‘ರಂಗೋಲಿ’ ಸಾತ್ತ್ವಿಕತೆ ಮತ್ತು ಮಾಂಗಲ್ಯದ ಪ್ರತೀಕ

ರಂಗೋಲಿ ಹಾಕುವುದರ ಹಿಂದಿನ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನ
ನೆಲವನ್ನು ಕಸಬರಿಕೆಯಿಂದ ಗುಡಿಸುವಾಗ ಅಥವಾ ಸೆಗಣಿಯಿಂದ ಸಾರಿಸುವಾಗ ನೆಲದಲ್ಲಿ ಸೂಕ್ಷ್ಮರೇಖೆಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯಮಿತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯಮಿತವಾಗಿರುತ್ತವೆ. ಈ ಸ್ಪಂದನಗಳು ಶರೀರ, ಕಣ್ಣು ಮತ್ತು ಮನಸ್ಸಿಗೆ ಹಾನಿಕರವಾಗಿರುತ್ತವೆ. ಈ ಸ್ಪಂದನಗಳನ್ನು ದೂರಗೊಳಿಸಲು ಸಾರಿಸಿದ ನೆಲದ ಮೇಲೆ ರಂಗೋಲಿಯಿಂದ ಶುಭಚಿಹ್ನೆಗಳನ್ನು ಬಿಡಿಸುತ್ತಾರೆ. ಇದರಿಂದ ನೆಲದ ಮೇಲೆ ಅಶುಭ ಸ್ಪಂದನಗಳು ದೂರವಾಗಿ ಶುಭ ಪರಿಣಾಮಗಳಾಗುತ್ತವೆ.

ರಂಗೋಲಿಯನ್ನು ಆದಷ್ಟು ಸ್ತ್ರೀಯರೇ ಏಕೆ ಬಿಡಿಸಬೇಕು?
ಪೂಜಾವಿಧಿಗಳ ರಂಗೋಲಿಯನ್ನು ಸ್ತ್ರೀಯರೇ ಬಿಡಿಸಬೇಕು. ಏಕೆಂದರೆ ಸ್ತ್ರೀಯರು ದೇವತೆಯ ಸೂಕ್ಷ್ಮತತ್ತ್ವಗಳನ್ನು ಸಹಜವಾಗಿ ಗ್ರಹಿಸಬಹುದು. ಅವರು ಆಯಾಯ ತತ್ತ್ವಕ್ಕೆ ಸಂಬಂಧಿಸಿದ ಸೂಕ್ಷ್ಮ ಸ್ಪಂದನಗಳ ರಚನೆಯ ಆಕೃತಿಗಳನ್ನು ನಿರ್ಮಿಸಲು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಆದು ದರಿಂದ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ಈಶ್ವರೀ ತತ್ತ್ವವು ಶೀಘ್ರವಾಗಿ ರಂಗೋಲಿಯಲ್ಲಿ ಆಕರ್ಷಿತವಾಗಿ ಕಾರ್ಯನಿರತವಾಗುತ್ತದೆ. ಇದಕ್ಕಾಗಿ ಪ್ರಾಥಮಿಕ ಸ್ತರದಲ್ಲಿನ ಜೀವಗಳಿಗಾಗಿ ರಂಗೋಲಿಯನ್ನು ಸ್ತ್ರೀಯರಿಂದ ಬಿಡಿಸಿಕೊಳ್ಳುವುದು ಯೋಗ್ಯವಾಗಿದೆ. ಅದೇ ರೀತಿ ಇದರಿಂದ ಈಶ್ವರೀ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿ ವಾಯುಮಂಡಲ ಹಾಗೂ ಪೂಜೆಗೆ ಕುಳಿತುಕೊಳ್ಳುವ ಜೀವಕ್ಕೆ ಲಾಭವಾಗುತ್ತದೆ. ರಂಗೋಲಿಯಲ್ಲಿನ ಕಲಾತರಂಗದಿಂದ ಸ್ತ್ರೀಯರ ಅನಾಹತ ಚಕ್ರವು ಸ್ವಲ್ಪ ಪ್ರಮಾಣದಲ್ಲಿ ಜಾಗೃತವಾಗಿ ಚೈತನ್ಯ ಗ್ರಹಿಸುವ ಕ್ಷಮತೆಯು ಹೆಚ್ಚಾಗುತ್ತದೆ.

ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಏಕೆ ಬಿಡಿಸಬೇಕು?
ವಿಶಿಷ್ಟ ದೇವತೆಯ ಪೂಜೆಯನ್ನು ಮಾಡುವಾಗ ಆ ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಬೇಕು. ರಂಗೋಲಿಯು ದೇವತೆಯ ನಿರ್ಗುಣ ತತ್ತ್ವವನ್ನು ಗ್ರಹಿಸಿ ಜೀವದ ಕ್ಷಮತೆಗನುಸಾರ ಅದನ್ನು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಆದುದರಿಂದ ದೇವತೆಯ ತತ್ತ್ವ ವಾಯುಮಂಡಲದಲ್ಲಿ ಮತ್ತು ಜೀವಗಳ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತದೆ.

ರಂಗೋಲಿಯನ್ನು ಹಾಕಿದ ನಂತರ ಅದಕ್ಕೆ ಅರಿಶಿನ-ಕುಂಕುಮವನ್ನು ಏಕೆ ಅರ್ಪಿಸಬೇಕು?
ರಂಗೋಲಿಯಲ್ಲಿರುವ ಬಿಳಿ ಕಣಗಳಲ್ಲಿ ಈಶ್ವರೀ ತತ್ತ್ವದ ಲಹರಿಗಳನ್ನು ಆಕರ್ಷಿಸುವ ಕ್ಷಮತೆ ಇರುತ್ತದೆ, ಆದರೆ ಬಿಳಿ ಬಣ್ಣವು ನಿಷ್ಕ್ರಿಯತೆಗೆ ಸಂಬಂಧಿಸಿರುವುದರಿಂದ ರಂಗೋಲಿಗೆ ವೇಗವು ಪ್ರಾಪ್ತವಾಗುವುದಿಲ್ಲ. ಕುಂಕುಮದಿಂದ ಬ್ರಹ್ಮಾಂಡದಲ್ಲಿನ ಶ್ರೀದುರ್ಗಾದೇವಿಯ ಪ್ರಕಟಶಕ್ತಿ ಮತ್ತು ಅರಶಿನದಿಂದ ಗಣೇಶತತ್ತ್ವವು ಕಾರ್ಯನಿರತವಾಗುತ್ತದೆ. ಇದರಿಂದ ರಂಗೋಲಿಯಲ್ಲಿ ಆಕರ್ಷಿತವಾದ ಈಶ್ವರೀತತ್ತ್ವಕ್ಕೆ ಚಲನೆಯು ಪ್ರಾಪ್ತವಾಗಿ ವಾಯುಮಂಡಲದಲ್ಲಿನ ದೂಷಿತ ಸ್ಪಂದನಗಳು ಮತ್ತು ಕಣಗಳು ವಿಘಟನೆಯಾಗುತ್ತವೆ.

(ಆಧಾರ: ಸನಾತನ ಸಂಸ್ಥೆಯ ಗ್ರಂಥ 'ದೇವರ ಪೂಜೆಯ ಪೂರ್ವತಯಾರಿ')

ಸಂಬಂಧಿತ ವಿಷಯಗಳು
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು? 
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ 
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!

No comments:

Post a Comment

Note: only a member of this blog may post a comment.