ಧರ್ಮಗ್ರಂಥ ಬ್ಲಾಗ್‌ನ ಬಗ್ಗೆ...

ಧರ್ಮಗ್ರಂಥ ಬ್ಲಾಗ್‌ನ್ನು "ಸನಾತನ ಸಂಸ್ಥೆ"ಯ ಗ್ರಂಥದಲ್ಲಿರುವ ಅಧ್ಯಾತ್ಮದ ವಿಷಯಗಳನ್ನು ಮತ್ತು ಆಧ್ಯಾತ್ಮಿಕ ಸಾಧನೆಯ ಬಗ್ಗೆ ಪ್ರಸಾರ ಮಾಡಲು ನಿರ್ಮಿಸಲಾಗಿದೆ.  ಈ ಪುಟದಲ್ಲಿ "ಸನಾತನ ಸಂಸ್ಥೆ"ಯ ಗ್ರಂಥದಲ್ಲಿರುವ ಧರ್ಮಶಿಕ್ಷಣವನ್ನು ವಿಷಯವಾರುಗಳಲ್ಲಿ ವಿಂಗಡಣೆ ಮಾಡಲಾಗಿದೆ. ಆಚಾರಧರ್ಮದ ಬಗ್ಗೆ, ಧರ್ಮಶಾಸ್ತ್ರದಲ್ಲಿ ಹೇಳಿದ ವಿಷಯಗಳ ಬಗ್ಗೆ, ಹಬ್ಬ-ಧಾರ್ಮಿಕ ಉತ್ಸವ ಮತ್ತು ವ್ರತಗಳು ಮುಂತಾದ ಅನೇಕ ವಿಷಯಗಳನ್ನು ಹಾಕಲಾಗಿದೆ. ವಾಚಕರು ಅಂತಹ ಕೊಂಡಿಯನ್ನು ಕ್ಲಿಕ್ ಮಾಡಿ ಧರ್ಮದ ಬಗ್ಗೆ ಜ್ಞಾನವನ್ನು ಓದಬಹುದು.
___________________________________________________________________

ಈ ಬ್ಲಾಗ್‌ನಲ್ಲಿ ಹಾಕಿದ "ಸನಾತನ ಸಂಸ್ಥೆ"ಯ ಗ್ರಂಥಗಳನ್ನು ಖರೀದಿಸುವುದಿದ್ದಲ್ಲಿ 8951937332 ಮೊಬೈಲ್‌ಗೆ ಸಂಪರ್ಕಿಸಿ. ಈ ಬ್ಲಾಗ್‌ ಮತ್ತು ನಮ್ಮ ಫೇಸ್‌ಬುಕ್‌ನ್ನು ನೋಡಿ ಆಧ್ಯಾತ್ಮಿಕ ಸಾಧನೆ ಮಾಡಬೇಕು ಎಂದು ತಮಗೆ ಅನಿಸುತ್ತಿದ್ದಲ್ಲಿ ನಮ್ಮನ್ನು ಖಂಡಿತ ಸಂಪರ್ಕಿಸಿ. ಆಧ್ಯಾತ್ಮಿಕ ಸಾಧನೆ ಬಿಟ್ಟು ಇತರ ವೈಯಕ್ತಿಕ ಸಮಸ್ಯೆಗಳನ್ನು ಅಥವಾ ವ್ಯಾವಹಾರಿಕ ಸಮಸ್ಯೆಗಳನ್ನು ದಯವಿಟ್ಟು ನಮಗೆ ಕೇಳಬೇಡಿ, ಅದನ್ನು ನಾವು ಪರಿಹರಿಸುವುದಿಲ್ಲ. ಆಧ್ಯಾತ್ಮಿಕ ಸಾಧನೆಯ ಬಗ್ಗೆ ಅಥವಾ ಅಧ್ಯಾತ್ಮದ ಬಗ್ಗೆ ತಿಳಿದುಕೊಳ್ಳುವುದಿದ್ದರೆ ನಿಃಸಂಕೋಚವಾಗಿ ನಮ್ಮ 8951937332 ಸಂಖ್ಯೆಗೆ ಕರೆ ಮಾಡಿ.

ಧರ್ಮಗ್ರಂಥ ಬ್ಲಾಗ್‌ನಲ್ಲಿರುವ ವಿಷಯವನ್ನು ನಕಲು ಮಾಡುವವರಿಗೆ ಸೂಚನೆ :

ಈ ಪುಟದಲ್ಲಿರುವ ಆಧಾರಗ್ರಂಥ ಸಹಿತ ಇರುವ ವಿಷಯಗಳನ್ನು ಇಲ್ಲಿಂದ ನಕಲು ಮಾಡಿ ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ಆಧಾರಗ್ರಂಥ ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು. (ವಿಷಯಗಳು © Sanatan Sanstha)

ನೀವು ಇಲ್ಲಿಂದ ತೆಗೆದುಕೊಂಡ ವಿಷಯಕ್ಕೆ ಆಧಾರ ಗ್ರಂಥದ ಹೆಸರನ್ನು ಹಾಕುವ ಉದ್ದೇಶ "ನಮಗೆ ಪ್ರಸಿದ್ಧಿ ಸಿಗಬೇಕು" ಎಂದಲ್ಲ, ಆಧಾರ ಗ್ರಂಥದ ಹೆಸರನ್ನು ತೆಗೆಯುವುದರಿಂದ ಜನರಿಗೆ ಸನಾತನ ಸಂಸ್ಥೆಯ ಗ್ರಂಥದಲ್ಲಿ ವಿವರವಾದ ಮಾಹಿತಿ ಸಿಗುತ್ತದೆ ಎಂದು ತಿಳಿಯುವುದೂ ಇಲ್ಲ ಮತ್ತು ಹಿಂದೂಗಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಒಂದು ದಾರಿಯನ್ನು ಅಥವಾ ಅವರಿಗೆ ಬಂದ ಸಂದೇಹವನ್ನು ನಿವಾರಣೆ ಮಾಡಿಕೊಳ್ಳುವ ಒಂದು ದಾರಿಯನ್ನು ಮುಚ್ಚಿದಂತಾಗುತ್ತದೆ. ಧರ್ಮದ ವಿಷಯವನ್ನು ತಿಳಿದುಕೊಂಡ ನಂತರ ಜನರಿಗೆ ಮುಂದುಮುಂದಿನ ಹಂತದ ಸಾಧನೆಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ದಯವಿಟ್ಟು ನೀವು ಯಾವುದೇ ಮಾಹಿತಿಯನ್ನು ಬೇಕಾದರೂ ಶೇರ್ ಮಾಡಿಕೊಳ್ಳಿ, ಏಕೆಂದರೆ ಪ್ರತಿಯೊಬ್ಬ ಹಿಂದೂಗಳಿಗೆ ನಮ್ಮ ಧರ್ಮದ ವಿಷಯ ತಿಳಿಯಲೇಬೇಕು ಎಂಬುದೂ ನಮ್ಮ ಇಚ್ಛೆ, ಆದರೆ ಶೇರ್ ಮಾಡುವಾಗ ಆಧಾರಗ್ರಂಥದ ಹೆಸರನ್ನು ತೆಗೆಯಬಾರದಾಗಿ ವಿನಂತಿಸಿಕೊಳ್ಳುತ್ತೇವೆ. - ಧರ್ಮಗ್ರಂಥ
___________________________________________________________________

ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಹಿಂದೂಗಳನ್ನು ಸಂಘಟಿಸುವುದಕ್ಕಿಂತ ಶ್ರೀಕೃಷ್ಣನನ್ನು ಪ್ರಸನ್ನಗೊಳಿಸಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಸುಲಭ : ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಳೆದ ೧೦ ವರ್ಷಗಳಿಂದ ಹಿಂದೂಗಳನ್ನು ಸಂಘಟಿಸಲು ಪ್ರಯತ್ನಿಸಿದಾಗ ಹಾಗೆ ಮಾಡುವುದು ಎಷ್ಟು ಕಠಿಣವಾಗಿದೆ, ಎಂಬುದು ಅರಿವಾಯಿತು. ಅದರಲ್ಲಿನ ಕೆಲವು ಅಂಶಗಳು ಈ ಮುಂದಿನಂತಿವೆ.

ಅ. ಮುಸಲ್ಮಾನ ಮತ್ತು ಕ್ರೈಸ್ತರಂತೆ ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದಿರುವುದರಿಂದ ಅವರಿಗೆ ಧರ್ಮದ ಮಹತ್ವ ತಿಳಿಯುವುದಿಲ್ಲ ಮತ್ತು ಅದರಿಂದಾಗಿ ಆಧ್ಯಾತ್ಮಿಕ ಸ್ತರದಲ್ಲಿ ‘ಧರ್ಮಕ್ಕಾಗಿ ಒಟ್ಟಾಗುವುದು’ ಇದು ಅವರಿಗೆ ತಿಳಿದೇ ಇಲ್ಲ. ತದ್ವಿರುದ್ಧ ಜಗತ್ತಿನಾದ್ಯಾಂತ ಇರುವ ಮುಸಲ್ಮಾನರು ಮತ್ತು ಕ್ರೈಸ್ತರು ಧರ್ಮಶಿಕ್ಷಣದಿಂದಾಗಿ ತಕ್ಷಣ ಒಟ್ಟಾಗುತ್ತಾರೆ.

ಆ. ಹಿಂದೂಗಳು ಒಟ್ಟಾಗಿರುವುದು ಕಾಣಿಸುವುದು ಕೇವಲ ಮಾನಸಿಕ ಸ್ತರದ್ದಾಗಿರುತ್ತದೆ. ಅದರಲ್ಲಿ ಅಹಂಭಾವ, ಸ್ಪರ್ಧೆ, ಶ್ರೀಮಂತಿಕೆಯನ್ನು ತೋರಿಸುವುದು ಇತ್ಯಾದಿ ದೋಷಗಳು ಕಾಣಿಸುತ್ತವೆ. ಆದ್ದರಿಂದಲೇ ಆ ಸಂಘಟನೆಯು ಒಂದು ವಿಶಿಷ್ಟ ಘಟನೆಗಷ್ಟೇ ತಾತ್ಕಾಲಿಕವಾಗಿರುತ್ತದೆ, ಮುಸಲ್ಮಾನ ಮತ್ತು ಕ್ರೈಸ್ತರಂತೆ ಶಾಶ್ವತವಾಗಿ ಇರುವುದಿಲ್ಲ. ಹಾಗಾಗಿ ಮೊದಲು ಮುಸಲ್ಮಾನರಿಗೆ ನಂತರ ಕ್ರೈಸ್ತರಿಗೆ ಹಿಂದೂಗಳನ್ನು ೧೦೦೦ ವರ್ಷ ಆಳಲು ಸಾಧ್ಯವಾಯಿತು.

ತದ್ವಿರುದ್ಧ ಶ್ರೀಕೃಷ್ಣನ ಭಕ್ತಿ ಮಾಡಿ ಅವನನ್ನು ಪ್ರಸನ್ನಗೊಳಿಸಿದರೆ ಹಿಂದೂಗಳು ಒಟ್ಟಾಗಿರದಿದ್ದರೂ ಬೇಗನೇ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು. ಅನಂತರ ಎಲ್ಲ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿದಾಗ ಅವರಲ್ಲಿ ತನ್ನಿಂತಾನೇ ಐಕ್ಯತೆ ನಿರ್ಮಾಣವಾಗುವುದು.
- ಪ.ಪೂ. ಡಾ. ಜಯಂತ ಆಠವಲೆ, ಸನಾತನ ಸಂಸ್ಥೆಯ ಪ್ರೇರಣಾಸ್ಥಾನ (ಅಧಿಕ ಭಾದ್ರಪದ ಕೃ. ೨, ಕಲಿಯುಗ ವರ್ಷ ೫೧೧೪ (೨.೯.೨೦೧೨))

ಸೇವೆಗೆ ಅವಕಾಶ
ಧರ್ಮಗ್ರಂಥ ಬ್ಲಾಗ್‌ನಲ್ಲಿ ನೀವು ಈಗಾಗಲೇ ಅನೇಕ ವಿಷಯಗಳನ್ನು ತಿಳಿದುಕೊಂಡಿರಬಹುದು. ಈ ಎಲ್ಲ ಧರ್ಮಶಿಕ್ಷಣವನ್ನು ಸನಾತನ ಸಂಸ್ಥೆಯ ಗ್ರಂಥದಿಂದ ಆರಿಸಿಕೊಳ್ಳಲಾಗಿದೆ. ಸನಾತನ ಸಂಸ್ಥೆಯು ಅಕ್ಟೋಬರ್ 2016ರ ವರೆಗೆ 294 ಗ್ರಂಥಗಳನ್ನು ನಿರ್ಮಿಸಿದೆ. 4,000 ಗ್ರಂಥಗಳನ್ನು ಪ್ರಕಾಶಿಸುವಷ್ಟು ಜ್ಞಾನವು ಈಗಾಗಲೇ ದೊರಕಿದೆ. ಈ ಜ್ಞಾನವು ಮೂಲ ಮರಾಠಿ ಭಾಷೆಯಲ್ಲಿದೆ. ನಿಯಮಿತವಾಗಿ ಸೇವಾಭಾವದಿಂದ ಅನುವಾದ ಸೇವೆ ಮಾಡುವವರು ಬೇಕಾಗಿದ್ದಾರೆ. ಅನುವಾದಕರಿಗೆ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಲು ಬರಬೇಕು. ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವವರು ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಸನಾತನ ಸಂಸ್ಥೆಯು ಅಕ್ಟೋಬರ್ 2016 ರ ವರೆಗೆ 15 ಭಾಷೆಗಳಲ್ಲಿ 294 ಗ್ರಂಥಗಳ 66.45 ಲಕ್ಷಕ್ಕೂ ಹೆಚ್ಚು ಪ್ರತಿಗಳನ್ನು ಪ್ರಕಾಶಿಸಿದೆ. ತಾವೂ ಈ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ. 

No comments:

Post a Comment

Note: only a member of this blog may post a comment.