ಕೆಲವು ದೇವಸ್ಥಾನಗಳಲ್ಲಿ ಪುರುಷರು ಅಂಗಿಯನ್ನು ತೆಗೆದು ಪ್ರವೇಶಿಸಬೇಕು ಎಂಬ ನಿಯಮ ಏಕೆ ಮಾಡಿರುತ್ತಾರೆ?

(ರಜ-ತಮಾತ್ಮಕ ಧೂಳಿನ ಕಣಗಳಿಂದ ತುಂಬಿರುವ ಅಂಗಿಯನ್ನು ತೆಗೆದು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸು ವುದರಿಂದ ಅಲ್ಲಿನ ಸಾತ್ತ್ವಿಕತೆಯ ಲಾಭವು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ.): ‘ಕೆಲವೊಂದು ಜಾಗೃತ ಮತ್ತು ಸ್ವಯಂಭೂ ದೇವಸ್ಥಾನಗಳಲ್ಲಿರುವ ಸಾತ್ತ್ವಿಕತೆಯನ್ನು ಕಾಪಾಡಲು ರಜ-ತಮಾತ್ಮಕ ಧೂಳಿನ ಕಣಗಳಿಂದ ತುಂಬಿರುವ ಅಂಗಿಯನ್ನು ತೆಗೆದು, ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿ, ದೇವರ ದರ್ಶನವನ್ನು ಪಡೆದುಕೊಂಡು ದೇವರಿಗೆ ಪೂಜಾಸಾಮಗ್ರಿಗಳನ್ನು ಅರ್ಪಿಸುವುದು ಯೋಗ್ಯವಾಗಿದೆ. ಆದುದರಿಂದ ಇಂತಹ ದೇವಸ್ಥಾನಗಳ ಗರ್ಭಗುಡಿಯಲ್ಲಿ ಕೇವಲ ಪುರುಷರಿಗೆ ಮಾತ್ರ ಪ್ರವೇಶವಿರುತ್ತದೆ. ಕರ್ಮಗಳಲ್ಲಿ ಸ್ತ್ರೀಯರು ಪ್ರತ್ಯಕ್ಷ ಶಕ್ತಿರೂಪಿ ಧಾರೆಯಾಗಿರುವುದರಿಂದ ಮತ್ತು ಪುರುಷರು ಶಿವರೂಪಿ ಕಾರ್ಯ ಮಾಡುವವರಾಗಿದ್ದರಿಂದ ಅವರು ಹೆಚ್ಚಿನ ಪ್ರಮಾಣದಲ್ಲಿ ಸಾತ್ತ್ವಿಕತೆಯನ್ನು ಪಡೆದುಕೊಳ್ಳುವುದು ಮಹತ್ವದ್ದಾಗಿರುತ್ತದೆ. ಕರ್ಮಕಾಂಡದಲ್ಲಿ ಪೂಜೆಯನ್ನು ಮಾಡುವಾಗ ಮೈತುಂಬಾ ಬಟ್ಟೆಗಳನ್ನು ಧರಿಸದೇ ಕೇವಲ ಮಾನರಕ್ಷಣೆಗಾಗಿ ಸಾಕಾಗುವಷ್ಟೇ ಮಡಿ ಅಥವಾ ರೇಷ್ಮೆವಸ್ತ್ರವನ್ನು ಧರಿಸಲು ಸಮ್ಮತಿಯಿದೆ. ಇದರಿಂದ ಪೂಜಾವಿಧಿಯಲ್ಲಿನ ಪಾವಿತ್ರ್ಯವು ದೀರ್ಘಕಾಲ ಉಳಿದುಕೊಂಡು ಅದರಿಂದ ಉತ್ಪನ್ನವಾಗುವ ಚೈತನ್ಯದಿಂದ ಪೂಜಕನಿಗೆ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ.’ 
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೩.೧೧.೨೦೦೫, ಮಧ್ಯಾಹ್ನ ೨.೨೦)

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?')

ಸಂಬಂಧಿತ ವಿಷಯಗಳು
Dharma Granth