆಗಳಲ್ಲಿ ಹಾಡುಕುಣಿತ ಮತ್ತು ಪಟಾಕಿಗಳ ಅಬ್ಬರ ಮತ್ತು ಜನವರಿ ೧ರಂದು ಒಡೆದ ಶರಾಬು ಬಾಟಲಿಗಳು ಮತ್ತು ಪಟಾಕಿಗಳ ಚೂರಾದ ಕಾಗದಗಳಿಂದ ಇಡೀ ವಾತಾವರಣವು ಭಯಾನಕವಾಗಿ ಕಾಣಿಸುತ್ತದೆ. ಪ್ರತಿಯೊಂದು ಹಬ್ಬ ಮತ್ತು ಉತ್ಸವಗಳ ಸಮಯದಲ್ಲಿ ಭಗವಂತನ ಅಧಿಷ್ಠಾನವನ್ನಿಟ್ಟುಕೊಂಡು ತ್ಯಾಗದ ಮತ್ತು ಸಂಯಮೀ ಜೀವನವನ್ನು ಸಾಗಿಸುವ ಹಿಂದೂಗಳಿಗೆ ಇಂತಹ ಬೀಭತ್ಸ ಮತ್ತು ಅಸುರೀ ಭೋಗವಾದವು ಶೋಭಿಸಲಾರದು. ಹಾಗಾಗಿ ಎಲ್ಲ ಕ್ಷೇತ್ರಗಳಿಂದಾಗುವ ಪಾಶ್ಚಾತ್ಯರ ಅಂಧಾನುಕರಣೆಯನ್ನು ನಾವು ತಡೆಗಟ್ಟಬೇಕಾಗಿದೆ. ಹಿಂದೂಗಳ ಭಾವೀ ಪೀಳಿಗೆಯು ಪಾಶ್ಚಾತ್ಯರಂತೆ ಭೋಗವಾದಿ ಮತ್ತು ಅನಾಗರಿಕವಾಗಬಾರದೆಂದು ಅನೇಕ ಹಿಂದೂಗಳಿಗೆ ಅನಿಸುತ್ತದೆ. ಹಾಗಾಗಿ ಜನವರಿ ೧ರಂದು ನಡೆಯುವ ಸಂಸ್ಕೃತಿಯ ನಾಶವನ್ನು ತಡೆಗಟ್ಟಲು ಹಿಂದೂಗಳು ಪ್ರಯತ್ನಿಸಲೇಬೇಕು. ಇದನ್ನು ಮುಂದಿನ ಕೃತಿಗಳಿಂದ ಪ್ರಾರಂಭಿಸೋಣ.

ಹಿಂದೂಗಳೇ, ಹೊಸವರ್ಷವನ್ನು ಯುಗಾದಿಯಂದೇ ಆಚರಿಸಿ!
ಚೈತ್ರ ಶುಕ್ಲ ಪಾಡ್ಯ (ಯುಗಾದಿ)ವು ಸೃಷ್ಟಿಯ ನಿರ್ಮಿತಿಯ ದಿನವಾಗಿದೆ. ಹಾಗಾಗಿ ಈ ದಿನ ನಿಜವಾದ ವರ್ಷಾರಂಭದ ದಿನವಾಗಿದೆ. ಆದರೆ ಪಾಶ್ಚಾತ್ಯರ ಅಂಧಾನುಕರಣೆಯಂತೆ ಯಾವುದೇ ಆಧ್ಯಾತ್ಮಿಕ ಅಡಿಪಾಯವಿಲ್ಲದ ಜನವರಿ ೧ ರಂದು ಹೊಸವರ್ಷವನ್ನು ಆಚರಿಸುವುದೆಂದರೆ ಹಿಂದೂಗಳ ಒಂದು ದಿನದ ಮತಾಂತರವೇ ಆಗಿದೆ. ಪಾಶ್ಚಾತ್ಯರ ಭೋಗವಾದದ ಉದಾತ್ತೀಕರಣ ಮತ್ತು ಧರ್ಮ ಮತ್ತು ಸಂಸ್ಕೃತಿಯ ಮೇಲಾಗುವ ಹಾನಿಯನ್ನು ತಡೆಗಟ್ಟಲು -

೧. ಜನವರಿ ೧ ರಂದು ಯಾವುದೇ ಹಿಂದೂವಿಗೆ ಹೊಸವರ್ಷದ ಶುಭಾಶಯಗಳನ್ನು ನೀಡಬೇಡಿ !
೨. ಯುಗಾದಿಯಂದು ಆದಷ್ಟು ಹೆಚ್ಚು ಹಿಂದೂಗಳಿಗೆ ಶುಭಾಶಯ ಪತ್ರ, ದೂರವಾಣಿ, ಕಿರುಸಂದೇಶ (ಎಸ್.ಎಮ್.ಎಸ್.) ಮುಂತಾದವುಗಳ ಮೂಲಕ ಹೊಸವರ್ಷದ ಶುಭಾಶಯಗಳನ್ನು ನೀಡಿ !
೩. ಈ ದಿನ ಶುಭಸಂಕಲ್ಪ ಮಾಡಿದರೆ ಅದು ಹೆಚ್ಚು ಫಲಪ್ರದವಾಗಿರುತ್ತದೆ. ಹಾಗಾಗಿ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಪ್ರತಿದಿನ ೧ ಗಂಟೆ ನೀಡುವ ಸಂಕಲ್ಪ ಮಾಡಿ !
೪. ಹಿಂದುತ್ವವಾದಿ ಸಂಘಟನೆ, ಸಂಘ-ಸಂಸ್ಥೆಗಳಿಗೂ ಮೇಲಿನ ವಿಷಯಗಳ ಬಗ್ಗೆ ಹಿಂದೂಗಳಿಗೆ ಪ್ರಬೋಧನೆ ಮಾಡಲು ಮತ್ತು ಕೃತಿಯಲ್ಲಿ ತರಲು ಹೇಳಿ !

10 comments:

  1. dhanyavadagalu tumba upayukthavada mahithigalannu sersiddeera yuva janatheyannu jagruthagolisuva nimma prayatnakke yashassu sigali

    all the best.

    ReplyDelete
    Replies
    1. ಧನ್ಯವಾದಗಳು... ಎಲ್ಲರೂ ಧರ್ಮಾಚರಣೆ ಮಾಡಿ ಸುಖಿಯಾಗಿರಬೇಕು ಎಂಬುದೇ ನಮ್ಮ ಉದ್ದೇಶ.

      Delete
    2. thanks for you info. I will celebrate new year on Ugadi. and try my best to reach this info to my friends.

      Jai Hindu, Jai Hindustan

      Delete
    3. @Mahesh Naidu, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಇದೇ ರೀತಿ ಧರ್ಮಪ್ರಸಾರ ಮಾಡಿ. ಧರ್ಮೋ ರಕ್ಷತಿ ರಕ್ಷಿತಃ

      Delete
  2. ಗೆಳೆಯರೇ ನಾವುಗಳು ಹೊಸ ವರ್ಷವನ್ನು ಯುಗಾದಿ ದಿನದಂದು ಆಚರಿಸೋನ ಜ೧ ಅವಹೇಳನ ಮಾಡೋಣಾ

    ReplyDelete
  3. ಗೆಳೆಯರೇ ಭಾರತಿಯರಾದ ನಾವೂಗಳು ಹೊಸ ವರ್ಷವನ್ನುಪ ಯುಗಾದಿ ದಿನ ಆಚರಿಸೋಣಾ

    ReplyDelete
  4. ಇಂದಿನ ಯುವಪೀಳಿಗೆ ಇದನ್ನು ಅನುಷ್ಟಾನಕ್ಕೆತರುವುದು,ಒಳ್ಳೆಯದು. ಏಕೆಂದರೆ ಇಂದಿನಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗುತ್ತಿರುವರು.ನೀವುಮಾಡುತ್ತಿರು ಪ್ರಯತ್ನ ಯಶಸ್ವಿಯಾಗಲಿ.

    ReplyDelete
  5. ಇಂದಿನ ಯುವಪೀಳಿಗೆ ಇದನ್ನು ಅನುಷ್ಟಾನಕ್ಕೆತರುವುದು,ಒಳ್ಳೆಯದು. ಏಕೆಂದರೆ ಇಂದಿನಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗುತ್ತಿರುವರು.ನೀವುಮಾಡುತ್ತಿರು ಪ್ರಯತ್ನ ಯಶಸ್ವಿಯಾಗಲಿ.

    ReplyDelete
  6. ಸೂಕ್ತ ಸಂದರ್ಭದಲ್ಲಿ ಒಳ್ಳೆಯ ಆಲೋಚನೆಯ ಮೂಲಕ ಜಾಗೃತಿ ಮೂಡಿಸುವ ಬರಹವಾಗಿದೆ.ಆದರೆ ಮತಾಂತರ ಎಂಬ ಶಬ್ದ ಪ್ರಯೋಗದ ಬದಲಿಗೆ ಬೇರೆ ಶಬ್ದವನ್ನು ಬಳಸಬಹುದಾಗಿದೆ.

    ReplyDelete
  7. ಸರಿಯಾದ ವಿವರಣೆ

    ReplyDelete

Note: only a member of this blog may post a comment.