ಪ್ರಾರ್ಥನೆಯಿಂದ ರೋಗಗಳು ಗುಣವಾಗುವ ಹಿಂದಿನ ವಿಜ್ಞಾನ

ಪ್ರಾರ್ಥನೆಯಿಂದ ರೋಗಿಗಳು ರೋಗಮುಕ್ತರಾಗುತ್ತಾರೆ ! - ಮನೋರೋಗ ತಜ್ಞ ಡೇನಿಯಲ್ ಬೇಯರ್

ಇಂಗ್ಲೆಂಡಿನಲ್ಲಿ, ರೋಗಗಳನ್ನು ಗುಣಪಡಿಸುವ ಶಕ್ತಿಗಳ ಸಂಬಂಧದಲ್ಲಿ ಸಂಶೋಧನೆ ಮಾಡುತ್ತಿರುವ ಮನೋರೋಗತಜ್ಞ  (psychiatrist) ಡೆನಿಯಲ್ ಬೇಯರ್ ಇವರು “ಪ್ರಾರ್ಥನೆಯು ಒಂದು ಅದ್ಭುತ ಶಕ್ತಿಯಾಗಿದೆ, ಶ್ರದ್ಧೆಯಿಂದ ಮಾಡಿದ ಪ್ರಾರ್ಥನೆಯಿಂದ ರೋಗಿಗಳು ಗುಣಮುಖರಾಗುತ್ತಾರೆ" ಎಂದು ಹೇಳುತ್ತಾರೆ. ಪ್ರಾರ್ಥನೆಯಿಂದ ರೋಗಗಳು ಗುಣವಾಗುವ ರಹಸ್ಯದ ಮೂಲವು ಐನ್‌ಸ್ಟೈನ್‌ನ ಸಿದ್ಧಾಂತದಲ್ಲಿದೆ. ಅಚೇತನ ಮತ್ತು ಚೇತನಗಳು ಪರಸ್ಪರರೊಳಗೆ ರೂಪಾಂತರವಾಗುತ್ತವೆ ಎಂದು ಈ ಸಿದ್ಧಾಂತವು ಹೇಳುತ್ತದೆ. ಐನ್‌ಸ್ಟೈನ್‌ನ ಸಿದ್ಧಾಂತವು ಪ್ರಾರ್ಥನೆಗೆ ಸೈದ್ಧಾಂತಿಕ ಆಧಾರವನ್ನು ನೀಡಿದೆ ಅಂದರೆ ನಮಗೆ ಈಗ ವಿಜ್ಞಾನದ ಭದ್ರವಾದ ತಾತ್ತ್ವಿಕ ಅಡಿಪಾಯ (theoretical basis) ಸಿಕ್ಕಿದೆ. ‘ಪ್ರಾರ್ಥನೆಯು ಒಂದು ಶಕ್ತಿಯಾಗಿದೆ ಮತ್ತು ಈ ಶಕ್ತಿಯಿಂದ ಜಡಪದಾರ್ಥಗಳನ್ನು ಚೈತನ್ಯದಲ್ಲಿ ರೂಪಾಂತರ ಮಾಡಬಹುದು’ ಎನ್ನುವುದನ್ನು ಡೆನಿಯಲ್ ಇವರು ತೋರಿಸಿಕೊಟ್ಟಿದ್ದಾರೆ.

(ಡೇನಿಯಲ್ ಬೇಯರ್ ಇವರ ಹೇಳಿಕೆ ಹೀಗಿದೆ .... 'if people are matter they can interact on an energy basis in endeavours such as prayer')

ನಮ್ಮ ಶಾಸ್ತ್ರಗಳು ಲಕ್ಷಾಂತರ ವರ್ಷಗಳಿಂದ ಇದನ್ನೇ ಹೇಳುತ್ತಿವೆ. ಪ್ರಾರ್ಥನೆ ಮಾಡುವುದರಿಂದ ಅಸಾಧ್ಯ ರೋಗಗಳು ಗುಣವಾಗುತ್ತವೆ. ಈ ಮೂಲಭೂತ ಶ್ರದ್ಧೆಗೆ ಈಗ ನಿಮ್ಮ ಆಧುನಿಕ ವಿಜ್ಞಾನವೂ ದೃಢವಾದ ಆಧಾರವನ್ನು ನೀಡಿದೆ. ನಿಮ್ಮ ಈ ಆಧುನಿಕ ವಿಜ್ಞಾನವು (modern science) ಪ್ರತ್ಯಕ್ಷ ಪ್ರಮಾಣವನ್ನು ಸ್ವೀಕರಿಸುವಂತಹ ಶಾಸ್ತ್ರವಾಗಿದೆ. ಪ್ರಾರ್ಥನೆಯ ಪರಿಣಾಮಗಳನ್ನು ಕಂಡುಹಿಡಿಯಲು ಅವರು ದೀರ್ಘಕಾಲ ಮತ್ತು ಬಹಳ ಕಠಿಣವಾದ ಪ್ರವಾಸವನ್ನು ಮಾಡಬೇಕಾಯಿತು ಮತ್ತು ಎಲ್ಲ ಕಡೆ ತಿರುಗಿ ನಿಧಾನವಾಗಿ ಆ ಸತ್ಯವನ್ನು ಒಪ್ಪಿಕೊಂಡರು.

ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!
ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು
ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.

(ಆಧಾರ: ಪ್ರಾರ್ಥನೆ, ಪುಟ ೫. ಪ.ಪೂ.ಗುರುದೇವ ಡಾ.ಕಾಟೇಸ್ವಾಮೀಜಿ (ನಾರಾಯಣನಂದನಾಥ))

No comments:

Post a Comment

Note: only a member of this blog may post a comment.