ಶ್ರೀ ಸರಸ್ವತಿದೇವಿ


ನಿರ್ಮಿತಿ: 
ಸ್ಥೂಲ, ಸೂಕ್ಷ್ಮ ಮತ್ತು ಸೂಕ್ಷ್ಮತರ ಈ ಸ್ತರದಲ್ಲಿನ ನಿರ್ಮಿತಿಗಾಗಿ ಬ್ರಹ್ಮನಿಗೆ ನಿರ್ಗುಣ ಸ್ತರದಲ್ಲಿ ಕಾರ್ಯ ವನ್ನು ಮಾಡುವ ಮಹಾಸರಸ್ವತಿದೇವಿಗಿಂತ ಸಗುಣ ಸ್ತರದಲ್ಲಿ ಕಾರ್ಯವನ್ನು ಮಾಡುವ ಶಕ್ತಿಯ ಆವಶ್ಯಕತೆಯೆನಿಸಿತು. ಆಗ ಸಗುಣ ಶ್ರೀ ಸರಸ್ವತೀದೇವಿಯ ನಿರ್ಮಿತಿಯಾಯಿತು.

ಕಾರ್ಯ: 
ಶ್ರೀ ಸರಸ್ವತಿದೇವಿಯ ನಿರ್ಮಿತಿಯ ಪ್ರಕ್ರಿಯೆಯಿಂದ ದೇವತೆಗಳ (ಸಗುಣ) ರೂಪಗಳು, ಅವರ ಶಸ್ತ್ರಗಳು, ಅಸ್ತ್ರಗಳು, ಅಂತಃಪುರ, ಅವರ ಸ್ಥೂಲದಲ್ಲಿನ ವೈಶಿಷ್ಟ್ಯಪೂರ್ಣ ಲೋಕಗಳು, ಬ್ರಹ್ಮಾಂಡದ ಸಗುಣ ಲೋಕಗಳ ಕೆಳಗಿನ ಸಪ್ತಪಾತಾಳಗಳ ವರೆಗಿನ ಲೋಕಗಳು ಮತ್ತು ಅವುಗಳಲ್ಲಿ ವಾಸಿಸುವ ಜೀವಗಳ ನಿರ್ಮಿತಿಯಾಯಿತು (ಸ್ಥೂಲ, ಸೂಕ್ಷ್ಮ, ಸೂಕ್ಷ್ಮತರ, ಸೂಕ್ಷ್ಮತಮ ಮತ್ತು ಸೂಕ್ಷ್ಮಾತಿಸೂಕ್ಷ್ಮ ಈ ರೀತಿ ಏರಿಕೆಯ ಕ್ರಮದಲ್ಲಿ, ಹೆಚ್ಚೆಚ್ಚು ಸೂಕ್ಷ್ಮ ಹಂತಗಳಿವೆ.) - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೧.೩.೨೦೦೫, ರಾತ್ರಿ ೯.೫೮)

ಬ್ರಹ್ಮದೇವ ಮತ್ತು ಶ್ರೀ ಸರಸ್ವತಿದೇವಿ
ಉಚ್ಚದೇವತೆಗಳು ಯಾವಾಗಲೂ ನಿರ್ಗುಣದಲ್ಲಿರುವುದರಿಂದ, ಅಂದರೆ ದೇಹಧಾರಣೆ ಮಾಡಿ ಮಾನವರಂತೆ ಕಾರ್ಯ ಮಾಡದಿರುವುದರಿಂದ ಅವರೆಲ್ಲರೂ ಏಕರೂಪವಾಗಿಯೇ ಇರುತ್ತಾರೆ. ಸಗುಣದಲ್ಲಿ ಭಕ್ತನಿಗೆ ದರ್ಶನ ನೀಡಲು ಅಥವಾ ವೈಶಿಷ್ಟ್ಯಪೂರ್ಣ ಕಾರ್ಯಕ್ಕಾಗಿ ಅವರು ಒಂದು ಕಾಲಮಿತಿಯವರೆಗೆ ದೇಹವನ್ನು ಧರಿಸುತ್ತಾರೆ. ಆದರೂ ಅವರಲ್ಲಿ ಪತಿ-ಪತ್ನಿ ಎಂಬಂತಹ ಸಂಬಂಧಗಳಿರುವುದಿಲ್ಲ. ಎಲ್ಲ ಸಂಬಂಧಗಳು ಜೀವ ಮತ್ತು ಜೀವಾತ್ಮ ದಶೆಯಲ್ಲಿರುತ್ತವೆ. ದೇವತೆಗಳು ದೇಹವನ್ನು ಧರಿಸಿದರೂ ಅವರು ಶಿವ ಮತ್ತು ಶಿವಾತ್ಮ ದಶೆಯಲ್ಲಿಯೇ ಇರುತ್ತಾರೆ. ಅದುದರಿಂದ ಮಾನವರು ಬ್ರಹ್ಮದೇವ ಮತ್ತು ಶ್ರೀ ಸರಸ್ವತಿದೇವಿ, ಹಾಗೆಯೇ ರಾಧಾ-ಕೃಷ್ಣರ ಬಗ್ಗೆ ತಪ್ಪು ತಿಳುವಳಿಕೆಯನ್ನು ಇಟ್ಟುಕೊಳ್ಳುವುದು ವ್ಯರ್ಥವಾಗಿದೆ. ಬ್ರಹ್ಮದೇವ ಮತ್ತು ಶ್ರೀ ಸರಸ್ವತಿದೇವಿ ಇವರು ಪರಬ್ರಹ್ಮ ಮತ್ತು ಬ್ರಹ್ಮ ಇವರ ಏಕರೂಪತೆಯನ್ನು ದರ್ಶಿಸಿದರೆ, ಶ್ರೀಕೃಷ್ಣ ಮತ್ತು ರಾಧೆ ಇವರು ಪರಮಾತ್ಮ ಮತ್ತು ಆತ್ಮ ಇವುಗಳಲ್ಲಿರುವ ಏಕರೂಪತೆಯನ್ನು ದರ್ಶಿಸುತ್ತಾರೆ.

ಶ್ರೀ ಸರಸ್ವತಿದೇವಿಗೆ ಬ್ರಹ್ಮನ ಶಕ್ತಿಯೆಂದು ನಂಬುವುದರ ಕಾರಣ: ಮಹಾಸರಸ್ವತಿದೇವಿ ಮತ್ತು ಶ್ರೀ ಸರಸ್ವತಿದೇವಿ ಇಬ್ಬರೂ ಅನುಕ್ರಮವಾಗಿ ನಿರ್ಗುಣ ಮತ್ತು ಸಗುಣ ಈ ಎರಡೂ ಸ್ತರಗಳಲ್ಲಿ ಬ್ರಹ್ಮನ ಶಕ್ತಿಯಾಗಿ ಬ್ರಹ್ಮಾಂಡದ ನಿರ್ಮಿತಿಯಲ್ಲಿ ಬ್ರಹ್ಮದೇವನಿಗೆ ಸಹಾಯ ಮಾಡಿದ್ದಾರೆ. ಶ್ರೀಸರಸ್ವತಿದೇವಿ ಅಂದರೆ ಬ್ರಹ್ಮನ ನಿರ್ಗುಣ ಅಥವಾ ಸಗುಣ ಸ್ತರದಲ್ಲಿ ಕಾರ್ಯನಿರತವಾಗುವ ಶಕ್ತಿಯಾಗಿದೆ. ‘ಬ್ರಹ್ಮನ ಶಕ್ತಿಯು ಅವರೊಂದಿಗೆ ಏಕರೂಪವೇ ಆಗಿರುತ್ತದೆ. ಆವಶ್ಯಕತೆಗನುಸಾರ ಅದು ಕಾರ್ಯನಿರತವಾಗುತ್ತದೆ ಎಂಬುದು ಮಾನವರಿಗೆ ತಿಳಿಯಬೇಕೆಂದು ‘ಶ್ರೀ ಸರಸ್ವತಿದೇವಿಯು ಬ್ರಹ್ಮನ ಶಕ್ತಿಯಾಗಿದ್ದಾಳೆ’, ಎಂದು ಹೇಳಲಾಗುತ್ತದೆ.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಶ್ರೀ ಸರಸ್ವತಿ')

No comments:

Post a Comment

Note: only a member of this blog may post a comment.