ಪ್ರದೋಷ ವ್ರತ


ಅ. ತಿಥಿ: 
ಪ್ರತಿಯೊಂದು ತಿಂಗಳಿನಲ್ಲಿ ಬರುವ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯಂದು ಸೂರ್ಯಾಸ್ತದ ನಂತರದ ಮೂರು ಘಳಿಗೆಗಳ ಕಾಲಕ್ಕೆ ‘ಪ್ರದೋಷ’ ಎನ್ನುತ್ತಾರೆ.
ಆ. ವ್ರತವನ್ನು ಮಾಡುವ ಪದ್ಧತಿ: 
ಇಂದು ದಿನವಿಡೀ ಉಪವಾಸ ಮತ್ತು ಉಪಾಸನೆಯನ್ನು ಮಾಡಿ ರಾತ್ರಿ ಶಿವಪೂಜೆಯ ನಂತರ ಭೋಜನ ಮಾಡಬೇಕು. ಪ್ರದೋಷದ ಮರುದಿನ ಶ್ರೀವಿಷ್ಣುಪೂಜೆಯನ್ನು ಅವಶ್ಯವಾಗಿ ಮಾಡಬೇಕು. ಈ ವ್ರತವನ್ನು ಆದಷ್ಟು ಉತ್ತರಾಯಣದಲ್ಲಿ ಪ್ರಾರಂಭಿಸಬೇಕು. ಈ ವ್ರತವು ಮೂರರಿಂದ ಹನ್ನೆರಡು ವರ್ಷಗಳ ಅವಧಿಯದ್ದಾಗಿರುತ್ತದೆ.
ಇ. ನಿಷೇಧ: 
ಪ್ರದೋಷಕಾಲದಲ್ಲಿ ವೇದಾಧ್ಯಯನವನ್ನು ಮಾಡಬಾರದು ಎಂದು ಹೇಳಲಾಗಿದೆ; ಏಕೆಂದರೆ ಇದು ರಾತ್ರಿಯ ಸಮಯದಲ್ಲಿನ ವ್ರತವಾಗಿದೆ ಮತ್ತು ವೇದಾಧ್ಯಯನವನ್ನು ಸೂರ್ಯನಿರುವಾಗ ಮಾಡಬೇಕಾಗುತ್ತದೆ.
ಈ. ವಿಧಗಳು : 
ಸೋಮವಾರ ಬರುವ ಪ್ರದೋಷಕ್ಕೆ ಸೋಮಪ್ರದೋಷವೆನ್ನುತ್ತಾರೆ, ಮಂಗಳವಾರ ಬರುವ ಪ್ರದೋಷಕ್ಕೆ ಭೌಮಪ್ರದೋಷವೆನ್ನುತ್ತಾರೆ ಮತ್ತು ಶನಿವಾರ ಬರುವ ಪ್ರದೋಷಕ್ಕೆ ಶನಿಪ್ರದೋಷವೆಂದು ಕರೆಯುತ್ತಾರೆ. ಕೃಷ್ಣ ಪಕ್ಷದಲ್ಲಿನ ಪ್ರದೋಷವು ಒಂದು ವೇಳೆ ಶನಿವಾರ ಬಂದರೆ ಅದನ್ನು ವಿಶೇಷ ಫಲದಾಯಕವೆಂದು ತಿಳಿದುಕೊಳ್ಳಲಾಗುತ್ತದೆ.
(ಆಧಾರ : ಸನಾತನ ಸಂಸ್ಥೆಯ ಗ್ರಂಥ "ಶಿವ")

9 comments:

  1. Puje yavva reti madabeeku antha thilisi ?

    ReplyDelete
  2. Hrudaya poorvaka namaskaragalu, upavasadalli yeradu reetiya vaada galive kelavaru helutare upavasa kaigondavaru hannu hampalu mattu hannina rasavannu sevisa bahudu yendu,innu kelavaru helutare neerannu bittu mattenu sevisabaradu yenu, dayavittu salahe needi?

    ReplyDelete
    Replies
    1. same Qution Upavasa dalli Eshtuu Vidha Auuu Hege Madabekuu
      ??

      Delete
    2. ನಮಸ್ಕಾರ, ಈ ಲಿಂಕ್ ಓದಿ - http://dharmagranth.blogspot.in/2012/12/ekadashi.html

      Delete
  3. In the present environment your teachings are very valuable and we Pray for your success.

    ReplyDelete
  4. ನಾನು ದಿನಾಗಲೂ ರುದ್ರ ಹೇಳಿಕೊಳ್ಳುತ್ತಿರುತ್ತೇನೆ (48 ದಿನ). ರುದ್ರ ಯಾವ ಸಮಯದಲ್ಲಿ ಹೇಳಬೇಕು. ರಾತ್ರಿಯ ಹೊತ್ತು ಒಳ್ಳೆಯದೇ ?

    ReplyDelete
    Replies
    1. ನಮಸ್ಕಾರ,
      ಯಾವ ಸಮಯದಲ್ಲೂ ಹೇಳಬಹುದು. ಸೂರ್ಯಾಸ್ತದ ನಂತರವೂ ಪಠಿಸಬಹುದು. ಆದರೆ ಕಲಿಯುಗದಲ್ಲಿ ಎಲ್ಲಕ್ಕಿಂತ ಶ್ರೇಷ್ಠವೆಂದರೆ ನಾಮಸ್ಮರಣೆ. ಇದನ್ನು ಎಲ್ಲ ಸಂತ ಮಹಾತ್ಮರೂ ಹೇಳಿದ್ದಾರೆ. ಮತ್ತು ಶ್ರೀಕೃಷ್ಣ ಪರಮಾತ್ಮನೂ ಸಹ ಭಗವದ್ಗೀತೆಯಲ್ಲಿ 'ಯಜ್ಞಾನಾಂ ಜಪ ಯಜ್ಞೋಸ್ಮಿ' ಎಂದು ಹೇಳಿದ್ದಾನೆ. ಹಾಗಾಗಿ ಆದಷ್ಟು ನಾಮಜಪ ಮಾಡಲು ಪ್ರಯತ್ನಿಸಿ. ಈ ಬ್ಲಾಗ್‌ನಲ್ಲಿಯೇ ನಾಮಜಪ ಏಕೆ ಶ್ರೇಷ್ಠ ಮತ್ತು ಅದರ ಮಹತ್ವವನ್ನು ಕೊಡಲಾಗಿದೆ. ದಯವಿಟ್ಟು ಓದಿ.

      Delete
    2. ಧನ್ಯವಾದಗಳು. ದಯವಿಟ್ಟು ನನ್ನ ಅಜ್ಞಾನದ ಬಗ್ಗೆ ಕ್ಷಮಿಸಿ. ನಾಮ ಜಾಪವೆಂದರೆ ಅರ್ಥವಾಗಲಿಲ್ಲ. ನಾನು ಗಾಯತ್ರಿ 2 ರಿಂದ 10 ಮಾಲೆ ಮಾಡುತ್ತೇನೆ. ಗಣೇಶ ಮೂಲ ಮಂತ್ರ 1ರಿಂದ 2 ಮಾಲೆ ಮಾಡುತ್ತೇನೆ. ಇದನ್ನು ನಾಮ ಮಾಂತ್ರವೊ ಅಥವಾ ರಾಮ, ಕೃಷ್ಣ ನೆನೆಯುವುದು ನಾಮ ಮಾಂತ್ರವೊ.

      Delete
    3. ನಮಸ್ಕಾರ, ದಯವಿಟ್ಟು ಇದನ್ನು ಓದಿ ಮತ್ತು ಲೇಖನದ ಕೊನೆಯಲ್ಲಿ ಕೊಟ್ಟಿರುವ ಇತರ ವಿಷಯಗಳನ್ನೂ ಓದಿ. ನಾಮಜಪದ ಮಹತ್ವ ತಿಳಿಯುತ್ತದೆ. - ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ - http://dharmagranth.blogspot.in/2012/12/kuladevata.html

      Delete

Note: only a member of this blog may post a comment.