'ಫಾಸ್ಟ್ ಫುಡ್’ನ ದುಷ್ಪರಿಣಾಮಗಳು

ಆಧುನಿಕ (ಪಾಶ್ಚಾತ್ಯ) ಪದ್ಧತಿಯ ಆಹಾರಪದಾರ್ಥಗಳು: ಕುಟುಂಬದಲ್ಲಿನ ತಾಯಿ-ಸಹೋದರಿಯರು ತಯಾರಿಸಿದ ಊಟ, ಉಪಾಹಾರ, ಖಾದ್ಯ ಅಥವಾ ಪಾನೀಯಗಳನ್ನು ಸೇವಿಸುವುದನ್ನು ಬಿಟ್ಟು, ಇತ್ತೀಚೆಗೆ ಹೊರಗಿನ ಖಾದ್ಯ ಪದಾರ್ಥಗಳನ್ನು ಉದಾ. ‘ಫಾಸ್ಟ್ ಫುಡ್’ ಹೊರಗೆ ಹೋಗಿ ಅಥವಾ ಮನೆಗೆ ತಂದು ತಿನ್ನುವ ಪದ್ಧತಿಯು ಎಲ್ಲ ಕಡೆ ಬೆಳೆದಿದೆ. ನಾಲಿಗೆಯ ಚಪಲವನ್ನು ತೀರಿಸುವ ಪಾಶ್ಚಾತ್ಯರ ಆಹಾರ ಪದ್ಧತಿಯು ಕ್ಷಣಿಕ ಸುಖವನ್ನು ಕೊಟ್ಟರೂ ಕೊನೆಗೆ ಮಾನವೀ ಶರೀರಕ್ಕೆ ಅಹಿತಕಾರಿಯೇ ಆಗಿದೆ.

ಹಿಂದೂ ಸಂಸ್ಕೃತಿಯನ್ನು ನಾಶಗೊಳಿಸಿ ಅಸುರೀ ಜೀವನ ಪದ್ಧತಿಯನ್ನು ಪ್ರಾರಂಭಿಸಿದ ಪಾಶ್ಚಾತ್ಯರ ಆಹಾರ ಪದ್ಧತಿ: ‘ಈಗಿನ ಕಾಲದಲ್ಲಿ ಕ್ರಮೇಣವಾಗಿ ಮಡಿ-ಮೈಲಿಗೆಗಳು ನಾಶವಾಗುತ್ತಿವೆ. ಈಗ ಕಾಲುಗಳನ್ನು ತೊಳೆದುಕೊಂಡು ಒದ್ದೆ ಕಾಲುಗಳಿಂದ ಊಟ ಮಾಡುವುದು, ಪ್ರಾರ್ಥನೆ ಮಾಡಿ ಊಟ ಮಾಡುವುದು, ಸಾತ್ತ್ವಿಕ ಊಟವನ್ನು ಮಾಡುವುದು ಕಡಿಮೆಯಾಗಿ ಪಾಶ್ಚಾತ್ಯ ಪದ್ಧತಿಯ ಊಟವನ್ನು ಮಾಡುವುದು, ಮಾಂಸಾಹಾರ ಊಟ ಮಾಡುವುದು, ತಿನ್ನುವಾಗ ಬೆರಳುಗಳ ಬದಲು ಚಮಚ-ಮುಳ್ಳುಚಮಚಗಳನ್ನು ಉಪಯೋಗಿಸುವುದು, ಊಟ ಮಾಡುವಾಗ ಪರಸ್ಪರರು ಅಶ್ಲೀಲವಾಗಿ ಮಾತನಾಡುವುದು, ಹಾಗೆಯೇ ಮನೆಯಲ್ಲೂ ಬೂಟು-ಚಪ್ಪಲಿಗಳನ್ನು ಉಪಯೋಗಿಸುವುದು, ಇವುಗಳಿಂದ ಹಿಂದೂ ಸಂಸ್ಕೃತಿಯು ನಾಶವಾಗಿ ಅಸುರೀ ಜೀವನ ಪದ್ಧತಿಯು ಉದಯವಾಗುತ್ತಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೭.೨೦೦೫, ಬೆಳಗ್ಗೆ ೧೦.೫೦)

‘ಫಾಸ್ಟ್ ಫುಡ್’
ಅ. ಕೆಟ್ಟ ಶಕ್ತಿಗಳು ಬರ್ಗರ್, ಪಿಝ್ಝಾ ಮತ್ತು ಇತರ ‘ಫಾಸ್ಟ್ ಫುಡ್’ಗಳನ್ನು ನಿರ್ಮಿಸುವುದರ ಹಿಂದಿನ ಉದ್ದೇಶ: ‘ಬರ್ಗರ್, ಪಿಝ್ಝಾ ಮತ್ತು ಇತರ ‘ಫಾಸ್ಟ್ ಫುಡ್’ಗಳನ್ನು ಮೂಲತಃ ಕೆಟ್ಟ ಶಕ್ತಿಗಳ ಪ್ರಚಂಡ ಪ್ರಭಾವಕ್ಕೆ ಒಳಗಾಗಿದ್ದವರೇ ನಿರ್ಮಿಸಿದ್ದಾರೆ. ‘ತಯಾರಿಸಲು ಸುಲಭ, ಆಕರ್ಷಿಸುವ, ಬೇಗನೆ ತಿನ್ನಬಹುದಾದ ಮತ್ತು ತಿನ್ನುವವರ ಶರೀರ ಮತ್ತು ಮನಸ್ಸಿನಲ್ಲಿ ಸಹಜವಾಗಿ ಕಪ್ಪು ಶಕ್ತಿಯನ್ನು ಪಸರಿಸುವಂತಹ’, ಆಹಾರ ಪದಾರ್ಥಗಳನ್ನು ನಿರ್ಮಿಸಲು ಕೆಟ್ಟ ಶಕ್ತಿಗಳು ಈ ತಯಾರಕರನ್ನು ಬಳಸಿಕೊಂಡವು. - ಸೌ.ವಂದನಾ ಸತೀಶ ವೈದ್ಯ, ಅಬೂ ಧಾಬಿ (ಭಾದ್ರಪದ ಕೃಷ್ಣ ನವಮಿ, ಕಲಿಯುಗ ವರ್ಷ ೫೧೧೧ ೧೩.೯.೨೦೦೯)

ಆ. ತಮೋಗುಣೀ ‘ಫಾಸ್ಟ್ ಫುಡ್’ಗಳನ್ನು ತಿನ್ನುವುದರಿಂದಾಗುವ ದುಷ್ಪರಿಣಾಮಗಳು: ಈಗಿನ ಕಾಲದಲ್ಲಿ ಬಹಳಷ್ಟು ಮಕ್ಕಳಿಗೆ ಬರ್ಗರ್, ಪಿಝ್ಝಾ, ಚಿಪ್ಸ್‌ನಂತಹ ಪದಾರ್ಥಗಳು ಹಿಡಿಸುತ್ತವೆ. ಆದುದರಿಂದ ಈ ಮಕ್ಕಳು ಹಠಮಾಡಿ ತಂದೆ-ತಾಯಿಯರಿಂದ ಈ ಪದಾರ್ಥಗಳನ್ನು ಕೊಂಡು ತಿನ್ನುವುದು ಕಂಡುಬರುತ್ತದೆ. ಈ ಪದಾರ್ಥಗಳಿಗೆ ‘ಫಾಸ್ಟ್ ಫುಡ್’ ಎನ್ನುತ್ತಾರೆ. ಈ ಪದಾರ್ಥಗಳು ಭಾರತೀಯ ಪದಾರ್ಥಗಳಾಗಿಲ್ಲ, ಅವು ಪಾಶ್ಚಾತ್ಯ ದೇಶಗಳಿಂದ ನಮ್ಮ ಕಡೆಗೆ ಬಂದಿವೆ. ಪಾಶ್ಚಾತ್ಯರ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ನಡೆಯುವುದರಿಂದ ಈಗ ಹಿಂದೂಸ್ಥಾನ ದಲ್ಲಿಯೂ ‘ಫಾಸ್ಟ್ ಫುಡ್’ ಹೆಸರಿನ ಭೋಗವಾದ ಸಂಸ್ಕ ತಿಯು ಪಸರಿಸಿದೆ. ‘ಫಾಸ್ಟ್ ಫುಡ್’ ಬಾಹ್ಯತಃ ರುಚಿಕರವಾಗಿದ್ದರೂ, ಅವು ತಮೋಗುಣೀ ಆಹಾರವಾಗಿರುವುದರಿಂದ ಶಾರೀರಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ದುಷ್ಪರಿಣಾಮಗಳು ನಿರ್ಮಾಣವಾಗುತ್ತವೆ.

೧.ಶಾರೀರಿಕ ದುಷ್ಪರಿಣಾಮಗಳು: ಪಿಝ್ಝಾ, ಬರ್ಗರ್, ಚಿಪ್ಸ್ ಮುಂತಾದ ಫಾಸ್ಟ್ ಫುಡ್‌ಗಳೆಂದರೆ ಕೃತಕ ಮತ್ತು ಪ್ರಕ್ರಿಯೆಗಳನ್ನು ಮಾಡಿದ ತಂಗಳು ಅನ್ನ! ಇಂತಹ ಕೃತಕ ಮತ್ತು ಪ್ರಕ್ರಿಯೆಗಳಿಗೆ ಒಳಪಟ್ಟ ತಂಗಳು ಅನ್ನವನ್ನು ಸತತವಾಗಿ ತಿನ್ನುವುದು ಶರೀರಕ್ಕೆ ಅಪಾಯಕರವಾಗಿದೆ.
ಅ.‘ಫಾಸ್ಟ್ ಫುಡ್’ಗಳು ಜೀರ್ಣವಾಗಲು ಕಠಿಣವಾಗಿರುವುದರಿಂದ ಅವುಗಳನ್ನು ತಿನ್ನುವುದ ರಿಂದ ಜೀರ್ಣಾಂಗ ವ್ಯೂಹವು ಕೆಡುತ್ತದೆ.
ಆ.ವಿದೇಶಗಳಲ್ಲಿ ‘ಫಾಸ್ಟ್ ಫುಡ್’ ಮತ್ತು ಕೃತಕ ತಂಪುಪಾನೀಯಗಳ ಅತಿಯಾದ ಸೇವನೆ ಯಿಂದ ಮಕ್ಕಳ ಸ್ಥೂಲತನ ಹೆಚ್ಚಾಗುತ್ತಿದೆ ಮತ್ತು ಅವರ ಮುಖವು ವಿಕೃತವಾಗಿ ಕಾಣಿಸುತ್ತಿದೆ.
ಇ.‘ಫಾಸ್ಟ್ ಫುಡ್’ನಿಂದ ಶರೀರವು ದಪ್ಪವಾಗಿ ಮನುಷ್ಯನ ಆಯುಷ್ಯವು ಕಡಿಮೆಯಾಗಬಹುದು: ‘ಫಾಸ್ಟ್ ಫುಡ್’ನಿಂದ ಶರೀರವು ದಪ್ಪವಾಗಿ ಮನುಷ್ಯನ ಆಯುಷ್ಯವು ಕಡಿಮೆ ಯಾಗಬಹುದು. ಬ್ರಿಟನ್ನಿನ ಪ್ರಾ.ಡೇವಿಡ್ ಕಿಂಗ್‌ರವರ ಮಾರ್ಗದರ್ಶನದಡಿಯಲ್ಲಿ ಸಂಶೋಧನೆ ಮಾಡುವ ಒಂದು ಘಟಕವು ‘ಈ ಸ್ಥೂಲಕಾಯದಿಂದ ೧೩ ವರ್ಷಗಳಷ್ಟು ಆಯುಷ್ಯವು ಕಡಿಮೆಯಾಗುತ್ತದೆ’ ಎಂದು ಹೇಳಿದೆ. - ದೈನಿಕ ಗೋಮಂತಕ, ೨೦.೧೦.೨೦೦೭

೨.ಬೌದ್ಧಿಕ ದುಷ್ಪರಿಣಾಮ: ‘ಚೈನೀಜ ಫುಡ್’ ಅನ್ನೂ ‘ಫಾಸ್ಟ್ ಫುಡ್’ ಎಂದೇ ಪರಿಗಣಿಸಲಾಗುತ್ತದೆ. ಅದರಲ್ಲಿ ಬಳಸುವ ‘ಅಜಿನೋಮೋಟೋ’ ಪದಾರ್ಥವು ಬುದ್ಧಿಗೆ ಹಾನಿಕರವಾಗಿದೆ.

೩.ಆಧ್ಯಾತ್ಮಿಕ ದುಷ್ಪರಿಣಾಮಗಳು: ‘ಫಾಸ್ಟ್ ಫುಡ್’ಗಳನ್ನು ಬಹಳಷ್ಟು ಸಮಯ ಸಂಗ್ರಹಿಸಿಡಲಾಗುತ್ತದೆ. ಇದರಿಂದ ಅವುಗಳಲ್ಲಿನ ತಮೋಗುಣ, ಅಂದರೆ ಕೆಟ್ಟ ಗುಣವು ಹೆಚ್ಚಾಗು ತ್ತದೆ. ಇಂತಹ ತಮೋಗುಣಿ ಪದಾರ್ಥಗಳ ಕಡೆಗೆ ಕೆಟ್ಟ ಶಕ್ತಿಗಳು ಆಕರ್ಷಿತವಾಗುತ್ತವೆ. ಇವುಗಳನ್ನು ತಿನ್ನುವವರ ವೃತ್ತಿಯು ತಾಮಸಿಕವಾಗುತ್ತದೆ. ವ್ಯಕ್ತಿಯ ವೃತ್ತಿಯು ತಾಮಸಿಕವಾಗುವುದರಿಂದ, ಅವನಲ್ಲಿ ಸಿಟ್ಟು, ಸಿಡಿಮಿಡಿಗೊಳ್ಳುವುದು, ಗರ್ವಿಷ್ಠತನ ಮುಂತಾದ ದುರ್ಗುಣಗಳು ಹೆಚ್ಚಾಗುತ್ತವೆ. ಇದರಿಂದ ಆ ವ್ಯಕ್ತಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯೂ ಹೆಚ್ಚುತ್ತದೆ.

‘ಜಂಕ್ ಫುಡ್’
ಅ. ಆಧುನಿಕ ಪದಾರ್ಥಗಳಲ್ಲಿ ಪೋಷಕಾಂಶಗಳು ಇಲ್ಲದಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಅವು ನಿರುಪಯುಕ್ತವಾಗಿವೆ: ‘ಈಗ ತಿನ್ನಲು ಪಿಝ್ಝಾ, ಬರ್ಗರ್, ಡೋನಟ, ಚಿಪ್ಸ್, ವೇಫರ್ಸ್ ಮತ್ತು ಕುರಕುರೇಗಳದ್ದೇ ನೆನಪಾಗುತ್ತದೆ. ಇವುಗಳನ್ನು ತಿನ್ನುವುದೂ ಈಗ ಆಧುನಿಕತೆಯ ಒಂದು ದೊಡ್ಡ ಲಕ್ಷಣವೆಂದು ತಿಳಿದುಕೊಳ್ಳಲಾಗುತ್ತಿದೆ. ಈ ಎಲ್ಲ ಪದಾರ್ಥಗಳಿಗೆ ‘ಜಂಕ್ ಫುಡ್’ ಎನ್ನಲಾಗುತ್ತದೆ. ೧೯೭೨ರಲ್ಲಿ ಮೈಕೆಲ್ ಜಾಬ್ಸನ್ನನು ಪೋಷಕಾಂಶಗಳಿಲ್ಲದ ಮತ್ತು ಆರೋಗ್ಯದ ದೃಷ್ಟಿಯಿಂದ ನಿರುಪಯೋಗಿ ಆಹಾರಪದಾರ್ಥಗಳನ್ನು ಉದ್ದೇಶಿಸಿ ‘ಜಂಕ್ ಫುಡ್’ ಎಂಬ ಶಬ್ದವನ್ನು ಉಪಯೋಗಿಸಿದನು. ಅದು ರೂಢಿಯೂ ಆಯಿತು. ಈ ಎಲ್ಲ ಪದಾರ್ಥಗಳಲ್ಲಿ ಸೋಡಿಯಂ, ಉಪ್ಪು, ಸಕ್ಕರೆ ಮತ್ತು ಕೊಬ್ಬು ಹೆಚ್ಚಿಗೆ ಇರುತ್ತದೆ. ಆದುದರಿಂದ ಅವುಗಳಲ್ಲಿ ಕ್ಯಾಲೋರಿಸ್‌ಗಳೂ ಹೆಚ್ಚಿಗೆ ಇರುತ್ತವೆ, ಆದರೆ ಆ ಕ್ಯಾಲೋರಿಗಳಿಂದ ನಮಗೇನೂ ಪ್ರಯೋಜನವಿರುವುದಿಲ್ಲ.

ಆ.ನಿರುಪಯೋಗಿ ಆಹಾರಪದಾರ್ಥಗಳಿಂದಾಗುವ ದುಷ್ಪರಿಣಾಮಗಳು: ನಿರುಪಯೋಗಿ ಆಹಾರಪದಾರ್ಥಗಳಿಂದ ಅನೇಕ ದುಷ್ಪರಿಣಾಮಗಳಾಗುತ್ತವೆ. ‘ಅತಿಕೊಬ್ಬಿರುವ ಪದಾರ್ಥಗಳಿಂದ ರಕ್ತದಲ್ಲಿನ ಸ್ನಿಗ್ಧಾಮ್ಲ (ಕೊಲೆಸ್ಟ್ರಾಲ್) ಹೆಚ್ಚಾಗುತ್ತದೆ. ಸ್ನಿಗ್ಧಾಮ್ಲ ಮತ್ತು ಹೆಚ್ಚುವರಿ ಉಪ್ಪಿನಿಂದ ರಕ್ತದೊತ್ತಡವು ಹೆಚ್ಚಬಹುದು. ಸತತವಾಗಿ ಉಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಮೂತ್ರಪಿಂಡಗಳಿಗೆ ತೊಂದರೆಯಾಗಬಹುದು. ಇಂತಹ ಪದಾರ್ಥಗಳನ್ನು ಸತತವಾಗಿ ಸೇವಿಸುವುದರಿಂದ ರಕ್ತದ ಹರಿಯುವಿಕೆಯ ಮೇಲೂ ದುಷ್ಪರಿಣಾಮವಾಗಬಹುದು’ ಎಂದು ತಜ್ಞರು ಹೇಳುತ್ತಾರೆ.

ಇ. ಯಾವ ಮಕ್ಕಳಿಗೆ ಇಂತಹ ವಸ್ತುಗಳು ಇಷ್ಟವಾಗುತ್ತವೆಯೋ ಮತ್ತು ಯಾರ ಪಾಲಕರು ಈ ಪದಾರ್ಥಗಳನ್ನು ತಮ್ಮ ಮಕ್ಕಳಿಗೆ ತಿನ್ನಲು ಕೊಡುತ್ತಾರೆಯೋ, ಅಂತಹ ಮಕ್ಕಳಿಗೆ ಮೂವತ್ತರ ಪ್ರಾಯದಲ್ಲೇ ಹೃದಯ ವಿಕಾರವಾಗುವ ಸಾಧ್ಯತೆ ಹೆಚ್ಚಿರುತ್ತದೆ. - ಶ್ರೀ.ಶ್ರೀರಾಮ ಶಿಧಯೇ

ಈ. ‘ಜಂಕ್ ಫುಡ್’ನಿಂದ ಬಂಜೆತನ ಹೆಚ್ಚಾಗುತ್ತಿದೆ: ‘ಜಂಕ್ ಫುಡ್’ಗಳನ್ನು ಹೆಚ್ಚಿಗೆ ತಿನ್ನುವುದರಿಂದ ಶರೀರದಲ್ಲಿನ ಹಾರ್ಮೋನುಗಳ ಸಮತೋಲನವು ಏರುಪೇರಾಗಿ ಶಾಲಾ-ಕಾಲೇಜಿನ ಬಹುತೇಕ ಹುಡುಗಿಯರು ಯೌವನಾವಸ್ಥೆಯಲ್ಲಿಯೇ ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ಗೆ ಬಲಿಯಾಗುತ್ತಿದ್ದಾರೆ. ಇದರಿಂದ ೨೫ನೇ ವರ್ಷದಲ್ಲಿ ವಿವಾಹವಾಗುವ ಶೇ.೨೫ಕ್ಕಿಂತ ಹೆಚ್ಚು ತರುಣಿಯರು ಏನಾದರೊಂದು ಕಾರಣಕ್ಕಾಗಿ ಬಂಜೆಯರಾಗುತ್ತಾರೆ.

ಉ. ‘ಫಾಸ್ಟ್ ಫುಡ್’ ಅಥವಾ ‘ಜಂಕ್ ಫುಡ್’ಗಳಿಗಿಂತ ಹಿಂದೂ ಪದ್ಧತಿಯಿಂದ ತಯಾರಿಸಿದ ಪದಾರ್ಥಗಳನ್ನು ಏಕೆ ತಿನ್ನಬೇಕು?: ‘ಫಾಸ್ಟ್ ಫುಡ್’ ಅಥವಾ ‘ಜಂಕ್ ಫುಡ್’ ಗಳನ್ನು ತಿನ್ನುವುದರಿಂದ ಶರೀರಕ್ಕೆ ಪೌಷ್ಟಿಕ ಆಹಾರವು ಸಿಗುವುದಿಲ್ಲ, ‘ಈ ಪದಾರ್ಥಗಳು ಜೀರ್ಣಿಸಲು ಜಡವಾಗಿರುವುದರಿಂದ ತಿನ್ನುವವರ ಆರೋಗ್ಯವು ಕೆಡುತ್ತದೆ’ ಎಂದು ಅನೇಕ ಡಾಕ್ಟರುಗಳು ಅಧ್ಯಯನ ಮಾಡಿ ಹೇಳಿದ್ದಾರೆ.

ಭಾರತೀಯ ಪದ್ಧತಿಯಿಂದ ತಯಾರಿಸಿದ ಪದಾರ್ಥಗಳು ಜೀರ್ಣವಾಗಲು ಮತ್ತು ಶರೀರವನ್ನು ಚೆನ್ನಾಗಿ ಪೋಷಿಸಲು ಉಪಯುಕ್ತವಾಗಿರುವುದರಿಂದ ಅವು ನಮ್ಮ ಪ್ರಕೃತಿಗೆ ಯೋಗ್ಯವಾಗಿವೆ. ನಿಸರ್ಗೋಪಚಾರ (ನ್ಯಾಚುರೋಪತಿ) ಪದ್ಧತಿಯಲ್ಲಿ ‘ನೈಸರ್ಗಿಕ ಪದಾರ್ಥಗಳನ್ನು ತಿನ್ನುವುದರಿಂದ ಶರೀರಕ್ಕೆ ಹೆಚ್ಚು ಲಾಭವಾಗುತ್ತದೆ ಮತ್ತು ಕೃತಕ ಅಥವಾ ದೀರ್ಘಕಾಲ ಉಳಿಯಲು ಆಹಾರ ಪದಾರ್ಥಗಳ ಮೇಲೆ ಪ್ರಕ್ರಿಯೆ ಮಾಡಿದ ಪದಾರ್ಥಗಳನ್ನು ತಿಂದರೆ ಶಾರೀರಿಕ ವಿಕಾರಗಳು ಹೆಚ್ಚಾಗುತ್ತವೆ’, ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಭಾರತೀಯ ಪದ್ಧತಿಯಿಂದ ತಯಾರಿಸಿದ ಪದಾರ್ಥಗಳು ‘ನಿಸರ್ಗೋಪಚಾರ’ಕ್ಕೆ ತುಂಬಾ ಹತ್ತಿರವಾಗಿವೆ, ಉದಾ. ಕೋಸಂಬರಿ ಮತ್ತು ತರಕಾರಿಗಳು. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೬.೧೧.೨೦೦೭)

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು)

No comments:

Post a Comment

Note: only a member of this blog may post a comment.