ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!

ಮನುಷ್ಯನ ಮೂರು ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂದರೆ ವಸತಿ. ನಮ್ಮ ಅವಶ್ಯಕತೆಗಳನ್ನು ಪೂರ್ತಿಗೊಳಿಸಲು, ನಿವಾಸವು ಸುಖದಾಯಕವಾಗಲು ಇತ್ತೀಚೆಗೆ ಅನೇಕ ಬಾಹ್ಯ ಸಾಧನಗಳ ಸಹಾಯವನ್ನು ಪಡೆಯಲಾಗುತ್ತದೆ. ಆದರೆ ವಾಸ್ತುವು ಚೈತನ್ಯದಾಯಕವಾಗಿದ್ದರೆ, ಆಧ್ಯಾತ್ಮಿಕ, ಅಂದರೆ ಸೂಕ್ಷ್ಮ ಸ್ತರದಲ್ಲಾಗುವ ಲಾಭಗಳು ಎಷ್ಟೋ ಪಟ್ಟು ಅಧಿಕವಿರುತ್ತವೆ. ವಾಸ್ತುವು ಚೈತನ್ಯದಾಯಕವಾಗಿರಲು ಅದನ್ನು ಸ್ವಚ್ಛ ಹಾಗೂ ಶುದ್ಧವಾಗಿರಿಸುವುದು ಎಷ್ಟು ಮಹತ್ವಪೂರ್ಣವೋ ವಾಸ್ತುವಿನಲ್ಲಿರುವವರು ಆಚಾರ ಧರ್ಮವನ್ನು ಪಾಲಿಸುವುದೂ ಅಷ್ಟೇ ಮಹತ್ವಪೂರ್ಣವಾಗಿದೆ. ಆಚಾರಪಾಲನೆಯಿಂದ ವ್ಯಕ್ತಿಯ ಆಂತರಿಕ ಶುದ್ಧಿಯಾಗತೊಡಗುತ್ತದೆ. ಇದರ ಪರಿಣಾಮವು ವಾಸ್ತುವಿನ ಮೇಲೆಯೂ ಆಗುತ್ತದೆ. ವಾಸ್ತುಶುದ್ಧಿಗಾಗಿ ಸಹಾಯಕವಾಗುವ ಆಚಾರಪಾಲನೆಯ ಕೆಲವು ಕೃತಿಗಳ ಮಾಹಿತಿ ಪಡೆಯೋಣ.

೧. ವಾಸ್ತುವಿನಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಎಣ್ಣೆಯ ಅಥವಾ ತುಪ್ಪದ ದೀಪವನ್ನು ಹಚ್ಚುವುದು

ವಾಸ್ತುವಿನಲ್ಲಿ ನಿಯಮಿತವಾಗಿ ಬೆಳಗ್ಗೆ ಹಾಗೂ ಸಾಯಂಕಾಲ ದೇವತೆಯ ಎದುರು ಎಣ್ಣೆಯ ಅಥವಾ ತುಪ್ಪದ ದೀಪವನ್ನು ಹಚ್ಚುವುದು ಒಂದು ಆಚಾರವಾಗಿದೆ. ಈ ಆಚಾರದ ಪಾಲನೆಯಿಂದಲೂ ವಾಸ್ತುಶುದ್ಧಿಯಾಗುತ್ತದೆ. ಎಣ್ಣೆಯ ದೀಪವನ್ನು ಹಚ್ಚಲು ಎಳ್ಳೆಣ್ಣೆಯ ಉಪಯೋಗವು ಅಧಿಕ ಲಾಭದಾಯಕವಾಗಿದೆ.

೨. ಸಾಯಂಕಾಲ ಅಂಗಳದಲ್ಲಿನ ತುಳಸಿಯ ಮುಂದೆ ದೀಪವನ್ನು ಹಚ್ಚುವುದು

ಸಾಮಾನ್ಯವಾಗಿ ಪ್ರತಿಯೊಂದು ಹಿಂದೂವಿನ ಮನೆಯ ಅಂಗಳದಲ್ಲಿ ತುಳಸಿಯ ಗಿಡವಿರುತ್ತದೆ. ಸಾಯಂಕಾಲ ತುಳಸಿಯ ಮುಂದೆ ದೀಪವನ್ನು ಹಚ್ಚಲಾಗುತ್ತದೆ.

ತುಳಸಿಯ ಮಹತ್ವ: ತುಳಸಿಯು ಔಷಧೀಯ ವನಸ್ಪತಿಯಾಗಿದೆ. ತುಳಸಿಯಿಂದ ಬರುವ ಗಾಳಿಯು ಶುದ್ಧವಿರುತ್ತದೆ. ಅದರ ಎಲೆ, ಬೇರು ಮತ್ತು ಬೀಜಗಳನ್ನು ವಿಭಿನ್ನ ಪ್ರಕಾರದ ಔಷಧಿಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಔಷಧೀಯ ಗುಣಗಳನ್ನು ಹೊಂದಿದ ತುಳಸಿಯು ಒಂದು ಪವಿತ್ರ ವನಸ್ಪತಿಯೂ ಆಗಿದೆ. ಈ ವನಸ್ಪತಿಯ ಬೇರಿನಿಂದ ಮೇಲಿನ ತುದಿಯವರೆಗೆ ಎಲ್ಲ ದೇವತೆಗಳ ವಾಸ್ತವ್ಯವಿರುತ್ತದೆ. ತುಳಸಿಯಲ್ಲಿ ಬ್ರಹ್ಮಾಂಡದಲ್ಲಿರುವ ಸಾತ್ತ್ವಿಕ ಹಾಗೂ ಕೃಷ್ಣತತ್ತ್ವದ ತರಂಗಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಅಧಿಕವಿರುತ್ತದೆ.
ತುಳಸಿಯು ಸದಾ ದೇವತೆಯ ತತ್ತ್ವವನ್ನು ಪ್ರಕ್ಷೇಪಿಸಿ ಸುತ್ತಮುತ್ತಲಿನ ವಾತಾವರಣವನ್ನು ಪವಿತ್ರಗೊಳಿಸುತ್ತದೆ. ಯಾವ ಮನೆಯ ಅಂಗಳದಲ್ಲಿ ತುಳಸಿಯ ವನವಿದೆಯೋ, ಆ ಮನೆಯ ಸುತ್ತಮುತ್ತಲಿನ ಹನ್ನೆರಡು ಕಿಲೋಮೀಟರ್ ವರೆಗಿನ ಭೂಮಿಯು ಗಂಗೆಯಷ್ಟು ಪವಿತ್ರವಾಗುತ್ತದೆ ಎಂದು ಹೇಳುತ್ತಾರೆ.

೩. ಸಾಯಂಕಾಲ ಸ್ತೋತ್ರ ಪಠಣ ಮಾಡುವುದು

ಸಾಯಂಕಾಲ ವಾಸ್ತುವಿನಲ್ಲಿ ದೀಪವನ್ನು ಹಚ್ಚಿದ ನಂತರ ಪರಿವಾರದ ಎಲ್ಲ ಸದಸ್ಯರು ಒಟ್ಟಾಗಿ ಕುಳಿತು ಪ್ರಾರ್ಥನೆಯನ್ನು ಮಾಡಬೇಕು. ಸ್ವಲ್ಪ ಸಮಯದವರೆಗೆ ದೇವತೆಗಳ ಸ್ತೋತ್ರಗಳನ್ನು ಪಠಿಸಬೇಕು. ಇದರಿಂದ ವಾಸ್ತು ಶುದ್ಧವಾಗಿರಲು ಸಹಾಯವಾಗುತ್ತದೆ.

೪. ಸಾಯಂಕಾಲ ನಾಮಜಪ ಮಾಡುವುದು

ಸಾಯಂಕಾಲ ಪರಿವಾರದ ಎಲ್ಲ ಸದಸ್ಯರು ಒಟ್ಟಾಗಿ ಸ್ತೋತ್ರ ಪಠಣ ಮಾಡುವುದಕ್ಕೆ ಸಮಾನವಾದುದೆಂದರೆ ನಮ್ಮ ಉಪಾಸ್ಯ ದೇವತೆಯ ನಾಮವನ್ನು ಜಪಿಸುವುದು. ಆದರೆ, ಇಂದು ಮನೆ-ಮನೆಯಲ್ಲಿ, ಇದಕ್ಕೆ ವಿಪರೀತವಿರುವ ದೃಶ್ಯವು ಕಂಡು ಬರುತ್ತಿದೆ. ದೊಡ್ಡವರೊಂದಿಗೆ ಸಣ್ಣ ಮಕ್ಕಳೂ ದೂರದರ್ಶನದ ಕಾರ್ಯಕ್ರಮಗಳನ್ನು ನೋಡಲು ಮತ್ತು ಹೊರಗಡೆ ಸುತ್ತಾಡಲು ಅಥವಾ ಶಾಪಿಂಗ್ ಮಾಡುವುದರಲ್ಲಿ ಮಗ್ನರಾಗಿರುತ್ತಾರೆ (ಆಸಕ್ತರಾಗಿರುತ್ತಾರೆ).

(ಆಧಾರ: ಸಾಪ್ತಾಹಿಕ ಪತ್ರಿಕೆ 'ಸನಾತನ ಪ್ರಭಾತ')

Dharma Granth

No comments:

Post a Comment

Note: only a member of this blog may post a comment.