ಜಗತ್ತಿನಲ್ಲಿ ಅಗ್ನಿಹೋತ್ರದ ಆಚರಣೆಯನ್ನು ಮಾಡುವ ವಿಭಿನ್ನ ವಂಶ, ವಿಭಿನ್ನ ಭಾಷೆ, ವಿಭಿನ್ನ ಧರ್ಮ ಮತ್ತು ಆಧ್ಯಾತ್ಮಿಕ ಗುಂಪುಗಳಿವೆ. ಅವರು ಮುಂದಿನ ಲಾಭಗಳನ್ನು ಅನುಭವಿಸಿದ್ದಾರೆ.
೧. ‘ಚೈತನ್ಯದಾಯಕ ಮತ್ತು ಔಷಧಿಯ ವಾತಾವರಣ ನಿರ್ಮಾಣವಾಗುತ್ತದೆ.
೨. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ.
೩. ಪ್ರಾಣಿಜೀವಗಳ ಪೋಷಣೆ: ಹೇಗೆ ಅಗ್ನಿಹೋತ್ರವು ವನಸ್ಪತಿಗಳ ಪೋಷಣೆಯನ್ನು ಮಾಡುತ್ತದೆಯೋ, ಅದೇ ರೀತಿ ಮನುಷ್ಯರ ಮತ್ತು ಎಲ್ಲ ಪ್ರಾಣಿಗಳ ಪೋಷಣೆಯನ್ನೂ ಮಾಡುತ್ತದೆ.’
೪. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ
- ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗಿ ಅವರ ಮೇಲೆ ಒಳ್ಳೆಯ ಸಂಸ್ಕಾರಗಳಾಗುತ್ತವೆ.
- ಸಿಡಿಮಿಡಿಗೊಳ್ಳುವ ಮತ್ತು ಹಠ ಮಾಡುವ ಮಕ್ಕಳು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ.
- ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ.
- ಮಂದಬುದ್ಧಿಯ ಮಕ್ಕಳು ಅವರ ಮೇಲೆ ಮಾಡಲಾಗುವ ಉಪಚಾರಕ್ಕೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾರೆ.
೫. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾ ಶಕ್ತಿ ನಿರ್ಮಾಣವಾಗಿ ಮನೋವಿಕಾರಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುವುದು
೬. ನರವ್ಯೂಹದ ಮೇಲಾಗುವ ಪರಿಣಾಮ: ‘ಜ್ವಾಲೆಯಿಂದ ಹೊರ ಬರುವ ಹೊಗೆಯು ಮೆದುಳು ಮತ್ತು ನರವ್ಯೂಹದ ಮೇಲೆ ಪ್ರಭಾವೀ ಪರಿಣಾಮವನ್ನು ಬೀರುತ್ತದೆ.’
೭. ರೋಗಜಂತುಗಳ ಪ್ರತಿರೋಧ: ಅಗ್ನಿಹೋತ್ರದ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳ ಬೆಳವಣಿಗೆಯ ಮೇಲೆ ಪ್ರತಿಬಂಧ ಬರುತ್ತದೆ ಎಂದು ಕೆಲವು ಸಂಶೋಧಕರಿಗೆ ತಿಳಿದು ಬಂದಿದೆ.’
೮. ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ: ‘ನಮ್ಮ ಸುತ್ತಲೂ ಒಂದು ರೀತಿಯ ಸಂರಕ್ಷಣಾಕವಚವಿರುವುದರ ಅರಿವಾಗುತ್ತದೆ.’
೯. ಅಗ್ನಿಹೋತ್ರದಿಂದ ಪ್ರಾಣಶಕ್ತಿಯು ಶುದ್ಧವಾಗಿ, ಆ ವಾತಾವರಣದಲ್ಲಿನ ವ್ಯಕ್ತಿಗಳ ಮನಸ್ಸು ಕೂಡಲೇ ಪ್ರಸನ್ನ ಮತ್ತು ಆನಂದಿತವಾಗುವುದು ಹಾಗೂ ಆ ವಾತಾವರಣದಲ್ಲಿ ಸಹಜವಾಗಿ ಧ್ಯಾನ ಧಾರಣೆಯಾಗಲು ಸಾಧ್ಯವಾಗುತ್ತದೆ.
ಅಗ್ನಿಹೋತ್ರದ ಮಂತ್ರಗಳನ್ನು ಹೇಗೆ ಉಚ್ಚರಿಸಬೇಕು? ಮಂತ್ರ ಹೇಳುವಾಗ ಭಾವ ಹೇಗಿರಬೇಕು? ಮಂತ್ರವನ್ನು ಯಾರು ಹೇಳಬೇಕು? ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಏಕೆ ಮಾಡಬೇಕು? ಅಗ್ನಿಹೋತ್ರದ ನಂತರ ಮಾಡಬೇಕಾದ ಕೃತಿಗಳು ಯಾವುವು? ಅಗ್ನಿಹೋತ್ರ ಮಾಡುವ ಬಗ್ಗೆ ವಿವರವಾದ ಮಾಹಿತಿಗಾಗಿ ಸನಾತನದ ಗ್ರಂಥ ‘ಅಗ್ನಿಹೋತ್ರ’ ವನ್ನು ಓದಿರಿ.
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
ಸಂಬಂಧಿತ ಲೇಖನಗಳು
ಅಗ್ನಿಹೋತ್ರದ ಮಹತ್ವಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
ತುಂಬಾ ಉಪಯುಕ್ತವಾದ ವಿಚಾರಗಳಿವೆ.ಆಧ್ಯಾತ್ಮ ಸಾಧನೆಗೆ ನಿಮ್ಮ ವೆಬ್ ಸಯಟ್ ಉತ್ತಮ ಮಾರ್ಗದರ್ಶನ ಮಾಡುವುದು. ತಮಗೆ ಅಭಿನಂದನೆಗಳು.
ReplyDeleteMost use full subject. Thank YOU.
Delete