ವಾಸ್ತುಶಾಂತಿಯ ಮಹತ್ವ

ವಾಸ್ತುವಿನಲ್ಲಿ ವಾಸ್ತುಶಾಂತಿಯನ್ನು ಮಾಡುವುದರ ಮಹತ್ವ, ಅದರಿಂದಾಗುವ ಲಾಭಗಳು ಮತ್ತು ವಾಸ್ತುಶಾಂತಿಯನ್ನು ಮಾಡದಿದ್ದರೆ ಆಗುವ ತೊಂದರೆಗಳ ಬಗ್ಗೆ ಸನಾತನದ ಸಾಧಕಿಯಾದ ಸೌ.ಅಂಜಲೀ ಗಾಡಗೀಳರಿಗೆ ‘ಓರ್ವ ವಿದ್ವಾಂಸ’ರಿಂದ ಮತ್ತು ಸೌ. ಪಾಟೀಲ್ ಇವರಿಗೆ ‘ಬ್ರಹ್ಮತತ್ತ್ವ’ದಿಂದ ದೊರಕಿರುವ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಭೂಮಿಪೂಜೆ

ಭೂಮಿಪೂಜೆ (ಪಂಚತತ್ತ್ವಗಳಲ್ಲಿರುವ ವಾಸ್ತುದೇವತೆಯನ್ನು ಆವಾಹನೆ ಮಾಡುವುದು): ಯಾವುದೇ ವಾಸ್ತುವಿನ ಕಾಮಗಾರಿಯನ್ನು ಪ್ರಾರಂಭಿಸುವುದಕ್ಕಿಂತ ಮೊದಲು ಆ ವಾಸ್ತುವನ್ನು ಕಟ್ಟುವ ಜಾಗದಲ್ಲಿ ವಾಸ್ತುದೇವತೆಯ ಆಗಮನ ವಾಗಬೇಕೆಂದು ಪುರೋಹಿತರಿಂದ ವಾಸ್ತುದೇವತೆಯ ಆವಾಹನೆಯನ್ನು ಮಾಡುತ್ತಾರೆ. ಇದನ್ನೇ ಭೂಮಿಪೂಜೆ ಎನ್ನುತ್ತಾರೆ. – ಬ್ರಹ್ಮತತ್ತ್ವ (೨೭.೦೨.೨೦೦೪ ಸಾಯಂ. ೪.೫೦)

ಭೂಮಿಪೂಜೆಯನ್ನು ಮಾಡುವಾಗ ಮತ್ತು ಮಾಡಿದ ನಂತರ ಸ್ಥಾನದೇವತೆ ಮತ್ತು ಅಲ್ಲಿ ನೆಲೆಸುವ ವಾಸ್ತುದೇವತೆಯ ಕಾರ್ಯ: ‘ಭೂಮಿಪೂಜೆಯನ್ನು ಮಾಡುವಾಗ ಸ್ಥಾನದೇವತೆಗೆ ಪ್ರಾರ್ಥನೆ ಮಾಡುವುದ ರಿಂದ ಸ್ಥಾನದೇವತೆಯಿಂದ ಪ್ರಕ್ಷೇಪಿತವಾಗುವ ಆಶೀರ್ವಾದಾತ್ಮಕ ಲಹರಿ ಗಳಿಂದ ವಾಸ್ತುವಿನ ಸ್ಥಳದಲ್ಲಿರುವ ತೊಂದರೆದಾಯಕ ಲಹರಿಗಳು ಕಡಿಮೆ ಯಾಗುತ್ತವೆ. ಪೂಜಾವಿಧಿಯ ನಂತರ ವಾಸ್ತುವಿನ ಸ್ಥಾನವು ಚೈತನ್ಯಮಯ ವಾಗುತ್ತದೆ. ಅಲ್ಲಿರುವ ಚೈತನ್ಯದಿಂದ ವಾಸ್ತುದೇವತೆಯು ಪ್ರಸನ್ನಳಾಗಿ ಪ್ರತ್ಯಕ್ಷ ಕಾರ್ಯಸ್ಥಳದಲ್ಲಿ ಬಂದು ನೆಲೆಸುತ್ತಾಳೆ. ವಾಸ್ತುವನ್ನು ಕಟ್ಟಿದ ಮೇಲೆ ವಾಸ್ತು ದೇವತೆಯ ಅಸ್ತಿತ್ವದಿಂದ ವಾಸ್ತುವಿನ ಪ್ರತಿಯೊಂದು ಮೂಲೆಯಲ್ಲಿ ಬ್ರಹ್ಮಾಂಡದಲ್ಲಿನ ಸೂಕ್ಷ್ಮಇಚ್ಛಾಶಕ್ತಿಯ (ಮನಃಶಕ್ತಿ, ಈ ಸ್ಥೂಲಶಕ್ತಿಯನ್ನು ಪ್ರಕಟ ಮಾಡುವ ಬ್ರಹ್ಮಾಂಡದಲ್ಲಿ ಸ್ಥಿರವಾಗಿರುವ ಸೂಕ್ಷ್ಮಶಕ್ತಿ) ಲಹರಿಗಳು ಸಂಪುಟಿತವಾಗಲು ಸಹಾಯವಾಗುತ್ತದೆ ಮತ್ತು ಈ ಇಚ್ಛಾಶಕ್ತಿಯ ಬಲ ದಿಂದಲೇ ಮುಂದೆ ಜೀವಕ್ಕೆ ಪ್ರತಿಯೊಂದು ಕಾರ್ಯವನ್ನು ಮಾಡಲು ಸ್ಫೂರ್ತಿಯು ಸಿಗುತ್ತದೆ. ವಾಸ್ತುದೇವತೆಯ ಕೃಪೆಯಿಂದ ಕೆಟ್ಟಶಕ್ತಿಗಳ ಹಲ್ಲೆಗಳಿಂದ ಜೀವದ ರಕ್ಷಣೆಯಾಗಿ ಸಾಧನೆಯು ಚೆನ್ನಾಗಿ ಆಗುತ್ತದೆ. ಅಲ್ಲದೇ ಕೆಟ್ಟಶಕ್ತಿಗಳೊಂದಿಗೆ ಹೋರಾಡಲು ಜೀವದ ಸಾಧನೆಯು ವ್ಯಯವಾಗದ ಕಾರಣ ಅವನ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತದೆ. – ಓರ್ವ ವಿದ್ವಾಂಸರು (೧೮.೦೧.೨೦೦೫ ಸಾಯಂ ೭.೩೯)

ವಾಸ್ತುಶಾಂತಿಯ ಮಹತ್ವವೇನು?

ವ್ಯಾಖ್ಯೆ: ವಾಸ್ತುದೇವತೆಯ ಕೃಪೆಯನ್ನು ಪಡೆದುಕೊಳ್ಳಲು ಭಾವ ಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸಿ ಅವಳ ಆಶೀರ್ವಾದವನ್ನು ಪಡೆಯುವುದಕ್ಕೆ ವಾಸ್ತುಶಾಂತಿ ಎನ್ನುತ್ತಾರೆ.

ವಿಧಿ: ವಾಸ್ತುಶಾಂತಿಯ ಮಾಧ್ಯಮದಿಂದ ಉಚ್ಚ ದೇವತೆಗಳನ್ನು ಆವಾಹನೆ ಮಾಡಿ ದಶದಿಕ್ಕುಗಳ ಪೈಕಿ ಎರಡು ದಿಕ್ಕುಗಳನ್ನು ಅಂದರೆ ಊರ್ಧ್ವ ಮತ್ತು ಅಧೋ ದಿಕ್ಕುಗಳನ್ನು ಮುಕ್ತ ಮಾಡುತ್ತಾರೆ.

ವಾಸ್ತುಶಾಂತಿ ವಿಧಿಯ ಲಾಭಗಳು

೧. ವಾಸ್ತುಪುರುಷನ ಪ್ರತಿಮೆಯನ್ನು ನೆಲದಲ್ಲಿ ಹೂಳಿ ಶಿವನ ಶಕ್ತಿಯನ್ನು ಸ್ಥಾಪನೆ ಮಾಡಿ ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಲಹರಿಗಳನ್ನು ನಾಶ ಮಾಡುತ್ತಾರೆ. ವಾಸ್ತುಪುರುಷನ ಜೊತೆಗೆ ಪಂಚರತ್ನ ಗಳನ್ನು ಸಹ ಸ್ಥಾಪನೆ ಮಾಡಿ ವಾಸ್ತುವಿನ ಮೇಲಾಗುವ ಕೆಟ್ಟಶಕ್ತಿಗಳ ಹಲ್ಲೆಗಳನ್ನು ಪಂಚರತ್ನಗಳ ಮಾಧ್ಯಮದಿಂದ ಪ್ರಕ್ಷೇಪಿತವಾಗುವ ಸಗುಣ ಲಹರಿಗಳ ಸಹಾಯದಿಂದ ಹಿಮ್ಮೆಟ್ಟಿಸಲಾಗುತ್ತದೆ.
೨. ವಾಸ್ತುಶಾಂತಿಯ ವಿಧಿಯಿಂದ ಹತ್ತು ದಿಕ್ಕುಗಳ ಸಹಾಯದಿಂದ ವಾಸ್ತುವಿನ ಸುತ್ತಲೂ ವರ್ತುಲಾಕಾರದ ಕವಚವು ನಿರ್ಮಾಣವಾಗುತ್ತದೆ. ಆದುದರಿಂದ ಗೃಹಪ್ರವೇಶ ಮತ್ತು ವಾಸ್ತುಶಾಂತಿ ಇವುಗಳಿಗೆ ಅನನ್ಯ ಸಾಧಾರಣ ಮಹತ್ವವಿದೆ. – ಓರ್ವ ವಿದ್ವಾಂಸರು (೧೭.೧.೦೫ ರಾತ್ರಿ ೧೦.೧೦)

ವಾಸ್ತುಶಾಂತಿ ವಿಧಿಯಲ್ಲಿ ಉಪಯೋಗಿಸುವ ಕಲಶದಲ್ಲಿನ ನೀರಿನ ಮಹತ್ವ: ವಾಸ್ತುಶಾಂತಿ ವಿಧಿಯಲ್ಲಿ ಉಪಯೋಗಿಸುವ ಕಲಶದಲ್ಲಿನ ನೀರು ಎಷ್ಟು ಶುದ್ಧವಾಗಿರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಆ ನೀರಿನಲ್ಲಿ ವಾಸ್ತುದೇವತೆಯ ಸ್ಪಂದನಗಳನ್ನು ಗ್ರಹಿಸಿ-ಪ್ರಕ್ಷೇಪಿಸುವ ಕ್ಷಮತೆಯು ಅಧಿಕವಾಗಿರುತ್ತದೆ.

ವಾಸ್ತುದೇವತೆಯ ಪೂಜೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ವಾಸ್ತುದೇವತೆಯ ಪವಿತ್ರಕಗಳು ಕಲಶದಲ್ಲಿನ ನೀರಿನಲ್ಲಿ ಬರುತ್ತವೆ. ಇಂತಹ ಪವಿತ್ರಕಗಳಿಂದ ಕೂಡಿದ ನೀರನ್ನು ಮನೆಯಲ್ಲಿ ಎಲ್ಲೆಡೆಯೂ ಸಿಂಪಡಿಸಿದರೆ ವಾಸ್ತುವಿನ ಶುದ್ಧೀಕರಣವಾಗುತ್ತದೆ, ಅಲ್ಲದೇ ವಾಸ್ತುವಿನಲ್ಲಿ ವಾಸ್ತುದೇವತೆಯ ಸ್ಪಂದನಗಳು ಸಹ ಅಧಿಕ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಲು ಸಹಾಯವಾಗುತ್ತದೆ. ಕಲಶದಲ್ಲಿನ ನೀರನ್ನು ತುಳಸಿ ಗಿಡಕ್ಕೆ ಹಾಕಿದರೂ ಇದೇ ರೀತಿಯ ಲಾಭವಾಗುತ್ತದೆ. ಇತರ ವನಸ್ಪತಿಗಳ ತುಲನೆಯಲ್ಲಿ ತುಳಸಿಯಲ್ಲಿ ವಾತಾ ವರಣದಲ್ಲಿನ ಶುದ್ಧ ಸ್ಪಂದನಗಳನ್ನು ಆಕರ್ಷಿಸುವ ಕ್ಷಮತೆಯು ಅಧಿಕವಾಗಿರುತ್ತದೆ. ಅಷ್ಟೇ ಅಲ್ಲದೇ ತುಳಸಿಯು ದಿನದಲ್ಲಿನ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ವಾತಾವರಣದಲ್ಲಿ ಶುದ್ಧ ಸ್ಪಂದನಗಳನ್ನೇ ಪ್ರಕ್ಷೇಪಿಸುತ್ತದೆ. ಕಲಶ ದಲ್ಲಿನ ಚೈತನ್ಯಯುಕ್ತ ನೀರನ್ನು ತುಳಸಿಗೆ ಹಾಕುವುದರಿಂದ ಆ ನೀರಿನೊಂದಿಗೆ ವಾಸ್ತುದೇವತೆಯ ತತ್ತ್ವವನ್ನು ಸಹ ತುಳಸಿಯು ಸೆಳೆದುಕೊಳ್ಳುತ್ತದೆ ಮತ್ತು ತನ್ನ ಸಾತ್ತ್ವಿಕತೆಯೊಂದಿಗೆ ವಾಸ್ತುದೇವತೆಯ ಚೈತನ್ಯವನ್ನೂ ವಾತಾವರಣದಲ್ಲಿ ಪ್ರಕ್ಷೇಪಿಸುತ್ತದೆ. ಇದರಿಂದಾಗಿ ವಾಸ್ತುದೇವತೆಯ ಲಯಬದ್ಧ ಸ್ಪಂದನಗಳ ಮಂಡಲವು ನಿರ್ಮಾಣವಾಗಿ ವಾಸ್ತು ಮತ್ತುವಾಸ್ತುವಿನ ಸುತ್ತಲಿರುವ ಜಾಗವು ಶುದ್ಧವಾಗಿರಲು ಸಹಾಯವಾಗುತ್ತದೆ. ಇದನ್ನು ಈಶ್ವರನ ಒಂದು ರೀತಿಯ ಸಂರಕ್ಷಕ ಕವಚವೆಂದೇ ಹೇಳಬಹುದು.

ವಾಸ್ತುಶಾಂತಿಯನ್ನು ಮಾಡದಿದ್ದರೆ ಆಗುವ ತೊಂದರೆಗಳು
ವಾಸ್ತುಶಾಂತಿಯನ್ನು ಮಾಡುವುದೆಂದರೆ ಒಂದು ರೀತಿಯಲ್ಲಿ ವಾಸ್ತು ದೇವತೆಯ ಉಪಾಸನೆಯೇ ಆಗಿದೆ. ಉಪಾಸನೆಯಿಂದ ಮೂರ್ತಿಯಲ್ಲಿನ ದೇವತ್ವವು ಯಾವ ರೀತಿ ಉಳಿಯುತ್ತದೆಯೋ ಅದೇ ರೀತಿ ವಾಸ್ತು ದೇವತೆಯ ಉಪಾಸನೆಯಿಂದ ವಾಸ್ತುವಿನಲ್ಲಿ ವಾಸ್ತುದೇವತೆಯ ಅಸ್ತಿತ್ವವು ಉಳಿಯಲು ಸಹಾಯವಾಗುತ್ತದೆ. ಇದರಿಂದಾಗಿ ವಾಸ್ತುವು ಚೈತನ್ಯಮಯ ವಾಗುತ್ತದೆ. ತದ್ವಿರುದ್ಧವಾಗಿ ವಾಸ್ತು ಶಾಂತಿಯನ್ನು ಮಾಡದಿದ್ದರೆ ವಾಸ್ತುವಿನಲ್ಲಿನ ವಾಸ್ತುದೇವತೆಯ ಸ್ಪಂದನಗಳು ಕಡಿಮೆಯಾಗಿ ಕೆಟ್ಟ ಶಕ್ತಿಗಳ ಸಂಚಾರವು ಹೆಚ್ಚಾಗುತ್ತದೆ. ಉದಾಹರಣೆಗೆ ‘ಅವದಸಾ’ ಎಂಬ ಹೆಸರಿನ ಕೆಟ್ಟ ಶಕ್ತಿಯು ವಾಸ್ತುವಿನಲ್ಲಿ ಬಂದು ಸೇರುತ್ತಾಳೆ. ಒಮ್ಮೆ ಅವದಸಾಳು ವಾಸ್ತುವಿನಲ್ಲಿ ಸೇರಿದಳೆಂದರೆ, ಅವಳು ಆ ವಾಸ್ತುವಿನಲ್ಲಿರುವ ವ್ಯಕ್ತಿಗಳ ಬುದ್ಧಿಯ ಮೇಲೆ ಹಿಡಿತವನ್ನು ಸಾಧಿಸುತ್ತಾಳೆ. ಇದರಿಂದಾಗಿ ಎಲ್ಲರ ಬುದ್ಧಿಭ್ರಷ್ಟವಾಗುವುದರಿಂದ ವಾಸ್ತುವಿನಲ್ಲಿ ಕಲಹಗಳಾಗುತ್ತವೆ, ಅಲ್ಲದೇ ಚಿಕ್ಕ ಚಿಕ್ಕ ಕಾರ್ಯಗಳಲ್ಲಿಯೂ ಅಡಚಣೆಗಳು ನಿರ್ಮಾಣವಾಗುತ್ತವೆ ಮತ್ತು ಕಾರ್ಯದ ಹಾನಿಯಾಗುತ್ತದೆ. ಇಂತಹ ಸಮಯದಲ್ಲಿ ಪುನಃ ಮುಹೂರ್ತವನ್ನು ನೋಡಿ ವಾಸ್ತುವಿನಲ್ಲಿ ವಾಸ್ತುದೇವತೆಯ ಆವಾಹನೆಯನ್ನು ಮಾಡಿ ವಿಧಿ ಯುಕ್ತವಾಗಿ ಸ್ಥಾನವನ್ನು ನೀಡಿದರೆ ವಾಸ್ತುದೇವತೆಯ ಆಗಮನದಿಂದಾಗಿ ಆ ವಾಸ್ತುವಿನಲ್ಲಿನ ಸ್ಪಂದನಗಳು ಮತ್ತೆ ಒಳ್ಳೆಯದಾಗಿ ವಾಸ್ತುವು ಶುದ್ಧವಾಗುತ್ತದೆ.

ವಾಸ್ತುಶಾಂತಿಯನ್ನು ಮಾಡುವುದರೊಂದಿಗೆ ನಿತ್ಯನೇಮದಿಂದ ವಾಸ್ತುದೇವತೆಯ ಪೂಜೆಯೂ ಅವಶ್ಯವಾಗಿದೆ
ಹಿಂದಿನ ಕಾಲದಲ್ಲಿ ಪ್ರತಿಯೊಂದು ವಾಸ್ತುವಿನ ವಾಸ್ತುಶಾಂತಿಯನ್ನು ಮಾಡುತ್ತಿದ್ದರು ಮತ್ತು ನಿತ್ಯನೇಮದಿಂದ ದೇವರಪೂಜೆಯ ಸಮಯದಲ್ಲಿ ವಾಸ್ತುದೇವತೆಯ ಸ್ಥಾನದ ಮೇಲೆ ಗೌರವ ಮತ್ತು ಭಾವದಿಂದ ಅರಶಿಣ-ಕುಂಕುಮ ಮತ್ತು ಹೂಗಳನ್ನು ಅರ್ಪಿಸುತ್ತಿದ್ದರು. ರಾಜಮನೆತನ ಮತ್ತು ದೊಡ್ಡ ದೊಡ್ಡ ವ್ಯಾಪಾರಿಗಳು ವಾಸ್ತುದೇವತೆಯು ನಿಶ್ಚಯಿಸಿದ ಸ್ಥಾನದಲ್ಲಿ ವಾಸ್ತುದೇವತೆಗಾಗಿ ಸ್ಥಾನವನ್ನು ನೀಡುತ್ತಿದ್ದರು. - ಬ್ರಹ್ಮತತ್ತ್ವ  (೪.೧೨.೨೦೦೪ ಮಧ್ಯಾಹ್ನ ೩.೨೫)

ನಿತ್ಯ ಶುದ್ಧೀಕರಣದ ಮಹತ್ವ: ಗೃಹಪ್ರವೇಶ ಮತ್ತು ವಾಸ್ತುಶಾಂತಿ ವಿಧಿಗಳಿಂದ ವಾಸ್ತುವಿನಲ್ಲಿನ ತೊಂದರೆದಾಯಕ ಸ್ಪಂದನಗಳು ನಾಶವಾಗಿ ವಾಸ್ತುವು ಸಾತ್ತ್ವಿಕವಾಗುತ್ತದೆ. ಆದರೆ ವಾಸ್ತುವು ಸದಾಕಾಲ ಸಾತ್ತ್ವಿಕವಾಗಿರಲು ಸಾಧ್ಯವಿಲ್ಲ; ಏಕೆಂದರೆ ವಾಸ್ತುವಿನ ಮೇಲೆ ಸತತವಾಗಿ ರಜ-ತಮ ಕಣಗಳಿಂದಾಗುವ ಆಘಾತ, ಕೆಟ್ಟ ಶಕ್ತಿಗಳ ಸಂಚಾರ, ವಾಸ್ತುವಿನಲ್ಲಿ ರಾಜಸಿಕ -ತಾಮಸಿಕ ಪ್ರವೃತ್ತಿಯ ವ್ಯಕ್ತಿಗಳು ವಾಸ ಮಾಡುತ್ತಿದ್ದಲ್ಲಿ ಅವರಿಂದ ನಿರ್ಮಾಣವಾಗುವ ತೊಂದರೆದಾಯಕ ಸ್ಪಂದನ ಇತ್ಯಾದಿಗಳ ಪರಿಣಾಮವು ವಾಸ್ತುವಿನ ಮೇಲೆ ಆಗುತ್ತಿರುತ್ತದೆ. ಇದರಿಂದಾಗಿ ಕಾಲಾಂತರದಲ್ಲಿ ವಾಸ್ತುವಿನ ಸಾತ್ತ್ವಿಕತೆಯು ಕಡಿಮೆಯಾಗುತ್ತ ಹೋಗುತ್ತದೆ. ವಾಸ್ತುವಿನ ನಿತ್ಯ ಶುದ್ಧೀಕರಣಕ್ಕೆ ಇಲ್ಲಿ ಮಹತ್ತ್ವ ಪ್ರಾಪ್ತವಾಗುತ್ತದೆ. ವಾಸ್ತುವಿನಲ್ಲಿ ನಿಯಮಿತ ವಾಗಿ ತುಳಸಿದಳದಿಂದ ಗೋಮೂತ್ರವನ್ನು ಸಿಂಪಡಿಸಿ ಅನಂತರ ಧೂಪವನ್ನು ತೋರಿಸುವುದರಿಂದ ವಾಸ್ತುವು ಸಾತ್ತ್ವಿಕವಾಗಿರಲು ಸಹಾಯವಾಗುತ್ತದೆ. ಇವುಗಳ ಜೊತೆಗೆ ವಾಸ್ತುವಿನಲ್ಲಿ ವಾಸಿಸುವ ವ್ಯಕ್ತಿಗಳು ಸ್ವತಃ ನಾಮಜಪಾದಿ ಸಾಧನೆಯನ್ನು ಮಾಡಿ, ವಾಸ್ತುವಿನಲ್ಲಿನ ವಾತಾವರಣವನ್ನು ಭಕ್ತಿಮಯವಾಗಿಟ್ಟರೆ ವಾಸ್ತುವು ಅಧಿಕ ಸಾತ್ತ್ವಿಕವಾಗಿರಲು ಸಹಾಯವಾಗುತ್ತದೆ.

No comments:

Post a Comment

Note: only a member of this blog may post a comment.